ಬಜಾಜ್ ಪಲ್ಸರ್ ಶ್ರೇಣಿಗಳಿಗೆ ಎಲ್ಲಿಲ್ಲದ ಬೇಡಿಕೆ... ಭಾರತದಲ್ಲಿ ಅತ್ಯಧಿಕ ಮಾರಾಟ ದಾಖಲು
ಕಳೆದ ಅಕ್ಟೋಬರ್ 2023 ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 2,78,486 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿರುವುದಾಗಿ ಬಜಾಜ್ ಆಟೋ ಬುಧವಾರ ಪ್ರಕಟಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಮಾರಾಟವಾದ 206,131 ಯುನಿಟ್‌ಗಳಿಗೆ ಹೋಲಿಸಿದರೆ ಶೇ 35% ರಷ್ಟು ಹೆಚ್ಚಳವನ್ನು ದಾಖಲಿಸಿದೆ ಎಂದು ಕಂಪನಿ ತಿಳಿಸಿದೆ.
ಇದಲ್ಲದೆ, ಕಂಪನಿ ತನ್ನ ಪಲ್ಸರ್ ಶ್ರೇಣಿಯು ಕಳೆದ ತಿಂಗಳು 1.61 ಲಕ್ಷ ಯೂನಿಟ್ ಬೈಕ್‌ಗಳ ಮಾರಾಟವನ್ನು ದಾಟಿದೆ, ಇದು ಬಜಾಜ್ ದಾಖಲಿಸಿದ ಅತ್ಯಧಿಕ ಪಲ್ಸರ್ ಶ್ರೇಣಿಯ ಮಾರಾಟವಾಗಿದೆ ಎಂದು ಕಂಪನಿ ಘೋಷಿಸಿದೆ. ಅಲ್ಲಿಗೆ ಒಟ್ಟಾರೆ ಮಾರಾಟದ ಬಹುಪಾಲು ಪಲ್ಸರ್ ಶ್ರೇಣಿಯ ಬೈಕ್‌ಗಳೇ ಬಾಚಿಕೊಳ್ಳುವ ಮೂಲಕ ಗ್ರಾಹಕರಲ್ಲಿ ಅತ್ಯಧಿಕ ಬೇಡಿಕೆಯನ್ನು ಪಡೆದಿರುವುದು ಇದರಿಂದ ತಿಳಿಯಬಹುದು.

ಬಜಾಜ್ ಆಟೋ ಒಟ್ಟಾರೆ YTD (ಏಪ್ರಿಲ್-ಅಕ್ಟೋಬರ್ 2023) ಮಾರಾಟ: ಬಜಾಜ್ ಆಟೋದ ದೇಶೀಯ YTD ಮಾರಾಟವು ಈ ವರ್ಷದ ಏಪ್ರಿಲ್ ನಿಂದ ಅಕ್ಟೋಬರ್ ಅವಧಿಯಲ್ಲಿ 13,26,737 ಯುನಿಟ್‌ಗಳ ಮಾರಾಟ ಮೂಲಕ ಶೇ 16 ರಷ್ಟು ಹೆಚ್ಚಾಗಿದೆ. ಅಂದರೆ ಇದು ಈ ಹಿಂದಿನ ವರ್ಷ 2022 ರಲ್ಲಿ 11,41,683 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.
2023 ಅಕ್ಟೋಬರ್ ಪಲ್ಸರ್ ರಫ್ತು: ಪಲ್ಸರ್-ತಯಾರಕರು ಹೊರತಂದಿರುವ ಅಧಿಕೃತ ಮಾಹಿತಿಯ ಪ್ರಕಾರ, ಅದರ ರಫ್ತುಗಳು ಕಳೆದ ತಿಂಗಳು ಶೇ 5% ರಷ್ಟು ಕುಸಿದು 129,658 ಕ್ಕೆ ತಲುಪಿದೆ. ಕಳೆದ ವರ್ಷದ ಇದೇ ತಿಂಗಳಿನಲ್ಲಿ, ಬಜಾಜ್ ಆಟೋ 135,772 ಯುನಿಟ್‌ಗಳನ್ನು ರವಾನಿಸಿತ್ತು. ಬಜಾಜ್ ಆಟೋದ ಒಟ್ಟಾರೆ ಸಂಯೋಜಿತ ದೇಶೀಯ ಮತ್ತು ರಫ್ತು ಮಾರಾಟವು ಕಳೆದ ತಿಂಗಳು 408,144 ಯುನಿಟ್‌ಗಳ ಮಾರಾಟದೊಂದಿಗೆ ಶೇ19 ರಷ್ಟು ಬೆಳೆದಿದೆ.

