Bajaj: ಕಡಿಮೆ ಖರ್ಚಿನ ಬಜಾಜ್ ಸಿಎನ್‌ಜಿ ಬೈಕ್ ಬರಲಿದೆ, ಇದೇ ಅದರ ಹೆಸರು?

ದೇಶದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಬಜಾಜ್ (Bajaj) ಜನಪ್ರಿಯತೆ ಗಳಿಸಿದೆ. ಅದರ ಬೈಕ್ ಹಾಗೂ ಸ್ಕೂಟರ್‌ಗಳು ಆಕರ್ಷಕ ವಿನ್ಯಾಸ, ವೈಶಿಷ್ಟ್ಯದೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವುದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಸುತ್ತಾರೆ.

ಬಜಾಜ್ ಕಂಪನಿ ಚೇತಕ್ (Chetak) ಮೂಲಕ ಕೆಲವೇ ವರ್ಷಗಳ ಹಿಂದೆ, ಎಲೆಕ್ಟ್ರಿಕ್ ಮಾರುಕಟ್ಟೆಯನ್ನು ಅದ್ದೂರಿಯಾಗಿ ಪ್ರವೇಶಿಸಿತ್ತು. ತನ್ನ ಗ್ರಾಹಕರಿಗೆ ಅಗ್ಗದ ಪ್ರಯಾಣವನ್ನು ಒದಗಿಸಲು ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್‌ಜಿ) ಮತ್ತು ಎಥೆನಾಲ್ ಇಂಧನ ಚಾಲಿತ ದ್ವಿಚಕ್ರ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಮುಂಬರುವ ತಿಂಗಳುಗಳಲ್ಲಿ ಕಡಿಮೆ ಬೆಲೆಗೆ ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ.

Bajaj: ಕಡಿಮೆ ಖರ್ಚಿನ ಬಜಾಜ್ ಸಿಎನ್‌ಜಿ ಬೈಕ್ ಬರಲಿದೆ, ಇದೇ ಅದರ ಹೆಸರು?

ಈ ಬಗ್ಗೆ ಆಟೋಕಾರ್ ಪ್ರೊಫೆಷನಲ್ ವರದಿ ಮಾಡಿದ್ದು, ಬ್ರೂಜರ್ ಇ101 (Bruzer E101) ಕೋಡ್ ನೇವ್ ಹೊಂದಿರುವ ಸಿಎನ್‌ಜಿ - ಕಮ್ - ಪೆಟ್ರೋಲ್ ಬೈಕ್ ಅಂತಿಮ ಹಂತದಲ್ಲಿ ವಿನ್ಯಾಸಗೊಳ್ಳುತ್ತಿದೆ. ಮುಂದಿನ 6 ತಿಂಗಳು ಅಥವಾ 1 ವರ್ಷದಲ್ಲಿ ರಸ್ತೆಗಿಳಿಯಬಹುದು. ಈಗಲೇ ಕೆಲವು ಪ್ರಾತ್ಯಕ್ಷಿಕೆ ಮಾದರಿಗಳಲ್ಲಿ ತಯಾರಿಸಲಾಗಿದೆ. ಇದು, 110 ಸಿಸಿ ಬೈಕ್ ಆಗಿದೆ.

ಮಹಾರಾಷ್ಟದ ಔರಂಗಾಬಾದ್ ಹಾಗೂ ಉತ್ತರಖಂಡದ ಪಂತ್ ನಗರ ಫ್ಯಾಕ್ಟರಿಯಲ್ಲಿ ನೂತನ ಬೈಕ್ ಉತ್ಪಾದನೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ ಪ್ಲಾಟಿನಾ (Platina) ಎಂದು ಹೆಸರಿಡಬಹುದು. ಕಳೆದ ತಿಂಗಳೇ ಬಜಾಜ್ ಕಂಪನಿ ಕಡಿಮೆ ಖರ್ಚಿನ ಸಿಎನ್‌ಜಿ ಬೈಕ್ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿದ್ದವು.

ಅದಕ್ಕಾಗಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಸಿಎನ್‌ಜಿ ವಾಹನಗಳ ಮೇಲಿನ ವಿಧಿಸುವ ಜಿಎಸ್‌ಟಿಯನ್ನು 18% ಇಳಿಸಲು ಕಂಪನಿ ಕಡೆಯಿಂದ ಮನವಿ ಮಾಡಲಾಗಿದೆ ಎಂದು ಹೇಳಲಾಗಿತ್ತು. ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯ 125 ಸಿಸಿ - 200 ಸಿಸಿ ವಿಭಾಗದಲ್ಲಿ ಬಜಾಜ್ ಶೇಕಡ 30% ಪಾಲನ್ನು ಹೊಂದಿದ್ದು, ಇದು ದೊಡ್ಡ ಆದಾಯದ ಮೂಲವಾಗಿದೆ. ಸಿಎನ್‌ಜಿ ಬೈಕ್ ಬಿಡುಗಡೆಗೊಂಡರೆ ಕಂಪನಿ ಈ ವಿಭಾಗದಲ್ಲಿ ಮತ್ತಷ್ಟು ಬಲಗೊಳ್ಳಲಿದೆ.

ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಬಜಾಜ್ ಪ್ಲಾಟಿನಾ (Bajaj Platina), ಬೆಂಗಳೂರಿನಲ್ಲಿ ರೂ. 89,792 ಆನ್-ರೋಡ್ ಬೆಲೆಯನ್ನು ಹೊಂದಿದೆ. 102 ಸಿಸಿ ಬಿಎಸ್6 ಎಂಜಿನ್ ಪಡೆದಿದ್ದು, 7.79 bhp ಗರಿಷ್ಠ ಪವರ್ ಹಾಗೂ 8.34 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.

ಈ ಬೈಕ್, 75 kmpl ಮೈಲೇಜ್ ನೀಡಲಿದ್ದು, 11 ಲೀಟರ್ ಸಾಮರ್ಥ್ಯ ಫ್ಯುಯೆಲ್ ಟ್ಯಾಂಕ್ ಒಳಗೊಂಡಿದೆ. 17 - ಇಂಚಿನ ಅಲಾಯ್ ವೀಲ್ಸ್, ಹೊಂದಿದೆ. ಸಸ್ಪೆನ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗ ಟೆಲಿಸ್ಕೋಪಿಕ್ ಪೋರ್ಕ್ಸ್, ಹಿಂಭಾಗ ಡ್ಯುಯಲ್ ಶಾಕ್ ಅಬ್ಸಾರ್ಬರ್‌ ಸೆಟಪ್ ಹೊಂದಿದೆ. ಬ್ರೇಕಿಂಗ್ ವಿಚಾರವಾಗಿ ಮಾತನಾಡುವುದರೆ, ಎರಡು ತುದಿಯಲ್ಲಿ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.

ಇನ್ನು, ಬಜಾಜ್ ಕಡಿಮೆ ಖರ್ಚಿನಲ್ಲಿ ಸಿಎನ್‌ಜಿ ಚಾಲಿತ ಬೈಕ್ ಅಭಿವೃದ್ಧಿಪಡಿಸುತ್ತಿರುವುದು ಕಂಪನಿ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ. ಸಿಎನ್‌ಜಿ ಇಂಧನದ ಬೆಲೆಯೂ ಕಡಿಮೆಯಿದ್ದು, ಹೆಚ್ಚಿನ ಮೈಲೇಜ್ ನೀಡುವುದರಿಂದ ಬಿಡುಗಡೆಯಾದ ಮೇಲೆ ಬಹುತೇಕರು ಇಷ್ಟಪಟ್ಟು ಖರೀದಿಸಬಹುದು. ಅಂದುಕೊಂಡಂತೆ ಎಲ್ಲ ನಡೆದರೆ, ಕೆಲವೇ ದಿನಗಳಲ್ಲಿ ಈ ಬೈಕ್ ಲಾಂಚ್ ಆಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, October 18, 2023, 17:29 [IST]
English summary
Bajaj working on cng bike may be called platina
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+