ಅಧಿಕ ರೇಂಜ್‌ನೊಂದಿಗೆ ಬರುತ್ತಿದೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್: ಇನ್ಮುಂದೆ ಫುಲ್ ಹವಾ!

ಒಂದು ಕಾಲದಲ್ಲಿ ಭಾರತೀಯರ ಹಾಟ್ ಫೆವರೇಟ್ ಆಗಿದ್ದ ಬಜಾಜ್ ಕಂಪನಿಯ 'ಚೇತಕ್' ಸ್ಕೂಟರ್‌ಗಳು ನಿಧಾನವಾಗಿ ಮಾರುಕಟ್ಟೆಯಿಂದ ದೂರು ಸರಿದವು. ಕೆಲ ವರ್ಷದ ಹಿಂದೆ, ಎಲೆಕ್ಟ್ರಿಕ್ ಸ್ಕೂಟರ್ ರೂಪದಲ್ಲಿ ಚೇತಕ್ ಬಿಡುಗಡೆಯಾಗಿತ್ತು. ಆದರೆ, ಕಡಿಮೆ ರೇಂಜ್ ಹಾಗೂ ಹೆಚ್ಚಿನ ಬೆಲೆ ಪಡೆದಿದ್ದರಿಂದ ಗ್ರಾಹಕರನ್ನು ಸೆಳೆಯಲು ವಿಫಲವಾಯಿತು.

ಇತ್ತೀಚೆಗೆ ದೆಹಲಿಯ ಪ್ರಾದೇಶಿಕ ಸಾರಿಗೆ ಇಲಾಖೆಗೆ (RTO) ಬಜಾಬ್ ಸಲ್ಲಿಸಿದ್ದ ದಾಖಲೆಗಳು ಬಹಿರಂಗಗೊಂಡಿದ್ದು, ಅದರ ಪ್ರಕಾರ, ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ನ ಇಂಡಿಯನ್ ಡ್ರೈವಿಂಗ್ ಕಂಡೀಷನ್ಸ್ (IDC) ರೇಂಜ್‌ನ್ನು ಪ್ರಸ್ತುತ 90 ಕಿ.ಮೀಯಿಂದ 108 ಕಿ.ಮೀ ಹೆಚ್ಚಿಸಲಾಗಿದೆ. ಆ ಬಗ್ಗೆ ಬಜಾಜ್ ಕಂಪನಿಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ. ಮುಂಬರುವ ಹಬ್ಬದ ಸೀಸನ್ ನಲ್ಲಿ ಹೆಚ್ಚುವರಿ ರೇಂಜ್‌ನೊಂದಿಗೆ ಈ ಸ್ಕೂಟರ್ ಮಾರುಕಟ್ಟೆಗೆ ಬರುವ ಸಾಧ್ಯತೆ ಇದ್ದು, ಬೆಲೆಯನ್ನು ಒಂದಷ್ಟು ಕಡಿಮೆ ಮಾಡಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಲಾಗಿದೆ.

ಅಧಿಕ ರೇಂಜ್‌ನೊಂದಿಗೆ ಬರುತ್ತಿದೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್: ಇನ್ಮುಂದೆ ಫುಲ್ ಹವಾ!

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಬಜಾಬ್ ಚೇತಕ್, ಕಡಿಮೆ ರೇಂಜ್ ಹಾಗೂ ಹೆಚ್ಚಿನ ಬೆಲೆಯಲ್ಲಿ ಹೊಂದಿರುವುರಿಂದ ಬಹುತೇಕ ಗ್ರಾಹಕರು ಕೊಂಡು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನು ಮನವರಿಕೆ ಮಾಡಿಕೊಂಡಿರುವ ಕಂಪನಿಯು ಹೀಗಿರುವ 90 ಕಿ.ಮೀ ರೇಂಜ್‌ನ್ನು ಶೇಕಡ 20% ಹೆಚ್ಚಿಸಲು ನಿರ್ಧಾರ ಮಾಡಿದೆ. ಮುಂಬರಲಿರುವ ಬಜಾಬ್ ಚೇತಕ್ ಇವಿ ಒಂದೇ ಚಾರ್ಜ್ ನಲ್ಲಿ ಗರಿಷ್ಠ 108 ಕಿ.ಮೀ ರೇಂಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇದು ಚೇತಕ್ ಅಭಿಮಾನಿಗಳಿಗೆ ಖಂಡಿತ ಇಷ್ಟವಾಗಲಿದೆ ಎಂದು ಕಂಪನಿ ನಂಬಿದೆ.

ದೆಹಲಿ ಪ್ರಾದೇಶಿಕ ಸಾರಿಗೆ ಇಲಾಖೆಗೆ ಬಜಾಜ್ ಸಲ್ಲಿಸಿರುವ ದಾಖಲೆಗಳ ಪ್ರಕಾರ, ಬ್ಯಾಟರಿ ಸಾಮರ್ಥ್ಯ ಹಾಗೂ ಪವರ್ ಉತ್ಪಾದನೆ ಹಿಂದಿನ ಸ್ಕೂಟರ್ ಮಾದರಿಯಂತೆ ಇರಲಿದೆ. ಆದರೆ, ಗರಿಷ್ಠ ರೇಂಜ್ ನೀಡಲು ನೂತನ ಸ್ಕೂಟರ್ ಬ್ಯಾಟರಿ ಮ್ಯಾನೇಜ್ಮೆಂಟ್ ಸಾಫ್ಟ್‌ವೇರ್ ನಲ್ಲಿ ಕೊಂಚ ಮಟ್ಟಿಗೆ ಬದಲಾವಣಿಯನ್ನು ಮಾಡಲಾಗಿದೆ ಎಂದು ವರದಿಯಾಗಿದೆ. ಬಜಾಜ್ ಚೇತಕ್ 108 ಕಿ.ಮೀ ರೇಂಜ್ ನೀಡಿದರೂ ಅದಕ್ಕಿಂತಲ್ಲೂ ಹೆಚ್ಚು ರೇಂಜ್ ನೀಡುವ ಓಲಾ ಎಸ್1 ಪ್ರೊ (181 ಕಿ.ಮೀ), ಎಥರ್ 450X (146 ಕಿ.ಮೀ) ಸ್ಕೂಟರ್ ಗಳು ಮಾರುಕಟ್ಟೆಯಲ್ಲಿವೆ.

ಅಧಿಕ ರೇಂಜ್‌ನೊಂದಿಗೆ ಬರುತ್ತಿದೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್: ಇನ್ಮುಂದೆ ಫುಲ್ ಹವಾ!

ಭಾರತದಲ್ಲಿ ಖರೀದಿಗೆ ಲಭ್ಯವಿರುವ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ರೂ.1.52 ಲಕ್ಷ (ಆನ್-ರೋಡ್ ದೆಹಲಿ) ಬೆಲೆಯಲ್ಲಿ ಖರೀದಿಗೆ ಸಿಗಲಿದೆ. 60.3Ah ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನ್ನು ಹೊಂದಿರುವ ಇದರ ಮೋಟಾರ್, 4.08kW ಗರಿಷ್ಠ ಪವರ್ ಹಾಗೂ 16 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇಕೋ ಮೋಡ್‌ನಲ್ಲಿ 95 ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ 85 ಕಿ.ಮೀ ರೇಂಜ್ ನೀಡುತ್ತದೆ. ಮನೆಯ ವಿದ್ಯುತ್ ನಲ್ಲಿ ಈ ಸ್ಕೂಟರ್ ಬ್ಯಾಟರಿಯನ್ನು ಕೇವಲ ಒಂದು ಗಂಟೆಯಲ್ಲಿ ಶೇಕಡ 25% ಚಾರ್ಜ್ ಮಾಡಬಹುದು.

ಬಜಾಬ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಕೂಡ ಭರಪೂರ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಬಹುದು. ಇದು ಆಕರ್ಷಕ ಹೆಡ್ ಲೈಟ್ ಹಾಗೂ ಟೈಲ್ ಲೈಟ್ ಅನ್ನು ಪಡೆದುಕೊಂಡಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಜಿಯೋ ಫೆನ್ಸಿಂಗ್ ಹಾಗೂ ಯುಎಸ್‌ಬಿ ಪೋರ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ ಎಂದು ಹೇಳಬಹುದು. ಬಜಾಜ್ ಕಂಪನಿಯು ಈ ಸ್ಕೂಟರ್ ಅನ್ನು ಮೂರು ವರ್ಷ ಅಥವಾ 50,000 ಕಿ.ಮೀ. ವಾರಂಟಿಯೊಂದಿಗೆ ಮಾರಾಟ ಮಾಡುತ್ತಿದೆ.

ಅಧಿಕ ರೇಂಜ್‌ನೊಂದಿಗೆ ಬರುತ್ತಿರುವ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್, ಗ್ರಾಹಕರನ್ನು ಖಂಡಿತ ಆಕರ್ಷಿಸಬಹುದು. ಬೆಲೆಯು ಕೈಗೆಟುಕಲಿ ಎಂಬುದು ಗ್ರಾಹಕರ ಬಯಕೆಯಾಗಿದೆ. ಈ ಸ್ಕೂಟರ್ ಮತ್ತಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬರುವ ಸಾಧ್ಯತೆಯಿದ್ದು, ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಓಲಾ, ಎಥರ್ ಹಾಗೂ ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ. ಈ ಸ್ಕೂಟರ್ ಮಾರುಕಟ್ಟೆಗೆ ಬಂದ ಮೇಲೆ ಯಾವ ರೀತಿ ಕಮಲ್ ಮಾಡಲಿದೆ ಎಂದು ಹೇಳಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Thursday, February 16, 2023, 11:00 [IST]
English summary
Bajaj chetak electric scooter launch soon more range details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+