ರಾಯಲ್ ಎನ್‌ಫೀಲ್ಡ್ ಬೈಕಿಗೆ ಸೆಡ್ಡು ಹೊಡೆಯಲು ಕೈಗೆಟುಕುವ ಬೆಲೆಯಲ್ಲಿ ಬರುತ್ತಿದೆ ಹಾರ್ಲೆ ಡೇವಿಡ್ಸನ್ ಬೈಕ್
ಪ್ರಪಂಚಾದ್ಯಂತ ಹಾರ್ಲೆ ಡೇವಿಡ್ಸನ್ ಬೈಕ್ ಗಳು ಭಾರೀ ಜನಪ್ರಿಯತೆ ಹೊಂದಿದೆ. ಇದೀಗ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ Hero MotoCorp ಮುಂಬರುವ ಮೇಡ್ ಇನ್ ಇಂಡಿಯಾ ಹಾರ್ಲೆ-ಡೇವಿಡ್ಸನ್ ಬೈಕಿನ ಚಿತ್ರಗಳನ್ನು ಹಂಚಿಕೊಂಡಿದೆ. ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಈ ಹೊಸ ಬೈಕ್ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೊಳಿಸಲಿದೆ.
ಹೊಸ ಹಾರ್ಲೆ-ಡೇವಿಡ್ಸನ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮತ್ತು ಹೋಂಡಾ CB350RS ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ. ಈ ಇತ್ತೀಚಿನ ಹಾರ್ಲೆ ಡೇವಿಡ್ಸನ್ ಬೈಕ್ ಅನ್ನು Hero MotoCorp ಸಹಯೋಗದೊಂದಿಗೆ ತಯಾರಿಸಲಾಗುತ್ತದೆ. ಈ ಬೈಕ್ ಅನ್ನು ಮಿಲ್ವಾಕೀಯಲ್ಲಿರುವ ಮಾಜಿ ಪ್ರಧಾನ ಕಛೇರಿಯಲ್ಲಿ ವಿನ್ಯಾಸಗೊಳಿಸಲಾಗಿದೆ, ಈ ಹೊಸ ಬೈಕಿನ ಬೆಲೆಯನ್ನು ಅಗ್ಗವಾಗಿಸಲು ಭಾರತದಲ್ಲಿ ಹೀರೋ ಮೋಟೋಕಾರ್ಪ್ ಟೆಸ್ಟ್ ಅನ್ನು ನಡೆಸಿ ಇಲ್ಲೇ ಅಭಿವೃದ್ಧಿಯನ್ನು ಮಾಡಿದೆ.

ಚಿತ್ರಗಳನ್ನು ನೋಡುವಾಗ, ಮುಂಬರುವ ಮೇಡ್-ಇನ್-ಇಂಡಿಯಾ ಹಾರ್ಲೆ-ಡೇವಿಡ್ಸನ್ ಮೋಟಾರ್‌ಸೈಕಲ್ ತನ್ನ ಮಸ್ಕಲರ್ ಫ್ಯೂಯಲ್ ಟ್ಯಾಂಕ್ ಮತ್ತು ಹೆಡ್‌ಲೈಟ್‌ಗಳು, ಟರ್ನ್ ಇಂಡಿಕೇಟರ್‌ಗಳು ಮತ್ತು ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನಂತಹ ಸುತ್ತಿನ ಅಂಶಗಳೊಂದಿಗೆ ಸಾಕಷ್ಟು ಆಕರ್ಷಕವಾಗಿ ಕಾಣುವ ನಿಯೋ ರೆಟ್ರೊ ಬೈಕ್ ರೀತಿಯಲ್ಲಿ ಕಾಣುತ್ತದೆ. ಈ ಬೈಕ್ ವಿನ್ಯಾಸವು ಆಕರ್ಷಕವಾಗಿದೆ.
ಮುಂಬರುವ ಮೇಡ್-ಇನ್-ಇಂಡಿಯಾ ಹಾರ್ಲೆ-ಡೇವಿಡ್ಸನ್ ಬೈಕ್ ಸಸ್ಪೆಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ USD ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಟ್ವಿನ್ ಗ್ಯಾಸ್-ಚಾರ್ಜ್ಡ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿವೆ. ಈ ಹೊಸ ಹಾರ್ಲೆ-ಡೇವಿಡ್ಸನ್ ಬೈಕ್ LED DRL ಜೊತೆಗೆ LED ಹೆಡ್‌ಲೈಟ್‌ಗಳು, ವೃತ್ತಾಕಾರದ TFT ನಂತಹ ಫೀಚರ್ಸ್ ಗಳೊಂದಿಗೆ ಬರುತ್ತದೆ ಎಂಚು ಚಿತ್ರಗಳು ಬಹಿರಂಗಪಡಿಸುತ್ತವೆ.

ಇನ್ನು ಈ ಬೈಕ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ. ಇನ್ನು ಬೈಕಿನ ಸುರಕ್ಷೆತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್ ಗಳನ್ನು ಹೊಂದಿವೆ. ಮುಂಬರುವ ಮೇಡ್-ಇನ್-ಇಂಡಿಯಾ ಹಾರ್ಲೆ-ಡೇವಿಡ್ಸನ್ ಬೈಕ್ ಬ್ಲೂಟೂತ್ ಕನೆಕ್ಟಿವಿಟಿ, ರೈಡರ್ ಮೋಡ್‌ಗಳು ಮತ್ತು ಟೆಲಿಮೆಟ್ರಿ ಡೇಟಾದಂತಹ ಫೀಚರ್ಸ್ ಗಳೊಂದಿಗೆ ಬರುವ ಸಾಧ್ಯತೆಯಿದೆ,
ಮೇಡ್-ಇನ್-ಇಂಡಿಯಾ ಹಾರ್ಲೆ-ಡೇವಿಡ್ಸನ್ ಮೋಟಾರ್‌ಸೈಕಲ್‌ನ ನಂಬರ್ ಪ್ಲೇಟ್ ನಲ್ಲಿ "HD 4XX" ಎಂದು ಬರೆಯಲಾಗಿದೆ. ಇದರರ್ಥ ಮುಂಬರುವ ಮೇಡ್-ಇನ್-ಇಂಡಿಯಾ ಹಾರ್ಲೆ-ಡೇವಿಡ್ಸನ್ ಮೋಟಾರ್‌ಸೈಕಲ್ 400+cc, ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್ ಎಂಜಿನ್ ಅನ್ನು ಒಳಗೊಂಡಿರುತ್ತದೆ. ಈ ಎಂಜಿನ್ ಉತ್ತಮ ಲೋ-ಮಟ್ಟದ ಟಾರ್ಕ್ ಮತ್ತು ಥಂಪಿ ಎಕ್ಸಾಸ್ಟ್ ನೋಟ್ ಅನ್ನು ಹೊಂದಿರುವ ಸಾಧ್ಯತೆ.

ಭಾರತದಲ್ಲಿ ತಯಾರಿಸಲಾದ ಹಾರ್ಲೆ-ಡೇವಿಡ್ಸನ್ ಬೈಕ್ ಈ ಚಿತ್ರಗಳು ಈ ಬೈಕ್ ಮಿಡ್-ಸೆಟ್ ಫೂಟ್ ಪೆಗ್‌ಗಳು ಮತ್ತು ಅಗಲವಾದ ಹ್ಯಾಂಡಲ್‌ಬಾರ್‌ನೊಂದಿಗೆ ತಟಸ್ಥ ಸವಾರಿ ಭಂಗಿಯನ್ನು ಹೊಂದಿದೆ ಎಂಬುದನ್ನು ಖಚಿತ ಪಡಿಸುತ್ತದೆ. ಇದರೊಂದಿಗೆ ಈ ಬೈಕ್ 18-ಇಂಚಿನ ಮುಂಭಾಗದ ಟೈರ್ ಮತ್ತು ಚಿಕ್ಕದಾದ 17-ಇಂಚಿನ ಹಿಂಭಾಗದ ಟೈರ್‌ನೊಂದಿಗೆ ಬರುವಂತೆ ತೋರುತ್ತಿದೆ.
ಹೊಂಡಾ CB350RS ಮತ್ತು ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ ಗಳಿಗೆ ಹೋಲಿಸಿದರೆ ಮುಂಬರುವ ಮೇಡ್-ಇನ್-ಇಂಡಿಯಾ ಹಾರ್ಲೆ-ಡೇವಿಡ್ಸನ್ ಮೋಟಾರ್‌ಸೈಕಲ್ ಅನ್ನು ಸ್ವಲ್ಪ ಪ್ರೀಯಮಿಂ ಬೆಲೆಯಲ್ಲಿ ನಿರೀಕ್ಷಿಸಬಹುದು. ಇದಲ್ಲದೆ, ಭಾರತದಲ್ಲಿ ತಯಾರಿಸಿದ ಹಾರ್ಲೆ-ಡೇವಿಡ್ಸನ್ ಮೋಟಾರ್‌ಸೈಕಲ್ ಉತ್ಪಾದನೆಗೆ ಸಿದ್ಧವಾಗಿದೆ ಮತ್ತು ಮಾದರಿಯನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಬಹುದು. ಮುಂದಿನ ದಿನಗಳಲ್ಲಿ ಈ ಬೈಕ್ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ.


Click it and Unblock the Notifications








