90 ಸಾವಿರ ರೂ. ಸ್ಕೂಟರ್‌ಗೆ 1 ಕೋಟಿ ರೂ. ಖರ್ಚು ಮಾಡಿ ಫ್ಯಾನ್ಸಿ ನಂಬರ್ ಹಾಕಿಸಿದ ಭೂಪ

ವಾಹನಗಳಿಗೆ ಫ್ಯಾನ್ಸಿ ನಂಬರ್ ಪ್ಲೇಟ್‌ಗಳನ್ನು ಹಾಕಲು ಇಷ್ಟಪಡುವ ಜನರು ಎಷ್ಟು ಹಣ ಬೇಕಾದರೂ ಖರ್ಚು ಮಾಡುತ್ತಾರೆ. ಕೆಲವರು ತಮ್ಮ ಲಕ್ಕಿ ನಂಬರ್‌ಗಳನ್ನು ಪಡೆಯಲು ಬಯಸುವುದರಿಂದ ಫ್ಯಾನ್ಸಿ ನಂಬರ್‌ಗಳು ಹೆಚ್ಚು ದುಬಾರಿಯಾಗಿರುತ್ತವೆ. ಪ್ರಸ್ತುತ, ಭಾರತದ ಎಲ್ಲಾ ಸಾರಿಗೆ ಇಲಾಖೆಗಳು ಆಯಾ ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುತ್ತವೆ. ರಾಜ್ಯ ಸರ್ಕಾರಗಳು ಆನ್‌ಲೈನ್‌ನಲ್ಲಿ ಫ್ಯಾನ್ಸಿ ನಂಬರ್‌ಗಳನ್ನು ಹರಾಜು ಮಾಡುತ್ತವೆ.

ಅದರಂತೆ ಆ ನಂಬರ್‌ಗಳನ್ನು ಇಷ್ಟಪಡುವವರು ಹೆಚ್ಚು ಹಣ ನೀಡಿ ಆ ಸಂಖ್ಯೆಯನ್ನು ಖರೀದಿಸಲು ಸಿದ್ಧರಾಗಿರುತ್ತಾರೆ. ಇತ್ತೀಚೆಗೆ ವ್ಯಕ್ತಿಯೊಬ್ಬ ನಂಬರ್ ಪ್ಲೇಟ್‌ಗಾಗಿ ಬರೋಬ್ಬರಿ 1.12 ಕೋಟಿ ರೂ. ನೀಡಿ ಸುದ್ದಿಯಾಗಿದ್ದಾರೆ. ಹಿಮಾಚಲ ಪ್ರದೇಶದ ಸಮ್ಲಾ ಜಿಲ್ಲೆಯ ಕೊಟ್ಕೇಯ್ ನಲ್ಲಿ ಸಾರಿಗೆ ಕಚೇರಿಯಲ್ಲಿ ಎಲ್ಲಾ ಫ್ಯಾನ್ಸಿ ನಂಬರ್‌ಗಳನ್ನು ಇತ್ತೀಚೆಗೆ ಆನ್‌ಲೈನ್‌ನಲ್ಲಿ ಹರಾಜು ಮಾಡಲಾಯಿತು. ಈ ನೋಂದಣಿಗಳಿಗೆ ಬಿಡ್ಡಿಂಗ್ ರೂ.1000 ಮೂಲ ಬೆಲೆಯಲ್ಲಿ ಪ್ರಾರಂಭವಾಯಿತು.

90 ಸಾವಿರ ರೂ. ಸ್ಕೂಟರ್‌ಗೆ 1 ಕೋಟಿ ರೂ. ಖರ್ಚು ಮಾಡಿ ಫ್ಯಾನ್ಸಿ ನಂಬರ್ ಹಾಕಿಸಿದ ಭೂಪ

ಈ ಹರಾಜಿನಲ್ಲಿ ನೋಂದಣಿ ಸಂಖ್ಯೆ ಎಚ್‌ಪಿ99-9999 ನಂಬರ್‌ಗೆ ಗರಿಷ್ಠ ಬೆಲೆ 1,12,15,400 ರೂ. ಕೂಗಿದ್ದು, ಹಲವರನ್ನು ದಿಗ್ಬ್ರಮೆಗೊಳಿಸಿದೆ. ಇಷ್ಟೊಂದು ಮೊತ್ತಕ್ಕೆ ಫ್ಯಾನ್ಸಿ ನಂಬರ್ ಪ್ಲೇಟ್ ಹರಾಜಾಗಿರುವ ಬಗ್ಗೆ ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೂ ಅಚ್ಚರಿಯ ಸಂಗತಿ ಎಂದರೆ ಈ ನಂಬರ್ ಪ್ಲೇಟ್ ಅನ್ನು ಯಾವ ವಾಹನಕ್ಕೆ ಅಳವಡಿಸಿದ್ದಾರೆ ಎಂಬುದು ತಿಳಿದರೆ ಹುಬ್ಬೇರಿಸುವುದು ಖಚಿತ. ತಾನು ಖರೀದಿಸಿದ ಸ್ಕೂಟರ್‌ಗೆ ಈ ನಂಬರ್‌ ಪ್ಲೇಟ್‌ ಅಳವಡಿಸಲು ನಿರ್ಧರಿಸಿದ್ದಾರೆ.

