Auto Expo 2023: ಆಂಪಿಯರ್ ಪ್ರೈಮಸ್ ಇ-ಸ್ಕೂಟರ್ ಪ್ರದರ್ಶನ: ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಾ?

ಭಾರತದ ಮಾರುಕಟ್ಟೆಯಲ್ಲಿ ಸದ್ಯ ಎಲೆಕ್ಟ್ರಿಕ್ ವಾಹನಗಳು (EV) ಅಬ್ಬರಿಸುತ್ತೀವೆ. ಅದರಂತೆ ವಾಹನ ತಯಾರಕ ಕಂಪನಿಗಳು, ಹಲವು ಎಲೆಕ್ಟ್ರಿಕ್ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ಲಾಂಚ್ ಮಾಡುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ದೆಹಲಿಯಲ್ಲಿ ಆಟೋ ಎಕ್ಸ್‌ಪೋ ನಡೆಯುತ್ತಿದ್ದು, ಅಲ್ಲಿಯೂ ಇವಿಗಳನ್ನು ಅನಾವರಣಗೊಳಿಸಲಾಗುತ್ತಿದೆ.

ಆಂಪಿಯರ್ ಹೊಸ ಪ್ರೈಮಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದೆ. ಈ ಇವಿ ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ 120 ಕಿ.ಮೀ ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ. ಇದರ ಜೊತೆಗೆ ಕಂಪನಿಯು ಹೊಸ NXG ಮತ್ತು NXU ಇ-ಸ್ಕೂಟರ್ ಪರಿಕಲ್ಪನೆಯನ್ನು (concepts) ಹೊರತಂದಿದೆ. ಇವೆರಡು ಸ್ಕೂಟರ್‌ಗಳನ್ನು ಈ ವರ್ಷ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಇವು ಲಾಂಚ್ ಆದ ಮೇಲೆ ಒಂದೇ ಚಾರ್ಜ್‌ನಲ್ಲಿ 120 ಕಿಮೀ ರೇಂಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಆಟೋ ಎಕ್ಸ್‌ಪೋ 2023: ಆಂಪಿಯರ್ ಪ್ರೈಮಸ್ ಇ-ಸ್ಕೂಟರ್ ಪ್ರದರ್ಶನ

ಆಂಪಿಯರ್ ಪ್ರೈಮಸ್, ಗ್ರಾಹಕರಿಗೆ ಖರೀದಿಗೆ ಲಭ್ಯವಿರುವ ಮ್ಯಾಗ್ನಸ್ ಎಲೆಕ್ಟ್ರಿಕ್ ಸ್ಕೂಟರ್‌ನಂತೆಯೇ ವಿನ್ಯಾಸವನ್ನು ಹೊಂದಿದೆ. 4 ಹೊಸ ಡ್ಯುಯಲ್-ಟೋನ್ ಬಣ್ಣಗಳನ್ನು ಪಡೆದಿದೆ. ಅಲ್ಲದೆ, ಪ್ರೈಮಸ್ ಇ-ಸ್ಕೂಟರ್ ಒಬೆನ್ ರೋರ್ ಇ-ಬೈಕ್‌ನಂತೆಯೇ ಹೊಸ 3kWh ಲಿಥಿಯಂ-ಐರನ್-ಫಾಸ್ಫೇಟ್ ಬ್ಯಾಟರಿಯನ್ನು ಹೊಂದಿದೆ. ಇದು 120 km ರೇಂಜ್ ನೀಡಲಿದ್ದು, 75kph ಗರಿಷ್ಠ ವೇಗವನ್ನು ಹೊಂದಿದೆ. ಸಾಮಾನ್ಯ 5A ಸಾಕೆಟ್‌ ಬಳಕೆಯೊಂದಿಗೆ ಸಂಪೂರ್ಣ ಚಾರ್ಜ್ ಆಗಲು 4 ಗಂಟೆ ತೆಗೆದುಕೊಳ್ಳುತ್ತದೆ. ಇದು ವೇಗವಾಗಿ ಚಾರ್ಜ್ ಆಗುವ 30A ಸಾಕೆಟ್‌ ಬಳಕೆಯೊಂದಿಗೆ 2 ಗಂಟೆಗಳಲ್ಲಿ ಚಾರ್ಜ್ ಆಗುತ್ತದೆ.

ಆಂಪಿಯರ್ ಕಂಪನಿಯು, ಪ್ರೈಮಸ್‌ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಉಪಯೋಗ ಮಾಡಿರುವ ಹೊಸ ಮಿಡ್-ಮೌಂಟೆಡ್ ಮೋಟರ್ 3.8kW ಗರಿಷ್ಠ ಪವರ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಹೇಳುತ್ತದೆ. ಬೆಲ್ಟ್ ಫೈನಲ್ ಡ್ರೈವ್ ಮೂಲಕ ರೇರ್ ವೀಲ್ ಗೆ ಪವರ್ ವರ್ಗಾಯಿಸಲಾಗುತ್ತದೆ. ಇದು ಆಂಪಿಯರ್ ಸ್ಕೂಟರ್‌ನಲ್ಲಿ ಮೊದಲ ಬಾರಿಗೆ ಬಳಕೆ ಮಾಡಲಾಗಿದೆ. ಪ್ರೈಮಸ್ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 5 ಸೆಕೆಂಡ್‌ಗಳಲ್ಲಿ 0-40 ಕಿಲೋಮೀಟರ್ ವೇಗವನ್ನು ಪಡೆಯಲಿದೆ ಎಂದು ಹೇಳಲಾಗಿದೆ.

ಆಟೋ ಎಕ್ಸ್‌ಪೋ 2023: ಆಂಪಿಯರ್ ಪ್ರೈಮಸ್ ಇ-ಸ್ಕೂಟರ್ ಪ್ರದರ್ಶನ

ಆಂಪಿಯರ್ ಪ್ರೈಮಸ್ ಎಲೆಕ್ಟ್ರಿಕ್ ಸ್ಕೂಟರ್ ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಅವುಗಳೆಂದರೆ, ಪವರ್, ಸಿಟಿ, ಇಕೋ ಹಾಗೂ ರಿವರ್ಸ್ ಮೋಡ್. ಈ ನೂತನ ಸ್ಕೂಟರ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅನ್ನು ಸಕ್ರಿಯಗೊಳಿಸುವ ಬ್ಲೂಟೂತ್ ಸಂಪರ್ಕದಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇಷ್ಟೇ ಅಲ್ಲದೆ, ಆಂಪಿಯರ್ ರೆಡಿ ಮಾಡಿರುವ ಅಪ್ಲಿಕೇಶನ್ ಮೂಲಕ ಡಿಜಿಟಲ್ ಡ್ಯಾಶ್‌ಬೋರ್ಡ್ ನಲ್ಲಿ ನೋಟಿಫಿಕೇಶನ್ ಅಲರ್ಟ್ ಸಹ ಪಡೆಯಬಹುದು. ಸದ್ಯ ಮಾರುಕಟ್ಟೆಯಲ್ಲಿ ದೊರೆಯುವ ಬಜಾಜ್ ಚೇತಕ್‌ನಂತೆ ಪ್ರೈಮಸ್ ಸಹ ಕೀ ಲೆಸ್ ಆಯ್ಕೆಯನ್ನು ಹೊಂದಿದೆ ಎಂದು ಹೇಳಬಹುದು.

ಆಂಪಿಯರ್ ಪ್ರೈಮಸ್ ಸ್ಕೂಟರ್, 12-ಇಂಚಿನ ವೀಲ್ಸ್ ಹೊಂದಿದೆ. ಹ್ಯಾಂಡಲ್ ನ ಎರಡು ತುದಿಗಳಲ್ಲಿ ಡ್ರಮ್ ಬ್ರೇಕ್‌ಗಳನ್ನು ಪಡೆದುಕೊಂಡಿದೆ. ಅಂಡರ್ ಸೀಟ್ ಸ್ಟೋರೇಜ್ ಸಾಮರ್ಥ್ಯ 22 ಲೀಟರ್ ಇದ್ದು, ಈ ಪ್ರೈಮಸ್ ಬರೋಬ್ಬರಿ 110 ಕೆಜಿ ತೂಕವಿದೆ. 150 ಕೆಜಿ ವರೆಗೆ ಭಾರವನ್ನು ಹೊತ್ತೊಯ್ಯಲಿದ್ದು, ಇದು 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಫಿಗರ್ ಹೊಂದಿದೆ. ಆಂಪಿಯರ್ ಪ್ರೈಮಸ್ ಸ್ಕೂಟರ್ ಅನ್ನು ಇಂದಿನಿಂದಲೇ ಗ್ರಾಹಕರು ಬುಕ್ ಮಾಡಬಹುದು. ಅದರ ಬೆಲೆ ಶೀಘ್ರದಲ್ಲೇ ಬಹಿರಂಗವಾಗಲಿದ್ದು, ಈ ಸ್ಕೂಟರ್ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗಬಹುದು.

ಆಟೋ ಎಕ್ಸ್‌ಪೋ 2023: ಆಂಪಿಯರ್ ಪ್ರೈಮಸ್ ಇ-ಸ್ಕೂಟರ್ ಪ್ರದರ್ಶನ

ಆಟೋ ಎಕ್ಸ್‌ಪೋದಲ್ಲಿ ಆಂಪಿಯರ್ ಕಂಪನಿ ಪ್ರೈಮಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾತ್ರ ಪ್ರದರ್ಶಿಸಿಲ್ಲ. ಹೊಸ NXG ಮತ್ತು NXU ಇ-ಸ್ಕೂಟರ್ ಪರಿಕಲ್ಪನೆಯನ್ನು (concepts) ಅನಾವರಣ ಮಾಡಿದೆ. ಇವು ನೂತನ ಮಾಡ್ಯುಲರ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ಪ್ರೈಮಸ್‌ನಂತೆಯೇ ಮೀಡ್-ಮೌಂಟೆಡ್ ಮೋಟರ್ ಅನ್ನು ಹೊಂದಿವೆ. NXG ಸ್ಕೂಟರ್, ಎಲ್‌ಇಡಿ ಲೈಟಿಂಗ್, ಟಿಎಫ್‌ಟಿ ಡ್ಯಾಶ್, ಫಾಸ್ಟ್-ಚಾರ್ಜಿಂಗ್ ಡಿಸ್ಕ್ ಬ್ರೇಕ್ ವೈಶಿಷ್ಟ್ಯಗಳನ್ನು ಹೊಂದಿದೆ. ಈ ವರ್ಷದ ಮೊದಲಾರ್ಧದಲ್ಲಿ ಮಾರುಕಟ್ಟೆಗೆ ಬರಲಿದ್ದು, ಅದರ ಬೆಲೆ ರೂ.1 ಲಕ್ಷದವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.

ಮತ್ತೊಂದು ಇ-ಸ್ಕೂಟರ್ ಆಂಪಿಯರ್ NXU ಸಹ NXGನಂತೆಯೇ ಅದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ದೊಡ್ಡ ಟಾಪ್ ಬಾಕ್ಸ್ ಮತ್ತು ಸೈಡ್ ಪ್ಯಾನಿಯರ್‌ಗಳ ರೂಪದಲ್ಲಿ ಲಗೇಜ್ ಸಿಸ್ಟಮ್ ಅನ್ನು ಹೊಂದಿದೆ. NXUನ ಪೇಲೋಡ್ ಸಾಮರ್ಥ್ಯವನ್ನು 200 kg ವರೆಗೆ ಇರಲಿದೆ. ಆಂಪಿಯರ್ NXU, ವೃತ್ತಾಕಾರದ ಹೆಡ್‌ಲೈಟ್, ಬೀಫಿಯರ್ ಫ್ರಂಟ್ ಫೋರ್ಕ್ ಮತ್ತು ಚುಂಕಿಯರ್ ಟೈರ್‌ಗಳನ್ನು ಪಡೆದುಕೊಂಡಿದೆ. ಇದು ಹೆಚ್ಚುವರಿ ತೂಕವನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಈ ವರ್ಷದ ಅಂತ್ಯದ ವೇಳೆಗೆ NXU ಅನ್ನು ಲಾಂಚ್ ಮಾಡಬಹುದು.

More from DriveSpark

Article Published On: Wednesday, January 11, 2023, 12:51 [IST]
English summary
Auto expo 2023 ampere primus e scooter showcased
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+