2023 HAYABUSA ಗಾಗಿ ಅತ್ಯಾಕರ್ಷಕ ಹೊಸ ಬಣ್ಣಗಳನ್ನು ಪರಿಚಯಿಸಿದ ಸುಜುಕಿ

ಸುಜುಕಿ ಮೋಟಾರ್ ಕಾರ್ಪೊರೇಶನ್‌ನ ದ್ವಿಚಕ್ರ ವಾಹನದ ಅಂಗಸಂಸ್ಥೆಯು ಇಂದು ಮೂರನೇ ತಲೆಮಾರಿನ 2023 HAYABUSA ಮಾದರಿಗಾಗಿ ಹೊಸ ರೋಮಾಂಚಕ ಬಣ್ಣಗಳ ಸರಣಿಯನ್ನು ಬಿಡುಗಡೆ ಮಾಡಿದೆ. ಇದು ಈಗ OBD2-A ಕಂಪ್ಲೈಂಟ್ ಕೂಡ ಆಗಿದೆ ಎಂದು ಕಂಪನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಐಕಾನಿಕ್ ಹಯಾಬುಸಾ ತನ್ನ ಪ್ರಾರಂಭದಿಂದಲೂ ಸುಜುಕಿಯ ಪ್ರಮುಖ ಮೋಟಾರ್‌ಸೈಕಲ್ ಆಗಿದೆ. ಮೂರನೇ ತಲೆಮಾರಿನ ಮಾದರಿ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದ ವಿಶ್ವದಾದ್ಯಂತ ಹಯಾಬುಸಾ ಅಭಿಮಾನಿಗಳ ಹೃದಯವನ್ನು ಗೆದ್ದಿದೆ. ಹೊಸ ಪೀಳಿಗೆಯ Hayabusa ಅತ್ಯುತ್ತಮ ಏರೋಡೈನಾಮಿಕ್ ಪರ್ಫಾಮೆನ್ಸ್ ಅನ್ನು ಒದಗಿಸಲು ವಿಶಿಷ್ಟ ವಿನ್ಯಾಸದೊಂದಿಗೆ ಸಜ್ಜಾಗಿದೆ. ಈ ಮೋಟಾರ್‌ ಸೈಕಲ್ 1340cm3 4 ಸ್ಟ್ರೋಕ್ ಫ್ಯೂಲ್ ಇಂಜೆಕ್ಟೆಡ್ ಲಿಕ್ವಿಡ್ ಕೂಲ್ಡ್ DOHC, ಇನ್ ಲೈನ್ ಫೋರ್ ಎಂಜಿನ್‌ನೊಂದಿಗೆ ಬರುತ್ತದೆ.

2023 HAYABUSA ಗಾಗಿ ಅತ್ಯಾಕರ್ಷಕ ಹೊಸ ಬಣ್ಣಗಳನ್ನು ಪರಿಚಯಿಸಿದ ಸುಜುಕಿ

ಹಯಬುಸಾ ಡ್ಯುಯಲ್-ಟೋನ್ ಬಣ್ಣಗಳೊಂದಿಗೆ ಬಾಡಿ, ಏರ್‌ ಇಂಟೇಕ್‌ಗಳ ಸುತ್ತಲಿನ ಸಣ್ಣ ಭಾಗಗಳು, ಬದಿಯ ಕೌಲಿಂಗ್‌ಗಳು ಮತ್ತು ಹಿಂಭಾಗದಲ್ಲಿ ವಿವಿಧ ಬಣ್ಣಗಳನ್ನು ಅಳವಡಿಸಿಕೊಂಡಿದೆ. ಆಧುನಿಕ ಸವಾರರ ಡೈನಾಮಿಕ್ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಮೂರನೇ ತಲೆಮಾರಿನ ಮಾದರಿಯು ಈಗ ಮೆಟಾಲಿಕ್ ಥಂಡರ್ ಗ್ರೇ/ ಕ್ಯಾಂಡಿ ಡೇರಿಂಗ್ ರೆಡ್, ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್ ನಂ.2/ ಗ್ಲಾಸ್ ಸ್ಪಾರ್ಕಲ್ ಬ್ಲಾಕ್ ಮತ್ತು ಪರ್ಲ್ ಬ್ಲೂ/ ಪರ್ಲ್ ಬ್ರಿಲಿಯಂಟ್ ವೈಟ್ ಎಂಬ 3 ಬಣ್ಣಗಳಲ್ಲಿ ಬರಲಿದೆ.

"ಭಾರತದಲ್ಲಿ ಮೂರನೇ ತಲೆಮಾರಿನ ಹಯಬುಸಾ ಬಗ್ಗೆ ಉತ್ಸಾಹಿಗಳು ತೋರುತ್ತಿರುವ ಪ್ರೀತಿಗೆ ನಾವು ಕೃತಜ್ಞರಾಗಿದ್ದೇವೆ. ಮೋಟಾರ್‌ಸೈಕಲ್ ತನ್ನ ಸ್ಟೈಲಿಂಗ್ ಗಾಗಿ ಮಾತ್ರವಲ್ಲದೆ ಅದರ ಸಾಟಿಯಿಲ್ಲದ ಪರ್ಫಾಮೆನ್ಸ್‌ನಿಂದಲೂ ಮೋಟಾರ್‌ಸೈಕಲ್ ಜಗತ್ತಿನಲ್ಲಿ ಆರಾಧನಾ ಸ್ಥಾನಮಾನವನ್ನು ಹೊಂದಿದೆ. ನಮ್ಮ ಗುರ್ಗಾಂವ್ ಸ್ಥಾವರದಲ್ಲಿ ಪ್ರಾರಂಭವಾದಾಗಿನಿಂದ ಹೊರಬಂದ ಬಹುತೇಕ ಎಲ್ಲಾ ಘಟಕಗಳು, ದೇಶದಾದ್ಯಂತ ದಾಖಲೆ ಮಟ್ಟದಲ್ಲಿ ಮಾರಾಟವಾಗಿವೆ ಎಂದು ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈ. ಲಿಮಿಟೆಡ್ ಎಂಡಿ ಕೆನಿಚಿ ಉಮೇದ ಹೇಳಿದರು.

2023 HAYABUSA ಗಾಗಿ ಅತ್ಯಾಕರ್ಷಕ ಹೊಸ ಬಣ್ಣಗಳನ್ನು ಪರಿಚಯಿಸಿದ ಸುಜುಕಿ

ಈ ಅಗಾಧ ಪ್ರತಿಕ್ರಿಯೆಯನ್ನು ನೋಡುತ್ತಾ ನಾವು ಈ ಐಕಾನಿಕ್ ಸುಜುಕಿ ಮೋಟಾರ್‌ಸೈಕಲ್‌ನ ಹೊಸ ಬಣ್ಣ ಶ್ರೇಣಿ ಮತ್ತು OBD2-A ಕಂಪ್ಲೈಂಟ್ ಮಾಡಲ್ ಅನ್ನು ಪರಿಚಯಿಸಲು ನಿರ್ಧರಿಸಿದ್ದೇವೆ. ಈ ಹೊಸ ಬಣ್ಣಗಳು ಈಗಾಗಲೇ ಮೋಟಾರ್‌ ಸೈಕಲ್‌ಗೆ ಶೈಲಿ ಮತ್ತು ಉತ್ಕೃಷ್ಟತೆಯ ಮತ್ತೊಂದು ಪದರವನ್ನು ಸೇರಿಸುತ್ತವೆ. ಹೊಸ ಶೇಡ್ ಗಳು ದೇಶದ ಮೋಟಾರ್‌ ಸೈಕಲ್ ಉತ್ಸಾಹಿಗಳಿಂದ ಇನ್ನೂ ಹೆಚ್ಚಿನ ಬೇಡಿಕೆ ಪಡೆಯುವ ವಿಶ್ವಾಸ ನಮಗೆ ಇದೆ ಎಂದರು.

Suzuki Hayabusa ತನ್ನ ಬೆರಗುಗೊಳಿಸುವ ಹೊಸ ಬಣ್ಣಗಳ ಶ್ರೇಣಿಯನ್ನು ರೂ. 16,41,000 (ಎಕ್ಸ್ ಶೋ ರೂಂ, ದೆಹಲಿ)ರೂ. ಬೆಲೆಯಲ್ಲಿ ಮಾರಾಟ ಮಾಡಲಿದೆ. 7ನೇ ಏಪ್ರಿಲ್ 2023 ರಿಂದ ಭಾರತದಲ್ಲಿ ಈ ಮಾದರಿಗಳು ಲಭ್ಯವಿರುತ್ತವೆ. ಮೋಟಾರ್‌ಸೈಕಲ್ ಅನ್ನು ದೇಶದಾದ್ಯಂತ ಕಂಪನಿಯ ಯಾವುದೇ ದೊಡ್ಡ ಬೈಕ್ ಶೋರೂಮ್‌ಗಳಿಂದ ಖರೀದಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸುಜುಕಿ ಮೋಟಾರ್‌ಸೈಕಲ್ ಅಧಿಕೃತ ವೆಬ್‌ ತಾಣಕ್ಕೆ ಭೇಡಿ ನೀಡಿ ಮಾಹಿತಿ ಪಡೆಯಬಹುದು ಎಂದು ಕಂಪನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

2023 HAYABUSA ಗಾಗಿ ಅತ್ಯಾಕರ್ಷಕ ಹೊಸ ಬಣ್ಣಗಳನ್ನು ಪರಿಚಯಿಸಿದ ಸುಜುಕಿ

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಜಪಾನ್‌ನ ಸುಜುಕಿ ಮೋಟಾರ್ ಕಾರ್ಪೊರೇಶನ್ ನ ಅಂಗಸಂಸ್ಥೆಯಾಗಿದ್ದು, ಇದರಲ್ಲಿ ಅವರು ಪ್ರಾರಂಭದಿಂದಲೂ ಉತ್ತಮ ಮೌಲ್ಯದ ಉತ್ಪನ್ನಗಳ ತಯಾರಿಕೆಯ ತತ್ವವನ್ನು ಹೊಂದಿದ್ದಾರೆ. ಮೌಲ್ಯಯುತ ಭಾರತೀಯ ಗ್ರಾಹಕರಿಗಾಗಿ ಸೂಕ್ತವಾದ ದ್ವಿಚಕ್ರ ವಾಹನಗಳನ್ನು ತಯಾರಿಸುತ್ತಿರುವುದಾಗಿ ಕಂಪನಿ ಹೇಳಿಕೊಂಡಿದೆ. ಕಂಪನಿಯು ಹಯಾಬುಸಾಗಾಗಿ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಫೆಬ್ರವರಿ 2006 ರಲ್ಲಿ ಪ್ರಾರಂಭಿಸಿದ್ದು, ಈವೆರೆಗೆ ಕಂಪನಿಯು ಮೂರು ತಲೆಮಾರಿನ ಮಾದರಿಗಳನ್ನು ಮಾರಟ ಮಾಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Friday, April 7, 2023, 19:31 [IST]
English summary
2023 hayabusa with 3 new colour options
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+