Bajaj Chetak: ಯಾರು ಊಹಿಸಿರಲಿಲ್ಲ.. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಭಾರೀ ಇಳಿಕೆ

ದೇಶದಲ್ಲಿ ಬಜಾಜ್ (Bajaj) ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ಇದೀಗ, ತನ್ನ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಚೇತಕ್ (Chetak) ಬೆಲೆಯನ್ನು ಇಳಿಸಿ, ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಇದರಿಂದ ಈ ಸ್ಕೂಟರ್ ಮಾರಾಟ ಮತ್ತಷ್ಟು ಹೆಚ್ಚಾಗುವ ವಿಶ್ವಾಸದಲ್ಲಿ ಕಂಪನಿಯಿದೆ.

ಬಜಾಜ್ ಕಂಪನಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಹಬ್ಬದ ಕೊಡುಗೆಯನ್ನು ಘೋಷಣೆ ಮಾಡಿದೆ. ಈ ಸ್ಕೂಟರ್ ಬೆಲೆ ಬರೋಬ್ಬರಿ ರೂ. 14,000 ಕಡಿಮೆಯಾಗಿದೆ. ರೂ.1.30 ಲಕ್ಷ ಎಕ್ಸ್ ಶೋರೂಂ (ದೆಹಲಿ/ ಬೆಂಗಳೂರು FAME-2 ಸಬ್ಸಿಡಿ) ದರಕ್ಕೆ ಖರೀದಿಗೆ ಲಭ್ಯವಿದೆ. ಈ ಹಿಂದೆ, ಸಬ್ಸಿಡಿ ದರಗಳು ಪರಿಷ್ಕರಣಿಗೊಂಡ ಹಿನ್ನೆಲೆ, ಚೇತಕ್ ಬೆಲೆ ರೂ.1.44 ಲಕ್ಷವಿತ್ತು.

Bajaj Chetak: ಯಾರು ಊಹಿಸಿರಲಿಲ್ಲ.. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಭಾರೀ ಇಳಿಕೆ

ಈ ಕೊಡುಗೆ ಆಗಸ್ಟ್ 1ರಿಂದ ಲಭ್ಯವಿದ್ದು, ಎಲ್ಲಿಯವರೆಗೆ ಮುಂದುವರಿಯಲಿದೆ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್, ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಇಕೋ (Eco) ಮೋಡ್ ನಲ್ಲಿ 90 km ಹಾಗೂ ಸ್ಪೋರ್ಟ್ (Sports) ಮೋಡ್ ನಲ್ಲಿ 80 km ರೇಂಜ್ ನೀಡುತ್ತದೆ.

ಬಜಾಜ್ ಚೇತಕ್ ಸ್ಕೂಟರ್, ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲು ಐದು ಗಂಟೆ ಸಾಕು. ಈ ಸ್ಕೂಟರ್, 3 - ಫೇಸ್ ಪರ್ಮನೇಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್ ಹೊಂದಿದ್ದು, 1,950 rpmನಲ್ಲಿ 20 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದರ ಬಾಡಿ ಸಂಪೂರ್ಣ ಉಕ್ಕಿನಿಂದ (steel) ಕೂಡಿದೆ. ವಿನ್ಯಾಸದ ದೃಷ್ಟಿಯಿಂದ ಕೂಡ ಅತ್ಯುತ್ತಮವಾಗಿದ್ದು, LED ಲೈಟಿಂಗ್‌, ಮುಂಭಾಗ ಹಾರ್ಸ್‌ಶೂ ಆಕಾರದ ಡೇಟೈಮ್ ರನ್ನಿಂಗ್ ಲ್ಯಾಂಪ್ ಹೊಂದಿದೆ.

Bajaj Chetak: ಯಾರು ಊಹಿಸಿರಲಿಲ್ಲ.. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಭಾರೀ ಇಳಿಕೆ

