Auto Expo 2023: ಟಾರ್ಕ್ ಕ್ರಾಟೋಸ್ X, ನವೀಕರಿಸಿದ ಕ್ರಾಟೋಸ್ R ಇ-ಬೈಕ್‌ ಅನಾವರಣ.. ಆಕರ್ಷಕವಾಗಿವೇ?

ಭಾರತೀಯ ಗ್ರಾಹಕರು ಸದ್ಯ ಎಲೆಕ್ಟ್ರಿಕ್ ಬೈಕ್‌ ಖರೀದಿಯತ್ತ ಆಸಕ್ತಿ ತೋರಿದ್ದಾರೆ. ಅದರಂತೆ ಹಲವು ವಾಹನ ತಯಾರಕ ಕಂಪನಿಗಳು ಇಂತಹ ದ್ವಿಚಕ್ರ ವಾಹನಗಳನ್ನು ಮಾರುಕಟ್ಟೆಗೆ ತರಲು ಪ್ರಯತ್ನಿಸುತ್ತವೆ. ಇದೀಗ ಸ್ವದೇಶಿ ಕಂಪನಿ ಟಾರ್ಕ್ ಮೋಟಾರ್ಸ್ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ತನ್ನ ಎರಡು ಪ್ರಮುಖ ಭಾರತದಲ್ಲಿ ಬೈಕ್‌ಗಳನ್ನು ಅನಾವರಣ ಮಾಡಿದೆ.

ಟಾರ್ಕ್ ಮೋಟಾರ್ಸ್, ಹೊಸ ಕ್ರಾಟೋಸ್ X ಇ-ಬೈಕ್ ಅನ್ನು ಪ್ರದರ್ಶಿಸಿದ್ದು, ಇದು ಕ್ರಾಟೋಸ್ Rಗಿಂತ ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಜೊತೆಗೆ ಕ್ರಾಟೋಸ್ R ನವೀಕರಿಸಿದ ಆವೃತ್ತಿಯನ್ನು ಸಹ ಅನಾವರಗೊಳಿಸಿದೆ. ಹೊಸ ಟಾರ್ಕ್ ಕ್ರಾಟೋಸ್ X, 7-ಇಂಚಿನ, ಟಚ್-ಕಂಪಾರ್ಟ್ಏಬಲ್ TFT ಡ್ಯಾಶ್ ಬೋರ್ಡ್ ಜೊತೆಗೆ ಅಲ್ಯೂಮಿನಿಯಂ ಸ್ವಿಂಗರ್ಮ್‌ನಂತಹ ವೈಶಿಷ್ಟ್ಯಗಳನ್ನು ಪಡೆದಿದ್ದು, ಇದರ ಮೋಟಾರ್ ಕ್ರಾಟೋಸ್ Rಗಿಂತ ಹೆಚ್ಚು ಪವರ್ ಫುಲ್ ಆಗಿರಲಿದೆ ಎಂದು ಹೇಳಲಾಗಿದೆ.

ಟಾರ್ಕ್ ಕ್ರಾಟೋಸ್ X, ನವೀಕರಿಸಿದ ಕ್ರಾಟೋಸ್ R ಇ-ಬೈಕ್‌ ಅನಾವರಣ

ಆದರೆ, ಕಂಪನಿಯು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಇದು ಹೊಸ ಎಫ್ಎಫ್ (Furiously Fast) ಮೋಡ್ ಅನ್ನು ಸಹ ಹೊಂದಿರಲಿದೆ. ಟಾರ್ಕ್ ಕ್ರಾಟೋಸ್ Rಗಿಂತ ವಿಭಿನ್ನ ಸೈಡ್ ಪ್ಯಾನೆಲ್‌ಗಳನ್ನು ಪಡೆಯಲಿದೆ. ಈ ಹೊಸ ಕ್ರಾಟೋಸ್ X ಬೈಕ್ ಉತ್ಪಾದನೆಯಾಗಲು ಸ್ವಲ್ಪ ಸಮಯ ಹಿಡಿಯಲಿದೆ ಎಂದು ವರದಿಯಾಗಿದೆ ಕ್ರಾಟೋಸ್ Xನ ಪರೀಕ್ಷಾರ್ಥ ಸಂಚಾರಗಳು ಮಾರ್ಚ್‌ ತಿಂಗಳಿನಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದ್ದು, ವಿತರಣೆಗಳು ಜೂನ್‌ನಲ್ಲಿ ಆರಂಭವಾಗಲಿದೆ ಎಂದು ಟಾರ್ಕ್ ಹೇಳಿದೆ.

