ಸ್ಪೋರ್ಟಿ ಬೈಕ್ ಮೇಲೆ ರೂ. 91,000 ಬೆಲೆ ಕಡಿತ ಘೋಷಣೆ: ಭರ್ಜರಿ ಆಫರ್!

ಪ್ರಮುಖ ಮೋಟಾರ್‌ಸೈಕಲ್ ತಯಾರಕ ಕಂಪನಿಯಾಗಿರುವ ಮೋಟೋ ಮೊರಿನಿ (Moto Morini), ತನ್ನ ಐಕಾನಿಕ್ SEIEMMEZZO ರೆಟ್ರೋ ಸ್ಟ್ರೀಟ್ ಮತ್ತು ಸ್ಕ್ರ್ಯಾಂಬ್ಲರ್ ಮೋಟಾರ್‌ಸೈಕಲ್‌ಗಳ ಮೇಲೆ ವಿಶೇಷ ಹಬ್ಬದ ಬೆಲೆಯ ಆಫರ್ ಘೋಷಿಸಿದೆ. ಇಟಾಲಿಯನ್ ವಿನ್ಯಾಸ ಮತ್ತು ಆಧುನಿಕ ಎಂಜಿನಿಯರಿಂಗ್‌ಗೆ ಮೆಚ್ಚುಗೆ ಪಡೆದ SEIEMMEZZO ಶ್ರೇಣಿಯು ಈಗ ಅಗ್ಗದ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಹಿಂದೆ ರೂ. 5,20,000 (ಎಕ್ಸ್ - ಶೋರೂಂ) ಬೆಲೆಯಲ್ಲಿದ್ದ ಈ ಮಾಡಲ್‌ಗಳು ಈಗ ರೂ. 4,29,000 (ಎಕ್ಸ್ - ಶೋರೂಂ) ನಲ್ಲಿ ಲಭ್ಯವಿದೆ. ಅಂದರೆ ಕಂಪನಿಯು ರೂ. 91,000 ಬೆಲೆ ಕಡಿತ ಪ್ರಯೋಜನವನ್ನು ನೀಡುತ್ತಿರುವುದಾಗಿ ಹೇಳಿದೆ.

ಹಬ್ಬದ ಸಂಭ್ರಮಕ್ಕೆ ಹೆಚ್ಚುವರಿಯಾಗಿ, ಗ್ರಾಹಕರು ಸೆಪ್ಟೆಂಬರ್ 21 ರ ಮೊದಲು ಮಾಡಿದ ಖರೀದಿಗಳ ಮೇಲೆ ರೂ. 33,000 ವರೆಗಿನ GST ಪ್ರಯೋಜನವನ್ನು ಸಹ ಪಡೆಯಬಹುದು. ಇದು SEIEMMEZZO ಅನ್ನು ಖರೀದಿಸಲು ಸೂಕ್ತ ಸಮಯವಾಗಿದೆ. ಕೈಗೆಟುಕುವಿಕೆಯನ್ನು ಮತ್ತಷ್ಟು ಹೆಚ್ಚಿಸಲು, ಮೋಟೋ ಮೊರಿನಿ ವಿಶೇಷ ಹಬ್ಬದ ಹಣಕಾಸು ಯೋಜನೆಗಳನ್ನು ಜಾರಿಗೆ ತಂದಿರುವುದಾಗಿ ತಿಳಿಸಿದೆ.

moto-morini-announces-festive-price-benefit-on-seiemmezzo

ಅವುಗಳೆಂದರೆ: ಕಡಿಮೆ EMI ಆಯ್ಕೆಗಳು, ಆಕರ್ಷಕ ಬಡ್ಡಿದರಗಳು, 60 ತಿಂಗಳವರೆಗಿನ ಅವಧಿ, ಸ್ಪಾಟ್ ಅನುಮೋದನೆಗಳು, 95% ವರೆಗಿನ ಸಾಲ ವ್ಯಾಪ್ತಿ ಸೇರಿದಂತೆ ಯಾವುದೇ ಆದಾಯ ಪುರಾವೆ ಅಗತ್ಯವಿಲ್ಲ ಎಂದು ತಿಳಿಸಿದೆ. ಒಟ್ಟಾರೆ ಆಧುನಿಕ ಕಾರ್ಯಕ್ಷಮತೆಯೊಂದಿಗೆ ರೆಟ್ರೊ ಶೈಲಿಯನ್ನು ಮಿಶ್ರಣ ಮಾಡುವ SEIEMMEZZO ರೆಟ್ರೋ ಸ್ಟ್ರೀಟ್ ಮತ್ತು ಸ್ಕ್ರ್ಯಾಂಬ್ಲರ್ ಮೋಟಾರ್‌ಸೈಕಲ್‌ಗಳು, ಸವಾರರಿಗೆ ರೋಮಾಂಚನ ಮತ್ತು ಪ್ರಾಯೋಗಿಕತೆಯನ್ನು ನೀಡುತ್ತವೆ.

ಈ ಸೀಮಿತ ಸಮಯದ ಹಬ್ಬದ ಬೆಲೆಯೊಂದಿಗೆ ಉತ್ಸಾಹಿಗಳು ಇಟಾಲಿಯನ್ ವಾಹನಗಳನ್ನು ಸಾಟಿಯಿಲ್ಲದ ಉಳಿತಾಯದೊಂದಿಗೆ ಖರೀದಿಸಿ, ಹಬ್ಬವನ್ನು ಆಚರಿಸಬಹುದು. ಭಾರತದಾದ್ಯಂತ ಎಲ್ಲಾ ಮೋಟೋ ವಾಲ್ಟ್ ಅಧಿಕೃತ ಡೀಲರ್‌ ಶಿಪ್‌ಗಳಲ್ಲಿ ಮೋಟಾರ್‌ ಸೈಕಲ್‌ಗಳು ಖರೀದಿಗೆ ಲಭ್ಯವಿದೆ. ಬುಕಿಂಗ್ ‌ಗಳು ಮತ್ತು ಪರೀಕ್ಷಾ ಸವಾರಿಗಳು ಈಗ ತೆರೆದಿವೆ. ಈ ಸೀಮಿತ ಅವಧಿಯ ಹಬ್ಬದ ಕೊಡುಗೆ ಸೆಪ್ಟೆಂಬರ್ 22, 2025 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ ಎಂದು ಕಂಪನಿ ತಿಳಿಸಿದೆ.

moto-morini-announces-festive-price-benefit-on-seiemmezzo

ಆದೀಶ್ವರ್ ಆಟೋ ಬಗ್ಗೆ: ಮಹಾವೀರ್ ಗ್ರೂಪ್‌ನ ಭಾಗವಾಗಿರುವ ಆದೀಶ್ವರ್ ಆಟೋ ರೈಡ್ ಇಂಡಿಯಾ (AARI), ಭಾರತದ ಪ್ರಮುಖ ಆಟೋಮೋಟಿವ್ ವಿತರಕ AARI, ಬೆನೆಲ್ಲಿ ಮತ್ತು ಕೀವೇಯಂತಹ ಬ್ರ್ಯಾಂಡ್‌ಗಳ ಕಾರ್ಯಾಚರಣೆಯನ್ನು ನಿರ್ವಹಿಸುತ್ತದೆ. 60 ಕ್ಕೂ ಹೆಚ್ಚು ಡೀಲರ್‌ ಶಿಪ್‌ಗಳ ಜಾಲವನ್ನು ಹೊಂದಿದೆ. ಕಂಪನಿಯು ಭಾರತದಲ್ಲಿ ತಮ್ಮ ಉತ್ಪನ್ನಗಳನ್ನು ತಯಾರಿಸಲು ಮತ್ತು ವಿತರಿಸಲು ಮೋಟೋ ಮೊರಿನಿ, ಜೋಂಟೆಸ್ ಮತ್ತು ಕ್ಯೂಜೆ ಮೋಟಾರ್‌ ನಂತಹ ಜಾಗತಿಕ ಮೋಟಾರ್‌ ಸೈಕಲ್ ಬ್ರ್ಯಾಂಡ್ ‌ಗಳೊಂದಿಗೆ ಪಾಲುದಾರಿಕೆ ಹೊಂದಿದೆ.

ಮೋಟೋ ಮೊರಿನಿ ಬಗ್ಗೆ: ಇಟಾಲಿಯನ್ ಮೋಟಾರ್‌ ಸೈಕಲ್ ಬ್ರಾಂಡ್ ಆಗಿರುವ ಮೋಟೋ ಮೊರಿನಿಯನ್ನು 1937 ರಲ್ಲಿ ಅಲ್ಫೊನ್ಸೊ ಮೊರಿನಿ ಅವರು ಇಟಲಿಯ ಬೊಲೊಗ್ನಾದಲ್ಲಿ ಸ್ಥಾಪಿಸಿದರು. ಬಲವಾದ ರೇಸಿಂಗ್ ಪರಂಪರೆ ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ಮೋಟಾರ್‌ ಸೈಕಲ್‌ಗಳಿಗೆ ಖ್ಯಾತಿಯನ್ನು ಹೊಂದಿರುವ ಮೋಟೋ ಮೊರಿನಿ, 350 ಸಿಸಿಯಿಂದ 600 ಸಿಸಿ ವರೆಗಿನ ಮೋಟಾರ್‌ ಸೈಕಲ್‌ಗಳಿಗೆ ತ್ವರಿತವಾಗಿ ಹೆಸರುವಾಸಿಯಾಯಿತು.

moto-morini-announces-festive-price-benefit-on-seiemmezzo

ದಶಕಗಳ ನಂತರವೂ ಬ್ರ್ಯಾಂಡ್ ತನ್ನ ನಾವೀನ್ಯತೆಯನ್ನು ಮುಂದುವರೆಸಿದೆ, ಇಟಾಲಿಯನ್ ಕರಕುಶಲತೆ, ವಿನ್ಯಾಸ ಮತ್ತು ಎಂಜಿನಿಯರಿಂಗ್ ಶ್ರೇಷ್ಠತೆಯನ್ನು ಒಳಗೊಂಡಿರುವ ಮೋಟಾರ್‌ ಸೈಕಲ್‌ ಗಳನ್ನು ವಿಶ್ವಾದ್ಯಂತ ತಲುಪಿಸುತ್ತದೆ. ಇಂದು, ಮೋಟೋ ಮೊರಿನಿ ವಿಶ್ವಾದ್ಯಂತ ಸವಾರರಿಗೆ ಉತ್ಸಾಹ ಮತ್ತು ಪರ್ಫಾಮೆನ್ಸ್ ಸಂಕೇತವಾಗಿ ನಿಂತಿದೆ ಎಂದು ಹೇಳಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, September 10, 2025, 15:34 [IST]
English summary
Moto morini announces festive price benefit on seiemmezzo
Read more on moto morini india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+