2024 Hero Karizma: ಹೊಸ ಅವತಾರದಲ್ಲಿ ಧೂಳೆಬ್ಬಿಸಲು ಸಜ್ಜು... ಅತ್ಯಧಿಕ ಪವರ್, 210cc ಎಂಜಿನ್
ಒಂದು ಕಾಲದಲ್ಲಿ ಮಿಂಚಿ ಮರೆಯಾದ ವಸ್ತುಗಳೆಂದರೆ ಭಾರತದಲ್ಲಿನ ಜನತೆಗೆ ಅಪಾರ ಗೌರವ. ಅದರಲ್ಲೂ ಆಟೋಮೊಬೈಲ್ ಕ್ಷೇತ್ರದಲ್ಲಿನ ಹಳೆಯ ಕಾರು, ಮೋಟಾರ್ ಸೈಕಲ್‌ಗಳಿಗೆ ಭಾರೀ ಬೇಡಿಕೆಯಿದೆ. ಅದೇ ಸ್ಥಗಿತಗೊಂಡ ವಾಹನಗಳನ್ನು ಕಂಪನಿಯೇ ಮತ್ತೊಮ್ಮೆ ಉತ್ಪಾದನೆಗೆ ತಂದರೆ ಅದರ ಮೇಲಿನ ನಿರೀಕ್ಷೆಗಳು ಇನ್ನೂ ಹೆಚ್ಚಾಗುತ್ತವೆ. ಇದೀಗ ಹೀರೋ ಕೂಡ ಇದನ್ನೇ ಮಾಡಲು ಹೊರಟಿದೆ.
ಇದಕ್ಕೆ ಉತ್ತಮ ಉದಾಹರಣೆಯೆಂದರೆ ಪಲ್ಸರ್ 220F ಮರು-ಬಿಡುಗಡೆಯಾಗಿದ್ದನ್ನು ನಾವು ನೆನಪಿಸಿಕೊಳ್ಳಬಹುದು. ಹಾಗೆಯೇ Hero ನಿಂದ ಕರಿಜ್ಮಾ ಸರಣಿಯ ಫೇರ್ಡ್ ಮೋಟಾರ್‌ಸೈಕಲ್‌ಗಳನ್ನು ನೆನಪಿಸಿಕೊಳ್ಳಿ. ಈ ಮೋಟಾರ್ ಸೈಕಲ್ 90ರ ದಶಕದ ಯುವಕರಿಗೆ ಕನಸಿನ ಬೈಕ್ ಆಗಿತ್ತು. ಆ ಕಾಲದಲ್ಲಿ ಇದರ ಬೇಡಿಕೆ ಕೂಡ ಹಾಗೇ ಇತ್ತು. ನಾವು 2014 ರಲ್ಲಿ ಬಿಡುಗಡೆಯಾದ ಫೇಸ್‌ಲಿಫ್ಟೆಡ್ ಮಾಡೆಲ್‌ಗಳ ಬಗ್ಗೆ ಮಾತನಾಡುತ್ತಿಲ್ಲ, ಹಳೆಯ ಕರಿಜ್ಮಾ R ಮತ್ತು ಕರಿಜ್ಮಾ ZMR ಬಗ್ಗೆ ಇಲ್ಲಿ ಹೇಳುತ್ತಿದ್ದೇವೆ.

ಹೌದು. ಈ ಮಾದರಿಗಳು ಆಗಿನ ಕಾಲಕ್ಕೆ ತಮ್ಮ ವಿಭಾಗದಲ್ಲಿ ಧೂಳೆಬ್ಬಿಸಿದ್ದ ಬೈಕ್‌ಗಳಾಗಿವೆ. ಸದ್ಯ ಕಂಪನಿಯು ಉತ್ಪಾದನೆಯನ್ನು ಹಲವು ವರ್ಷಗಳ ಹಿಂದೆಯೇ ನಿಲ್ಲಿಸಿಬಿಟ್ಟಿದೆ. ಆದರೆ ಈಗಲೂ ಹಲವೆಡೆ ಈ ಬೈಕ್‌ಗಳನ್ನು ನಾವು ನೋಡಬಹುದು, ಈ ಬೈಕ್‌ಗಳನ್ನು ಅಭಿಮಾನಿಸುವ ಗುಂಪಿಗೆ ಈಗ ಒಂದು ಶುಭ ಸುದ್ದಿ ಹೊರಬಿದ್ದಿದೆ. ಈಗಿನ ಮೋಟಾರು ವಾಹನ ಮಾನದಂಡಗಳಿಗೆ ಅನುಗುಣವಾಗಿ ಹೊಸ ಲಿಕ್ವಿಡ್ ಕೂಲ್ಡ್ 210cc ಎಂಜಿನ್‌ನೊಂದಿಗೆ ಹೀರೋ ಕರಿಜ್ಮಾ ಪುನರಾಗಮನವನ್ನು ಮಾಡುತ್ತಿರುವುದು ಬಹುತೇಕ ಖಚಿತವಾಗಿದೆ.
2024 ಹೀರೋ ಕರಿಜ್ಮಾ 210cc:
ಮೊದಲಿಗೆ ಈ ಬೈಕ್ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗ ಪಲ್ಸರ್ 220 ಗೆ ಪ್ರತಿಸ್ಪರ್ಧಿಯಾಗಿ ಅದರ ವಿಭಾಗದಲ್ಲಿ ಸಖತ್ ಸದ್ದು ಮಾಡಿತ್ತು. ದೊಡ್ಡ ಮಟ್ಟದಲ್ಲಿ ಗ್ರಾಹಕರನ್ನು ಸೆಳೆಯಲು ಕರಿಜ್ಮಾಗಾಗಿ ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್ ಅವರನ್ನು ಪ್ರಚಾರಕ್ಕಾಗಿ ಇಳಿಸಿದ್ದರು. ಕರಿಜ್ಮಾ ZMR ನಲ್ಲಿ ಸ್ಟಂಟ್‌ಗಳನ್ನು ಮಾಡುವ ಹೃತಿಕ್ ಅವರ ಜಾಹಿರಾತುಗಳನ್ನು ಇಂದಿಗೂ ನಾವು ನೆನಪಿಸಿಕೊಳ್ಳಬಹುದು. ಅಂದಿನ ಕಾಲಕ್ಕೆ ಇದು ಪರಿಣಾಮಕಾರಿ ಮತ್ತು ಸ್ಮರಣೀಯ ಮಾರ್ಕೆಟಿಂಗ್ ಆಗಿತ್ತು.

