ಸಿಂಗಲ್ ಚಾರ್ಜ್‌ಗೆ 180 ಕಿ.ಮೀ ಮೈಲೇಜ್... ಆಕರ್ಷಕ ಬೆಲೆ, ಭಾರತೀಯ ಬ್ರಾಂಡ್, ರಗಡ್ ಬೈಕ್ ಬಿಡುಗಡೆ
ಗುಜರಾತ್ ಪ್ರಧಾನ ಕಚೇರಿಯ ಎಲೆಕ್ಟ್ರಿಕ್ ಆಟೋಮೊಬೈಲ್ ತಯಾರಕರಾದ ABZO ಮೋಟಾರ್ಸ್ ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಆದ ABZO VS01 ಅನ್ನು ಬಿಡುಗಡೆ ಮಾಡಿದೆ. ಇ-ಬೈಕ್ ಅನ್ನು ಒಂದು ರೂಪಾಂತರದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಬೆಲೆಯು ಅಂದಾಜು ರೂ. 1.8 ಲಕ್ಷದಿಂದ ರೂ. 2.22 ಲಕ್ಷದ ನಡುವೆ ಇರಲಿದೆ.
ABZO VS01 ಮೋಟಾರ್‌ಸೈಕಲ್ 72 V 70Ah ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಪೂರ್ಣ ಚಾರ್ಜ್‌ನಲ್ಲಿ 180 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಮೋಟಾರ್‌ಸೈಕಲ್ ಮುಂಭಾಗ ಮತ್ತು ಹಿಂಭಾಗದ ಎಲ್ಇಡಿ ಲ್ಯಾಂಪ್‌ಗಳು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟ್ಯೂಬ್ಲೆಸ್ ಟೈರ್‌ಗಳೊಂದಿಗೆ 17-ಇಂಚಿನ ಅಲಾಯ್ ವೀಲ್‌ಗಳು, 1,473 ಎಂಎಂ ವೀಲ್‌ಬೇಸ್, 158 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 700 ಎಂಎಂ ಸೀಟ್ ಎತ್ತರವನ್ನು ಹೊಂದಿದೆ.

ABZO VS01 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ರೆಟ್ರೊ-ಥೀಮ್ ಕ್ರೂಸರ್ ಡಿಸೈನ್ ಹೊಂದಿದೆ. ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ಸ್ ಎಂಬ ಮೂರು ರೈಡಿಂಗ್ ಮೋಡ್‌ಗಳು ಇದ್ದು, ಕ್ರಮವಾಗಿ ಆಯಾ ಮೋಡ್‌ಗಳಿಗೆ ಅನುಗುಣವಾಗಿ 45ಕಿ.ಮೀ, 65ಕಿ.ಮೀ ಮತ್ತು 85ಕಿ.ಮೀ ವೇಗವನ್ನು ತಲುಪಬಲ್ಲದು. 6.3 KW ನ ಗರಿಷ್ಠ ಪವರ್ (8.44 bhp) ಮತ್ತು 190 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ.
ಇಂಪೀರಿಯಲ್ ರೆಡ್, ಮೌಂಟೇನ್ ವೈಟ್, ಜಾರ್ಜಿಯನ್ ಬೇ ಮತ್ತು ಬ್ಲಾಕ್ ಎಂಬ ನಾಲ್ಕು ವಿಭಿನ್ನ ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಮೋಟಾರ್‌ಸೈಕಲ್ ಪುನರುತ್ಪಾದಕ ಬ್ರೇಕಿಂಗ್ (ರೀಜೆನ್ ಬ್ರೇಕಿಂಗ್) ತಂತ್ರಜ್ಞಾನದೊಂದಿಗೆ ಬರುತ್ತದೆ ಎಂದು ತಯಾರಕರು ಹೇಳಿದ್ದಾರೆ. ಸಾಮಾನ್ಯ ಚಾರ್ಜರ್ ಅನ್ನು ಬಳಸಿಕೊಂಡು ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು, ಇದು ಆರು ಗಂಟೆ 35 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಜೊತೆಗೆ ಕಂಪನಿ ಹೇಳುವಂತೆ ಇದು ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೂ ಬರುತ್ತದೆ. ಈ ಚಾರ್ಜರ್ ಮೂಲಕ ಮೋಟಾರ್‌ಸೈಕಲ್ ಅನ್ನು ಮೂರು ಗಂಟೆ 20 ನಿಮಿಷಗಳಲ್ಲಿ ಪುಲ್ ಚಾರ್ಜ್ ಮಾಡಬಹುದು. ಇನ್ನು ಮೋಟಾರ್‌ಸೈಕಲ್‌ಗೆ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್‌ಗಳನ್ನು ನೀಡಲಾಗಿದೆ. ಮುಂಭಾಗ ಮತ್ತು ಹಿಂಭಾಗದ ಎರಡೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ.
