ಆಕರ್ಷಕ ಲುಕ್‌ನಲ್ಲಿ ಬಿಡುಗಡೆಗೆ ಸಜ್ಜಾದ 2023 RE Int 650, ಕಾಂಟಿನೆಂಟಲ್ GT 650
2023 RE ಇಂಟರ್‌ಸೆಪ್ಪರ್ 650 ಮತ್ತು ಕಾಂಟಿನೆಂಟಲ್ GT 650 ನವೀಕರಣಗೊಂಡ ಬ್ಲ್ಯಾಕ್ಡ್-ಔಟ್ ಅಲಾಯ್ ವೀಲ್‌ಗಳು, ಹೊಸ ಸ್ವಿಚ್‌ಗಿಯರ್ ಮತ್ತು ಹೊಸ ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಸದ್ಯ ಕಂಪನಿಯು ಆಧುನಿಕ ಸ್ಟೈಲಿಷ್ ಲುಕ್‌ನಲ್ಲಿ ತನ್ನ ಟಾಪ್ ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಈ ಕುರಿತ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೋಡೋಣ.
ರಾಯಲ್ ಎನ್‌ಫೀಲ್ಡ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ನವೀಕರಿಸಿದ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಚಿತ್ರಗಳನ್ನು ಬಹಿರಂಗಪಡಿಸಿದೆ. ಇವೆರಡನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದ್ದು, ಈ ಮುಂಚೆಯು ನಮ್ಮ ವೆಬ್‌ಸೈಟ್‌ನಲ್ಲಿ ಟೆಸ್ಟಿಂಗ್ ವೇಳೆಯ ಪೋಟೋಗಳನ್ನು ಬಿತ್ತರಿಸಲಾಗಿತ್ತು. ಅಂತಿಮವಾಗಿ ಈಗ ದೇಶೀಯ ಮಾರುಕಟ್ಟೆಯನ್ನು ತಲುಪುವ ಸಾಧ್ಯತೆಗಳು ಹೆಚ್ಚಾಗಿವೆ. ಟ್ಯೂಬ್ ಲೆಸ್ ಟೈರ್‌ಗಳೊಂದಿಗೆ ಅಲಾಯ್ ವೀಲ್‌ಗಳನ್ನು ಸೇರಿಸಿರುವುದು ಹೊಸ ಮಾದರಿಗಳ ಪ್ರಮುಖ ನವೀಕರಣವಾಗಿದೆ.

ಟ್ಯೂಬ್ ಇರುವ ಟೈರ್‌ಗಳಲ್ಲಿ ಚಲಿಸುವ ಮುಂಭಾಗ ಮತ್ತು ಹಿಂಭಾಗದಲ್ಲಿರುವ ವಿಂಟೇಜ್ ವೈರ್-ಸ್ಪೋಕ್ಡ್ ವೀಲ್‌ಗಳ ಜಾಗದಲ್ಲಿ ಈಗ ಕಪ್ಪು-ಬಣ್ಣದ ಮಲ್ಟಿ-ಸ್ಪೋಕ್ ಅಲಾಯ್ ವೀಲ್‌ಗಳನ್ನು ನೀಡಲಾಗಿದೆ. ಪಂಕ್ಚರ್ ಸಮಯದಲ್ಲಿ ಟ್ಯೂಬ್ ಟೈರ್ ಬದಲಾಯಿಸುವಲ್ಲಿ ಪರದಾಡುತ್ತಿದ್ದ ಗ್ರಾಹಕರು ಈ ಕುರಿತು ಹಲವು ಬಾರಿ ದೂರು ನೀಡಿದ್ದರು. ಗ್ರಾಹಕರ ದೂರನ್ನು ಪರಿಗಣಿಸಿ ಟ್ಯೂಬ್‌ಲೆಸ್ ವೀಲ್‌ಗಳನ್ನು ನೀಡಲಾಗಿದೆ. ಅಲ್ಲದೆ ಅಲಾಯ್ ವೀಲ್‌ಗಳ ಸೇರ್ಪಡೆ ಹೊಸ ಮಾದರಿಗಳ ಲುಕ್ ಅನ್ನು ಹೆಚ್ಚಿಸಿದೆ.
ಹೊಸ ಟೆಕ್‌ಗೆ ಆಧ್ಯತೆ:
ಚೆನ್ನೈ ಮೂಲದ ರಾಯಲ್ ಎನ್‌ಫೀಲ್ಡ್ ತಯಾರಕರು ಇತ್ತೀಚೆಗೆ ಬಿಡುಗಡೆಯಾದ ಸೂಪರ್ ಮೀಟಿಯರ್ 650 ನಲ್ಲಿ ಮೊದಲ ಬಾರಿಗೆ ಎಲ್‌ಇಡಿ ಹೆಡ್‌ಲ್ಯಾಂಪ್ ಪರಿಚಯಿಸಿದರು. ಇದು 2023 ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಶ್ರೇಣಿಗೆ ದಾರಿ ಮಾಡಿಕೊಟ್ಟಿದೆ. ಇದರ ಜೊತೆಗೆ, ಗ್ರಾಹಕರು ಪ್ರಯಾಣದಲ್ಲಿರುವಾಗ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜ್ ಮಾಡುವ ಅನುಕೂಲಕ್ಕಾಗಿ USB ಚಾರ್ಜರ್ ಮತ್ತು ಸ್ವಿಚ್‌ಗೇರ್ ಅಂಶಗಳನ್ನು ಹಂಟರ್ 350 ನೊಂದಿಗೆ ನೀಡಲಾಗಿದೆ.