ಈಗ, ಮುಂಬರುವ ಕರಿಜ್ಮಾ ಆಧಾರಿತ ಹೊಸ ವೇದಿಕೆಯನ್ನು ತರಲು ಹೀರೋ ಸಜ್ಜಾಗಿದೆ. ಹೊಚ್ಚ ಹೊಸ 210cc ಲಿಕ್ವಿಡ್-ಕೂಲ್ಡ್ ಎಂಜಿನ್, ಹೊಸ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರಲಿದೆ. ಉಳಿದಂತೆ ಹೊಸ ಎಂಜಿನ್ ಬಗ್ಗೆ ನಿಖರವಾದ ವಿವರಗಳು ಇನ್ನೂ ಹೊರಬಿದ್ದಿಲ್ಲ. ಆದರೆ ಈ ಮೋಟಾರ್‌ಸೈಕಲ್‌ಗೆ 25 bhp ಪವರ್ ಮತ್ತು 30 Nm ಟಾರ್ಕ್ ನೀಡುವ ಸಾಧ್ಯತೆಯಿದೆ. ಇದು ಸಂಪೂರ್ಣ ಫೇರ್ಡ್ ಮೋಟಾರ್‌ಸೈಕಲ್ ಆಗಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಮುಂಬರುವ 2024 ಹೀರೋ ಕರಿಜ್ಮಾ ಲೈನ್‌ಅಪ್ ಬಗ್ಗೆ ಒಳ್ಳೆಯ ವಿಷಯವೆಂದರೆ ಅವುಗಳನ್ನು ಹಳೆಯ ಕರಿಜ್ಮಾ ಸರಣಿಯ ಸ್ಫೂರ್ತಿಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಹೆಚ್ಚು ತಂತ್ರಜ್ಞಾನ, ಹೆಚ್ಚು ಶಕ್ತಿ ಹಾಗೂ ಹಿಂದೆಂದಿಗಿಂತಲೂ ವೇಗದ ಮೋಟಾರ್ ಸೈಕಲ್ ಆಗಿರಲಿದೆ. ಹೀರೋ ಕರಿಜ್ಮಾ ಹಣಕ್ಕೆ ತಕ್ಕ ಮೌಲ್ಯವನ್ನು ಪ್ರತಿನಿಧಿಸುತ್ತದೆ, ಸ್ಪರ್ಧಾತ್ಮಕ ಬೆಲೆಯ ಪರವಾಗಿ, ಹೀರೋ USD ಫೋರ್ಕ್‌ಗಳು ಮತ್ತು ಸ್ಲಿಪ್ಪರ್ ಕ್ಲಚ್, ರೈಡ್ ಬೈ ವೈರ್ ಮತ್ತು ಹೆಚ್ಚಿನ ಹಾರ್ಡ್‌ವೇರ್‌ಗಳನ್ನು ಕೈಬಿಡಬಹುದು.

ಹಾಗೆಯೇ ಇದರಲ್ಲಿ ಡ್ಯುಯಲ್ ಚಾನಲ್ ಎಬಿಎಸ್ ನೊಂದಿಗೆ (ಕನಿಷ್ಠ ಒಂದು ಆಯ್ಕೆಯಾಗಿ) ಎರಡೂ ಡಿಸ್ಕ್ ಬ್ರೇಕ್‌ಗಳನ್ನು ನಾವು ನಿರೀಕ್ಷಿಸಬೇಕು. ಉಳಿದಂತೆ ಎಲ್‌ಇಡಿ ಲೈಟಿಂಗ್, ಟರ್ನ್ ಬೈ ಟರ್ನ್ ನ್ಯಾವಿಗೇಷನ್ ನೊಂದಿಗೆ ಬ್ಲೂಟೂತ್ ಸಂಪರ್ಕ, ಎಂಜಿನ್ ಕಟ್ ಆಫ್‌ನೊಂದಿಗೆ ಸೈಡ್ ಸ್ಟ್ಯಾಂಡ್ ಸೆನ್ಸಾರ್‌ಗಳನ್ನು ಒಳಗೊಂಡಿರಬಹುದು. ಇದನ್ನು 2024 ರ ಪ್ರಮುಖ ಹಬ್ಬದ ದಿನಗಳಲ್ಲಿ ಬಿಡುಗಡೆ ಮಾಡಬಹುದು. 2024 ಕರಿಜ್ಮಾ ಬೆಲೆಯು 1.5 ಲಕ್ಷ ರೂ. ಒಳಗೆ ಇರಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications