ಹೊಸ ನವೀಕರಣಗಳೊಂದಿಗೆ ಕಡಿಮೆ ಬೆಲೆಯಲ್ಲಿ ಹೀರೋ HF ಡೀಲಕ್ಸ್ ಬೈಕ್ ಬಿಡುಗಡೆ

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕರಾದ ಹೀರೋ ಮೋಟೋಕಾರ್ಪ್ ತನ್ನ ಜನಪ್ರಿಯ ಹೀರೋ HF ಡೀಲಕ್ಸ್ (2023 Hero HF Deluxe) ನವೀಕರಿಸಿದ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಹೀರೋ HF ಡೀಲಕ್ಸ್ ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.60,760 ಆಗಿದೆ. ಕೈಗೆಟುಕುವ ಬೆಲೆಯನ್ನು ಹೊಂದಿರುವುದರಿಂದ ಈ ಬೈಕ್ ಹೆಚ್ಚು ಜನಪ್ರಿಯವಾಗಿದೆ.

ಜನಪ್ರಿಯ ಹೀರೋ HF ಡೀಲಕ್ಸ್ ಬೈಕ್ ಅನ್ನು ಹೊಸ ಕ್ಯಾನ್ವಾಸ್ ಬ್ಲ್ಯಾಕ್ ಆವೃತ್ತಿಯನ್ನು ಸ್ಪೋರ್ಟಿಯರ್ ಆಲ್-ಬ್ಲ್ಯಾಕ್ ಥೀಮ್‌ನೊಂದಿಗೆ ಪರಿಚಯಿಸಿದೆ. ನವೀಕರಣದ ಭಾಗವಾಗಿ, ಹೀರೋ ಮೋಟೋಕಾರ್ಪ್ ಕಂಪನಿಯು 97.2cc, ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್‌ನ ನವೀಕರಿಸಿದ ಆವೃತ್ತಿಯೊಂದಿಗೆ Hero HF ಡೀಲಕ್ಸ್ ಬೈಕಿನಲ್ಲಿ ನೀಡಲಾಗಿದೆ. ಇದು ಈಗ ಇತ್ತೀಚಿನ BS6 ಹಂತ 2 ಎಮಿಷನ್ ಮಾನದಂಡಗಳನ್ನು ಅನುಸರಿಸುತ್ತದೆ.

 Hero HF Deluxe

ಈ ಎಂಜಿನ್ ಈಗ 7.9 bhp ಪವರ್ ಮತ್ತು 8.05 Nm ಪೀಕ್ ಟಾರ್ಕ್ ಉತ್ಪಾದಿಸಲು ಟ್ಯೂನ್ ಮಾಡಲಾಗಿದೆ. ಇದೇ ಎಂಜಿನ್ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿಗೂ ನೀಡಲಾಗಿದೆ. ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ. ಆಯಾಮದ ವಿಷಯದಲ್ಲಿ, ಹೀರೋ HF ಡೀಲಕ್ಸ್ ಬೈಕ್ 1,965mm ಉದ್ದ, 720mm ಅಗಲ ಮತ್ತು 1,045mm ಎತ್ತರವನ್ನು ಹೊಂದಿದೆ.

ಹೆಚ್ಚುವರಿಯಾಗಿ, ಹೀರೋ ಹೆಚ್‌ಎಫ್ ಡಿಲಕ್ಸ್‌ನ ವೀಲ್‌ಬೇಸ್ 1,235 ಎಂಎಂ ಮತ್ತು 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇದು ಹೀರೋ ಹೆಚ್‌ಎಫ್ ಡಿಲಕ್ಸ್ ಅನ್ನು ನಗರ ಮಿತಿಗಳಲ್ಲಿ ಸವಾರಿ ಮಾಡಲು ಸುಲಭವಾದ ಮೋಟಾರ್‌ಸೈಕಲ್ ಆಗಿದೆ. ಈ ಬೈಕಿನ ಸೀಟ್ 805 ಮಿಮೀ ಹೊಂದಿದೆ. ಇದು ಹಳ್ಳಿ ಹಾಗೂ ಸಿಟಿಗಳಿಗೂ ಕೂಡ ಉತ್ತಮ ಬೈಕ್ ಆಗಿದೆ.

 Hero HF Deluxe

ಫೀಚರ್ಸ್ ಗಳ ಬಗ್ಗೆ ಹೇಳುವುದಾದರೆ, ನವೀಕರಿಸಿದ ಹೀರೋ ಹೆಚ್‌ಎಫ್ ಡಿಲಕ್ಸ್ ಬೈಕ್ ಅಲಾಯ್ ವ್ಹೀಲ್ ಗಳು, ಟ್ಯೂಬ್‌ಲೆಸ್ ಟೈರ್‌ಗಳು, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಸೈಡ್-ಸ್ಟ್ಯಾಂಡ್ ಇಂಡಿಕೇಟರ್, ಟೋ-ಗಾರ್ಡ್ ಮತ್ತು ಹೆಚ್ಚಿನ ಫೀಚರ್ಸ್ ಗಳನ್ನು ಹೊಂದಿವೆ. ಇನ್ನು ಈ ಬೈಕಿನ ಲೈಟಿಂಗ್ಸ್ ಬಗ್ಗ್ ಹೇಳುವುದಾದರೆ, ಇದರಲ್ಲಿ ಹ್ಯಾಲೊಜೆನ್ ಲೈಟಿಂಗ್ಸ್ ಯುನಿಟ್ ಗಳನ್ನು ಒಳಗೊಂಡಿವೆ.

ಹೀರೋ ಮೋಟೋಕಾರ್ಪ್ ಕಂಪನಿಯು ತನ್ನ ಹೀರೋ HF ಡೀಲಕ್ಸ್ ಬೈಕಿನಲ್ಲಿ ನವೀಕರಿಸಿದ ಹೆಚ್ಚು ಸೊಗಸಾದ ಗ್ರಾಫಿಕ್ಸ್ ಅನ್ನು ಪರಿಚಯಿಸಿದೆ. ಇನ್ನು ಈ ಬೈಕಿನ ಬಣ್ಣದ ಆಯ್ಕೆಗಳ ಬಗ್ಗೆ ಹೇಳುವುದಾದರೆ, ನೆಕ್ಸಸ್ ಬ್ಲೂ, ಕ್ಯಾಂಡಿ ಬ್ಲೇಜಿಂಗ್ ರೆಡ್, ಹೆವಿ ಗ್ರೇ ವಿತ್ ಬ್ಲ್ಯಾಕ್ ಮತ್ತು ಬ್ಲ್ಯಾಕ್ ವಿತ್ ಸ್ಪೋರ್ಟ್ಸ್ ರೆಡ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ಭಾರತದ ಮಾರುಕಟ್ಟೆಯಲ್ಲಿ ಹೀರೋ ಮೊಟೊಕಾರ್ಪ್ ಮಾರಾಟ ಮಾಡುವ ದ್ವಿಚಕ್ರ ವಾಹನಗಳನ್ನು ಪ್ರತಿಯೊಬ್ಬರು ಇಷ್ಟಪಟ್ಟು ಖರೀದಿಸುತ್ತಾರೆ. ಅಷ್ಟರಮಟ್ಟಿಗೆ ಖ್ಯಾತಿಗಳಿಸಿವೆ. ಇದೀಗ, ಹೀರೋ ಮೋಟೋಕಾರ್ಪ್ ಕಂಪನಿ ತನ್ನ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಲು ತೀರ್ಮಾನಿಸಿದ್ದು, ಹೊಚ್ಚ ಹೊಸ ಕರಿಜ್ಮಾ XMR ಬೈಕ್‌ನ್ನು ಡೀಲರ್ ಈವೆಂಟ್ ನಲ್ಲಿ ಪ್ರದರ್ಶನ ಮಾಡಿದ್ದು, ಎಲ್ಲರನ್ನು ಆಕರ್ಷಿಸುತ್ತಿದೆ. ಸದ್ಯ, ಈ ಬೆಳವಣಿಗೆಯನ್ನು ಗಮನಿಸಿದರೆ, ಒಂದು ಕಾಲದ ಯುವಕರ ಹಾಟ್ ಫೇವೆರೆಟ್ ಕರಿಜ್ಮಾ ಶೀಘ್ರದಲ್ಲಿಯೇ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರಲ್ಲಿ ಎರಡು ಮಾತಿಲ್ಲ.

ಈ ಮೋಟಾರ್‌ಸೈಕಲ್‌ನ ಸ್ಪೈ ಶಾಟ್‌ಗಳು ಇತ್ತೀಚೆಗೆ ಇಂಟರ್ನೆಟ್ ನಲ್ಲಿ ಭಾರೀ ವೈರಲ್ ಆಗಿದ್ದವು. ನಿಮಗೆ ಗೊತ್ತಿರಲಿ.. ಕಂಪನಿಯು 'ಕರಿಜ್ಮಾ XMR' ಮತ್ತು 'ಕರಿಜ್ಮಾ XMR 210' ಹೆಸರನ್ನು ಈಗಾಗಲೇ ಟ್ರೇಡ್‌ಮಾರ್ಕ್ ಮಾಡಿದೆ. ಹೀರೋ ಕಂಪನಿ, 'ಕರಿಜ್ಮಾ ZMR' 2003ರಲ್ಲಿ ಭಾರತದ ಗ್ರಾಹಕರಿಗಾಗಿ ಬಿಡುಗಡೆ ಮಾಡಿತ್ತು. ಆ ಕಾಲದಲ್ಲಿ ಈ ಮೋಟಾರ್‌ಸೈಕಲ್‌ ದೊಡ್ಡ ಪ್ರಮಾಣದಲ್ಲಿ ಮಾರಾಟವಾಗಿ, ಬ್ರ್ಯಾಂಡ್‌ಗೆ ಭಾರೀ ಯಶಸ್ಸನ್ನು ತಂದುಕೊಟ್ಟಿತ್ತು.

Article Published On: Sunday, June 4, 2023, 12:00 [IST]
English summary
2023 hero hf deluxe motorcycle launched price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+