ರಾಯಲ್‌ಎನ್ಫೀಲ್ಡ್‌ 650 ಪಾಳಯದ ವಿಲನ್‌ ಟ್ರಯಂಫ್‌ ಬೈಕ್‌ಗಳ ಬುಕಿಂಗ್‌ ಓಪನ್‌: ಬರೀ 2 ಸಾವಿರ ಅಷ್ಟೇ

ಕೆಲವು ದಿನಗಳ ಹಿಂದೆಯಷ್ಟೇ ಪ್ರಸಿದ್ದ ಎರಡು ದ್ವಿಚಕ್ರ ವಾಹನ ತಯಾರಕರಾದಂತಹ ಬಜಾಜ್‌ ಮತ್ತು ಟ್ರಯಂಫ್‌ ನ ಸಹಯೋಗತ್ವದಲ್ಲಿ ಟ್ರಯಂಫ್‌ನ ಎರಡು ಬೈಕ್‌ಗಳನ್ನು ಲಂಡನ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಅನ್‌ವೀಲ್‌ ಮಾಡಿದ್ದರು. ಭಾರೀ ನಿರೀಕ್ಷೆಯೊಂದಿಗೆ ಅನಾವರಣಗೊಂಡ ಎರಡು ಬೈಕ್‌ಗಳಿಗೆ ಭಾರತದಲ್ಲಿ ಭಾರೀ ಬೇಡಿಕೆ ಬರಲಿದೆ ಎಂದು ಊಹಿಸಲಾಗಿದೆ.

ದಿನಾಂಕ 27 ಜೂನ್‌, 2023 ರಂದು ಅನಾವರಣಗೊಂಡ Speed 400 ಮತ್ತು Scrambler 400X ಬೈಕ್‌ಗಳ ಬುಕಿಂಗ್‌ ಭಾರತದಲ್ಲಿ ಈಗಾಗಲೇ ಆರಂಭವಾಗಿದೆ ಎಂದು ಮಾಹಿತಿಗಳು ತಿಳಿಸಿವೆ. ಇನ್ನು ಟ್ರಯಂಫ್‌ ಈ Speed 400 ಮತ್ತು Scrambler 400X ಬೈಕನ್ನು ಭಾರತದಲ್ಲಿ ಜುಲೈ ತಿಂಗಳ ಐದನೇ ತಾರೀಖಿನಂದು ಲಾಂಚ್‌ ಮಾಡಲಿದ್ದು ಇದಕ್ಕೂ ಮುಂಚಿತವಾಗಿಯೇ ಬುಕಿಂಗ್‌ ಅನ್ನು ಆರಂಭಿಸಿದೆ.

Triumph Speed 400 And Scrambler 400X

ಇನ್ನು ಈ ಎರಡೂ ಬೈಕ್‌ಗಳ ಬೆಲೆಯನ್ನು ಲಾಂಚ್‌ ನ ವೇಳೆ ತಿಳಿಸಲಿದ್ದು, ಬೆಲೆ ತಿಳಿಯಲು ಭಾರತೀಯ ಆಟೋಮೊಬೈಲ್‌ ಮಾರುಕಟ್ಟೆ ಕಾತುರದಿಂದ ಕಾಯುತ್ತಿದೆ ಎಂದರೆ ತಪ್ಪಾಗಲಾರದು. ಇನ್ನು ಈ Speed 400 ಮತ್ತು Scrambler 400X ಬೈಕ್‌ಗಳು ಟ್ರಯಂಫ್‌ ಬೈಕ್‌ಗಳಲ್ಲೇ ಅಗ್ಗದ ಬೆಲೆಯ ಬೈಕ್‌ಗಳಾಗಿದೆ.

ಇನ್ನು Speed 400 ಮತ್ತು Scrambler 400X ಎರಡೂ ಬೈಕ್‌ ಟ್ರಯಂಫ್‌ನ (Triumph) ಭಾರತೀಯ ವೆಬ್‌ಸೈಟ್‌ನಲ್ಲಿ ಈಗಾಗಲೇ ಸೇರಿಸಲಾಗಿದ್ದು ಈ ಎರಡೂ ಬೈಕ್‌ಗಳನ್ನು ಭಾರತೀಯ ಗ್ರಾಹಕರು ರೂ 2000 ರೂಗಳನ್ನು ನೀಡಿ ಪ್ರೀ-ಬುಕ್‌ ಮಾಡಿಕೊಳ್ಳಬಹುದಾಗಿದೆ. ಇನ್ನು ಆ ನಂತರದಲ್ಲಿ ಬುಕಿಂಗ್‌ ಕ್ಯಾನ್ಸಲ್‌ ಮಾಡಿಕೊಳ್ಳುವುದಾದರೆ ಈ 2 ಸಾವಿರ ರೂಗಳು ರೀ ಫಂಡ್‌ ಮಾಡಿಕೊಳ್ಳಬಹುದಾಗಿದೆ.

Triumph Speed 400 And Scrambler 400X

ಸ್ಪೀಡ್‌ 400 ರೋಡ್‌ಸ್ಟರ್‌ ಮತ್ತು ಸ್ಕ್ರಾಂಬ್ಲರ್‌ 400X ಈ ಎರಡೂ ಬೈಕ್‌ಗಳಲ್ಲಿ TR ಸರಣಿಯ ಫ್ಯುಯೆಲ್‌ ಇಂಜೆಕ್ಟೆಡ್ ಲಿಕ್ವಿಡ್‌ ಕೂಲ್ಡ್ ೩೯೮ ಸಿಸಿ‌ ಸಿಂಗಲ್‌ ಸಿಲಿಂಡರ್‌ ‌ಎಂಜಿನ್‌ ಅನ್ನು ಪರಿಚಯಿಸಲಾಗಿದ್ದು, ಈ ಬೈಕ್‌ಗಳು ಈ ಎಂಜಿನ್ ಸಹಾಯದಿಂದ 40 ಪಿಎಸ್‌ ಪವರ್‌ ಮತ್ತು 37.5 ಎನ್‌ಎಮ್‌ ಟಾರ್ಕನ್ನು ಸಹ ಉತ್ಪಾದಿಸಲಿದೆ.

ಇನ್ನು ಮಾರುಕಟ್ಟೆಗೆ ಟ್ರಯಂಫ್‌ ಈ ಎರಡು ಬೈಕ್‌ಗಳನ್ನು ಲಾಂಚ್‌ ಮಾಡುವುದರ ಮೂಲಕ ರಾಯಲ್‌ ಎನ್‌ಫೀಲ್ಡ್‌ ಪಾಳಯದಲ್ಲಿ ಆತಂಕ ಈಗಾಗಲೇ ಶುರುವಾಗಲಿದೆ. ಈಗಾಗಲೇ ರಾಯಲ್‌ ಎನ್‌ಪೀಲ್ಡ್‌ ನ ಟ್ವಿನ್‌ಗಳು ಎಂದೇ ಖ್ಯಾತವಾಗಿರುವ ಕಾಂಟಿನೆಂಟಲ್‌ ಜಿಟಿ 650 ಮತ್ತು ಇಂಟರ್‌ಸೆಪ್ಟರ್ 650 ಬೈಕ್‌ಗಳಿಗೆ ನೇರ ಪ್ರತಿಸ್ಪರ್ಧಿಯಾಗಲಿವೆ.

ಸ್ಪೀಡ್‌ 400 ಬೈಕ್‌ ಕಾರ್ನಿವಲ್‌ ರೆಡ್‌, ಕ್ಯಾಸ್ಪಿಯನ್‌ ಬ್ಲೂ ಮತ್ತು ಫ್ಯಾಂಟಂ ಬ್ಲ್ಯಾಕ್‌ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಾಗಲಿದ್ದು, ಸ್ಕ್ರಾಂಬ್ಲರ್‌ 400X ಬೈಕ್‌ ಮ್ಯಾಟ್‌ ಖಾಕಿ ಗ್ರೀನ್‌ ಮತ್ತು ಫ್ಯೂಷನ್‌ ವೈಟ್‌, ಕಾರ್ನಿವಲ್‌ ರೆಡ್‌ ಮತ್ತು ಫ್ಯಾಂಟಂ ಬ್ಲ್ಯಾಕ್‌ ಹಾಗೂ ಫ್ಯಾಂಟಂ ಬ್ಲ್ಯಾಕ್‌ ಮತ್ತು ಸಿಲ್ವರ್‌ ಐಸ್‌ ಬಣ್ಣದಲ್ಲಿ ಗ್ರಾಹಕರ ಮುಂದೆ ಬರಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, June 29, 2023, 10:23 [IST]
English summary
Bookings open for triumph speed 400 and scrambler 400x in india
Read more on triumph motorcycles
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+