ಸೂಪರ್ ರೇಂಜ್: ಹೊಸ ನವೀಕರಣ ಪಡೆದುಕೊಂಡ ಟಾರ್ಕ್ ಕ್ರಾಟೋಸ್-ಆರ್ ಎಲೆಕ್ಟ್ರಿಕ್ ಬೈಕ್

ಪುಣೆ ಮೂಲದ ದೇಶದ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಕಂಪನಿ ಟಾರ್ಕ್ ಮೋಟಾರ್ಸ್ ತನ್ನ ಕ್ರಾಟೋಸ್-ಆರ್ ಎಲೆಕ್ಟ್ರಿಕ್ ಬೈಕ್ ಅನ್ನು ನವೀಕರಿಸಿದೆ. ಟಾರ್ಕ್ ಕ್ರಾಟೋಸ್-ಆರ್ ಎಲೆಕ್ಟ್ರಿಕ್ ಬೈಕ್ ನವೀಕರಣಗೊಂಡ ನಂತರ ರೇಂಜ್ ಹೆಚ್ಚಾಗಿದೆ.

ಹೊಸ ಟಾರ್ಕ್ ಕ್ರಾಟೋಸ್-ಆರ್ ಎಲೆಕ್ಟ್ರಿಕ್ ಬೈಕ್ ಹೊಸ ಇಕೋ+ ರೈಡ್ ಮೋಡ್‌ನೊಂದಿಗೆ ಅದರ ರೇಂಜ್ ಸಿಂಗಲ್ ಚಾರ್ಜ್‌ನಲ್ಲಿ 150 ಕಿಲೋಮೀಟರ್‌ಗಳಿಗಿಂತ ಹೆಚ್ಚು ವಿಸ್ತರಿಸುತ್ತದೆ. ಇದು ಎಲೆಕ್ಟ್ರಿಕ್ ಬೈಕ್‌ನ ರಿಯಲ್ ವರ್ಲ್ಡ್ ರೇಂಜ್ 180-ಕಿಲೋಮೀಟರ್‌ಗಳಿಗೆ (IDC) ಹತ್ತಿರಕ್ಕೆ ಇರುತ್ತದೆ ಎಂದು ಟಾರ್ಕ್ ಮೋಟಾರ್ಸ್ ಕಂಪನಿ ಹೇಳಿಕೊಂಡಿದೆ. ಈ ಹೊಸ ಟಾರ್ಕ್ ಎಲೆಕ್ಟ್ರಿಕ್ ಬೈಕ್ ಇಕೋ, ಸಿಟಿ ಮತ್ತು ಸ್ಪೋರ್ಟ್ ಎಂಬ ಮೂರು ಮೋಡ್‌ಗಳನ್ನು ಹೊಂದಿವೆ.

Tork Kratos R

ಹೊಸ ಟಾರ್ಕ್ ಕ್ರಾಟೋಸ್-ಆರ್ (Tork Kratos R) ಎಲೆಕ್ಟ್ರಿಕ್ ಬೈಕಿನ Eco+ ಮೋಡ್ ಅನ್ನು ನಿರ್ದಿಷ್ಟವಾಗಿ ನಗರದ ಸವಾರಿಗಾಗಿ ವಿನ್ಯಾಸಗೊಳಿಸಲಾಗಿದೆ. ಭಾರೀ ದಟ್ಟಣೆಯಲ್ಲಿ ರೇಂಜ್ ಮೇಲೆ ಪರಿಣಾಮ ಬೀರುತ್ತವೆ. ನಗರದ ಸವಾರಿ ಪರಿಸ್ಥಿತಿಗಳಲ್ಲಿ ಗರಿಷ್ಠ ರೇಂಜ್ ಅನ್ನು ಹೆಚ್ಚಿಸಲು ರೈಡಿಂಗ್ ಮೋಡ್ ಗರಿಷ್ಠ ವೇಗವನ್ನು ಕಿ.ಮೀ.ಗೆ ಮಿತಿಗೊಳಿಸುತ್ತದೆ. ಗ್ರಾಹಕರ ಬೇಡಿಕೆಯ ಪರಿಣಾಮವಾಗಿ Eco+ ಮೋಡ್ ಅನ್ನು ಪರಿಚಯಿಸಲಾಗಿದೆ ಎಂದು ಕಂಪನಿ ಹೇಳುತ್ತದೆ.

