ಪಲ್ಸರ್ N160 ಸಿಂಗಲ್-ಚಾನೆಲ್ ABS ರೂಪಾಂತರ ಸ್ಥಗಿತಗೊಳಿಸಿದ ಬಜಾಜ್: ಕಾರಣವೇನು?

ಬಜಾಜ್ ಪಲ್ಸರ್ N160 ಸಿಂಗಲ್-ಚಾನೆಲ್ ABS ರೂಪಾಂತರವನ್ನು ಕಂಪನಿಯು ಸ್ಥಗಿತಗೊಳಿಸಿದೆ. ಈ ಪಲ್ಸರ್ N160 ಬಜಾಜ್‌ನ ಇತರ ಮಾದರಿಗಳಾದ ಪಲ್ಸರ್ NS160 ಮತ್ತು ಪಲ್ಸರ್ N150 ಮೋಟಾರ್‌ಸೈಕಲ್ ನಡುವೆ ಇರುತ್ತದೆ. ಮಾರಾಟದಲ್ಲೂ ಉತ್ತಮವಾಗಿರುವ ಈ ಮಾದರಿಯನ್ನು ಸ್ಥಗಿತಗೊಳಿಸಲು ಕಂಪನಿಯು ಪ್ರಮುಖ ಕಾರಣ ನೀಡಿದೆ.

ಬಿಡುಗಡೆಯ ಸಮಯದಲ್ಲಿ, ಬಜಾಜ್ ಪಲ್ಸರ್ N160 ಸಿಂಗಲ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ರೂಪಾಂತರಗಳಲ್ಲಿ ಲಭ್ಯವಿತ್ತು. ಈಗ, ಬಜಾಜ್ ಪಲ್ಸರ್ N160 ನ ಸಿಂಗಲ್ ಚಾನೆಲ್ ABS ರೂಪಾಂತರವನ್ನು ಮೌನವಾಗಿ ಸ್ಥಗಿತಗೊಳಿಸಿದೆ. ಇವೆರಡರ ನಡುವೆ ಬೆಲೆ ಅಂತರ ಕೂಡ ಹೆಚ್ಚಾಗಿರದಿರುವುದೇ ಮುಖ್ಯ ಕಾರಣವಾಗಿದೆ.

bajaj-discontinues-pulsar-n160-single-channel-abs-variant

ಹೌದು, ಪಲ್ಸರ್ N160 ನ ಸಿಂಗಲ್-ಚಾನೆಲ್ ABS ರೂಪಾಂತರಕ್ಕೆ ಹೋಲಿಸಿದರೆ ಡ್ಯುಯಲ್-ಚಾನೆಲ್ ABS ರೂಪಾಂತರವು ಉತ್ತಮ ಮಾರಾಟವಾಗುತ್ತಿರುವುದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪಲ್ಸರ್ N160 ಮೋಟಾರ್‌ಸೈಕಲ್‌ನ ಸಿಂಗಲ್-ಚಾನೆಲ್ ABS ರೂಪಾಂತರವನ್ನು ಸ್ಥಗಿತಗೊಳಿಸಿದ ನಂತರ, ಮಾದರಿಯ ಆರಂಭಿಕ ಬೆಲೆಯು ರೂ. 1.31 ಲಕ್ಷದ(ಎಕ್ಸ್-ಶೋರೂಮ್) ವರೆಗೆ ಏರಿದೆ.

ಈಗ ಸ್ಥಗಿತಗೊಂಡಿರುವ ಬಜಾಜ್ ಪಲ್ಸರ್ N160 ಸಿಂಗಲ್-ಚಾನಲ್ ರೂಪಾಂತರದ ಮೋಟಾರ್‌ಸೈಕಲ್ ಮುಂಭಾಗದಲ್ಲಿ ತೆಳುವಾದ 31mm ಟೆಲಿಸ್ಕೋಪಿಕ್ ಸಸ್ಪೆನ್ಷನ್ ಮತ್ತು ಮುಂಭಾಗದಲ್ಲಿ ಚಿಕ್ಕದಾದ 280mm ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಪವರ್‌ಟ್ರೇನ್ ವಿಷಯಕ್ಕೆ ಬಂದರೆ, ಬಜಾಜ್ ಪಲ್ಸರ್ N160 ಮೋಟಾರ್‌ಸೈಕಲ್ ದೊಡ್ಡ 164.82cc, ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

bajaj-discontinues-pulsar-n160-single-channel-abs-variant

ಈ ಎಂಜಿನ್ 8,750rpm ನಲ್ಲಿ 15.7 bhp ಪವರ್ ಮತ್ತು 6,750rpm ನಲ್ಲಿ 14.65Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ. 150cc ನಿಂದ 160cc ವಿಭಾಗದಲ್ಲಿನ ಹೆಚ್ಚಿನ ಮೋಟಾರ್‌ಸೈಕಲ್‌ಗಳಂತೆ, ಬಜಾಜ್ ಪಲ್ಸರ್ N160 ಮೋಟಾರ್‌ಸೈಕಲ್ ಪರಿಚಿತ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅನ್ನು ಬಳಸುತ್ತದೆ. ಈ ಗೇರ್‌ಬಾಕ್ಸ್ ನಗರ ಪ್ರಯಾಣ ಮತ್ತು ಸಾಂದರ್ಭಿಕ ಲಾಂಗ್ ರೈಡ್‌ಗಳಿಗೆ ಉತ್ತಮವಾಗಿದೆ.

ಬೆಲೆ ಏರಿಕೆ ಪರಿಣಾಮ ಬಿರಲಿದೆಯೇ?: ಈ 'ಬೆಲೆ ಏರಿಕೆ' ಪರಿಣಾಮವು ಮೋಟಾರ್‌ ಸೈಕಲ್‌ನ ಮಾರಾಟದ ಅಂಕಿಅಂಶಗಳ ಮೇಲೆ ಯಾವುದೇ ಮಹತ್ವದ ಪರಿಣಾಮವನ್ನು ಬೀರುವುದಿಲ್ಲ. ಏಕೆಂದರೆ ಅನೇಕ ಗ್ರಾಹಕರು ಸಿಂಗಲ್-ಚಾನೆಲ್ ABS ರೂಪಾಂತರಕ್ಕಿಂತ ಮೋಟಾರ್‌ ಸೈಕಲ್‌ನ ಡ್ಯುಯಲ್ ಚಾನೆಲ್ ABS ರೂಪಾಂತರವನ್ನು ಹೆಚ್ಚಾಗಿ ಬಯಸುತ್ತಿದ್ದಾರೆ.

bajaj-discontinues-pulsar-n160-single-channel-abs-variant

ಬಜಾಜ್ ಪಲ್ಸರ್ N160 ಡ್ಯುಯಲ್ ಚಾನೆಲ್ ಎಬಿಎಸ್ ರೂಪಾಂತರವು ಉತ್ತಮ ಹಾರ್ಡ್‌ವೇರ್‌ನೊಂದಿಗೆ ಬರುತ್ತದೆ. ಇದು ಮುಂಭಾಗದಲ್ಲಿ ದೊಡ್ಡ 300 ಎಂಎಂ ಡಿಸ್ಕ್ ಬ್ರೇಕ್ ಮತ್ತು ಮುಂಭಾಗದಲ್ಲಿ ಬೀಫಿಯರ್ 37 ಎಂಎಂ ಫೋರ್ಕ್‌ಗಳನ್ನು ಒಳಗೊಂಡಿದೆ. ಈ ಮಾದರಿಯು ಸಿಂಗಲ್‌ ಚಾನಲ್‌ ಎಬಿಎಸ್‌ಗೆ ಹೋಲಿಸಿಕೊಂಡರೆ ಉತ್ತಮ ಪರ್ಫಾಮೆನ್ಸ್ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಬಜಾಜ್ ಪಲ್ಸರ್ N160 ಸಿಂಗಲ್ ಚಾನೆಲ್ ABS ರೂಪಾಂತರವನ್ನು ನಿಲ್ಲಿಸುವ ಮೂಲಕ, ಮಾದರಿಯ ಆರಂಭಿಕ ಬೆಲೆ ಇನ್ನು ಮುಂದೆ ಆಕರ್ಷಕವಾಗಿ ಕಾಣುವುದಿಲ್ಲ. ಆದರೂ ಭವಿಷ್ಯದಲ್ಲಿ ಮಾದರಿಯ ಮಾರಾಟದ ಅಂಕಿಅಂಶಗಳ ವಿಷಯದಲ್ಲಿ ಇದು ಹೆಚ್ಚಿನ ಬದಲಾವಣೆಯನ್ನು ಹೊಂದಿರುತ್ತದೆ ಎಂದು ನಾವು ನಿರೀಕ್ಷಿಸಿಲ್ಲ. ಒಟ್ಟಾರೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಒಂದು ತಿಂಗಳ ನಂತರ ನೋಡಬೇಕಿದೆ.

bajaj-discontinues-pulsar-n160-single-channel-abs-variant

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, November 30, 2023, 8:30 [IST]
English summary
Bajaj discontinues pulsar n160 single channel abs variant
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+