ಈ ಬಜಾಜ್ ಚೇತಕ್ ಪಡೆದಿರುವ ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುವುದಾದರೆ, ಈ ಸ್ಕೂಟರ್, ಇಕೋ ಹಾಗೂ ಸ್ಪೋರ್ಟ್ ರೈಡಿಂಗ್ ಮೋಡ್‌ಗಳೊಂದಿಗೆ ರಿವರ್ಸ್ ಮೋಡ್ ಅನ್ನು ಪಡೆದಿದ್ದು, ಹಿಲ್ ಹೋಲ್ಡ್ ಅಸಿಸ್ಟ್, ರೋಲ್ ಓವರ್ ಡಿಟೆಕ್ಷನ್‌, ಸ್ಮಾರ್ಟ್ ಕೀ, USB ಚಾರ್ಜರ್, 4G ಕನೆಕ್ಟಿವಿಟಿ, 18 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಇದರೊಟ್ಟಿಗೆ, ಆಂಡ್ರಾಯ್ಡ್ & ಐಒಎಸ್ ಫೋನ್ ಗಳಲ್ಲಿ 'ಮೈ ಚೇತಕ್' ಅಪ್ಲಿಕೇಶನ್ ಸಹ ಇದೆ. 'ಬಜಾಜ್ ಚೇತಕ್ ಪ್ರೀಮಿಯಂ ಎಡಿಷನ್ ಇ-ಸ್ಕೂಟರ್' ಮತ್ತಷ್ಟು ವೈಶಿಷ್ಟ್ಯಗಳನ್ನು ಪಡೆದುಕೊಳ್ಳುವ ಮೂಲಕ ಅತ್ಯಾಧುನಿಕವಾಗಿದೆ. ಆಕರ್ಷಕ ಬಣ್ಣದ LCD ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬಾಡಿ -ಕಲರ್ಡ್ ರೇರ್ ವ್ಯೂ ಮಿರರ್ಸ್, ಡ್ಯುಯಲ್ - ಟೋನ್ ಸೀಟ್, ವೀಲ್ ರಿಮ್‌ಗಳಲ್ಲಿ ಡೆಕಾಲ್ ಬ್ರ್ಯಾಂಡಿಂಗ್, ಪಿಲಿಯನ್ ಫುಟ್‌ರೆಸ್ಟ್ ಅನ್ನು ಹೊಂದಿದೆ.

ಬಜಾಜ್ ಚೇತಕ್ ಪ್ರೀಮಿಯಂ ಎಡಿಷನ್ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಖರೀದಿಗೆ ಲಭ್ಯವಿದೆ. ಮುಖ್ಯವಾಗಿ, ಮ್ಯಾಟ್ ಕೋರ್ಸ್ ಗ್ರೇ, ಮ್ಯಾಟ್ ಕೆರಿಬಿಯನ್ ಬ್ಲೂ ಹಾಗೂ ಸ್ಯಾಟಿನ್ ಬ್ಲ್ಯಾಕ್ ಬಣ್ಣಗಳಲ್ಲಿ ಸಿಗುತ್ತದೆ. ಈವೆರೆಗೆ ದೇಶೀಯ ಮಾರುಕಟ್ಟೆಯಲ್ಲಿ ಗರಿಷ್ಠ ಬೆಲೆಯನ್ನು ಹೊಂದಿದ್ದ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್, ಈ ದರ ಇಳಿಕೆಯೊಂದಿಗೆ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಿರುವುದು ಖುಷಿಯ ವಿಚಾರ.

ಸದ್ಯ, ಭಾರತದಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಗೆ ಪ್ರತಿಸ್ಪರ್ಧಿಗಳೆಂದು ಬಿಂಬಿಸಲಾಗಿರುವ ಬೆಂಗಳೂರಿನ ಎಥರ್ 450ಎಕ್ಸ್ ರೂ.1.38 ಲಕ್ಷದಿಂದ ರೂ.1.53 ಲಕ್ಷ (ಪ್ರೊ ಪ್ಯಾಕ್) ಬೆಲೆಯನ್ನು ಹೊಂದಿದೆ. ಓಲಾ ಎಸ್1 ಪ್ರೊ ರೂ.1.47 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಟಿವಿಎಸ್ ಐಕ್ಯೂಬ್ ರೂ.1.34 ಲಕ್ಷ ಹಾಗೂ ಅದರ ಎಸ್ ರೂಪಾಂತರಕ್ಕೆ ರೂ.1.40 ಲಕ್ಷ ದರವಿದೆ.

ಹೀರೋ ವಿಡಾ ವಿ1 ಪ್ರೊ ರೂ.1.46 ಲಕ್ಷ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇವುಗಳಿಗೆ ಹೋಲಿಕೆ ಮಾಡಿದಾಗ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಭಾರೀ ಇಳಿಕೆಯಾಗಿದ್ದು, ಅತ್ಯಂತ ಕೈಗೆಟುಕುವ ದರಕ್ಕೆ ಖರೀದಿಗೆ ದೊರೆಯುವುದರಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಬಹುದು. ಜೊತೆಗೆ ಕಂಪನಿಯ ಮಾರಾಟ ಪ್ರಮಾಣ ಇನ್ನಷ್ಟು ಹೆಚ್ಚಿಸಬಹುದು.

More from DriveSpark

Article Published On: Friday, August 18, 2023, 16:21 [IST]
English summary
Bajaj good news chetak electric scooter price decrease details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+