Bajaj: ಬಜಾಜ್‌ನಿಂದ ಬರಲಿವೆ 6 ಹೊಸ ದ್ವಿಚಕ್ರ ವಾಹನಗಳು.. ಕಡಿಮೆ ಖರ್ಚಿನ ಸಿಎನ್‌ಜಿ ಬೈಕೂ ಉಂಟು!

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಬಜಾಜ್ ಆಟೋ (Bajaj Auto) ಗುರುತಿಸಿಕೊಂಡಿದೆ. ಈಗಾಗಲೇ ಪಲ್ಸರ್ ಸರಣಿ ಬೈಕ್ ಮಾರಾಟದ ಮೂಲಕ ಯುವಕರ ಮನಗೆದ್ದಿದ್ದು, ಮುಂಬರುವ ದಿನಗಳಲ್ಲಿ ಹಲವು ದ್ವಿಚಕ್ರ ವಾಹನ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಹೊಸ ಸ್ಕೂಟರ್ ಹಾಗೂ ಮೋಟಾರ್ ಸೈಕಲ್ ಒಂದಕ್ಕಿಂತ ಒಂದು ಅತ್ಯಾಧುನಿಕವಾಗಿರಲಿದೆ.

ಮೊದಲಿಗೆ ಬಹುನಿರಿಕ್ಷಿತ ಬಜಾಜ್ ಪಲ್ಸರ್ ಎನ್ಎಸ್400 (Bajaj Pulsar NS400) ಬಗ್ಗೆ ಮಾತನಾಡೋಣ. ಈ ಬೈಕ್ ಮುಂದಿನ ವರ್ಷ (2024) ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಬಹುತೇಕ ಪಲ್ಸರ್ ಎನ್ಎಸ್200 (Pulsar NS200) ರೀತಿಯ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರಲಿದೆ. 373ಸಿಸಿ ಲಿಕ್ವಿಡ್ ಸಿಂಗಲ್ ಸಿಲಿಂಡರ್ ಎಂಜಿನ್ ಪಡೆದಿರುವ ನೀರಿಕ್ಷೆಯಿದ್ದು, 40 bhp ಗರಿಷ್ಠ ಪವರ್ ಹಾಗೂ 35 Nm ಪೀಕ್ ಟಾರ್ಕ್ ಉತ್ಪಾದಿಸಬಹುದು ಎಂದು ಅಂದಾಜಿಸಲಾಗಿದೆ.

Bajaj: ಬಜಾಜ್‌ನಿಂದ ಬರಲಿವೆ 6 ಹೊಸ ದ್ವಿಚಕ್ರ ವಾಹನಗಳು.. ಕಡಿಮೆ ಖರ್ಚಿನ ಸಿಎನ್‌ಜಿ ಬೈಕೂ ಉಂಟು!

ಬಜಾಜ್ ಕಂಪನಿ ಕಡಿಮೆ ಖರ್ಚಿನ ಸಿಎನ್‌ಜಿ ಚಾಲಿತ ಬೈಕ್‌ನ್ನು (CNG Bike) ಕೂಡ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ಹೇಳಲಾಗಿದೆ. ಇದಕ್ಕೆ ಇ101 (E101) ಎಂಬ ಕೋಡ್ ನೇಮ್ ನೀಡಲಾಗಿದೆಯಂತೆ. ಈ ಸಿಎನ್‌ಜಿ ಬೈಕ್, ಸಿಟಿ100 (CT100), ಅಥವಾ ಸಿಟಿ110 (CT110) ಮಾದರಿಯನ್ನು ಆಧರಿಸಿರಲಿದೆ ಎಂದು ವರದಿಯಾಗಿದ್ದು, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರಿಗೆ ಸಿಗಬಹುದು ಎನ್ನಲಾಗಿದೆ.

ದೇಶೀಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ ಎನ್150 (Bajaj Pulsar N150) ಬಿಡುಗಡೆಯಾದ ಮೇಲೆ ಪಲ್ಸರ್ ಪಿ150 (Pulsar P150) ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ, ಪಿ ಸರಣಿಯ 125 ಸಿಸಿ ವಿಭಾಗದಲ್ಲಿ 'ಪಲ್ಸರ್ ಪಿ125' ಹೊಸ ಬೈಕ್ ಬಿಡುಗಡೆಗೊಳಿಸಲು ಕಂಪನಿ ಸಿದ್ಧತೆ ನಡೆಸಿದ್ದು, ಈಗಾಗಲೇ ಪ್ರಾಯೋಗಿಕ ಸಂಚಾರ ಸಂಚಾರ ನಡೆಸುವ ಚಿತ್ರಗಳು ಕಂಡುಬಂದಿದ್ದವು. ಇದು ಮಾರುಗಟ್ಟೆಯಿಂದ ದೂರವಾದ ಪಲ್ಸರ್ ಪಿ150 ಬೈಕ್ ಅನ್ನು ಹೋಲುತ್ತಿತ್ತು.

Bajaj: ಬಜಾಜ್‌ನಿಂದ ಬರಲಿವೆ 6 ಹೊಸ ದ್ವಿಚಕ್ರ ವಾಹನಗಳು.. ಕಡಿಮೆ ಖರ್ಚಿನ ಸಿಎನ್‌ಜಿ ಬೈಕೂ ಉಂಟು!

ಬಜಾಜ್ ಸನ್ನಿ ಇವಿ (Bajaj Sunny EV)ಯೂ ಸದ್ಯ ಅಭಿವೃದ್ಧಿ ಹಂತದಲ್ಲಿದ್ದು, ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಆಗಿರಲಿದೆ ಎಂದು ಹೇಳಲಾಗಿದೆ. ಇದರ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಆದರೆ, ಹೆಚ್ಚು ಅತ್ಯಾಧುನಿಕವಾಗಿರಲಿದ್ದು, ನವೀನ ವಿನ್ಯಾಸ ಹಾಗೂ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಮುಂದಿನ ವರ್ಷ ಭಾರತದ ಮಾರುಕಟ್ಟೆಯಲ್ಲಿ ಅದ್ದೂರಿಯಾಗಿ ಲಾಂಚ್ ಮಾಡಲು ಬಜಾಜ್ ಕಂಪನಿ ತೀರ್ಮಾನ ಮಾಡಿದೆ ಎಂದು ವರದಿಯಾಗಿದೆ.

ಬಜಾಜ್ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಿಟಿ (CT) ಸರಣಿಯ ಹೊಸ ಬೈಕ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದಕ್ಕೆ ಬಜಾಜ್ ಸಿಟಿ150ಎಕ್ಸ್ (Bajaj CT 150X) ಎಂದು ಹೆಸರಿಡಲಾಗಿದ್ದು, ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿತ್ತು. ಈ ಬೈಕ್ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯದೊಂದಿಗೆ ದೊರೆಯಲಿದ್ದು, ಪಲ್ಸರ್ 150 ಸಿಸಿ ಬೈಕ್ ನಂತೆ ಎಂಜಿನ್ ಹೊಂದಿರಬಹದು ಎಂದು ಹೇಳಲಾಗಿದೆ. ಇನ್ನುಳಿಂದ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

ಬಜಾಜ್ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ವರದಿಯಾಗಿದೆ. ಚೇತಕ್ ಹೊಸ ರೂಪಾಂತರ ರಸ್ತೆಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದ್ದು, ಆ ಸ್ಪೈ ಚಿತ್ರಗಳು ಇಂಟರ್ನೆಟ್ ನಲ್ಲಿ ಸೋರಿಕೆಯಾಗಿದ್ದವು. ಹೊಸ ಸ್ಕೂಟರ್, ಬಹುತೇಕ ರೂ.1 ಲಕ್ಷ ಬೆಲೆ ಆಸುಪಾಸಿನಲ್ಲಿ ಖರೀದಿಗೆ ಸಿಗಬಹುದು ಎಂದು ಹೇಳಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, November 19, 2023, 15:00 [IST]
English summary
Bajaj launch new 6 two wheeler soon cng bike chetak ev also list
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+