ಎರಡು ಹೊಸ ಪೇಂಟ್ ಸ್ಕೀಮ್‌ಗಳ ಪರಿಚಯ:
ಇಂಟರ್‌ಸೆಪ್ಟರ್ 650 ಗಾಗಿ ಬ್ಲ್ಯಾಕ್ ರೇ ಮತ್ತು ಬಾರ್ಸಿಲೋನಾ ಬ್ಲೂ ನೀಡಿದ್ದು, ಕೆಫೆ ರೇಸರ್ ಸ್ಲಿಪ್‌ಸ್ಟ್ರೀಮ್ ಬ್ಲೂ ಮತ್ತು ಅಪೆಕ್ಸ್ ಗ್ರೇ ಬಣ್ಣದ ಆಯ್ಕೆ ಪಡೆದಿದೆ. ವಿನ್ಯಾಸಕ್ಕೆ ಸಂಬಂಧಿಸಿದಂತೆ, ಎಕ್ಸಾಸ್ಟ್ ಸಿಸ್ಟಮ್, ಬಾಡಿ ಪ್ಯಾನಲ್ಗಳು ಮತ್ತು ಎಂಜಿನ್ ಪ್ರದೇಶಕ್ಕೆ ನೀವು ಕಪ್ಪು ಬಣ್ಣವನ್ನು ನೋಡಬಹುದು. ಈ ನವೀಕರಣಗಳು ಎರಡೂ ಮೋಟಾರ್‌ಸೈಕಲ್‌ಗಳ ಬೆಲೆಗಳನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸುತ್ತವೆ. ಜೊತೆಗೆ ಹಳೆಯ ಮಾದರಿಯಿಂದ ಸಂಪೂರ್ಣ ಭಿನ್ನವಾಗಿ ಕಾಣುವಂತೆ ಮಾಡಿರುವುದನ್ನು ಗಮನಿಸಬಹುದು.
ಯಾವುದೇ ಕಾರ್ಯಕ್ಷಮತೆಯ ಬದಲಾವಣೆಗಳಿಲ್ಲದೆ, ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ GT 650 ನ 2023 ಆವೃತ್ತಿಯು 648 cc ಸಮಾನಾಂತರ ಅವಳಿ-ಸಿಲಿಂಡರ್ ಎಂಜಿನ್ ಅನ್ನು ಒಳಗೊಂಡಿದೆ. ಇದು ಸುಮಾರು 47 PS ಮತ್ತು 52 Nm ಗರಿಷ್ಠ ಟಾರ್ಕ್‌ನ ಪವರ್ ಅನ್ನು ಹೊರಹಾಕುತ್ತದೆ. ಪವರ್‌ಟ್ರೇನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್‌ದೊಂದಿಗೆ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ಪ್ರಮಾಣಿತವಾಗಿ ಜೋಡಿಸಲಾಗಿದೆ.

ಕಂಪನಿಯು ಸದ್ಯ ಭವಿಷ್ಯಕ್ಕಾಗಿ 650 cc ಆಫರ್‌ಗಳ ಶ್ರೇಣಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ಈ ವರ್ಷ, ಹಿಮಾಲಯನ್ 450 ಹೊಚ್ಚ ಹೊಸ ಲಿಕ್ವಿಡ್-ಕೂಲ್ಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೀಗೆ ಇನ್ನೂ ಹಲವು ಮಾದರಿಗಳ ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದೆ. ಇತ್ತೀಚೆಗೆ ಹೊರಬಿದ್ದ ಮಾಹಿತಿಯಂತೆ 2025ಕ್ಕೆ ಮೊದಲ ಎಲೆಕ್ಟ್ರಿಕ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡುವುದಾಗಿ ತಿಳಿದುಬಂದಿದೆ. ಒಟ್ಟಾರೆ ಎನ್‌ಫೀಲ್ಡ್ ಕೂಡ ಇವಿ ವಲಯಕ್ಕೆ ಕಾಲಿಡುವುದು ಖಚಿತವಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