ಅಗತ್ಯವಿದ್ದಾಗ ಗ್ರಾಹಕರು ಯಾವಾಗಲೂ ಹೆಚ್ಚಿನ ಕಾರ್ಯಕ್ಷಮತೆಯ ಮೋಡ್‌ಗೆ ಬದಲಾಯಿಸಬಹುದು. ತಮ್ಮ ಇಷ್ಟದ ಅನುಗುಣವಾಗಿ, ಸವಾರರು ಈ (Eco+) ಮೋಡ್‌ನೊಂದಿಗೆ ಹೆಚ್ಚಿನ ರೇಂಜ್ ಅನ್ನು ಪಡೆಯಬಹುದು ಅಥವಾ ಒಂದು ಸ್ವಿಚ್‌ನ ಫ್ಲಿಕ್‌ನಲ್ಲಿ ಮೋಟಾರ್‌ಸೈಕಲ್‌ನ ಸಂಪೂರ್ಣ ಸಾಮರ್ಥ್ಯವನ್ನು ಸ್ಪೋರ್ಟ್ ಮೋಡ್‌ನಲ್ಲಿ ಪಡೆಯಬಹುದು ಎಂದು ಟಾರ್ಕ್ ಮೋಟಾರ್ಸ್ ಸಂಸ್ಥಾಪಕ ಮತ್ತು CEO ಕಪಿಲ್ ಶೆಲ್ಕೆ ಹೇಳಿದರು.

Tork Kratos R

ಹೊಸ ಟಾರ್ಕ್ ಕ್ರಾಟೋಸ್-ಆರ್ ಎಲೆಕ್ಟ್ರಿಕ್ ಬೈಕ್ Eco+ ಮೋಡ್ ಅನ್ನು ಹೊಂದಿದ್ದು, ಸದ್ಯ ಈ ಬೈಕ್ ಅನ್ನು ಈಗಾಗಲೇ ಖರೀದಿಸಿದ ಗ್ರಾಹಕರಿಗೆ ಈ ಆಯ್ಕೆಯನ್ನು ಸಹ ನೀಡಲಾಗುತ್ತದೆ. ನಾಲ್ಕು ಡ್ರೈವ್ ಮೋಡ್‌ಗಳ ಜೊತೆಗೆ, ಬೈಕ್‌ಗಳು ತಮ್ಮ ಬೈಕ್ ಅನ್ನು ಪಾರ್ಕಿಂಗ್ ಮಾಡಲು ಸಹಾಯ ಮಾಡುವ ರಿವರ್ಸ್ ಮೋಡ್‌ ಅನ್ನು ಲಭ್ಯವಾಗುವಂತೆ ಮಾಡಲಾಗುತ್ತದೆ.

ಹೊಸ ಟಾರ್ಕ್ ಕ್ರಾಟೋಸ್-ಆರ್ ಎಲೆಕ್ಟ್ರಿಕ್ ಬೈಕ್ ಪೇಟೆಂಟ್ ಪಡೆದ 9kW ಆಕ್ಸಿಯಲ್ ಫ್ಲಕ್ಸ್ ಮೋಟಾರ್‌ನಿಂದ ಪವರ್ ಅನ್ನು ಪಡೆಯುತ್ತದೆ, ಇದು 38 Nm ಟಾರ್ಕ್ ಮತ್ತು 96% ದಕ್ಷತೆಯ ರೇಟಿಂಗ್ ಅನ್ನು ನೀಡುತ್ತದೆ. ಈ ಮೋಟಾರು IP67 ರೇಟ್ ಮಾಡಲಾದ 4.0 kWh Li-ion ಬ್ಯಾಟರಿ ಪ್ಯಾಕ್‌ನೊಂದಿಗೆ ಜೋಡಿಸಲಾಗಿದೆ. ಸ್ಪೋರ್ಟ್ ಮೋಡ್‌ನಲ್ಲಿ, ಈ ಬೈಕು 105 ಕಿಮೀ ವೇಗವನ್ನು ತಲುಪಬಹುದು.

Tork Kratos R

ಈ ಟಾರ್ಕ್ ಕ್ರಾಟೋಸ್-ಆರ್ ಎಲೆಕ್ಟ್ರಿಕ್ ಬೈಕಿನ ಫಿಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಜಿಯೋಫೆನ್ಸಿಂಗ್, ಫೈಂಡ್ ಮೈ ವೆಹಿಕಲ್, ಮೋಟರ್‌ವಾಕ್ ಅಸಿಸ್ಟ್, ಕ್ರ್ಯಾಶ್ ಅಲರ್ಟ್, ವೆಕೇಶನ್ ಮೋಡ್, ಟ್ರ್ಯಾಕ್ ಮೋಡ್ ಅನಾಲಿಸಿಸ್ ಹಾಗೂ ಸ್ಮಾರ್ಟ್ ಚಾರ್ಜ್ ಅನಾಲಿಸಿಸ್ ಸೇರಿದಂತೆ ಅನೇಕ ಫೀಚರ್ಸ್ ಗಳನ್ನು ಹೊಂದಿವೆ. ಈ ಹೊಸ ಟಾರ್ಕ್ ಕ್ರಾಟೋಸ್-ಆರ್ ಎಲೆಕ್ಟ್ರಿಕ್ ಬೈಕ್ ಬಿಳಿ, ನೀಲಿ, ಕೆಂಪು ಮತ್ತು ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ಟಾರ್ಕ್ ಮೋಟಾರ್ಸ್ ತನ್ನ ಕ್ರಾಟೋಸ್-ಆರ್ ಎಲೆಕ್ಟ್ರಿಕ್ ಬೈಕಿನ ಹೊಸ ಅರ್ಬನ್ ಟ್ರಿಮ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಹೊಸ ಟಾರ್ಕ್ ಕ್ರಾಟೋಸ್-ಆರ್ ಅರ್ಬನ್ ಟ್ರಿಮ್ (Tork Kratos-R Urban Trim) ಮಾದರಿಯು ಸಿಟಿ ಸವಾರರನ್ನು ಗುರಿಯಾಗಿರಿಸಿಕೊಂಡಿದೆ. ಈ ಹೊಸ ಟಾರ್ಕ್ ಕ್ರಾಟೋಸ್-ಆರ್ ಅರ್ಬನ್ ಟ್ರಿಮ್ ಮಾದರಿಯು ಸೀಮಿತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಆದರೆ ಲಭ್ಯವಿರುವ ವೈಶಿಷ್ಟ್ಯಗಳು ದೈನಂದಿನ ನಗರ ಪ್ರಯಾಣಕ್ಕೆ ತುಂಬಾ ಉಪಯುಕ್ತವಾಗಿವೆ.

ಸಿಟಿಗಳಲ್ಲಿ ಕಚೇರಿಗಳಿಗೆ ತೆರಳಲು ಅಥವಾ ದೈನಿಂದಿನ ಅಗತ್ಯಕ್ಕೆ ಈ ಹೊಸ ಮಾದರಿಯು ಉತ್ತಮ ಆಯ್ಕೆಯಾಗಿದೆ. ಟಾರ್ಕ್ ಕ್ರಾಟೋಸ್-ಆರ್ ಅರ್ಬನ್ ಟ್ರಿಮ್ 'ಸಿಟಿ' ರೈಡ್ ಮೋಡ್‌ನೊಂದಿಗೆ ಬರುತ್ತದೆ. ಇದರ ಹೊರತಾಗಿ, ಈ ಹೊಸ ಮಾದರಿಯು 70 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇದು ನಗರಗಳಲ್ಲಿ ಯೋಗ್ಯವಾಗಿರುವ ವೇಗವಾಗಿದೆ. ಈ ಹೊಸ ಬೈಕ್ ಮಾದರಿಯನ್ನು ಸಂಪೂರ್ಣ ಚಾರ್ಜ್ ಮಾಡಿದರೆ 100 ಕಿಲೋಮೀಟರ್‌ಗಳಿಗಿಂತ ಹೆಚ್ಚು ರೇಂಜ್ ಅನ್ನು ನೀಡುತ್ತದೆ.

More from DriveSpark

Article Published On: Saturday, October 21, 2023, 8:30 [IST]
English summary
Tork kratos r electric bike gets new eco plus mode range details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+