ಇದು ಕಾಂಬಿ-ಬ್ರೇಕಿಂಗ್ ಸಿಸ್ಟಮ್ (CBS) ನೊಂದಿಗೆ ಜೋಡಿಯಾಗಿ ಬರುತ್ತದೆ. ಸವಾರನ ಅನುಕೂಲಕ್ಕಾಗಿ ರಿವರ್ಸ್ ಮೋಡ್ ಕೂಡ ನೀಡಲಾಗಿದೆ. ಅಬ್ಜೋ ಮೋಟಾರ್ಸ್ ತನ್ನ ಉತ್ಪಾದನಾ ಘಟಕವು ಮೊದಲ ವರ್ಷದಲ್ಲಿ 9,000 ಯುನಿಟ್‌ಗಳ ಉತ್ಪಾದನಾ ಸಾಮರ್ಥ್ಯದೊಂದಿಗೆ ಪ್ರಾರಂಭವಾಗಲಿದೆ, ಎರಡನೇ ವರ್ಷದಲ್ಲಿ 15,000 ಯುನಿಟ್‌ಗಳಿಗೆ, ಮೂರನೇ ವರ್ಷದಲ್ಲಿ 24,000 ಯುನಿಟ್‌ಗಳಿಗೆ, ನಾಲ್ಕನೇ ವರ್ಷದಲ್ಲಿ 40,000 ಯುನಿಟ್‌ಗಳಿಗೆ, ಐದನೇ ವರ್ಷದ ವೇಳೆಗೆ 60,000 ಯೂನಿಟ್‌ಗಳಿಗೆ ವಿಸ್ತರಿಸಲು ಯೋಜಿಸಲಾಗಿದೆ.

ABZO VS01 ಬಿಡುಗಡೆ ಕುರಿತು ಮಾತನಾಡಿದ ABZO ಮೋಟಾರ್ಸ್‌ನ ಸಹ-ಸಂಸ್ಥಾಪಕ ಕಂಚಿ ಪಟೇಲ್, ಮೋಟಾರ್‌ಸೈಕಲ್ ಅನ್ನು ಭಾರತದಾದ್ಯಂತ ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು. ಕಂಪನಿಯು ಇನ್ನು ಹೆಚ್ಚಿನ ಉತ್ಪನ್ನಗಳನ್ನು ಹೊಂದಿದೆ, "ನಾವು ಗುಜರಾತ್‌ನಲ್ಲಿ ನಮ್ಮ ಅಸ್ತಿತ್ವವನ್ನು ವಿಸ್ತರಿಸುವ ಗುರಿಯನ್ನು ಹೊಂದಿದ್ದೇವೆ. ಸ್ಟ್ಯಾಂಡರ್ಡ್ ಬೈಕ್ ಸೇರಿದಂತೆ ಹೆಚ್ಚಿನ ಉತ್ಪನ್ನಗಳನ್ನು ತರುವ ಮೂಲಕ ಉತ್ಪನ್ನಗಳ ಶ್ರೇಣಿಯನ್ನು ವೈವಿಧ್ಯಗೊಳಿಸುತ್ತೇವೆ" ಎಂದು ಪಟೇಲ್ ಹೇಳಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications








