ಹೊಸ ಬೈಕ್ ಖರೀದಿಸುವ ಯೋಚನೆ ಇದೆಯೇ? ಸೆಪ್ಟಂಬರ್‌ನಲ್ಲಿ ಭರ್ಜರಿ ಬುಲೆಟ್ 350 ಆಗಮನ

ಮುಂದಿನ ಪೀಳಿಗೆಯ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಈ ವರ್ಷದ ಬಹು ನಿರೀಕ್ಷಿತ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ. ಈ ಮೋಟಾರ್‌ ಸೈಕಲ್ ಅನ್ನು ಹೊಸ ಅಪ್‌ಡೇಟ್‌ನೊಂದಿಗೆ ಬಿಡಲು ಕಂಪನಿ ಸಜ್ಜಾಗಿದ್ದು, ಈ ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಮೋಟಾರ್‌ಸೈಕಲ್ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

ಮುಂದಿನ ಪೀಳಿಗೆಯ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಮೋಟಾರ್‌ಸೈಕಲ್ ಬಗ್ಗೆ ಹಲವು ಊಹಾಪೋಹಗಳಿವೆ. ಹೊಸ ಮಾದರಿಯು ಗ್ರಾಹಕರ ನಿರೀಕ್ಷೆಗೂ ಮೀರಿ ಇರಲಿದೆ ಎಂದೆಲ್ಲಾ ಊಹಿಸಲಾಗಿದೆ. ಅಂದಹಾಗೆ ಈ ಮುಂಬರುವ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬಗ್ಗೆ ನಮ್ಮ ಕೆಲವು ನಿರೀಕ್ಷೆಗಳು ಮತ್ತು ಮುನ್ನೋಟಗಳು ಇಲ್ಲಿದ್ದು, ಅವನ್ನು ವಿವರವಾಗಿ ನೋಡೋಣ.

bullet-350-entry-september-things-to-know

ಮುಂಬರುವ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಅನ್ನು ರಾಯಲ್ ಎನ್‌ಫೀಲ್ಡ್‌ನ ಜೆ-ಸಿರೀಸ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುವುದು. ಇದು ರಾಯಲ್ ಎನ್‌ಫೀಲ್ಡ್‌ನ ಈಗ ಮಾರಾಟದಲ್ಲಿರುವ ಮಾದರಿಗಳಾದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350, ಮೀಟಿಯೊರ್ 350 ಮತ್ತು ಹಂಟರ್ 350 ಗಳಿಗೆ ಆಧಾರವಾಗಿರುವ ಅದೇ ಪ್ಲಾಟ್‌ಫಾರ್ಮ್ ಆಗಿದೆ. ಇದು ಉತ್ತಮವಾಗಿದ್ದು, ಗ್ರಾಹಕರಿಂದ ಹಂಟರ್‌ಗೆ ಬಂದ ಪ್ರತಿಕ್ರೆಯೆಯನ್ನು ನೋಡಿದ್ರೆ ತಿಳಿಯುತ್ತದೆ.

ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಹೊಸ ಟ್ವಿನ್-ಡೌನ್‌ಟ್ಯೂಬ್ ಫ್ರೇಮ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಈ ಹೊಸ ಫ್ರೇಮ್ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿದೆ. ಇದು ಮೋಟಾರ್‌ಸೈಕಲ್ ಅನ್ನು ಗಮನಾರ್ಹವಾಗಿ ಸುಧಾರಿತ ಹ್ಯಾಂಡ್ಲಿಂಗ್ ಡೈನಾಮಿಕ್ಸ್‌ನೊಂದಿಗೆ ಒದಗಿಸುವ ನಿರೀಕ್ಷೆಯಿದೆ. ಹಾಗಯೇ ಈಗಿರುವ ಮಾದರಿಗಿಂತ ತುಸು ಸುಧಾರಣೆಗೊಂಡು ಬರುವ ಸಾಧ್ಯತೆಗಳಿವೆ.

bullet-350-entry-september-things-to-know

ಇದರ ಹೊರತಾಗಿ, ಮುಂಬರುವ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಕಂಪನಿಯ ಹೊಸ 349cc, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಪೆಟ್ರೋಲ್ ಎಂಜಿನ್‌ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಎಂಜಿನ್ 20.2bhp, 27Nm ಟಾರ್ಕ್ ಉತ್ಪಾದಿಸಲಿದೆ. ಹಾಗೆಯೇ ಎಂಜಿನ್ ಇತ್ತೀಚಿನ BS6 ಹಂತ 2 ಎಮಿಷನ್ ಮಾನದಂಡಗಳನ್ನು ಸಹ ಅನುಸರಿಸುತ್ತದೆ. ಇತ್ತೀಚಿನ OBD2 ಪೋರ್ಟ್‌ನೊಂದಿಗೆ ಇದು ಬರುತ್ತದೆ.

ವಿನ್ಯಾಸದ ವಿಷಯದಲ್ಲಿ, ರಾಯಲ್ ಎನ್‌ಫೀಲ್ಡ್ ಸಾಧ್ಯವಾದಷ್ಟು ಹಳೆಯ ಮಾದರಿಯಂತೆಯೇ ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಏಕೆಂದರೆ ಇದೇ ಡಿಸೈನ್ ಎನ್‌ಫೀಲ್ಡ್ ಗ್ರಾಹಕರ ಮನಗೆದ್ದಿದ್ದು, ಬೇಡಿಕೆಗೂ ಮುಖ್ಯ ಕಾರಣವಾಗಿದೆ. ಇದು ಐಕಾನಿಕ್ ಸಿಂಗಲ್ ಸೀಟ್, ಟ್ಯಾಂಕ್‌ನಲ್ಲಿ ರೆಕ್ಕೆಯ ಬ್ಯಾಡ್ಜ್, ಪೈಲಟ್ ಲ್ಯಾಂಪ್‌ಗಳೊಂದಿಗೆ ರೌಂಡ್ ಹೆಡ್‌ಲ್ಯಾಂಪ್‌ಗಳು, ಇಂಟಿಗ್ರೇಟೆಡ್ ರಿಫ್ಲೆಕ್ಟರ್‌ನೊಂದಿಗೆ ಹಿಂಭಾಗದ ಟೈಲ್‌ಲ್ಯಾಂಪ್ ಸೇರಿದಂತೆ ವಾಹನಕ್ಕೆ ರಾಯಲ್ ಲುಕ್ ನೀಡುತ್ತವೆ.

bullet-350-entry-september-things-to-know

ವೈಶಿಷ್ಟ್ಯಗಳ ವಿಷಯದಲ್ಲಿ, ಮುಂಬರುವ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಮೋಟಾರ್‌ಸೈಕಲ್ ಅನಲಾಗ್ ಜೊತೆಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಬೆಲೆಗೆ ಸಂಬಂಧಿಸಿದಂತೆ, ಮುಂದಿನ ಪೀಳಿಗೆಯ ರಾಯಲ್ ಎನ್‌ಫೀಲ್ಡ್ ಬುಲೆಟ್ 350, ಹಂಟರ್ 350 ಮತ್ತು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮೋಟಾರ್‌ಸೈಕಲ್‌ಗಳ ನಡುವೆ ಇರಲಿದೆ. ಸದ್ಯಕ್ಕಿರುವ ಮಾದರಿಗೆ ಹೋಲಿಸಿದರೆ ಸ್ವಲ್ಪ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ.

ನೀವು ಹಾರ್ಡ್‌ಕೋರ್ ರಾಯಲ್ ಎನ್‌ಫೀಲ್ಡ್ ಅಭಿಮಾನಿಯಾಗಿದ್ದರೆ ಅಥವಾ ಈ ಹಬ್ಬದ ಸೀಸನ್‌ನಲ್ಲಿ ಕ್ಲಾಸಿಕ್ 350 ಅಥವಾ ಬುಲೆಟ್ 350 ಮೋಟಾರ್‌ಸೈಕಲ್ ಖರೀದಿಸಲು ನೋಡುತ್ತಿದ್ದರೆ, ಮುಂದಿನ ಪೀಳಿಗೆಯ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಮೋಟಾರ್‌ಸೈಕಲ್ ನಿಮ್ಮ ಕಾಯುವಿಕೆಗೆ ಉತ್ತಮ ಆಯ್ಕೆ ಎಂದೇ ಹೇಳಬಹುದು. ಆದ್ರೆ ಒಂದೆರಡು ತಿಂಗಳು ಕಾಯಬೇಕಾಗುತ್ತದೆ, ಈ ಹೊಸ ಮೋಟಾರ್‌ ಸೈಕಲ್ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, August 26, 2023, 8:30 [IST]
English summary
Bullet 350 entry september things to know
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+