90 ಸಾವಿರ ರೂ. ಮೌಲ್ಯದ ವಾಹನಕ್ಕೆ 1.12 ಕೋಟಿ ಮೌಲ್ಯದ ನಂಬರ್ ಪ್ಲೇಟ್ ಖರೀದಿಸಿದ್ದಾರೆ. ಈ ಒಂದು ನಂಬರ್ ಪ್ಲೇಟ್ ಮಾತ್ರ ಹೆಚ್ಚು ಹಣ ಪಡೆದಿಲ್ಲ, ಜೊತೆಗೆ HP99-0009 ನಂಬರ್ ಪ್ಲೇಟ್ 21.6 ಲಕ್ಷ ರೂ. ಮತ್ತು HP-990005 ನಂಬರ್ ಪ್ಲೇಟ್ 20.1 ಲಕ್ಷ ರೂ. ಮೊತ್ತವನ್ನು ಪಡೆದಿವೆ. ಈ ಮೂರು ಸಂಖ್ಯೆಗಳು ಟಾಪ್ 3 ಹೆಚ್ಚು ಬಿಡ್ ಕೂಗಿದ ಸಂಖ್ಯೆಗಳಾಗಿವೆ.

90 ಸಾವಿರ ರೂ. ಸ್ಕೂಟರ್‌ಗೆ 1 ಕೋಟಿ ರೂ. ಖರ್ಚು ಮಾಡಿ ಫ್ಯಾನ್ಸಿ ನಂಬರ್ ಹಾಕಿಸಿದ ಭೂಪ

ಉಳಿದಂತೆ HP-99-0003 ಸಂಖ್ಯೆ 10.5 ಲಕ್ಷಕ್ಕೆ ಹರಾಜಾಗಿತ್ತು. HP-99-0004 ರೂ. 9.97 ಲಕ್ಷ, HP-99-0000 ರೂ. 5.43 ಲಕ್ಷ ಮತ್ತು HP-99-0007 ರೂ. 1.72 ಲಕ್ಷಕ್ಕೆ ಹರಾಜಾಗಿವೆ. ಇವೆಲ್ಲವೂ ಲಕ್ಷ ರೂಪಾಯಿ ಮೀರಿದ ಬೆಲೆಗೆ ಹರಾಜಾದ ಸಂಖ್ಯೆಗಳು. ಆ ಸಂಖ್ಯೆಯಲ್ಲಿ, ಹೆಚ್ಚು ಹರಾಜಾದ HP99-9999 ಸಂಖ್ಯೆ ಗರಿಷ್ಠ 26 ಅಭ್ಯರ್ಥಿಗಳನ್ನು ಹೊಂದಿದೆ. 10 ಇತರ ಬಿಡ್ಡರ್‌ಗಳೊಂದಿಗೆ HP99-0009 ನಂತರದ ಹೆಚ್ಚಿನ ಬಿಡ್ ಆಗಿತ್ತು.

ಎಚ್‌ಪಿ99- 0006 ಮತ್ತು ಎಚ್‌ಪಿ99- 0008 ರೂ.75 ಸಾವಿರ, ಎಚ್‌ಪಿ99- 0069, ಎಚ್‌ಪಿ99-0099 ರೂ.50 ಸಾವಿರ ಹಾಗೂ ಎಚ್‌ಪಿ99-0111, ಎಚ್‌ಪಿ99-0999, ಎಚ್‌ಪಿ99-1111 ಮತ್ತು ಎಚ್‌ಪಿ99-7177 40 ಸಾವಿರ ರೂ.ಗೆ ಹರಾಜಾಗಿವೆ. ಈ ಕೊಟ್ಕೇಯ್ ಪ್ರದೇಶವು ಹಿಮಾಚಲ ಪ್ರದೇಶದ ಪ್ರಮುಖ ಭಾಗವಾಗಿದೆ. ಇಲ್ಲಿನ ಜನರಿಗೆ ವಾಹನಗಳ ಬಗ್ಗೆಯು ಹೆಚ್ಚಿನ ಕ್ರೇಜ್ ಇದೆ ಎಂದು ಹೇಳಲಾಗುತ್ತದೆ. ಈ ಪ್ರದೇಶವು ಹಿಮಾಲಯದ ತಪ್ಪಲಿನಲ್ಲಿರುವ ಸುಮಾರು 40 ಹಳ್ಳಿಗಳನ್ನು ಒಳಗೊಂಡಿದೆ.

ಇಲ್ಲಿ ಆರ್ಕಿಡ್ ಹೂವುಗಳು ಹೆಚ್ಚು ಅರಳುತ್ತವೆ. ಈ ಹೂವುಗಳ ಬೆಲೆ ತುಂಬಾ ದುಬಾರಿಯಾಗಿರುತ್ತದೆ. ಈ ಪ್ರದೇಶದಿಂದ ಪ್ರಪಂಚದಾದ್ಯಂತ ಈ ಹೂವನ್ನು ರಫ್ತು ಮಾಡಲಾಗುತ್ತದೆ. ಈ ಪ್ರದೇಶದಲ್ಲಿ ಅನೇಕ ಶ್ರೀಮಂತರು ಈ ಹೂವಿನ ಬಿಸಿನೆಸ್ ಮಾಡುವುದರಿಂದ ಶ್ರೀಮಂತರಾಗಿದ್ದಾರೆ. ಅದಕ್ಕಾಗಿಯೇ ಅವರು ಈ ಹರಾಜಿನಲ್ಲಿ ಭಾಗವಹಿಸಿ ನಂಬರ್ ಪ್ಲೇಟ್‌ಗಳನ್ನು ಹೆಚ್ಚಿನ ಬೆಲೆಗೆ ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ ಈ ಪ್ರದೇಶದಲ್ಲಿ ಬಡ ಜನರ ಸಂಖ್ಯೆ ಕಡಿಮೆಯಯಿರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Saturday, February 18, 2023, 8:30 [IST]
English summary
A man spent 1 crore rs for 90 thousand rs scooter
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+