Bajaj Chetak: ಕನ್ನಡಿಗರಿಗೆ ಸಿಹಿಸುದ್ದಿ ನೀಡಿದ ಬಜಾಜ್.. ದಸರಾ ಬಂತು, ಚೇತಕ್ ಬೆಲೆ ಭಾರೀ ಇಳಿಕೆ

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಬಜಾಜ್ (Bajaj) ಜನಪ್ರಿಯತೆ ಗಳಿಸಿದೆ. ಅದರ ಬೈಕ್ ಹಾಗೂ ಸ್ಕೂಟರ್‌ಗಳು ಆಕರ್ಷಕ ವೈಶಿಷ್ಟ್ಯ ಹೊಂದಿರುವುದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಸುತ್ತಾರೆ. ಕೆಲವೇ ವರ್ಷಗಳ ಹಿಂದೆ, ದೇಶೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಚೇತಕ್ (Chetak) ಸ್ಕೂಟರ್‌ ಮೂಲಕ ಕಂಪನಿ ಲಗ್ಗೆ ಇಟ್ಟಿತ್ತು.

ಸದ್ಯ, ಬಜಾಜ್ ಆಟೋ ವಿಶೇಷ ಹಬ್ಬದ ಕೊಡುಗೆಯನ್ನು ಘೋಷಿಸಿದೆ. ಈ ಮೂಲಕ ಕರ್ನಾಟಕ ಹಾಗೂ ತಮಿಳುನಾಡು ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಇವೆರೆಡು ರಾಜ್ಯಗಳಲ್ಲಿ ಬಜಾಜ್ ಚೇತಕ್ (Bajaj Chetak) ಎಲೆಕ್ಟ್ರಿಕ್ ಸ್ಕೂಟರ್ ರೂ.1,15,000 ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಈ ವಿಶೇಷ ದರ ಸ್ಟಾಕ್‌ ಮುಕ್ತಾಯಗೊಳ್ಳುವವರೆಗೂ ಲಭ್ಯವಿರಲಿದೆ ಎಂದು ವರದಿಯಾಗಿದೆ.

Bajaj Chetak: ಕನ್ನಡಿಗರಿಗೆ ಸಿಹಿಸುದ್ದಿ ನೀಡಿದ ಬಜಾಜ್.. ದಸರಾ ಬಂತು, ಚೇತಕ್ ಬೆಲೆ ಭಾರೀ ಇಳಿಕೆ

ಉಳಿದ ರಾಜ್ಯಗಳಲ್ಲಿ ಹಿಂದಿನ ಬೆಲೆಗಳು ಮುಂದುವರಿಯಲಿದೆ. ಈ ಹಿಂದೆ, ಆಗಸ್ಟ್ ತಿಂಗಳಲ್ಲಿ ಬಜಾಜ್ ಕಂಪನಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯನ್ನು ರೂ.14,000 ಇಳಿಕೆಯಾಗಿತ್ತು. ಆ ಬಳಿಕ, ರೂ.1.30 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿತ್ತು. ಅದಕ್ಕೂ ಮೊದಲು, ರೂ.1.44 ಲಕ್ಷ ಬೆಲೆಯಿತ್ತು. ಇದೀಗ, ಮತ್ತೆ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ದರ ಇಳಿಕೆಯಾಗಿರುವುದು ಗ್ರಾಹಕರಿಗೆ ಖುಷಿತಂದಿದೆ.

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್, ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಇಕೋ ಮೋಡ್ ನಲ್ಲಿ 90 ಕಿಲೋಮೀಟರ್ ಮತ್ತು ಸ್ಪೋರ್ಟ್ ಮೋಡ್ ನಲ್ಲಿ 80 ಕಿಲೋಮೀಟರ್ ಕ್ರಮಿಸುವ ಸಾಮರ್ಥ್ಯ ಒಳಗೊಂಡಿದೆ. ಇದರಲ್ಲಿ 3-ಫೇಸ್ ಪರ್ಮನೇಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್ ಬಳಕೆ ಮಾಡಲಾಗಿದ್ದು, 1,950 rpmನಲ್ಲಿ 20 Nm ಪೀಕ್ ಟಾರ್ಕ್ ಹೊರಹಾಕುತ್ತದೆ.

