Auto Expo 2023: ದುಬಾರಿ ಬೆಲೆಯ ಮೋಟೋ ಮೊರಿನಿ ಎಕ್ಸ್-ಕೇಪ್ 650, ಎಕ್ಸ್-ಕೇಪ್ 650ಎಕ್ಸ್ ಪ್ರದರ್ಶನ

ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನೇಕ ದೇಶಿಯ ಹಾಗೂ ವಿದೇಶಿ ಕಂಪನಿಗಳು ತಮ್ಮ ಬೈಕ್ ಹಾಗೂ ಸ್ಕೂಟರ್ ಗಳನ್ನು ಅನಾವರಣ ಹಾಗೂ ಬಿಡುಗಡೆ ಮಾಡಿವೆ. ಕೆಲವು ದ್ವಿಚಕ್ರ ವಾಹನಗಳ ಫೀಚರ್ಸ್ ಹಾಗೂ ವಿನ್ಯಾಸ ನಿಜಕ್ಕೂ ಆಕರ್ಷಕವಾಗಿದ್ದು, ಜೊತೆಗೆ ಕೈಗೆಟುಕುವ ಬೆಲೆಯು ಅವುಗಳನ್ನು ಖರೀದಿಸಲು ಗ್ರಾಹಕರನ್ನು ಪ್ರೇರೇಪಿಸುತ್ತಿದೆ ಎಂದು ಹೇಳಬಹುದು.

ಇಟಾಲಿಯ ಪ್ರಮುಖ ಬೈಕ್ ಬ್ರ್ಯಾಂಡ್, 'ಮೋಟೋ ಮೊರಿನಿ' ಆಟೋ ಎಕ್ಸ್‌ಪೋದಲ್ಲಿ ಎಕ್ಸ್ - ಕೇಪ್ 650 ಮತ್ತು ಎಕ್ಸ್ - ಕೇಪ್ 650 ಎಕ್ಸ್ ಎಂಬ ಎರಡು ಬೈಕ್‌ಗಳನ್ನು ಪ್ರದರ್ಶಿಸಿದೆ. ಕಂಪನಿಯು ಕಳೆದ ವರ್ಷ ಅಕ್ಟೋಬರ್‌ನಲ್ಲಿಯೇ ಭಾರತೀಯ ಮಾರುಕಟ್ಟೆಯಲ್ಲಿ ಈ ಬೈಕ್‌ಗಳನ್ನು ಬಿಡುಗಡೆ ಮಾಡಿತ್ತು. ಈ ಬೈಕ್‌ಗಳು ಆಟೋ ಎಕ್ಸ್‌ಪೋದಲ್ಲಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು. ಇವುಗಳ ಆಕರ್ಷಕ ಫೀಚರ್ ಎಲ್ಲರೂ ಲೈಕ್ ಮಾಡುತ್ತಾರೆ.

ಮೋಟೋ ಮೊರಿನಿ ಎಕ್ಸ್-ಕೇಪ್ 650, ಎಕ್ಸ್-ಕೇಪ್ 650ಎಕ್ಸ್ ಪ್ರದರ್ಶನ

ಮೋಟೋ ಮೊರಿನಿ ಎಕ್ಸ್ - ಕೇಪ್ 650 ಒಂದು ಪ್ರಯಾಣಿಕ ಬೈಕ್ ಆಗಿದ್ದು, ಅದೇರೀತಿ ಎಕ್ಸ್ - ಕೇಪ್ 650 ಎಕ್ಸ್ ಒಂದು ಅಡ್ವೆಂಚರ್ಸ್ ಮೋಟಾರ್ ಸೈಕಲ್ ಆಗಿದೆ. ಎರಡೂ ಬೈಕ್‌ಗಳು 649 ಸಿಸಿ ಟ್ವಿನ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್‌ ಹೊಂದಿದ್ದು, 60 Bhp ಗರಿಷ್ಠ ಪವರ್ ಮತ್ತು 54 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಈ ಬೈಕ್‌ಗಳ ವಿನ್ಯಾಸದ ಬಗ್ಗೆ ಹೇಳುವುದಾದರೆ, ಎರಡೂ ಬೈಕ್‌ಗಳನ್ನು ಲಾಂಗ್ ರೈಡಿಂಗ್‌ಗಾಗಿ ಅಚ್ಚುಕಟ್ಟಾಗಿ ವಿನ್ಯಾಸಗೊಳಿಸಲಾಗಿದೆ. ಕಂಪನಿಯು ಎಕ್ಸ್ - ಕೇಪ್ 650 ನಲ್ಲಿ ಅಲಾಯ್ ವೀಲ್ಸ್ ಗಳನ್ನು ನೀಡಿದರೆ, ಎಕ್ಸ್ - ಕೇಪ್ 650ಎಕ್ಸ್ ನಲ್ಲಿ ಸ್ಪೋಕ್ ವೀಲ್ಸ್ ಅನ್ನು ನೀಡಿದೆ. ಎರಡೂ ಬೈಕ್‌ಗಳು 19-ಇಂಚಿನ ಫ್ರಂಟ್ ಮತ್ತು 17-ಇಂಚಿನ ರೇರ್ ಟೈರ್‌ಗಳಲ್ಲಿ ಹೊಂದಿದೆ ಎಂದು ಹೇಳಬಹುದು. ಇದು ಸವಾರರಿಗೆ ಉತ್ತಮ ರೈಡಿಂಗ್ ಅನುಭವವನ್ನು ನೀಡುತ್ತದೆ.

ಮೋಟೋ ಮೊರಿನಿ ಎಕ್ಸ್-ಕೇಪ್ 650, ಎಕ್ಸ್-ಕೇಪ್ 650ಎಕ್ಸ್ ಪ್ರದರ್ಶನ

ಇಷ್ಟೇಅಲ್ಲದೆ, ಮೋಟೋ ಮೊರಿನಿ ಕಂಪನಿ ರೆಡಿ ಮಾಡಿರುವ ಈ ಎರಡೂ ಬೈಕ್‌ಗಳು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಬೈಕ್‌ಗಳು ಬ್ಲೂಟೂತ್ ಕನೆಕ್ಟಿವಿಟಿ, ಎಲ್‌ಇಡಿ ಲೈಟ್ಸ್, ಬ್ಯಾಷ್ ಪ್ಲೇಟ್, ವಿಂಡ್‌ಸ್ಕ್ರೀನ್, ನಕಲ್ ಗಾರ್ಡ್, ಯುಎಸ್‌ಬಿ ಸಾಕೆಟ್ ಮತ್ತು ಇತರೆ ಹಲವು ವೈಶಿಷ್ಟ್ಯಗಳೊಂದಿಗೆ ಟಿಎಫ್‌ಟಿ ಪರದೆಯನ್ನು ಹೊಂದಿದೆ. ಬ್ರೇಕಿಂಗ್ ವ್ಯವಸ್ಥೆ ಬಗ್ಗೆ ಹೇಳುವುದಾದರೆ, ಫ್ರಂಟ್ ಡ್ಯುಯಲ್ ಡಿಸ್ಕ್ ಬ್ರೇಕ್ ಮತ್ತು ರೇರ್ ಸಿಂಗಲ್ ಡಿಸ್ಕ್ ಬ್ರೇಕ್ ಇದೆ. ಜೊತೆಗೆ ಆಂಟಿಲಾಕ್ ತಂತ್ರಜ್ಞಾನವನ್ನು ಹೊಂದಿದೆ.

ಬೈಕುಗಳ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆನ್ಷನ್ ಅನ್ನು ಹೊಂದಿದೆ. ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರೆ ಬೈಕುಗಳಿಗೆ ಹೋಲಿಕೆ ಮಾಡಿದರೆ ಮೋಟೋ ಮೊರಿನಿ ಬೈಕ್ ಬೆಲೆ ಕೊಂಚ ದುಬಾರಿ ಎಂದು ಹೇಳಬಹುದು. ಎಕ್ಸ್ - ಕೇಪ್ 650 ಮತ್ತು ಎಕ್ಸ್ - ಕೇಪ್ 650ಎಕ್ಸ್ ಭಾರತದಲ್ಲಿ ಕ್ರಮವಾಗಿ ರೂ.7.20 ಲಕ್ಷ ಮತ್ತು ರೂ.7.40 ಲಕ್ಷದ ಎಕ್ಸ್ ಶೋ ರೂಂ ಬೆಲೆಯನ್ನು ಹೊಂದಿವೆ.

ಮೋಟೋ ಮೊರಿನಿ ಎಕ್ಸ್-ಕೇಪ್ 650, ಎಕ್ಸ್-ಕೇಪ್ 650ಎಕ್ಸ್ ಪ್ರದರ್ಶನ

ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮತ್ತೊಂದು ಇಟಲಿ ಮೂಲದ 'ಬೆನೆಲ್ಲಿ' ದುಬಾರಿ ಹಾಗೂ ಐಷಾರಾಮಿ ಲಿಯೊನ್ಸಿನೊ 800 ಬೈಕ್ ಪ್ರದರ್ಶನ ಮಾಡಿದೆ. ಇದು ಟ್ವಿನ್-ಸಿಲಿಂಡರ್ 754 ಸಿಸಿ ವಾಟರ್ ಕೂಲ್ಡ್ ಎಂಜಿನ್‌ ಹೊಂದಿದ್ದು, 75 bhp ಗರಿಷ್ಠ ಪವರ್ ಮತ್ತು 67Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 17-ಇಂಚಿನ ಅಲಾಯ್ ವೀಲ್ಸ್, ಫುಲ್ TFT ಡಿಸ್ಪ್ಲೇ, ಓವಲ್-ಆಕಾರದ ಫುಲ್ - LED ಹೆಡ್‌ಲ್ಯಾಂಪ್ ಅನ್ನು ಹೊಂದಿದೆ ಎಂದು ಹೇಳಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Friday, January 13, 2023, 21:11 [IST]
English summary
Auto expo 2023 expensive moto morini x cape 650 x cape 650 showcased
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+