Auto Expo 2023: ಕೈಗೆಟುಕುವ ಬೆಲೆಯಲ್ಲಿ ಯುವಕರ ಫೆವರೇಟ್ 'ಕೀವೇ ಎಸ್‌ಆರ್250' ಬೈಕ್ ಲಾಂಚ್

ರೆಟ್ರೋ ಸ್ಟೈಲ್ ಬೈಕ್‌ಗಳು ದೇಶದ ಯುವ ಜನರನ್ನು ಹೆಚ್ಚು ಸೆಳೆಯುತ್ತವೆ. ಅಂತವರಿಗಾಗಿ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ವಿವಿಧ ಮಾದರಿ ಮೋಟಾರ್‌ಸೈಕಲ್ ಗಳನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿರುತ್ತವೆ. ಸದ್ಯ ದೆಹಲಿಯಲ್ಲಿ ಆಟೋ ಎಕ್ಸ್‌ಪೋ ನಡೆಯುತ್ತಿದ್ದು, ಅಲ್ಲಿ ಹಲವು ಬೈಕ್‌ಗಳು ಲಾಂಚ್ ಆಗುತ್ತಿವೆ.

ಹಂಗೇರಿಯದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿ 'ಕೀವೇ' ಬಹುನೀರಿಕ್ಷಿತ SR250 ನಿಯೋ-ರೆಟ್ರೊ ಬೈಕ್‌ನ್ನು ರೂ.1.49 ಲಕ್ಷಕ್ಕೆ (ಎಕ್ಸ್ ಶೋರೂಂ, ಭಾರತ) ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆ ಮಾಡಿದೆ. ನೂತನ ಕೀವೇ ಎಸ್‌ಆರ್ 250 ಮೋಟಾರ್‌ಸೈಕಲ್, ದೇಶೀಯ ಮಾರುಕಟ್ಟೆಯಲ್ಲಿ ಟಿವಿಎಸ್ ರೋನಿನ್, ರಾಯಲ್ ಎನ್‌ಫೀಲ್ಡ್ ಹಂಟರ್ 350 ಮತ್ತು ಕವಾಸಕಿ ಡಬ್ಲ್ಯು 175ನಂತಹ ಇತರೆ ರೆಟ್ರೋ ಶೈಲಿಯ ಮೋಟಾರ್‌ಸೈಕಲ್‌ಗಳಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಹೇಳಬಹುದು.

Auto Expo 2023: ಕೀವೇ ಎಸ್‌ಆರ್250 ಬೈಕ್ ಲಾಂಚ್

ಹೊಸ SR250, ಕೀವೇ ರೆಡಿ ಮಾಡಿರುವ SR ಮಾದರಿ ಮೋಟಾರ್‌ಸೈಕಲ್‌ಗಳಲ್ಲಿ SR125 ನಂತರದ ಎರಡನೇ ಮಾದರಿಯಾಗಿದೆ. ಈ ನೂತನ ಕೀವೇ SR250 ಮೋಟಾರ್‌ಸೈಕಲ್ ಸಾಕಷ್ಟು ವಿನ್ಯಾಸ ವೈಶಿಷ್ಟ್ಯಗಳನ್ನು ಹೊಂದಿದೆ. ಸರ್ಕ್ಯುಲರ್ ಹೆಡ್‌ಲ್ಯಾಂಪ್, ಟರ್ನ್ ಇಂಡಿಕೇಟರ್‌ಗಳು, ಕ್ರೋಮ್ ಸರೌಂಡ್‌ಗಳೊಂದಿಗೆ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟೈಲ್ ಲ್ಯಾಂಪ್‌, ಸಿಲಿಂಡರ್ ಆಕಾರದ ಬ್ರೇಕ್ ಫ್ಲೂಯಿಡ್ ರಿಸರ್ವಾಯರ್, ನಾಬ್ಡ್ ಟೈರ್‌ಗಳು, ಸ್ಪೋಕ್ ವೀಲ್‌ಗಳಂತಹ ಪ್ರಮುಖ ವಿನ್ಯಾಸದ ಅಂಶಗಳನ್ನು ಹೊಂದಿದೆ. ಜೊತೆಗೆ ಬ್ಲ್ಯಾಕ್ ಫೋರ್ಕ್ ಬೂಟ್ಸ್, ರಿಬ್ಬ್ಡ್ ಸೀಟ್ ಗಳನ್ನು ಪಡೆದುಕೊಂಡಿದೆ.

ಹೊಸ ಕೀವೇ SR250 ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಇದು ನಿಯೋ-ರೆಟ್ರೊ ಮೋಟಾರ್‌ಸೈಕಲ್ ಆಗಿದ್ದು, ಡ್ಯುಯಲ್-ಚಾನೆಲ್ ABS, ಕಲರ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್, LED DRLs, ಹಝರ್ಡ್ ಸ್ವಿಚ್, ಅಡ್ಜಸ್ಟ್ಏಬಾಲ್ ರೇರ್ ಸಸ್ಪೆನ್ಷನ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇಷ್ಟೇ ಅಲ್ಲದೆ, ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್, 300 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, 210 ಎಂಎಂ ರೇರ್ ಡಿಸ್ಕ್ ಬ್ರೇಕ್ ಅನ್ನು ಪಡೆದುಕೊಂಡಿದೆ.

