ಮಂಗಳೂರಿನಲ್ಲಿ ಹೊಸ EV ಶೋ ರೂಂ ತೆರೆದ ಭಾರತೀಯ ಬ್ರಾಂಡ್ EVeium
ಪ್ರೀಮಿಯಂ EVಗಳ ಭಾರತೀಯ ಬ್ರಾಂಡ್ ಆದ EVeium ಸ್ಮಾರ್ಟ್ ಮೊಬಿಲಿಟಿ ತನ್ನ ಹೊಸ EV ಡೀಲರ್‌ಶಿಪ್ ಶೋರೂಂ ಅನ್ನು ಇಂದು (ಮಾರ್ಚ್ 16) ಮಂಗಳೂರಿನಲ್ಲಿ ಪ್ರಾರಂಭಿಸಿದೆ. ಶೋರೂಂ EVeium ಬ್ರ್ಯಾಂಡ್‌ನ ವ್ಯಾಪಕ ಶ್ರೇಣಿಯ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪ್ರದರ್ಶಿಸುವ ಅನುಭವ ಕೇಂದ್ರವಾಗಿದೆ ಎಂದು ಕಂಪನಿ ತಿಳಿಸಿದೆ.
ಹೊಸ EV ಶೋರೂಂ ವೆಸ್ಟ್ ಎಂಡ್ ಆಟೋಮೋಟಿವ್ಸ್ ಎಂಬ ಡೀಲರ್‌ಶಿಪ್ ಹೆಸರಿನಲ್ಲಿ ಕಾರ್ಯನಿರ್ವಹಿಸಲಿದೆ. ಶೋರೂಂ ಹಾಗೂ ಅನುಭವ ಕೇಂದ್ರವಾಗಿರುವ ಹೊಸ ಡೀಲರ್‌ಶಿಪ್ ಅನ್ನು ಪಂಪ್ ವೆಲ್‌ನ ಗೋಲ್ಡ್ ಪ್ಯಾಲೇಸ್ ಓನಿಕ್ಸ್ ಬಳಿ ತೆರಯಲಾಗಿದೆ. ಶೋರೂಂ ಉದ್ಘಾಟನೆಯನ್ನು ಶಾಸಕ ಯು.ಟಿ. ಖಾದರ್ ನೆರವೇರಿಸಿದರು. ಈ ವೇಳೆ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜಯಾನಂದ್ ಅಂಚನ್, ಮಂಗಳೂರಿನ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್ ಅಹ್ಮದ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ಶೋರೂಂ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ EVeium ಸ್ಮಾರ್ಟ್ ಮೊಬಿಲಿಟಿ ಸಹ ಸಂಸ್ಥಾಪಕ ಸಮೀರ್ ಮೊಯ್ದಿನ್, ಉತ್ತಮ ಅನುಭವವನ್ನು ಒದಗಿಸುವ ಮತ್ತು ಸಾಮಾನ್ಯರು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಸಹಾಯ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಮಂಗಳೂರಿನಲ್ಲಿ ನಮ್ಮ ಹೊಸ ಡೀಲರ್‌ಶಿಪ್ ಶೋರೂಂ ಅನಾವರಣಗೊಳಿಸಲು ನಾವು ಉತ್ಸುಕರಾಗಿದ್ದೇವೆ. ಎಲ್ಲಾ ಅಗತ್ಯ ಪರಿಕರಗಳು ಮತ್ತು ಯಂತ್ರೋಪಕರಣಗಳೊಂದಿಗೆ ಅತ್ಯುತ್ತಮ ದರ್ಜೆಯ ಶೋರೂಂ ಸ್ಥಾಪಿಸಿದ್ದೇವೆ. ಹಾಗೆಯೇ ನಮ್ಮ ಹೊಸ ವಾಹನಗಳು ಆಧುನಿಕ ತಂತ್ರಜ್ಞಾನ ಹೊಂದಿವೆ ಎಂದರು.
ನಮ್ಮ ಮೌಲ್ಯಯುತ ಗ್ರಾಹಕರಿಗೆ ನಾವು ಉನ್ನತ ದರ್ಜೆಯ ಮಾರಾಟದ ನಂತರದ ಸೇವಾ ಅನುಭವಗಳನ್ನು ಖಾತರಿಪಡಿಸುತ್ತಿದ್ದೇವೆ. ಇದಲ್ಲದೆ, ನಮ್ಮ ಹಿತೈಷಿಗಳಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯುವುದು ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ. ಹಾಗೆಯೇ ನಾವು ಹೆಚ್ಚಿನ ಶೋರೂಂಗಳು ಮತ್ತು ಉತ್ಪನ್ನಗಳೊಂದಿಗೆ ಮುಂದಿನ ದಿನಗಳಲ್ಲಿ ನಮ್ಮ ಉಪಸ್ಥಿತಿಯನ್ನು ವಿಸ್ತರಿಸಲು ಯೋಜಿಸಿದ್ದೇವೆ. ಈ EV ಶೋರೂಂ ಪ್ರತಿ ಮಂಗಳೂರಿನ ಮನೆಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುವಲ್ಲಿ ಒಂದು ಗೇಮ್ ಚೇಂಜರ್ ಆಗಲಿದೆ ಎಂದರು.

ವೆಸ್ಟ್ ಎಂಡ್ ಆಟೋಮೋಟಿವ್ಸ್‌ನ ಡೀಲರ್‌ಶಿಪ್ ಅಡಿಯಲ್ಲಿ ಶೋರೂಂ, ಬ್ರ್ಯಾಂಡ್‌ನಿಂದ 3 ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಒಳಗೊಂಡಿದೆ. ಅವುಗಳನ್ನು ನೋಡುವುದಾದರೆ ಮೊದಲನೆಯದು 'ಕಾಸ್ಮೊ' ಇದರ ಟಾಪ್ ಸ್ಪೀಡ್ 65 Kmph ಇದ್ದು, ಒಂದೇ ಚಾರ್ಜ್‌ನಲ್ಲಿ 80 ಕಿಮೀ ರೇಂಜ್ ನೀಡುತ್ತದೆ. ಇದರ ಬೆಲೆಯನ್ನು ರೂ. 1,39,200 ಕ್ಕೆ ನಿಗಧಿ ಪಡಿಸಲಾಗಿದೆ. ಎರಡನೇಯದು 'ಕಾಮೆಟ್' ಇದರ ಟಾಪ್ ಸ್ಪೀಡ್ 85 Kmph ಇದ್ದು, ಒಂದೇ ಚಾರ್ಜ್‌ನಲ್ಲಿ 150 ಕಿ.ಮೀ ಮೈಲೇಜ್ ನೀಡುತ್ತದೆ. ಇದರ ಬೆಲೆಯು ರೂ. 1,84,900 ಇದೆ.
ಕೊನೆಯದಾ "Czar" ಇದು ವೇಗದ ಮಾದರಿಯಾಗಿದ್ದು, 85 Kmph ವೇಗವನ್ನು ಹೊಂದಿಂದೆ. ಒಂದೇ ಚಾರ್ಜ್‌ನಲ್ಲಿ 150 ಕಿ.ಮೀ ರೇಂಜ್ ಹಿಂದಿರುಗಿಸುತ್ತದೆ. ಇದರ ಬೆಲೆಯು ರೂ. 2,07,700 ಇದೆ. ಎಲ್ಲಾ ಬೆಲೆಗಳು, ಎಕ್ಸ್ ಶೋರೂಂ ಆಗುವೆ. ಹೊಸ ಶೋರೂಂ, ಗ್ರಾಹಕರಿಗೆ EV ಖರೀದಿಯ ಅನುಭವವನ್ನು ಒದಗಿಸುವುದಲ್ಲದೆ, EV ಅಳವಡಿಕೆಯ ಬಗ್ಗೆ ಜಾಗೃತಿ ಮೂಡಿಸಲು ವೇದಿಕೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಎಲ್ಲಾ EVeium ಕ್ಲೈಂಟ್‌ಗಳ EV-ಸಂಬಂಧಿತ ಅವಶ್ಯಕತೆಗಳಿಗಾಗಿ ಶೋರೂಂ ಒಂದು-ನಿಲುಗಡೆ ಅಂಗಡಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದರು.

EVeium ಸ್ಮಾರ್ಟ್ ಮೊಬಿಲಿಟಿ ಎಂಬುದು Ellysium ಆಟೋಮೋಟಿವ್ಸ್ ಅಡಿಯಲ್ಲಿ ಎಲೆಕ್ಟ್ರಿಕ್ 2-ವೀಲರ್ EV ಬ್ರ್ಯಾಂಡ್ ಆಗಿದೆ. EVeium ಸ್ಮಾರ್ಟ್ ಮೊಬಿಲಿಟಿಯಲ್ಲಿ ಶುದ್ಧ ಪವರ್ ಮತ್ತು ಸುಸ್ಥಿರ ಪರಿಸರ ವ್ಯವಸ್ಥೆಯನ್ನು ರಚಿಸುವುದು ಮತ್ತು ಭವಿಷ್ಯದ ಮತ್ತು ಸುರಕ್ಷಿತ ವಿದ್ಯುತ್ ಪ್ರಯಾಣದ ಮಾರ್ಗವನ್ನು ಸುಲಭವಾಗಿ ಅಳವಡಿಸಿಕೊಳ್ಳುವುದು ಮೂಲ ಉದ್ದೇಶವಾಗಿದೆ. EVEIUM ಅತ್ಯುತ್ತಮ ಮತ್ತು ಸ್ಮಾರ್ಟ್ ಬ್ಯಾಟರಿ, ಬಾಳಿಕೆ ನೀಡುವ ವಸ್ತುಗಳ ಆಯ್ಕೆಯಿಂದ ಪ್ರದರ್ಶಿಸಲ್ಪಟ್ಟಿದ್ದು, ಸಮರ್ಥನೀಯವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








