ಭಾರತದಲ್ಲಿ 2023ರ ಯಮಹಾ FZS, FZ-X, MT-15, R15 ಬೈಕ್‌ಗಳು ಬಿಡುಗಡೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ತನ್ನ ನವೀಕರಿಸಿದ FZ-X, MT-15 V2.0 ಮತ್ತು R15 ಬೈಕ್‌ಗಳ ಜೊತೆಗೆ FZS-FI V4 ಡೀಲಕ್ಸ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿ ಅಚ್ಚರಿ ಮೂಡಿಸಿದರು. ಯಮಹಾ ಕಂಪನಿಯು ತನ್ನ ಬತ್ತಳಿಕೆಯಲ್ಲಿರುವ ಬಾಣಗಳನ್ನು ಒಂದೇ ಬಾರಿ ಪ್ರಯೋಗಿಸಿದಂತೆ ಪ್ರಮುಖ ಬೈಕ್‌ಗಳನ್ನು ಬಿಡುಗಡೆಗೊಳಿಸಿವೆ.

ಹೊಸ ಯಮಹಾ ಬೈಕ್‌ಗಳ ಬಗ್ಗೆ ಹೇಳುವುದಾದರೆ ಮೊದಲಿಗೆ, ಯಮಹಾ FZS-FI V4 ಡಿಲಕ್ಸ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.27 ಲಕ್ಷವಾಗಿದೆ. ಈ ಯಮಹಾ FZS-FI V4 ಡಿಲಕ್ಸ್ ಬೈಕ್ ಮೆಟಾಲಿಕ್ ಗ್ರೇ, ಮೆಜೆಸ್ಟಿ ರೆಡ್ ಮತ್ತು ಮೆಟಾಲಿಕ್ ಬ್ಲಾಕ್ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಅದರ ಹೊರತಾಗಿ, ಹೊಸ ಯಮಹಾ FZS-FI V4 ಡಿಲಕ್ಸ್ ಮೋಟಾರ್‌ಸೈಕಲ್ ಹಿಂದಿನಂತೆ ಅದೇ 149cc, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.

ಭಾರತದಲ್ಲಿ 2023ರ ಯಮಹಾ FZS, FZ-X, MT-15, R15 ಬೈಕ್‌ಗಳು ಬಿಡುಗಡೆ

ಈ ಎಂಜಿನ್ 12.2 bhp ಪವರ್ ಮತ್ತು 13.3 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಯಮಹಾ FZS-FI V4 ಡಿಲಕ್ಸ್ ಬೈಕ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಬೈಕ್ ಮಸ್ಕಲರ್ ಲುಕ್ ED ಹೆಡ್‌ಲೈಟ್ ಅನ್ನು ಹೊಂದಿದೆ, ಈ ಬೈಕ್ ಇಂಧನ ಟ್ಯಾಂಕ್ ಮತ್ತು ಸೈಡ್ ಪ್ಯಾನೆಲ್‌ಗಳಂತಹ ಇತರ ವಿನ್ಯಾಸ ಅಂಶಗಳನ್ನು ಹಿಂದಿನ ಮಾದರಿಯಿಂದ ಮುಂದಕ್ಕೆ ಸಾಗಿಸಲಾಗುತ್ತದೆ.

ಈ ಹೊಸ FZS-FI V4 ಡಿಲಕ್ಸ್ ಬೈಕ್ ಸಸ್ಪೆಂಕ್ಷನ್ ಮತ್ತು ಬ್ರೇಕಿಂಗ್ ಬ್ರೇಕಿಂಗ್ ಸೆಟಪ್ ಅನ್ನು ಅದರ ಪೂರ್ವವರ್ತಿಯಿಂದ ಮುಂದಕ್ಕೆ ಸಾಗಿಸಲಾಗಿದೆ. ಈ ಹೊಸ ಯಮಹಾ FZS-FI V4 ಡಿಲಕ್ಸ್ ಬೈಕ್ ಡಿಲಕ್ಸ್ ಮೋಟಾರ್‌ಸೈಕಲ್ ಸ್ಪೀಡೋಮೀಟರ್, ಓಡೋಮೀಟರ್, ಟ್ರಿಪ್ ಮೀಟರ್, ಫ್ಯೂಯಲ್ ಲೆವೆಲ್ ರೀಡೌಟ್ ಮತ್ತು ಸ್ಮಾರ್ಟ್‌ಫೋನ್ ಕನಕ್ಟಿವಿಟಿನಂತಹ ಫೀಚರ್ಸ್ ಗಳೊಂದಿಗೆ LCD ಇನ್ಸ್ ಟ್ರೂಮೆಂಟ್ ಕನ್ಸೋಲ್‌ನೊಂದಿಗೆ ಸುಸಜ್ಜಿತವಾಗಿದೆ. ಇದಲ್ಲದೆ, ಈ ಹೊಸ ಬೈಕ್ ಎಲ್‌ಇಡಿ ಇಂಡಿಕೇಟರ್ಸ್, ಎಬಿಎಸ್, ಒಬಿಡಿ-2 ಪೋರ್ಟ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್‌ನೊಂದಿಗೆ ಬರುತ್ತದೆ.

ಭಾರತದಲ್ಲಿ 2023ರ ಯಮಹಾ FZS, FZ-X, MT-15, R15 ಬೈಕ್‌ಗಳು ಬಿಡುಗಡೆ

ಯಮಹಾ FZ-X
ಈ ಯಮಹಾ FZ-X ಬೈಕ್ ಗಾಗಿ ಜಪಾನಿನ ದ್ವಿಚಕ್ರ ವಾಹನ ತಯಾರಕರು ಈಗ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಪರಿಚಯಿಸುವ ಮೂಲಕ ಸುರಕ್ಷತೆಯನ್ನು ಹೆಚ್ಚಿಸಿದೆ. ಇದಲ್ಲದೆ ಈ ಬೈಕ್ ಈಗ ಹೊಸ ಮ್ಯಾಟ್ ಬ್ಲೂ ಬಣ್ಣ ಮತ್ತು ಗೋಲ್ಡನ್-ಬಣ್ಣದ ಅಲಾಯ್ ವ್ಹೀಲ್ ಗಳೊಂದಿಗೆ ಬರುತ್ತದೆ. 2023ರ ಯಮಹಾ FZ-X ಬೈಕ್ ಯಾವುದೇ ವಿನ್ಯಾಸ ಬದಲಾವಣೆಗಳನ್ನು ಪಡೆದುಕೊಂಡಿಲ್ಲ. ಹಿಂದಿನ ಮಾದರಿಯಂತೆಯೇ ಈ 2023ರ ಯಮಹಾ FZ-X ಬೈಕ್ ಬಿಡುಗಡೆಗೊಂಡಿದೆ.

2023 ಯಮಹಾ R15M
ಈ ಯಮಹಾ R15M ಬೈಕ್ ಅನ್ನು 2023ಕ್ಕೆ ನವೀಕರಿಸಿದೆ. ಈ ನವೀಕರಿಸಿದ R15M ಆವೃತ್ತಿಯು ಈಗ LED ಟರ್ನ್ ಇಂಡಿಕೇಟರ್‌ಗಳು ಮತ್ತು ಹೆಚ್ಚಿನ ಮಾಹಿತಿಯನ್ನು ಪ್ರದರ್ಶಿಸುವ ಅಪ್‌ರೇಟೆಡ್ TFT ಇನ್ಸ್ ಟ್ರೀಮೆಂಟ್ ಕನ್ಸೋಲ್‌ನೊಂದಿಗೆ ಬರುತ್ತದೆ. ಇದರ ಜೊತೆಗೆ R15M ಬೈಕ್ ಅನ್ನು ಹೊಸ ಸ್ವಿಚ್‌ಗಿಯರ್‌ನೊಂದಿಗೆ ಸಜ್ಜುಗೊಳಿಸಿದೆ, ಇದು ಬಳಕೆದಾರರಿಗೆ ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸುಲಭವಾಗಿ ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ.

