ಮತ್ತೆ ಸದ್ದು ಮಾಡಿ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಲು ಸಜ್ಜಾದ ರಾಯಲ್ ಎನ್‌ಫೀಲ್ಡ್ ಬುಲೆಟ್ 350
ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ (Royal Enfield) ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಈ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ರಾಯಲ್ ಎನ್‍ಫೀಲ್ಡ್ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪೋರ್ಟ್‌ಫೋಲಿಯೊವನ್ನು ವಿಸ್ತರಿಸುತ್ತಿದೆ. ಈಗ, ಹಬ್ಬದ ಸೀಸನ್‌ಗೆ ಮುಂಚಿತವಾಗಿ, ರಾಯಲ್ ಎನ್‌ಫೀಲ್ಡ್ ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ಅನ್ನು ಬಿಡುಗಡೆಮಾಡಲಿದೆ.
ನವೀಕರಿಸಿದ ಬೈಕ್‌ಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ವಿಭಾಗಗಳಲ್ಲಿ ರಾಯಲ್ ಎನ್‌ಫೀಲ್ಡ್ ಬ್ರ್ಯಾಂಡ್‌ನ ಉಪಸ್ಥಿತಿಯನ್ನು ಬಲಪಡಿಸಲು ನೆರವಾಗುತ್ತದೆ. ರಾಯಲ್ ಎನ್‌ಫೀಲ್ಡ್ ಪ್ರಕಾರ, 2023ರ ರಾಯಲ್ ಎನ್‌ಫೀಲ್ಡ್ ಬುಲೆಟ್ 350 (Royal Enfield Bullet 350) ಬೈಕ್ ಈ ವರ್ಷದ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿದೆ. ಹೊಸ ಬುಲೆಟ್ 350 ಬೈಕ್ ಹಂಟರ್ 350 ಮತ್ತು ಕ್ಲಾಸಿಕ್ 350 ಬೈಕ್ ಗಳ ನಡುವೆ ಇರಿಸುವ ಸಾಧ್ಯತೆಯಿದೆ.

ಈ ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್‌ನ ಹಲವಾರು ಸ್ಫಾಟ್ ಟೆಸ್ಟ್ ವೇಳೆ ಈಗಾಗಲೇ ರಸ್ತೆಗಳಲ್ಲಿ ಹಲವಾರು ಬಾರಿ ಗುರುತಿಸಲ್ಪಟ್ಟಿವೆ. ಇದು ಈಗಾಗಲೇ ಕ್ಲಾಸಿಕ್ 350, ಹಂಟರ್ 350 ಮತ್ತು ಮೆಟಿಯರ್ 350 ನಲ್ಲಿ ಬಳಸಲಾಗುತ್ತಿರುವ ಜೆ-ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. "ಬುಲೆಟ್ ಮೇರಿ ಜಾನ್" ಎಂಬ ಪದಗಳನ್ನು ಹೊಂದಿರುವ ಹಿನ್ನೆಲೆ ಪೋಸ್ಟರ್‌ನೊಂದಿಗಿನ ವೀಡಿಯೊವನ್ನು ಕೂಡ ಹಂಚಿಕೊಂಡಿತು.
ಇತರ ರಾಯಲ್ ಎನ್‌ಫೀಲ್ಡ್ ಮಾದರಿಗಳಿಗಿಂತ ಭಿನ್ನವಾಗಿ, ರಾಯಲ್ ಎನ್‌ಫೀಲ್ಡ್ ಹೊಸ ಬುಲೆಟ್ ಮೋಟಾರ್‌ಸೈಕಲ್ ತಯಾರಿಕೆಯಲ್ಲಿ ಕೆಲವು ಹೆಚ್ಚುವರಿ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಯಾವುದೇ ತಾಂತ್ರಿಕ ನಿರ್ಬಂಧಗಳಿಂದಲ್ಲ ಆದರೆ 'ಭಾವನಾತ್ಮಕ' ನಿರ್ಬಂಧಗಳ ಕಾರಣದಿಂದಾಗಿ ಇದು ವಿಶ್ವದ ಅತ್ಯಂತ ಹಳೆಯ ಮೋಟಾರ್‌ಸೈಕಲ್ ಗಳಲ್ಲಿ ಒಂದಾಗಿದೆ ಮತ್ತು ಈ ಬುಲೆಟ್ ಬೈಕಿಗೆ ದೇಶದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದೆ.