ಆಟೋ ಎಕ್ಸ್‌ಪೋದಲ್ಲಿ ಹೊಸ ಕ್ರಾಟೋಸ್ X ಇ-ಬೈಕ್ ಜೊತೆಗೆ ಟಾರ್ಕ್ ತನ್ನ ಕ್ರಾಟೋಸ್ R ಇ-ಬೈಕ್‌ನ ನವೀಕರಿಸಿದ ಆವೃತ್ತಿಯನ್ನು ಸಹ ಪ್ರದರ್ಶಿಸಿದೆ. ಈ ಹೊಸ ಬೈಕ್ ಅತ್ಯಾಕರ್ಷಕವಾಗಿ ಕಾಣಿಸುತ್ತಿದೆ. ಕ್ರಾಟೋಸ್ R ಇದೀಗ ಬ್ಲ್ಯಾಕ್ಡ್-ಔಟ್ ಬ್ಯಾಟರಿ ಪ್ಯಾಕ್ ಮತ್ತು ಹೊಸ ಡಾರ್ಕ್ ಬ್ಲೂ ಬಣ್ಣದ ಆಯ್ಕೆಯನ್ನು ಹೊಂದಿದೆ. ಪ್ರಮುಖವಾದ ಬದಲಾವಣೆಯು ನೂತನ LCD ಡ್ಯಾಶ್ ಬೋರ್ಡ್ ರೂಪದಲ್ಲಿ ಬರುತ್ತಿದೆ. ಲೇಔಟ್ ಮತ್ತು ಗ್ರಾಫಿಕ್ಸ್ ಹೊಸದಾಗಿದ್ದು, ಇದೀಗ ವಾರ್ನಿಂಗ್ ಲೈಟ್ಸ್ ಅನ್ನು ಮೇನ್ ಡಿಸ್ಪ್ಲೇ ಯುನಿಟ್ ಸುತ್ತಲಿನ ಖಾಲಿ ಜಾಗದಲ್ಲಿ ಅಳವಡಿಸಲಾಗಿದೆ.

ಟಾರ್ಕ್ ಕ್ರಾಟೋಸ್ X, ನವೀಕರಿಸಿದ ಕ್ರಾಟೋಸ್ R ಇ-ಬೈಕ್‌ ಅನಾವರಣ

ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಕ್ರಾಟೋಸ್ R ಇ-ಬೈಕ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುದಾದರೆ, ಈ ಬೈಕ್ 9kW ಎಲೆಕ್ಟ್ರಿಕ್ ಮೋಟಾರ್ ಹೊಂದಿದ್ದು, 12 bhp ಪವರ್ ಮತ್ತು 38 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಇದರ ಗರಿಷ್ಠ ವೇಗ ಗಂಟೆಗೆ 105 ಕಿ.ಮೀ ಇದ್ದು, ಈ ಬೈಕ್ ವೇಗದ ಚಾರ್ಜಿಂಗ್ ಆಯ್ಕೆಯೊಂದಿಗೆ ಖರೀದಿಗೆ ಸಿಗಲಿದೆ. ಹಾಗಾಗಿ, ಈ ಕ್ರಾಟೋಸ್ ಕೇವಲ 60 ನಿಮಿಷಗಳಲ್ಲಿ ಶೇಕಡ 80 ರಷ್ಟು ಪೂರ್ತಿ ಚಾರ್ಜ್ ಆಗಲಿದೆ. ಸದ್ಯ 1,68,374 ರೂಪಾಯಿ ಎಕ್ಸ್ - ಶೋ ರೂಂ ಬೆಲೆಯನ್ನು ಹೊಂದಿದೆ.

ಪುಣೆ ಮೂಲದ ಟಾರ್ಕ್ ಮೋಟಾರ್ಸ್‌ ರೆಡಿ ಮಾಡಿರುವ ಕ್ರಾಟೋಸ್-ಆರ್ ಇಕೋ, ಸಿಟಿ ಮತ್ತು ಸ್ಪೋರ್ಟ್ಸ್ ಎಂಬ 3 ರೈಡಿಂಗ್ ಮೋಡ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಜೊತೆಗೆ ಈ ಎಲೆಕ್ಟ್ರಿಕ್ ಬೈಕ್‌ ರಿವರ್ಸ್ ಮೋಡ್ ಅನ್ನು ಹೊಂದಿದ್ದು, ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ರೇರ್ ಮೊನೊಶಾಕ್ ಮೂಲಕ ಸಸ್ಪೆನ್ಶನ್ ಅನ್ನು ನಿರ್ವಹಿಸಲಾಗುತ್ತದೆ. ಕ್ರಾಟೋಸ್‌ನ ಎರಡು ತುದಿಗಳಲ್ಲಿಯು ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ ಎಂದು ಹೇಳಬಹುದು. ರೆಡ್, ವೈಟ್, ಬ್ಲೂ ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಈ ಬೈಕ್ ಖರೀದಿಗೆ ದೊರೆಯಲಿದೆ.

ಟಾರ್ಕ್ ಕ್ರಾಟೋಸ್ X, ನವೀಕರಿಸಿದ ಕ್ರಾಟೋಸ್ R ಇ-ಬೈಕ್‌ ಅನಾವರಣ

ಕಂಪನಿಯು ಇತ್ತೀಚೆಗೆ ಪುಣೆಯಲ್ಲಿ ತನ್ನ ಮೊದಲ ಅನುಭವ ಕೇಂದ್ರ (EXPERIENCE CENTER) ಪ್ರಾರಂಭಿಸಿದೆ. ಹೈದರಾಬಾದ್, ಸೂರತ್ ಮತ್ತು ಪಾಟ್ನಾದಂತಹ ದೊಡ್ಡ ನಗರಗಳಲ್ಲಿ ಡೀಲರ್‌ಶಿಪ್‌ಗಳನ್ನು ಹೊಂದಿದೆ. ಈ ವರ್ಷದ ಅಂತ್ಯದೊಳಗೆ ಪ್ರಮುಖ ನಗರಗಳಲ್ಲಿ ತನ್ನ ಮಾರಾಟ ಜಾಲವನ್ನು ವಿಸ್ತರಿಸಲು ಟಾರ್ಕ್ ಮೋಟಾರ್ಸ್ ಪ್ರಯತ್ನಿಸುತ್ತಿದ್ದು, ಪ್ರಸ್ತುತ, ಇ-ಮೋಟಾರ್‌ಸೈಕಲ್‌ಗಳನ್ನು ಪುಣೆ, ಮುಂಬೈ ಮತ್ತು ಹೈದರಾಬಾದ್‌ನಲ್ಲಿ ವಿತರಿಸುತ್ತಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಗ್ರಾಹಕರು ಬೈಕ್ ಅನ್ನು ಬುಕ್ ಮಾಡಬಹುದು.

ದೇಶೀಯ ಮಾರುಕಟ್ಟೆಯಲ್ಲಿ ತನ್ನ ದ್ವಿಚಕ್ರ ವಾಹನಗಳಿಗೆ ಇರುವ ಬೇಡಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಟಾರ್ಕ್ ಮೋಟಾರ್ಸ್ ಶೀಘ್ರವೇ ಮಹಾರಾಷ್ಟ್ರದ ಚಕ್ಕನ್‌ನಲ್ಲಿ ಹೊಸ ಉತ್ಪಾದನಾ ಘಟಕ ತೆರೆಯಲಿದೆ. ಅಲ್ಲಿ ತಿಂಗಳಿಗೆ ಸರಿ - ಸುಮಾರು 4,000-5,000 ಯುನಿಟ್‌ ಎಲೆಕ್ಟ್ರಿಕ್ ಬೈಕ್ ಉತ್ಪಾದಿಸುವ ಗುರಿಯನ್ನು ಕಂಪನಿ ಹೊಂದಿದೆ. ಇನ್ನು, ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಟಾರ್ಕ್ ಕ್ರಾಟೋಸ್ X ಮಾರುಕಟ್ಟೆಗೆ ಬಿಡುಗಡೆಯಾಗಿವ ಮೂಲಕ ಹೆಚ್ಚಿನ ಯುವ ಖರೀದಿದಾರರನ್ನು ಸೆಳೆಯಬಹುದು ಎಂದು ಅಂದಾಜಿಸಲಾಗಿದೆ.

More from DriveSpark

Article Published On: Wednesday, January 11, 2023, 18:59 [IST]
English summary
Auto expo 2023 torque kratos x updated kratos r bike unveiled details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+