ಚಹಾ ತೋಟದ ಉದ್ಯೋಗಿಗಳಿಗೆ ದಿಪಾವಳಿ ದುಬಾರಿ ಉಡುಗೊರೆ... ಈ ಮಾಲೀಕನ ಪಡೆದವರೇ ಪುಣ್ಯವಂತರು!

ಒಮ್ಮೆ ಒಂದು ಕಚೇರಿಯಲ್ಲಿ ಕೆಲಸಕ್ಕೆ ಸೇರಿದ ಬಳಿಕ ಅವರು ನೀಡುವ ಸಂಬಳಕ್ಕೆ ಎರಡು ಪಟ್ಟು ಕೆಲಸ ಮಾಡಿಸಿಕೊಳ್ಳುವವರೆ ಹೆಚ್ಚು. ಅದರಲ್ಲೂ ಕೆಲ ಸಂಸ್ಥೆಗಳು ಹಬ್ಬಗಳಿಗೂ ರಜೆ ನೀಡುವುದಿಲ್ಲ. ಆದ್ರೆ ಇಲ್ಲೊಬ್ಬರು ಮಾಲೀಕ ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ರಾಯಲ್ ಎನ್‌ಫೀಲ್ಡ್ ಬೈಕ್ ನೀಡಿದ್ದು, ನೌಕರರು ಸಂತಸದಲ್ಲಿ ಮುಳುಗಿದ್ದಾರೆ.

ಇತ್ತೀಚೆಗೆ ದಸರಾ ಹಬ್ಬಕ್ಕೆ ನಿಮ್ಮಲ್ಲಿ ಹಲವರಿಗೆ ಸಿಹಿ ಮತ್ತು ಮಸಾಲೆಯುಕ್ತ ತಿನಿಸಿ, ಹೊಸ ಬಟ್ಟೆಗಳನ್ನು ನೀಡಿರಬಹುದು ಅಲ್ಲವೇ? ಇವೆಲ್ಲಾ ಕೇವಲ ಹೆಸರಿಗೆ ಮಾತ್ರ. ಯಾವುದೇ ಕಂಪನಿಯಾಗಲಿ ಅವುಗಳ ಲಾಭವನ್ನು ಮಾತ್ರ ನೋಡುತ್ತವೆ. ಕುಟುಂಬಕ್ಕಿಂತ ದುಡಿಮೆ ಮುಖ್ಯ ಎಂದು ಹೇಳಿ ತಮ್ಮ ಉದ್ಯೋಗಿಗಳನ್ನು ಕತ್ತೆಗಳಂತೆ ದುಡಿಸಿಕೊಳ್ಳುತ್ತವೆ.

diwali-gift-royal-enfield-bullet-bikes-employees

ಇಂದಿನ ಕಾಲದಲ್ಲಿ ಉದ್ಯೋಗಿಗಳನ್ನು ಕುಟುಂಬಸ್ಥರಂತೆ ನೋಡಿಕೊಳ್ಳುವವರು ತೀರಾ ಕಡಿಮೆ. ಅದರಲ್ಲೂ ಲಕ್ಷಾಂತರ ರೂ. ಬೆಲೆ ಬಾಳುವ ಬೈಕ್‌ಗಳನ್ನು ಉಡುಗೊರೆಯಾಗಿ ನೀಡ್ತಾರೆ ಅಂದ್ರೆ ಆ ಮಾಲೀಕನ ಹೃದಯ ತುಂಬಾ ದೊಡ್ಡದು ಅಲ್ಲವೇ? ಹೌದು... ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕಿಲ್ಗೋತಗಿರಿ ಪ್ರದೇಶದ ಚಹಾ ತೋಟಗಳಲ್ಲಿನ ಉದ್ಯೋಗಿಗಳಿಗೆ 27 ಲಕ್ಷ ರೂ. ವ್ಯಯಿಸಿ ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಉಡುಗೊರೆ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಈ ಮಾಲೀಕ ಪ್ರತಿ ವರ್ಷ ದೀಪಾವಳಿಗೆ ತನ್ನ ನೌಕರರ ಮುಖದಲ್ಲಿ ಆನಂದವನ್ನು ಕಾಣಲು ಏನೋ ಒಂದು ಗಿಫ್ಟ್ ನೀಡುತ್ತಾರೆಂತೆ. ಅದರಂತೆ ಈ ಹಿಂದಿನ ವರ್ಷಗಳಲ್ಲಿ ಟಿವಿ, ವಾಷಿಂಗ್ ಮೆಷಿನ್, ಫ್ರಿಡ್ಜ್ ಮುಂತಾದವುಗಳನ್ನು ನೀಡುತ್ತಿದ್ದರು ಎನ್ನಲಾಗಿದೆ. ಆದರೆ ಈ ಬಾರಿ ದುಬಾರಿ ರಾಯಲ್ ಎನ್‌ಫೀಲ್ಡ್ ಗಿಫ್ಟ್ ನೀಡುವುದಾಗಿ ಯಾರೂ ಊಹಿಸಿರಲಿಲ್ಲವಂತೆ. ಆದ್ರೆ ಒಮ್ಮೆಲೆ ಬೈಕ್‌ಗಳನ್ನು ಕಂಡು ಅಚ್ಚರಿಗೊಂಡಿದ್ದಾರೆ.

diwali-gift-royal-enfield-bullet-bikes-employees

ಆದ್ರೂ ಉದ್ಯೋಗಿಗಳಿಗೆ ನಂಬಿಕೆಯಿರಲಿಲ್ಲ ಎಲ್ಲರ ಬಳಿ ಮಾತುಕತೆ ನಡೆಸಿ ಬೈಕ್ ಕೀ ನೀಡಿದ ಬಳಿಕವಷ್ಟೆ ಎಲ್ಲರೂ ನಂಬಿದ್ದಾರೆ. ಮಾಲೀಕ ಕೂಡ ರಾಯಲ್ ಎನ್ ಫೀಲ್ಡ್ ಬೈಕ್ ನಲ್ಲಿ ಜಾಲಿ ರೈಡ್ ಹೋಗಿದ್ದರು. ಪ್ರತಿ ವರ್ಷ ಕಂಪನಿಯವರು ತಮ್ಮ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಈ ರೀತಿ ಉಡುಗೊರೆ ನೀಡುವುದು ಸಾಮಾನ್ಯವಾಗಿದ್ದು, ಮುಂದಿನ ವರ್ಷ ಕಾರು ನೀಡಿದ್ರೂ ಆಶ್ಚರ್ಯವಿಲ್ಲ.

ತಮ್ಮ ಮಾಲೀಕ ಇತರ ಕಂಪನಿಗಳ ಮಾಲೀಕರಂತಲ್ಲ ಅವರದ್ದೇ ಕುಟುಂಬ ಸದಸ್ಯರಂತೆ ನಮ್ಮನ್ನು ಭಾವಿಸುತ್ತಾರೆ. ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಾರೆ, ನಮಗೆ ಇಲ್ಲಿಯವರೆಗೆ ಯಾವುದೇ ಸಮಸ್ಯೆಗಳಿಲ್ಲದೆ ನಮ್ಮಲ್ಲರ ಜವಾಬ್ದಾರಿ ವಹಿಸಿದ್ದಾರೆ. ನಾವು ಕೂಡ ನಮ್ಮ ಕಂಪನಿಯನ್ನು ಕುಟುಂಬದಂತೆ ಭಾವಿಸಿ ಎಲ್ಲಾ ಕೆಲಸಗಳನ್ನು ಮಾಡಿದ್ದೇವೆ. ಸಂಸ್ಥೆ ಕಷ್ಟದಲ್ಲಿದ್ದರೇ ಹಗಲಿರುಳು ಕೆಲಸ ಮಾಡಿ ನಮ್ಮ ಮಾಲೀಕರಿಗೆ ಬೆನ್ನೆಲುಬಾಗಿ ನಿಂತಿದ್ದೇವೆ ಎಂದು ಅಲ್ಲಿನ ಉದ್ಯೋಗಿಗಳು ಹೇಳಿದ್ದಾರೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಕೊಡುವ ಸಂಬಳಕ್ಕೆ ದುಪ್ಪಟ್ಟು ಕೆಲಸ ಮಾಡಿಸಿಕೊಳ್ಳುವ ಕಂಪನಿಗಳು, ಕುಟುಂಬಕ್ಕಿಂತ ಕಂಪನಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ವರ್ತಿಸುತ್ತವೆ. ಇಂತಹ ಕಂಪನಿಗಳ ನಡುವೆ ತಮಿಳುನಾಡಿನ ಈ ಮಾಲೀಕ ಆಣಿಮುತ್ಯದಂತೆ ತಮ್ಮ ಉದ್ಯೋಗಿಗಳಿಗೆ ಸಿಕ್ಕಿದ್ದಾರೆ. ಎಲ್ಲಾ ಸಂಸ್ಥೆಗಳ ಉದ್ಯೋಗಿಗಳು ಇಂತಹ ಮಾಲೀಕರನ್ನು ಪಡೆದರೆ ಕಷ್ಟಗಳೇ ಇರುವುದಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, November 2, 2023, 12:49 [IST]
English summary
Diwali gift royal enfield bullet bikes employees
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+