ಟಾರ್ಕ್ ಕ್ರಾಟೋಸ್-ಆರ್ ಎಲೆಕ್ಟ್ರಿಕ್ ಬೈಕ್ ಮೇಲೆ ಭರ್ಜರಿ ಡಿಸ್ಕೌಂಟ್

ಪುಣೆ ಮೂಲದ ಜನಪ್ರಿಯ ಸ್ವದೇಶಿ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿ ಟಾರ್ಕ್ ಮೋಟಾರ್ಸ್ ತನ್ನ ಕ್ರಾಟೋಸ್-ಆರ್ ಎಲೆಕ್ಟ್ರಿಕ್ ಬೈಕ್ ಅನ್ನು ನವೀಕರಿಸಿದೆ. ಟಾರ್ಕ್ ಕ್ರಾಟೋಸ್-ಆರ್ ಎಲೆಕ್ಟ್ರಿಕ್ ಬೈಕ್ ನವೀಕರಣಗೊಂಡ ನಂತರ ರೇಂಜ್ ಹೆಚ್ಚಿಸಲಾಗಿದೆ. ಇದೀಗ ಟಾರ್ಕ್ ಮೋಟಾರ್ಸ್ ತನ್ನ ಕ್ರಾಟೋಸ್-ಆರ್ ಎಲೆಕ್ಟ್ರಿಕ್ ಬೈಕಿಗೆ ಭರ್ಜರಿ ರಿಯಾಯಿತಿಗಳನ್ನು ನೀಡಲಾಗಿದೆ.

ಟಾರ್ಕ್ ಮೋಟಾರ್ಸ್ ತನ್ನ ಕ್ರಾಟೋಸ್-ಆರ್ ಎಲೆಕ್ಟ್ರಿಕ್ ಬೈಕ್ ಅನ್ನು ಡಿಸೆಂಬರ್ 31 ರ ಮೊದಲು ಖರೀದಿಸಿದರೆ ನಿಮಗೆ ರೂ.22,000 ಉಳಿಸಬಹುದು. ಡಿಸೆಂಬರ್ 31ರ ಮೊದಲು ಟಾರ್ಕ್ ಕ್ರಾಟೋಸ್-ಆರ್ ಎಲೆಕ್ಟ್ರಿಕ್ ಬೈಕ್ ಮಾಡಿದ ಬುಕಿಂಗ್‌ಗಳಿಗಾಗಿ ರೂ.22,000 ನಗದು ರಿಯಾಯಿತಿಯನ್ನು ನೀಡುತ್ತಿದೆ. ಟಾರ್ಕ್ ಕ್ರಾಟೋಸ್-ಆರ್ ಎಲೆಕ್ಟ್ರಿಕ್ ಬೈಕ್ ಬೆಲೆಯು ರೂ.1.87 ಲಕ್ಷವಾಗಿದೆ.

Tork Kratos R

ನವೀಕರಣ ಪಡೆದುಕೊಂಡ ಈ ಹೊಸ ಟಾರ್ಕ್ ಕ್ರಾಟೋಸ್-ಆರ್ ಎಲೆಕ್ಟ್ರಿಕ್ ಬೈಕ್ ಹೊಸ ಇಕೋ+ ರೈಡ್ ಮೋಡ್‌ನೊಂದಿಗೆ ಅದರ ರೇಂಜ್ ಸಿಂಗಲ್ ಚಾರ್ಜ್‌ನಲ್ಲಿ 150 ಕಿಲೋಮೀಟರ್‌ಗಳಿಗಿಂತ ಹೆಚ್ಚು ವಿಸ್ತರಿಸುತ್ತದೆ. ಇದು ಎಲೆಕ್ಟ್ರಿಕ್ ಬೈಕ್‌ನ ರಿಯಲ್ ವರ್ಲ್ಡ್ ರೇಂಜ್ 180-ಕಿಲೋಮೀಟರ್‌ಗಳಿಗೆ (IDC) ಹತ್ತಿರಕ್ಕೆ ಇರುತ್ತದೆ ಎಂದು ಟಾರ್ಕ್ ಮೋಟಾರ್ಸ್ ಕಂಪನಿ ಹೇಳಿಕೊಂಡಿದೆ. ಈ ಹೊಸ ಟಾರ್ಕ್ ಎಲೆಕ್ಟ್ರಿಕ್ ಬೈಕ್ ಇಕೋ, ಸಿಟಿ ಮತ್ತು ಸ್ಪೋರ್ಟ್ ಎಂಬ ಮೂರು ಮೋಡ್‌ಗಳನ್ನು ಹೊಂದಿವೆ.

ಈ ಹೊಸ ಟಾರ್ಕ್ ಕ್ರಾಟೋಸ್-ಆರ್ (Tork Kratos R) ಎಲೆಕ್ಟ್ರಿಕ್ ಬೈಕಿನ Eco+ ಮೋಡ್ ಅನ್ನು ನಿರ್ದಿಷ್ಟವಾಗಿ ನಗರದ ಸವಾರಿಗಾಗಿ ವಿನ್ಯಾಸಗೊಳಿಸಲಾಗಿದೆ. ಭಾರೀ ದಟ್ಟಣೆಯಲ್ಲಿ ರೇಂಜ್ ಮೇಲೆ ಪರಿಣಾಮ ಬೀರುತ್ತವೆ. ನಗರದ ಸವಾರಿ ಪರಿಸ್ಥಿತಿಗಳಲ್ಲಿ ಗರಿಷ್ಠ ರೇಂಜ್ ಅನ್ನು ಹೆಚ್ಚಿಸಲು ರೈಡಿಂಗ್ ಮೋಡ್ ಗರಿಷ್ಠ ವೇಗವನ್ನು ಕಿ.ಮೀ.ಗೆ ಮಿತಿಗೊಳಿಸುತ್ತದೆ. ಗ್ರಾಹಕರ ಬೇಡಿಕೆಯ ಪರಿಣಾಮವಾಗಿ Eco+ ಮೋಡ್ ಅನ್ನು ಪರಿಚಯಿಸಲಾಗಿದೆ ಎಂದು ಕಂಪನಿ ಹೇಳಿದೆ.