ಭಾರತದಲ್ಲಿ 2023ರ ಯಮಹಾ FZS, FZ-X, MT-15, R15 ಬೈಕ್‌ಗಳು ಬಿಡುಗಡೆ

ಈ ನವೀಕರಣಗಳ ಹೊರತಾಗಿ, ಜಪಾನಿನ ದ್ವಿಚಕ್ರ ವಾಹನ ತಯಾರಕರು ಮ್ಯಾಟ್ ಬ್ಲ್ಯಾಕ್ ಮತ್ತು ಗೋಲ್ಡನ್ ಬಣ್ಣವನ್ನು ಒಳಗೊಂಡಿರುವ ಹೊಸ ಡ್ಯುಯಲ್-ಟೋನ್ ಬಣ್ಣದ ಆಯ್ಕೆಯನ್ನು ಪರಿಚಯಿಸಿದ್ದಾರೆ. ಈ ಬಣ್ಣ ಸಂಯೋಜನೆಯು ಈ ಬೈಕ್ ಅನ್ನು ಮತ್ತಷ್ಟು ಆಕರ್ಷಕವಾಗಿಸಿದೆ. ಈ 2023 ಯಮಹಾ R15M ಬೈಕ್ ಗೋಲ್ಡನ್ USD ಫೋರ್ಕ್‌ಗಳು ಮತ್ತು ಗೋಲ್ಡನ್ ಅಲಾಯ್ ವ್ಹೀಲ್ ಗಳನ್ನು ಸಹ ಪಡೆಯುತ್ತದೆ. ಈ ಸಂಯೋಜನೆಯು ಬೈಕ್ ಅನ್ನು ಅತ್ಯಂತ ಪ್ರೀಮಿಯಂ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

2023ರ ಯಮಹಾ MT-15
ಯಮಹಾ ಕಂಪನಿಯು ತನ್ನ MT-15 V2.0 ಮೋಟಾರ್‌ಸೈಕಲ್ ಅನ್ನು ಹೊಸ LED ಟರ್ನ್ ಇಂಡಿಕೇಟರ್ಸ್ ಗಳೊಂದಿಗೆ ಡ್ಯುಯಲ್-ಚಾನೆಲ್ ABS ಮತ್ತು ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್‌ನೊಂದಿಗೆ ನವೀಕರಿಸಿದೆ. ಇದಲ್ಲದೆ, ಹೊಸ MT-15 V2.0 ಬೈಕ್ ಬ್ಲ್ಯಾಕ್ ಗ್ಲಾಸ್ ಮತ್ತು ರೆಡ್ ಬಣ್ಣವನ್ನು ಒಳಗೊಂಡಿರುವ ಹೊಸ ಬಣ್ಣದ ಆಯ್ಕೆಗಳನ್ನು ಪಡೆಯುತ್ತದೆ. 2023ರ ಯಮಹಾ MT-15 ಬೈಕ್ ಫ್ಲೂ-ವರ್ಮಿಲಿಯನ್, ಮೆಟಾಲಿಕ್ ಬ್ಲ್ಯಾಕ್, ರೇಸಿಂಗ್ ಬ್ಲೂ, ಸಯಾನ್ ಸ್ಟಾರ್ಮ್ ಮತ್ತು ಮಾನ್ಸ್ಟರ್ ಎನರ್ಜಿ ಎಂಬ ಹೊಸ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಂಡಿವೆ.

More from DriveSpark

Article Published On: Monday, February 13, 2023, 16:29 [IST]
English summary
2023 yamaha fzs fzx mt15 r15 launched all details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+