Suzuki Matsuri: ಬೆಂಗಳೂರಿನಲ್ಲಿ ಸುಜುಕಿ ಮತ್ಸುರಿ ಯಶಸ್ವಿಯಾಗಿ ಮುಕ್ತಾಯ.. ಮೋಟಾರ್‌ಸೈಕಲ್ ಪ್ರಿಯರು ಫುಲ್ ಫಿದಾ!
ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ (Suzuki Motorcycle India), ಸುಜುಕಿ ಮೋಟಾರ್ ಕಾರ್ಪೊರೇಶನ್ (Suzuki Motor Corporation) ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಗ್ರ್ಯಾಂಡ್ ಸುಜುಕಿ ಮತ್ಸುರಿ (Grand Suzuki Matsuri) ಎರಡನೇ ಆವೃತ್ತಿ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಜೆಕೆ ಗ್ರ್ಯಾಂಡ್ ಅರೆನಾ (JK Grand Arena)ದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ 3,300 ಕ್ಕೂ ಹೆಚ್ಚು ಮೋಟಾರ್‌ಸೈಕಲ್ ಉತ್ಸಾಹಿಗಳು ಭಾಗವಹಿಸಿದ್ದರು. ಅದ್ಭುತವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಹಾಜರಿದ್ದರಿದ್ದವರೂ ಹಲವು ವಿಶೇಷತೆಗಳಿಗೆ ಸಾಕ್ಷಿಯಾದರು. ಜೊತೆಗೆ 'ಗ್ರ್ಯಾಂಡ್ ಸುಜುಕಿ ಮತ್ಸುರಿ' ಮೋಟಾರ್‌ಸೈಕಲ್ ಹಬ್ಬವನ್ನು ಮನಸಾರೆ ಆನಂದಿಸುವ ಮೂಲಕ ಸಂಭ್ರಮಿಸಿದರು.

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾದ ಸೇಲ್ಸ್, ಮಾರ್ಕೆಟಿಂಗ್ (Sales, Marketing Suzuki Motorcycle India) ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ (Executive Vice President), ದೇವಶಿಶ್ ಹಂಡಾ (Devashish Handa) ಅವರು ಈ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಸುಜುಕಿ ಮತ್ಸುರಿಗೆ ವ್ಯಕ್ತವಾದ ಬೆಂಬಲವನ್ನು ಕಂಡು ಹರ್ಷ ವ್ಯಕ್ತಪಡಿಸಿದ್ದಾರೆ.
'ಬೆಂಗಳೂರಿನಲ್ಲಿ ಜರುಗಿದ ಸುಜುಕಿ ಮತ್ಸುರಿಗೆ ಮೋಟಾರ್‌ಸೈಕಲ್ ಅಭಿಮಾನಿಗಳ ಪ್ರಚಂಡ ಪ್ರತಿಕ್ರಿಯೆಯನ್ನು ಕಂಡು ಸಂತೋಷವಾಗಿದೆ. 3,300 ಕ್ಕೂ ಹೆಚ್ಚು ಯುವ ಉತ್ಸಾಹಿಗಳು, ಈ ಕಾರ್ಯಕ್ರಮದಲ್ಲಿ ಭಾಗವಾಹಿಸಿರುವುದು ತುಂಬಾ ಖುಷಿ ನೀಡಿದೆ. ಇದು ಕೇವಲ ಕಾರ್ಯಕ್ರಮವಲ್ಲ. ಒಂದು ಆಚರಣೆಯಾಗಿದೆ. ಸಮಾರಂಭದಲ್ಲಿ ಹಾಜರಾಗಿ ಯಶಸ್ವಿಗೊಳಿಸಲು ನೇರವಾದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ' ಎಂದು ದೇವಶಿಶ್ ಹಂಡಾ ಹೇಳಿದ್ದಾರೆ.

ಸುಜುಕಿ ಮತ್ಸುರಿ (Grand Suzuki Matsuri) ಕಾರ್ಯಕ್ರಮದಲ್ಲಿ ಪ್ರೀಮಿಯಂ ಬೈಕ್‌ಗಳಾದ ಹಯಬುಸಾ (Hayabusa) ಮತ್ತು ಗಿಕ್ಸರ್ (Gixxer) ಪೆರೇಡ್ ನೋಡುಗರ ಕಣ್ಮನ ಸೆಳೆದು, ಕ್ಷಣ ಕಾಲ ಅಲ್ಲಿದ್ದವರನ್ನು ಮಂತ್ರಮುಗ್ದಗೊಳಿಸಿತು. ಹಯಬುಸಾ, ಗಿಕ್ಸರ್ ಮೋಟಾರ್‌ಸೈಕಲ್‌ಗಳ ರೈಡ್ ಅವುಗಳ ಶಕ್ತಿ ಸಾಮರ್ಥ್ಯವನ್ನು ಒಮ್ಮೆಲೇ ಅನಾವರಣಗೊಳಿಸಿದವು. ಜೊತೆಗೆ ಎಲ್ಲರ ಮೆಚ್ಚುಗೆಗೂ ಪಾತ್ರವಾದವು.
ಅದ್ದೂರಿಯಾಗಿ ಸಮಾರಂಭದ ಭಾಗವಾಗಿ ಟ್ರ್ಯಾಕ್‌ನಲ್ಲಿ ಹಲವು ಮೋಟಾರ್‌ಸೈಕಲ್ ಉತ್ಸಾಹಿಗಳು, ವಿವಿಧ ಸಾಹಸ ಹಾಗೂ ಕೌಶಲ್ಯಗಳನ್ನು ಪ್ರದರ್ಶನ ಮಾಡಿದರು. ಮನರಂಜನಾ ಕಾರ್ಯಕ್ರಮದಲ್ಲಿ ಪ್ರಖ್ಯಾತ ಡಿಜೆ ವಿಜಯ್ ಕುಮಾರ್ ಯು.ಡಿ ಹಾಜರಿದ್ದ ಎಲ್ಲರನ್ನು ರಂಜಿಸಿದರು. ಸಂಜೆಯ ಸಮಾರಂಭದಲ್ಲಿ ಗಾಯಕ ರಘು ದೀಕ್ಷಿತ್ (Raghu Dixit) ಅವರ ಹಾಡುಗಳನ್ನು ಮೋಟಾರ್‌ಸೈಕಲ್ ಅಭಿಮಾನಿಗಳು ಆನಂದಿಸಿದರು.

ಇನ್ನು, ಬೆಂಗಳೂರಿನಲ್ಲಿ ಆಯೋಜಿಸಿದ್ದ 'ಗ್ರಾಂಡ್ ಸುಜುಕಿ ಮತ್ಸುರಿ' ಕಾರ್ಯಕ್ರಮಕ್ಕೆ ಭಾಗವಹಿಸಿದ್ದರನ್ನು ಕಂಡಾಗ, ನಿಜಕ್ಕೂ ದೇಶದಲ್ಲಿ ಮೋಟಾರ್‌ಸೈಕಲ್ ಉತ್ಸಾಹಿಗಳ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕಗೊಳ್ಳಿತ್ತಿದೆ ಎಂದು ಹೇಳಬಹುದು. ಅದರಲ್ಲೂ 'ಸುಜುಕಿ' ಜಪಾನ್ ದೇಶದ ಕಂಪನಿಯಾದರೂ ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯ ಯುವ ಜನರನ್ನು ತಲುಪುತ್ತಿದೆ ಎನ್ನುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿ ನಿಂತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