ಈ ಟಾರ್ಕ್ ಕ್ರಾಟೋಸ್-ಆರ್ ಎಲೆಕ್ಟ್ರಿಕ್ ಬೈಕ್ Eco+ ಮೋಡ್ ಅನ್ನು ಹೊಂದಿದ್ದು, ಸದ್ಯ ಈ ಬೈಕ್ ಅನ್ನು ಈಗಾಗಲೇ ಖರೀದಿಸಿದ ಗ್ರಾಹಕರಿಗೆ ಈ ಆಯ್ಕೆಯನ್ನು ಸಹ ನೀಡಲಾಗುತ್ತದೆ. ನಾಲ್ಕು ಡ್ರೈವ್ ಮೋಡ್‌ಗಳ ಜೊತೆಗೆ, ಬೈಕ್‌ಗಳು ತಮ್ಮ ಬೈಕ್ ಅನ್ನು ಪಾರ್ಕಿಂಗ್ ಮಾಡಲು ಸಹಾಯ ಮಾಡುವ ರಿವರ್ಸ್ ಮೋಡ್‌ ಅನ್ನು ಲಭ್ಯವಾಗುವಂತೆ ಮಾಡಲಾಗುತ್ತದೆ.

ಈ ಟಾರ್ಕ್ ಕ್ರಾಟೋಸ್-ಆರ್ ಎಲೆಕ್ಟ್ರಿಕ್ ಬೈಕ್ ಪೇಟೆಂಟ್ ಪಡೆದ 9kW ಆಕ್ಸಿಯಲ್ ಫ್ಲಕ್ಸ್ ಮೋಟಾರ್‌ನಿಂದ ಪವರ್ ಅನ್ನು ಪಡೆಯುತ್ತದೆ, ಇದು 38 Nm ಟಾರ್ಕ್ ಮತ್ತು 96% ದಕ್ಷತೆಯ ರೇಟಿಂಗ್ ಅನ್ನು ನೀಡುತ್ತದೆ. ಈ ಮೋಟಾರು IP67 ರೇಟ್ ಮಾಡಲಾದ 4.0 kWh Li-ion ಬ್ಯಾಟರಿ ಪ್ಯಾಕ್‌ನೊಂದಿಗೆ ಜೋಡಿಸಲಾಗಿದೆ. ಸ್ಪೋರ್ಟ್ ಮೋಡ್‌ನಲ್ಲಿ, ಈ ಬೈಕು 105 ಕಿಮೀ ವೇಗವನ್ನು ತಲುಪಬಹುದಾಗಿದೆ

ಈ ಟಾರ್ಕ್ ಮೋಟಾರ್ಸ್ ತನ್ನ ಕ್ರಾಟೋಸ್-ಆರ್ ಎಲೆಕ್ಟ್ರಿಕ್ ಬೈಕಿನ ಹೊಸ ಅರ್ಬನ್ ಟ್ರಿಮ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಹೊಸ ಟಾರ್ಕ್ ಕ್ರಾಟೋಸ್-ಆರ್ ಅರ್ಬನ್ ಟ್ರಿಮ್ (Tork Kratos-R Urban Trim) ಮಾದರಿಯು ಸಿಟಿ ಸವಾರರನ್ನು ಗುರಿಯಾಗಿರಿಸಿಕೊಂಡಿದೆ. ಈ ಹೊಸ ಟಾರ್ಕ್ ಕ್ರಾಟೋಸ್-ಆರ್ ಅರ್ಬನ್ ಟ್ರಿಮ್ ಮಾದರಿಯು ಸೀಮಿತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಆದರೆ ಲಭ್ಯವಿರುವ ಫೀಚರ್ಸ್ ಗಳು ದೈನಂದಿನ ನಗರ ಪ್ರಯಾಣಕ್ಕೆ ಹೆಚ್ಚು ಉಪಯುಕ್ತವಾಗಿವೆ.

ಸಿಟಿಗಳಲ್ಲಿ ಕಚೇರಿಗಳಿಗೆ ತೆರಳಲು ಅಥವಾ ದೈನಿಂದಿನ ಅಗತ್ಯಕ್ಕೆ ಈ ಹೊಸ ಮಾದರಿಯು ಉತ್ತಮ ಆಯ್ಕೆಯಾಗಿದೆ. ಟಾರ್ಕ್ ಕ್ರಾಟೋಸ್-ಆರ್ ಅರ್ಬನ್ ಟ್ರಿಮ್ 'ಸಿಟಿ' ರೈಡ್ ಮೋಡ್‌ನೊಂದಿಗೆ ಬರುತ್ತದೆ. ಇದರ ಹೊರತಾಗಿ, ಈ ಹೊಸ ಮಾದರಿಯು 70 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇದು ನಗರಗಳಲ್ಲಿ ಯೋಗ್ಯವಾಗಿರುವ ವೇಗವಾಗಿದೆ. ಈ ಹೊಸ ಬೈಕ್ ಮಾದರಿಯನ್ನು ಸಂಪೂರ್ಣ ಚಾರ್ಜ್ ಮಾಡಿದರೆ 100 ಕಿಲೋಮೀಟರ್‌ಗಳಿಗಿಂತ ಹೆಚ್ಚು ರೇಂಜ್ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, December 28, 2023, 18:38 [IST]
English summary
Tork kratos r electric bike gets year end offer up to rs 22000 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+