ಕರ್ನಾಟಕ ಮೂಲದ ಎಲೆಕ್ಟ್ರಿಕ್ ಬೈಕ್ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣ

EICMA (ಅಂತರಾಷ್ಟ್ರೀಯ ಮೋಟಾರ್ ಸೈಕಲ್ ಮತ್ತು ಪರಿಕರಗಳ ಪ್ರದರ್ಶನ) 2023 ರಲ್ಲಿ, Ultraviolette ತನ್ನ F77 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಯುರೋಪಿಯನ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಪರಿಚಯಿಸಿತು. ಇದರ ಜೊತೆಗೆ ಕಂಪನಿಯು ಬಹುನಿರೀಕ್ಷಿತ F99 ಫ್ಯಾಕ್ಟರಿ ರೇಸಿಂಗ್ ಪ್ಲಾಟ್‌ಫಾರ್ಮ್ ಅನ್ನು ಸಹ ಅನಾವರಣಗೊಳಿಸಿದೆ.

ಯುರೋಪ್‌ನಲ್ಲಿ ಬೆಲೆ: Ultraviolette F77 ಯುರೋಪ್‌ನಲ್ಲಿ 9,000 ದಿಂದ 11,000 ಯುರೋಗಳ ನಡುವೆ ಬೆಲೆ ನಿಗದಿಪಡಿಸಲಾಗಿದೆ. ಅಂತಿಮ ಬೆಲೆಯು ಸರ್ಕಾರದ ಪ್ರೋತ್ಸಾಹ ಮತ್ತು ತೆರಿಗೆಗಳ ಪ್ರಕಾರ ಬದಲಾಗುತ್ತದೆ. ಅಲ್ಟ್ರಾವೈಲೆಟ್ ಯರೋಪಿಯನ್ ಮಾರುಕಟ್ಟೆಗಾಗಿ ನವೆಂಬರ್ 15, 2023 ರಿಂದ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕಿಂಗ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸುವುದಾಗಿ ಹೇಳಿಕೊಂಡಿದೆ.

eicma-2023-ultraviolette-f99-global-premiere-debut

ಕಂಪನಿಯ ಸಹ-ಸಂಸ್ಥಾಪಕ ಮತ್ತು CEO ನಾರಾಯಣ ಸುಬ್ರಮಣ್ಯಂ ಮಾತನಾಡಿ, "ನಾವು 190 ದೇಶಗಳ ಉತ್ಸಾಹಿಗಳಿಂದ ಅಗಾಧವಾದ ಪ್ರತಿಕ್ರಿಯೆಯನ್ನು ಸ್ವೀಕರಿಸಿದ್ದೇವೆ. ಅವರೆಲ್ಲಾ Ultraviolet F77 ಗೆ ತೀವ್ರ ಆಸಕ್ತಿಯನ್ನು ತೋರಿದ್ದಾರೆ. ಇದು ಯುರೋಪಿಯನ್ ಮಾರುಕಟ್ಟೆಯನ್ನು ಪ್ರವೇಶಿಸುವ ನಮ್ಮ ದೃಢತೆಯನ್ನು ಶಕ್ತಿಯುತಗೊಳಿಸಿದೆ. ಇದು ಕೇವಲ ಪ್ರಾರಂಭವಷ್ಟೆ ನಮ್ಮ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲನ್ನು ಶೀಘ್ರದಲ್ಲೇ ತಲುಪಲಿದ್ದೇವೆ ಎಂದರು.

ಅಂತರಾಷ್ಟ್ರೀಯ ಮಾದರಿ: ಯುರೋಪ್‌ನಲ್ಲಿ, ಅಲ್ಟ್ರಾವೈಲಟ್ F77 ವಿತರಣೆಗಳು 2024 ರ ಎರಡನೇ ತ್ರೈಮಾಸಿಕದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಎಲೆಕ್ಟ್ರಿಕ್ ಪವರ್‌ಫುಲ್ ಬೈಕ್ ದೊಡ್ಡ 10.3kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, 40bhp ಗರಿಷ್ಠ ಪವರ್ ಮತ್ತು 100Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

eicma-2023-ultraviolette-f99-global-premiere-debut

ಅಲ್ಟ್ರಾವೈಲಟ್ F77 ಗ್ಲೈಡ್, ಕಾಂಬ್ಯಾಟ್ ಮತ್ತು ಬ್ಯಾಲಿಸ್ಟಿಕ್ ಎಂಬ ಮೂರು ವಿಭಿನ್ನ ರೈಡ್ ಮೋಡ್‌ಗಳನ್ನು ಸಹ ಹೊಂದಿದ್ದು, ಕಂಪನಿಯ ಪ್ರಕಾರ ಈ ರೈಡ್ ಮೋಡ್‌ಗಳು ಬಳಕೆದಾರನಿಗಾಗಿ ಅತ್ಯುತ್ತಮ ಟ್ಯೂನ್ ಮಾಡಿದ, ಸಮತೋಲಿತ ಮತ್ತು ಆಹ್ಲಾದಕರ ಸವಾರಿ ಅನುಭವವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಅಲ್ಟ್ರಾವೈಲಟ್ F99 ಫ್ಯಾಕ್ಟರಿ ರೇಸಿಂಗ್: ಅಲ್ಟ್ರಾವೈಲಟ್ F99 ಫ್ಯಾಕ್ಟರಿ ರೇಸಿಂಗ್ ಪ್ಲಾಟ್‌ಫಾರ್ಮ್‌ನ ವಿಶ್ವ ಪ್ರಥಮ ಪ್ರದರ್ಶನದೊಂದಿಗೆ ಇಂಟರ್ನ್ಯಾಷನಲ್-ಸ್ಪೆಕ್ F77 ಅನ್ನು ಮೀರಿ ವಿಸ್ತರಿಸಲು ಯೋಜಿಸುತ್ತಿದೆ. ಕಂಪನಿ ಪ್ರಕಾರ, ಈ ಅಲ್ಟ್ರಾವೈಲಟ್ F99 EICMA 2023 ನಲ್ಲಿ ಭಾರಿ ಆಸಕ್ತಿಯನ್ನು ಪಡೆಯಿತು. F99 ನ ಅತ್ಯಂತ ವಿಶಿಷ್ಟ ಲಕ್ಷಣವೆಂದರೆ ಅದರ ಸಕ್ರಿಯ ಏರೋಡೈನಮಿಕ್, ಸೂಪರ್‌ಸಾನಿಕ್ ಫೈಟರ್ ಜೆಟ್‌ಗಳಿಂದ ಅಳವಡಿಸಿಕೊಂಡ ತತ್ವಗಳಾಗಿವೆ.

eicma-2023-ultraviolette-f99-global-premiere-debut

F99 ತನ್ನ ಸಕ್ರಿಯ ಏರೋಡೈನಮಿಕ್ ನಿರ್ಮಾಣದಲ್ಲಿ ಕಾರ್ಬನ್ ಫೈಬರ್ ಅನ್ನು ಸಹ ಸಂಯೋಜಿಸುತ್ತದೆ. ಈ ಮಾದರಿಯು ಎರಡು ಮುಂಭಾಗದ ಕೌಲ್ ಡಕ್ಟ್‌ಗಳನ್ನು ಮೋಟರ್‌ಗೆ ಚಾನೆಲ್ ಮಾಡಲು ಗಾಳಿಯನ್ನು ಸಂಕುಚಿತಗೊಳಿಸುತ್ತದೆ (Compresses air) ಮತ್ತು ಗಾಳಿಯ ವಿಂಡ್‌ಶೀಲ್ಡ್ ಆಗಿ ಕಾರ್ಯನಿರ್ವಹಿಸಲು ವ್ಯಾನ್‌ಗಳ ಮೂಲಕ ಬಿಡುಗಡೆ ಮಾಡುತ್ತದೆ.

ಅಲ್ಲದೆ, ಏರೋಡೈನಮಿಕ್ ದಕ್ಷತೆಯನ್ನು ಸುಧಾರಿಸಿರುವ ಪರಿಣಾಮವಾಗಿ 265km/h ಗರಿಷ್ಠ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. F99 ನಲ್ಲಿನ ಹೊಸ ಲಿಕ್ವಿಡ್-ಕೂಲ್ಡ್ ಎಲೆಕ್ಟ್ರಿಕ್ ಮೋಟಾರ್ 120bhp ಯ ಗರಿಷ್ಠ ಪವರ್ ಉತ್ಪಾದನೆಯನ್ನು ಉತ್ಪಾದಿಸುತ್ತದೆ. ಈ ಮಾದರಿಯು ಕೇವಲ 3 ಸೆಕೆಂಡುಗಳಲ್ಲಿ 0 ರಿಂದ 100km/h ವರೆಗೆ ವೇಗವನ್ನು ತಲುಪುತ್ತದೆ.

eicma-2023-ultraviolette-f99-global-premiere-debut

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, November 9, 2023, 12:06 [IST]
English summary
Eicma 2023 ultraviolette f99 global premiere debut
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+