ಈ ಸ್ಕೂಟರ್, ಬ್ಯಾಟರಿ ಫುಲ್ ಚಾರ್ಜ್ ಗೊಳ್ಳಲು ಕೇವಲ 5 ಗಂಟೆ ಬೇಕಾಗುತ್ತದೆ. ವಿನ್ಯಾಸದ ದೃಷ್ಟಿಯಿಂದ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಅತ್ಯುತ್ತಮವಾಗಿದ್ದು, ಇದರ ಬಾಡಿಯೂ ಸಂಪೂರ್ಣ ಉಕ್ಕಿನಿಂದ (steel) ಮಾಡಲ್ಪಟ್ಟಿದೆ. ಎಲ್ಇಡಿ ಲೈಟಿಂಗ್‌, ಮುಂಭಾಗ ಹಾರ್ಸ್‌ಶೂ ಆಕಾರದ ಡೇಟೈಮ್ ರನ್ನಿಂಗ್ ಲ್ಯಾಂಪ್ ಸೇರಿದಂತೆ ಆಕರ್ಷಕ ಡಿಸೈನ್ ಒಳಗೊಂಡಿದೆ.

ಈ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಪಡೆದುಕೊಂಡಿರುವ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಆಕರ್ಷಕ ಬಣ್ಣದಿಂದ ಕೂಡಿರುವ LCD ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬಾಡಿ -ಕಲರ್ಡ್ ರೇರ್ ವ್ಯೂ ಮಿರರ್ಸ್, ಡ್ಯುಯಲ್ -ಟೋನ್ ಸೀಟ್, ವೀಲ್ ರಿಮ್‌ಗಳಲ್ಲಿ ಡೆಕಾಲ್ ಬ್ರ್ಯಾಂಡಿಂಗ್, ಪಿಲಿಯನ್ ಫುಟ್‌ರೆಸ್ಟ್, USB ಚಾರ್ಜರ್, 4G ಕನೆಕ್ಟಿವಿಟಿ, 18 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಸೇರಿದಂತೆ ಹಲವು ಫೀಚರ್ಸ್ ಒಳಗೊಂಡಿದೆ.

ಈ ಸ್ಕೂಟರ್, ಮ್ಯಾಟ್ ಕೋರ್ಸ್ ಗ್ರೇ, ಮ್ಯಾಟ್ ಕೆರಿಬಿಯನ್ ಬ್ಲೂ ಹಾಗೂ ಸ್ಯಾಟಿನ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಖರೀದಿದಾರರಿಗೆ ಸಿಗುತ್ತದೆ. ಅಲ್ಲದೆ, ಬಜಾಜ್ ಕಂಪನಿಯು ಚೇತಕ್ ಮಾರಾಟವನ್ನು ದ್ವಿಗುಣಗೊಳಿಸಲು ನಿರ್ಧಾರ ಮಾಡಿದೆ. ಅದಕ್ಕಾಗಿ ಕಡಿಮೆ ಬೆಲೆಗೆ 'ಚೇತಕ್' ಎಲೆಕ್ಟ್ರಿಕ್ ಸ್ಕೂಟರ್ ಅಭಿವೃದ್ಧಿಪಡಿಸುವ ಕೆಲಸದಲ್ಲಿ ನಿರತವಾಗಿದೆ. ಪರೀಕ್ಷಾರ್ಥ ಸಂಚಾರ ನಡೆಸುವ ಈ ಸ್ಕೂಟರ್, ಸ್ಪೈ ಚಿತ್ರಗಳು ಇಂಟರ್ನೆಟ್ ನಲ್ಲಿ ಸೋರಿಕೆಯಾಗಿದ್ದವು.

ಬಜಾಜ್ ಕಂಪನಿ, ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯನ್ನು ಕಡಿಮೆಗೊಳಿಸುವ ಮೂಲಕ ಕರ್ನಾಟಕ ಮತ್ತು ತಮಿಳುನಾಡಿನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಇದು, ದಸರಾ ಹಬ್ಬದಲ್ಲಿ ಕಂಪನಿಗೆ ಮಾರಾಟವನ್ನು ದ್ವಿಗುಣಗೊಳಿಸಲು ನೇರವಾಗುತ್ತದೆ. ಬೆಲೆಯೂ ತೀರಾ ಕಮ್ಮಿಯಾಗಿರುವುದರಿಂದ ಪ್ರತಿಸ್ಪರ್ಧಿ ಕಂಪನಿಗಳ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟದ ಮೇಲೆಯೂ ಪ್ರಭಾವ ಬೀರಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, October 11, 2023, 17:00 [IST]
English summary
Bajaj chetak available special festival price karnataka tamilnadu customers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+