ಹಿಂದಿನ ವರ್ಷದ ಇದೇ ತಿಂಗಳಲ್ಲಿ 341,903 ಯುನಿಟ್ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು. ಈ ಮೂಲಕ ತಿಂಗಳ ಮಾರಾಟಕ್ಕೆ ಹೋಲಿಸಿದರೆ ವಾರ್ಷಿಕ ಮಾರಾಟದಲ್ಲಿ ಬೆಳವಣಿಗೆ ಕಂಡಿದೆ. ಒಟ್ಟಾರೆ ದೇಶ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಪಲ್ಸರ್ ಮಾದರಿಗಳಿಗೆ ಉತ್ತಮ ಬೇಡಿಕೆಯಿರುವುದು ತಿಳಿದುಬಂದಿದೆ. ಇನ್ನು ಮುಂಬರುವ ದೀಪಾವಳಿಗೂ ಹೆಚ್ಚಿನ ಮಾರಾಟದ ನಿರೀಕ್ಷೆಗಳಿರುವುದಾಗಿ ಕಂಪನಿ ತಿಳಿಸಿದೆ.
ಬಜಾಜ್ ಸಿಎನ್‌ಜಿ ಬೈಕ್ ಬರಲಿದೆ: ಬಜಾಜ್ ತನ್ನ ಗ್ರಾಹಕರಿಗೆ ಅಗ್ಗದ ಪ್ರಯಾಣವನ್ನು ಒದಗಿಸಲು ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್‌ಜಿ) ಮತ್ತು ಎಥೆನಾಲ್ ಇಂಧನ ಚಾಲಿತ ದ್ವಿಚಕ್ರ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಬಗ್ಗೆ ಆಟೋಕಾರ್ ಪ್ರೊಫೆಷನಲ್ ವರದಿ ಮಾಡಿದ್ದು, ಬ್ರೂಜರ್ ಇ101 (Bruzer E101) ಕೋಡ್ ನೇವ್ ಹೊಂದಿರುವ ಸಿಎನ್‌ಜಿ - ಕಮ್ - ಪೆಟ್ರೋಲ್ ಬೈಕ್ ಅಂತಿಮ ಹಂತದಲ್ಲಿ ವಿನ್ಯಾಸಗೊಳ್ಳುತ್ತಿದೆ.

ಮುಂದಿನ 6 ತಿಂಗಳು ಅಥವಾ 1 ವರ್ಷದಲ್ಲಿ ರಸ್ತೆಗಿಳಿಯಬಹುದು. ಈಗಲೇ ಕೆಲವು ಪ್ರಾತ್ಯಕ್ಷಿಕೆ ಮಾದರಿಗಳಲ್ಲಿ ತಯಾರಿಸಲಾಗಿದೆ. ಇದು, 110 ಸಿಸಿ ಬೈಕ್ ಆಗಿದೆ. ಮಹಾರಾಷ್ಟದ ಔರಂಗಾಬಾದ್ ಹಾಗೂ ಉತ್ತರಖಂಡದ ಪಂತ್ ನಗರ ಫ್ಯಾಕ್ಟರಿಯಲ್ಲಿ ನೂತನ ಬೈಕ್ ಉತ್ಪಾದನೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ ಪ್ಲಾಟಿನಾ (Platina) ಎಂದು ಹೆಸರಿಡಬಹುದು ಎನ್ನಲಾಗಿದೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಸಿಎನ್‌ಜಿ ವಾಹನಗಳ ಮೇಲಿನ ವಿಧಿಸುವ ಜಿಎಸ್‌ಟಿಯನ್ನು 18% ಇಳಿಸಲು ಕಂಪನಿ ಕಡೆಯಿಂದ ಮನವಿ ಮಾಡಲಾಗಿದೆ ಎಂದು ಹೇಳಲಾಗಿತ್ತು. ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯ 125 ಸಿಸಿ - 200 ಸಿಸಿ ವಿಭಾಗದಲ್ಲಿ ಬಜಾಜ್ ಶೇಕಡ 30% ಪಾಲನ್ನು ಹೊಂದಿದ್ದು, ಇದು ದೊಡ್ಡ ಆದಾಯದ ಮೂಲವಾಗಿದೆ. ಸಿಎನ್‌ಜಿ ಬೈಕ್ ಬಿಡುಗಡೆಗೊಂಡರೆ ಕಂಪನಿ ಈ ವಿಭಾಗದಲ್ಲಿ ಮತ್ತಷ್ಟು ಬಲಗೊಳ್ಳಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications