ಡೆಕಥ್ಲಾನ್ ರಾಕ್‌ರೈಡರ್ ಇ-ಎಸ್‌ಟಿ 100 ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ

ಡೆಕಥ್ಲಾನ್ ಬ್ರಾಂಡ್‌ನ ರಾಕ್‌ರೈಡರ್ ಇ-ಎಸ್‌ಟಿ 100 ಎಲೆಕ್ಟ್ರಿಕ್ ಸೈಕಲ್ ಅನ್ನು ಭಾರತದಲ್ಲಿ ರೂ. 84,999 ಕ್ಕೆ ಬಿಡುಗಡೆ ಮಾಡಲಾಗಿದೆ. ಕಂಪನಿಯು ಈ ಎಲೆಕ್ಟ್ರಿಕ್ ಸೈಕಲ್ ಅನ್ನು ಸಮತಟ್ಟಾದ ಮತ್ತು ಕಡಿದಾದ ಭೂಪ್ರದೇಶಗಳಿಗಾಗಿ ವಿನ್ಯಾಸಗೊಳಿಸಿದ್ದು, 150 ಇ-ಸೈಕಲ್‌ಗಳನ್ನು ಬೆಂಗಳೂರಿನ ಮೂರು ಮಳಿಗೆಗಳಲ್ಲಿ ಪರಿಚಯಿಸುತ್ತಿರುವುದಾಗಿ ತಿಳಿಸಿದೆ.

ಪ್ರಮುಖ ಕ್ರೀಡಾ ಸಾಮಗ್ರಿಗಳ ಬ್ರ್ಯಾಂಡ್ ಡೆಕಥ್ಲಾನ್, ರಾಕ್‌ರೈಡರ್ ಇ ಎಸ್‌ಟಿ 100 ಅನ್ನು ಪರಿಚಯಿಸಿದೆ. ಆರಂಭಿಕವಾಗಿ, ಕಂಪನಿಯು ತನ್ನ ಅಸ್ತಿತ್ವದಲ್ಲಿರುವ ವ್ಯಾಪಕ ಶ್ರೇಣಿಯ 150 ಇ ಸೈಕಲ್‌ಗಳನ್ನು ಬೆಂಗಳೂರಿನ ವೈಟ್‌ ಫೀಲ್ಡ್ ಮತ್ತು ಬನ್ನೇರುಘಟ್ಟ ರಸ್ತೆ ಸೇರಿದಂತೆ ಮೂರು ಮಳಿಗೆಗಳಲ್ಲಿ ಪರಿಚಯಿಸುತ್ತಿದೆ. ಈ ಪೆಡಲ್ ಅಸಿಸ್ಟ್ ಎಲೆಕ್ಟ್ರಿಕ್ ಮೌಂಟೇನ್ ಸೈಕಲ್‌ನೊಂದಿಗೆ, ಗ್ರಾಹಕರು ಸಲೀಸಾಗಿ 25 kmph ವೇಗವನ್ನು ತಲುಪಬಹುದು ಎಂದು ಕಂಪನಿ ಹೇಳಿದೆ.

ಡೆಕಥ್ಲಾನ್ ರಾಕ್‌ರೈಡರ್ ಇ-ಎಸ್‌ಟಿ 100 ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ

Rockrider E-ST100, 250W ಹಿಂಬದಿಯ ಹಬ್ ಮೋಟಾರ್‌ನೊಂದಿಗೆ ಸಜ್ಜುಗೊಂಡಿದೆ. 42 Nm (ನ್ಯೂಟನ್ ಮೀಟರ್) ಟಾರ್ಕ್ ಸವಾರನಿಗೆ ಎತ್ತರ ಪ್ರದೇಶಗಳನ್ನು ಸುಲಭವಾಗಿ ಏರಲು ಸಹಕರಿಸುತ್ತದೆ. ಈ ಎಲೆಕ್ಟ್ರಿಕ್ ಸೈಕಲ್ ಡಿಟ್ಯಾಚೇಬಲ್, ಸ್ಯಾಮ್‌ಸಂಗ್ ಲಿಥಿಯಂ-ಐಯಾನ್ ಸೆಲ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು 10.5 Ah (amp ಗಂಟೆಗಳು) 380 Wh (ವ್ಯಾಟ್ ಗಂಟೆಗಳ) ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಆರು ಗಂಟೆಗಳಲ್ಲಿ ಫುಲ್ ಚಾರ್ಜ್ ಮಾಡಬಹುದು.

ಹಾಗೆಯೇ ಫುಲ್‌ ಚಾರ್ಜ್‌ನಲ್ಲಿ ಸಮತಟ್ಟಾದ ಭೂಪ್ರದೇಶದಲ್ಲಿ ಮೋಡ್ 1 ರಲ್ಲಿ 100 ಕಿ.ಮೀ ಗಳವರೆಗೆ ಪೆಡಲ್ ಅಸಿಸ್ಟ್ ಸಹಾಯ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಅಲ್ಲದೆ, ಸುರಕ್ಷತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು, ಬ್ಯಾಟರಿ ಪ್ಯಾಕ್‌ನಲ್ಲಿ ಬಳಸಲಾದ ಸ್ಯಾಮ್‌ಸಂಗ್ ಸೆಲ್‌ಗಳು BIS ನಿಂದ ಪ್ರಮಾಣೀಕರಿಸಲ್ಪಟ್ಟಿವೆ. ಹೆಚ್ಚುವರಿಯಾಗಿ E-ST100, ಗರಿಷ್ಠ ಪವರ್ ಮತ್ತು ಗರಿಷ್ಠ ಕಟ್-ಆಫ್ ವೇಗಕ್ಕಾಗಿ ARAI ನಿಂದ ಪ್ರಮಾಣೀಕರಿಸಲ್ಪಟ್ಟಿದೆ ಎಂದು ಕಂಪನಿ ತಿಳಿಸಿದೆ.

ಡೆಕಥ್ಲಾನ್ ರಾಕ್‌ರೈಡರ್ ಇ-ಎಸ್‌ಟಿ 100 ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ

ಈ ಮಾದರಿಯು ವಿಭಿನ್ನ ಸವಾರರ ಎತ್ತರಗಳಿಗೆ ಸರಿಹೊಂದುವಂತೆ ಮಧ್ಯಮ ಮತ್ತು ದೊಡ್ಡದಾದ ಎರಡು ಗಾತ್ರಗಳಲ್ಲಿ ಬರುತ್ತದೆ. ತುಂಬಾ ಎತ್ತರವಿರುವವರು ದೊಡ್ಡ ಗಾತ್ರದ ಸೈಕಲ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಒಟ್ಟಾರೆಯಾಗಿ ಇಂಧನ ಚಾಲಿತ ವಾಹನಗಳು ಒಂದೆಡೆ ಪರಿಸರಕ್ಕೆ ಹಾನಿಕಾರಕವಾಗಿದ್ದರೇ, ಈ ಎಲೆಕ್ಟ್ರಿಕ್ ಸೈಕಲ್‌ಗಳು ನಿತ್ಯ ಬಳಕೆಯ ಸಾವಾರಿಗಾಗಿ ಹಾಗೂ ಗ್ರಾಹಕರನ್ನು ಆರೋಗ್ಯಕರವಾಗಿ ಇರುಸುವದರ ಜೊತೆಗೆ ಫಿಟ್ ಆಗಿ ಇರಲು ಸಹಕರಿಸುತ್ತದೆ ಎಂದು ಡೆಕಥ್ಲಾನ್ ತಿಳಿಸಿದೆ.

'ರಾಕ್‌ರೈಡರ್ ಇ-ಎಸ್‌ಟಿ 100' ಕುರಿತು ಮಾತನಾಡಿದ ಡೆಕಥ್ಲಾನ್ ಸ್ಪೋರ್ಟ್ಸ್ ಇಂಡಿಯಾದ ಇ ಸೈಕಲ್ ಪ್ರಾಜೆಕ್ಟ್ ಲೀಡರ್ ಎಬಿನ್ ಮ್ಯಾಥ್ಯೂ, "ನಾವು ಮೊಟ್ಟಮೊದಲ ಬಾರಿಗೆ 'ರಾಕ್‌ರೈಡರ್ ಇ ಎಸ್‌ಟಿ 100' ಎಲೆಕ್ಟ್ರಿಕ್ ಸೈಕಲ್ ಅನ್ನು ಆರಂಭಕವಾಗಿ ಬೆಂಗಳೂರು ನಗರದಲ್ಲಿ ಪ್ರಾರಂಭಿಸುತ್ತಿದ್ದೇವೆ. ಡೆಕಥ್ಲಾನ್‌ನ ಅತ್ಯಂತ ಸಕ್ರಿಯ ಸೈಕ್ಲಿಂಗ್ ಸಮುದಾಯ ವಾರಾಂತ್ಯದ ಬೆಟ್ಟ ಹತ್ತುವವರಿಗೆ ಮತ್ತು ದೈನಂದಿನ ಪ್ರಯಾಣಿಕರಿಗೆ ಉತ್ತಮ ಆಯ್ಕೆ ಆಗುವ ಸಾಮರ್ಥ್ಯವನ್ನು ಹೊಂದಿದೆ ಎಂದರು.

ಈ ಎಲೆಕ್ಟ್ರಿಕ್ ಸೈಕಲ್ ಕಠಿಣತೆ, ಹೊಂದಿಕೊಳ್ಳುವಿಕೆ ಮತ್ತು ಪರಿಸರ ಸ್ನೇಹ ಸಂಯೋಜನೆಯಿಂದಾಗಿ ಬೇಡಿಕೆ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಇತರ ನಗರಗಳಿಗೂ ಇದನ್ನು ತರಲು ನಾವು ಯೋಜಿಸಿದ್ದೇವೆ. ಡೆಕಥ್ಲಾನ್‌ನಲ್ಲಿ ಸುಸ್ಥಿರ ಸಾರಿಗೆಯನ್ನು ಉತ್ತೇಜಿಸಲು ಮತ್ತು ಸಕ್ರಿಯ ಜೀವನಶೈಲಿಯನ್ನು ಪ್ರೋತ್ಸಾಹಿಸಲು ನಾವು ಬದ್ಧರಾಗಿದ್ದೇವೆ. ಇನ್ನೂ ಮುಂದಿನ ದಿನಗಳಲ್ಲಿ ಮುಂಬರುವ ನಮ್ಮ ಉತ್ಪನ್ನಗಳು ಇನ್ನೂ ಹೆಚ್ಚಿನ ತಂತ್ರಜ್ಞಾನ ಆಧಾರಿತ ಸೈಕಲ್‌ಗಳು ಆಗಿರಲಿವೆ ಎಂದು ಅವರು ಹೇಳಿದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Friday, March 24, 2023, 19:51 [IST]
English summary
Decathlon rockrider e st100 ev cycle launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+