Auto Expo 2023: ಕೀವೇ ಎಸ್‌ಆರ್250 ಬೈಕ್ ಲಾಂಚ್

ಪವರ್‌ಟ್ರೇನ್‌ ವಿಚಾರದ ಬಗ್ಗೆ ಹೇಳುವುದಾದರೆ, ಹೊಸ ಕೀವೇ SR250 ಮೋಟಾರ್‌ಸೈಕಲ್ 223 ಸಿಸಿ, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಪೆಟ್ರೋಲ್ ಎಂಜಿನ್‌ ಹೊಂದಿದ್ದು, ಇದು 7,500 rpmನಲ್ಲಿ 16bhp ಗರಿಷ್ಠ ಪವರ್ ಮತ್ತು 6,500 rpmನಲ್ಲಿ 16Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಪವರ್ ಉತ್ಪಾದನೆಯ ಅಂಕಿಅಂಶದಲ್ಲಿ ಈ ಬೈಕ್ ಕೊಂಚ ಹಿಂದೆ ಉಳಿದಿದೆ ಎಂದು ಹೇಳಬಹುದು. ಈ ಕೀವೇ SR250 ಕೇವಲ 120 kg ತೂಕವಿದೆ.

ಸದ್ಯ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಕೀವೇ SR125ಗಿಂತ ಹಲವು ವೈಶಿಷ್ಟ್ಯಗಳನ್ನು ಹೊಂದುವ ಮೂಲಕ ನೂತನ ಕೀವೇ SR250 ಭಿನ್ನವಾಗಿದ್ದು, ನಿಖರವಾದ ಬೆಲೆಯನ್ನು ಹೊಂದಿದೆ ಎಂದು ಹೇಳಬಹುದು. ಹೊಸ ಕೀವೇ SR250 ಅನ್ನು ಖರೀದಿ ಮಾಡಲು ಹೆಚ್ಚಿನ ಸಂಖ್ಯೆಯ ಗ್ರಾಹಕರು ಮನಸ್ಸು ಮಾಡಬಹುದು. ಏಕೆಂದರೆ, ಇದು ನಿಯೋ-ರೆಟ್ರೋ ಶೈಲಿಯ ಮೋಟಾರ್‌ಸೈಕಲ್ ಆಗಿದ್ದು, ದೇಶದಲ್ಲಿ ಲಭ್ಯವಿರುವ ಈ ವಿಭಾಗದ ಇತರೆ ಕಂಪನಿಗಳ ಮೋಟಾರ್‌ಸೈಕಲ್ ಗಿಂತ ಕಡಿಮೆ ಬೆಲೆಯನ್ನು ಹೊಂದಿದೆ.

Auto Expo 2023: ಕೀವೇ ಎಸ್‌ಆರ್250 ಬೈಕ್ ಲಾಂಚ್

ಕೀವೇ SR125 ಬೈಕ್ ಆರಂಭಿಕ ಬೆಲೆ ದೇಶದಲ್ಲಿ ರೂ.1,19,000 ಇದ್ದು, ಇದು ಕೇವಲ 1 ರೂಪಾಂತರ ಮತ್ತು 3 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಬೈಕ್, 125 ಸಿಸಿ BS6 ಎಂಜಿನ್‌ ಹೊಂದಿದ್ದು, ಇದು 9.56 bhp ಮತ್ತು 8.2 Nm ಟಾರ್ಕ್ ಉತ್ಪಾದಿಯುತ್ತದೆ. ಫ್ರಂಟ್ ಮತ್ತು ರೇರ್ ಎರಡು ಡಿಸ್ಕ್ ಬ್ರೇಕ್‌ಗನ್ನು ಹೊಂದಿದೆ. ಈ SR125 ಬೈಕ್ 120 ಕೆಜಿ ತೂಕವಿದ್ದು, 14.5 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ.

ಒಟ್ಟಾರೆಯಾಗಿ, ಕೀವೇ SR250 ಮೋಟಾರ್‌ಸೈಕಲ್, ರೆಟ್ರೋ ಶೈಲಿಯ ಬೈಕ್ ಇಷ್ಟಪಡುವವರಿಗೆ ಖಂಡಿತ ಲೈಕ್ ಆಗಲಿದೆ. ಹಂಗೇರಿಯದ ದ್ವಿಚಕ್ರ ವಾಹನ ತಯಾರಕ ಕಂಪನಿ ಕೀವೇ, ಎಲ್ಲಾ ರೀತಿಯ ಪ್ರಮುಖ ವಿನ್ಯಾಸಗಳನ್ನು ಒಳಗೊಂಡಂತೆ ಈ ಮೋಟಾರ್‌ಸೈಕಲ್ ಅನ್ನು ಅಚ್ಚುಕಟ್ಟಾಗಿ ರೆಡಿ ಮಾಡಿದೆ. ಇತರೆ ಬೈಕ್ ಗಳಿಗೆ ಹೋಲಿಸಿದರೆ, ನೂತನ ಕೀವೇ SR250 ಬೆಲೆಯು ದೇಶದಲ್ಲಿ ಕೈಗೆಟುವ ರೀತಿಯಲ್ಲಿ ಇದ್ದು, ಖರೀದಿಸಲು ಗ್ರಾಹಕರು ಮನಸ್ಸು ಮಾಡಬಹುದು ಎಂದು ಹೇಳಬಹುದು.

More from DriveSpark

Article Published On: Thursday, January 12, 2023, 9:49 [IST]
English summary
Auto expo 2023 youth favorite keeway sr250 motorcycle launched in india rs 1 49 lakh details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+