ಅಂತಹ ಪರಂಪರೆಯನ್ನು ಹೊಂದಿರುವ ಮೋಟಾರ್‌ಸೈಕಲ್‌ನ 'ಮೂರು ರೂಪಕ್ಕೆ ಹೆಚ್ಚು ಅಡ್ಡಿಯಾಗದ ರೀತಿಯಲ್ಲಿ ಬದಲಾವಣೆಗಳು ಮತ್ತು ನವೀಕರಣಗಳನ್ನು ತರುವುದು ರಾಯಲ್ ಎನ್‌ಫೀಲ್ಡ್‌ಗೆ ನಿರ್ಣಾಯಕವಾಗಿದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಮೋಟಾರ್‌ಸೈಕಲ್‌ನ ಕೆಲವು ಸ್ಪೈಡ್ ಚಿತ್ರಗಳ ಪ್ರಕಾರ, ಕಂಪನಿಯು ಮೋಟಾರ್‌ಸೈಕಲ್‌ಗೆ ಬದಲಾವಣೆಗಳನ್ನು ಪರಿಚಯಿಸಿದೆ ಎಂದು ಹೇಳಬಹುದು ಆದರೆ ಬಹಳ ಸೂಕ್ಷ್ಮ ರೀತಿಯ ಬದಲಾವಣೆ ಮಾಡಲಾಗಿದೆ.
ರಾಯಲ್ ಎನ್‌ಫೀಲ್ಡ್‌ನ ವಿನ್ಯಾಸಕರು ರಾಯಲ್ ಎನ್‌ಫೀಲ್ಡ್ ಬುಲೆಟ್ ಮೋಟಾರ್‌ಸೈಕಲ್‌ನ ಮೂಲ ವಿನ್ಯಾಸದ ಲಕ್ಷಣಗಳಾದ ಸಿಂಗಲ್-ಪೀಸ್ ಸ್ಟೆಪ್ಡ್ ಸೀಟ್, ರೆಟ್ರೊ-ಸ್ಟೈಲ್ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್ ಲೈಟ್‌ಗಳನ್ನು ಉಳಿಸಿಕೊಂಡಿದ್ದಾರೆ. ಇದಲ್ಲದೆ, ಈ ಗುಣಲಕ್ಷಣಗಳನ್ನು ಹೊಸ ಮೋಟಾರ್‌ಸೈಕಲ್‌ಗೆ ಸರಿಹೊಂದುವಂತೆ ನವೀಕರಿಸಲಾಗಿದೆ. ಈ ಬದಲಾವಣೆಗಳ ಜೊತೆಗೆ, ಮುಂಬರುವ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಮೋಟಾರ್‌ಸೈಕಲ್ ತುಂಬಾ ಕಮಾಂಡಿಂಗ್ ನೇರವಾದ ಸೀಟ್ ಪೋರ್ಷಿಸನ್ ಸಹ ಒಳಗೊಂಡಿದೆ.
ಈ ಬುಲೆಟ್ ಬೈಕಿನ ವಿಶಿಷ್ಟ ಲಕ್ಷಣವಾಗಿದೆ, ಇದನ್ನು ತಯಾರಕರು 1931 ರಲ್ಲಿ ಪರಿಚಯಿಸಿದರು. ಈ ಹೊಸ ಪ್ಲಾಟ್‌ಫಾರ್ಮ್‌ಗೆ ಬರಲಿರುವ ಬುಲೆಟ್ 350 ಮೋಟಾರ್‌ಸೈಕಲ್‌ನ ಮುಂಬರುವ ನವೀಕರಿಸಿದ ಮಾದರಿಯು ಹೊಸ ಡಬಲ್ ಕ್ರೇಡಲ್ ಫ್ರೇಮ್, ಹೊಸ ಸಸ್ಪೆನ್ಶನ್ ಸೆಟಪ್, ಸುಧಾರಿತ ಬ್ರೇಕಿಂಗ್ ಹಾರ್ಡ್‌ವೇರ್ ಮತ್ತು ಹೊರಹೋಗುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮತ್ತು ರಾಯಲ್ ಎನ್‌ಫೀಲ್ಡ್ ಮೆಟಿಯರ್ 350 ನಿಂದ ಸ್ವಿಚ್‌ಗಿಯರ್ ಸೇರಿದಂತೆ ಕೆಲವು ಆಧುನಿಕ ಸ್ಪರ್ಶಗಳನ್ನು ಒಳಗೊಂಡಿರುತ್ತದೆ.
ರಾಯಲ್ ಎನ್‌ಫೀಲ್ಡ್ 2020ರಲ್ಲಿ ರಾಯಲ್ ಎನ್‌ಫೀಲ್ಡ್ ಮಿಟಿಯೊರ್ 350 ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡುವುದರೊಂದಿಗೆ ಜೆ-ಸೀರಿಸ್ ಪ್ಲಾಟ್‌ಫಾರ್ಮ್ ಅನ್ನು ಪರಿಚಯಿಸಿತು. ಒಂದು ವರ್ಷದ ನಂತರ, ರಾಯಲ್ ಎನ್‌ಫೀಲ್ಡ್ ಜೆ-ಸೀರೀಸ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ಕ್ಲಾಸಿಕ್ 350 ಮೋಟಾರ್‌ಸೈಕಲ್ ಅನ್ನು ನವೀಕರಿಸಿತು. ಹೊಸ ಜೆ-ಸೀರಿಸ್ ಪ್ಲಾಟ್‌ಫಾರ್ಮ್ ಅನ್ನು ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್ ಮಾಡಲು ಬಳಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications








