ಭಾರತದಲ್ಲಿ ಅಬ್ಬರಿಸಲು ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಯ್ತು 'ಬಜಾಜ್ ಪಲ್ಸರ್ NS160' ಬೈಕ್
ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ 'ಬಜಾಜ್' ಪಲ್ಸರ್ ಸರಣಿ ಬೈಕ್‌ಗಳನ್ನು ಮಾರಾಟ ಮಾಡುವ ಮೂಲಕ ದೊಡ್ಡ ಮಟ್ಟದ ಖ್ಯಾತಿ ಗಳಿಸಿದೆ. ಇದೀಗ, ಬಹುನೀರಿಕ್ಷಿತ ಬಜಾಜ್ ಪಲ್ಸರ್ ಎನ್ಎಸ್160 (Bajaj Pulsar NS160) ಮೋಟಾರ್‌ಸೈಕಲ್ ಬಿಡುಗಡೆ ಮಾಡಿದೆ. ಆ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ ನವೀಕರಿಸುವ 'ಪಲ್ಸರ್ ಎನ್ಎಸ್160' ಬೈಕ್ ರೂ.1.35 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ರೂ.10,000 ಹೆಚ್ಚಿನ ದರ ಏರಿಕೆಯನ್ನು ಪಡೆದುಕೊಂಡಿದೆ. ಈ ಮೋಟಾರ್‌ಸೈಕಲ್, USD ಪೋರ್ಕ್ಸ್, ಡ್ಯುಯಲ್ ಚಾನೆಲ್ ABS (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್)ನಂತಹ ಕೆಲವೊಂದು ಪ್ರಮುಖ ನವೀಕರಣಗಳನ್ನು ಪಡೆದುಕೊಳ್ಳುವ ಮೂಲಕ ಹೆಚ್ಚು ಆಕರ್ಷಣೀಯವಾಗಿದೆ.

ಹಳೆಯ ಮಾದರಿಯನ್ನು ಗಮನಿಸಿದ ಈ ಬೈಕ್, ತೂಕವನ್ನು ಸುಮಾರು 1 kg (ಒಟ್ಟು 152 kg) ಹೆಚ್ಚಿಸಲಾಗಿದೆ. ನೂತನ ಪಲ್ಸರ್ ಎನ್ಎಸ್160 ಪಡೆದುಕೊಂಡಿರುವ ದೊಡ್ಡ ಬದಲಾವಣೆಯೆಂದರೆ ಹೊಸದಾದ ಇನ್ಸ್ಟ್ರುಮೆಂಟ್ ಕನ್ಸೋಲ್ ಹೊಂದಿದೆ. ಇದು DTE (ಡಿಸ್ಟೆನ್ಸ್ ಟು ಎಂಪ್ಟಿ), ನೈಜ ಸಮಯದ ಇಂಧನ ದಕ್ಷತೆ (real-time fuel efficiency) ಹಾಗೂ ಗೇರ್ ಪೊಜಿಷನ್ ಮಾಹಿತಿಯನ್ನು ಒದಗಿಸುತ್ತದೆ.
ಹೊಸ ಬಜಾಜ್ ಪಲ್ಸರ್ ಎನ್ಎಸ್160 ಬೈಕ್‌ನ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 160.3 ಸಿಸಿ, ಸಿಂಗಲ್-ಸಿಲಿಂಡರ್ ಆಯಿಲ್ ಕೋಲ್ಡ್ ಎಂಜಿನ್ ಹೊಂದಿದೆ. 17 bhp ಗರಿಷ್ಠ ಪವರ್ ಹಾಗೂ 14.6 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5 - ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದ್ದು, ಮುಂಬರಲಿರುವ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಇದರ ಎಂಜಿನ್ ನವೀಕರಿಸಲಾಗಿದೆ.
ಮೊದಲಿಗೆ ಈ ಪಲ್ಸರ್ ಎನ್ಎಸ್160 ಬೈಕ್‌ನ ಬ್ರೇಕಿಂಗ್ ಸಿಸ್ಟಮ್ ಬಗ್ಗೆ ನೋಡುವುದಾದರೆ, ಇದು ಫ್ರಂಟ್ 300 ಎಂಎಂ, ರೇರ್ 230 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ. ಟೈಯರ್ಸ್ ಹಾಗೂ ವೀಲ್ಸ್ ವಿಷಯಕ್ಕೆ ಬರುವುದಾದರೆ, ಫ್ರಂಟ್ 90/90 ಅಳತೆ ಟೈಯರ್, ರೇರ್ 120/80 ಟೈಯರ್ ಅನ್ನು ಪಡೆದುಕೊಂಡಿದೆ. ಜೊತೆಗೆ 17 ಇಂಚಿನ ಅಲಾಯ್ ವೀಲ್ಸ್ ಅನ್ನು ಪಡೆದುಕೊಂಡಿದೆ.
ಬಜಾಜ್ ಪಲ್ಸರ್ ಎನ್ಎಸ್160 ಬೈಕ್‌ನೊಂದಿಗೆ ಬಿಡುಗಡೆಯಾಗಿರುವ 'ಪಲ್ಸರ್ ಎನ್ಎಸ್200' ರೂ.1.47 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ಖರೀದಿಗೆ ಲಭ್ಯವಾಗಲಿದೆ. ಹಿಂದಿನ ಮಾದರಿಯೆಗೆ ಹೋಲಿಸಿದರೆ, ಸಾಕಷ್ಟು ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಈ ಬೈಕ್ ಕೊಂಚ ಶಕ್ತಿಯುತವಾಗಿದ್ದು, 199.5 ಸಿಸಿ ಸಾಮರ್ಥ್ಯದ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೋಲ್ಡ್ ಎಂಜಿನ್ ಪಡೆದಿದೆ. 24 bhp ಪವರ್, 14.6 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಒಟ್ಟಾರೆಯಾಗಿ ಬಜಾಜ್ ಕಂಪನಿ, ಪಲ್ಸರ್ ಸರಣಿಯ ಬೈಕ್‌ಗಳನ್ನು ಭಾರತ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇವು ಬೆಲೆಗೆ ತಕ್ಕಂತೆ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಪ್ರಮುಖವಾಗಿ USD ಪೋರ್ಕ್ಸ್, ಡ್ಯುಯಲ್ ಚಾನೆಲ್ ABSಯನ್ನು ಹೊಂದಿದೆ. ಇದು ಹೆಚ್ಚಿನ ಯುವ ಖರೀದಿದಾರರನ್ನು ಆಕರ್ಷಿಸಬಹುದು. ಮುಂಬರುವ ದಿನಗಳಲ್ಲಿ ಈ ಬೈಕ್‌ಗಳು ತನ್ನದೆಯಾದ ಛಾಪು ಮೂಡಿಸಬಹುದು. ಆ ಬಗ್ಗೆ ವಿತರಣಿಗಳು ಆರಂಭವಾದ ಮೇಲೆ ತಿಳಿಯಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








