ಭಾರತದ ಆಟೋಮೊಬೈಲ್ ಇತಿಹಾಸದಲ್ಲೇ ಫ್ಲಾಪ್ ಬೈಕ್‌ಗಳಿವು: ಹೀರೋದಿಂದ ಸುಜುಕಿವರೆಗೆ...

ದೇಶದ ವಾಹನ ಮಾರುಕಟ್ಟೆಯಲ್ಲಿ ಪ್ರತಿದಿನ ಒಂದಿಲ್ಲೊಂದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯದ ದ್ವಿಚಕ್ರ ವಾಹನಗಳು ಬಿಡುಗಡೆಯಾಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಭರ್ಜರಿಯಾಗಿ ಮಾರಾಟವಾದರೆ, ಮತ್ತೆ ಕೆಲವು ಗ್ರಾಹಕರನ್ನು ಸೆಳೆಯಲು ವಿಫಲವಾಗುತ್ತವೆ. ಹಲವು ಬಾರಿ ಪ್ರಸಿದ್ಧ ಕಂಪನಿ ಬೈಕ್‌ಗಳೇ ಫ್ಲಾಪ್ ಆಗಿಬಿಟ್ಟಿವೆ. ಅವುಗಳ ಬಗ್ಗೆ ತಿಳಿಯೋಣ.

ಹೀರೋ ಇಂಪಲ್ಸ್:
ಸದ್ಯ, ಭಾರತದಲ್ಲಿ ಹೀರೋ ಮೋಟೋಕಾರ್ಪ್ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ನಿಮಗೆ ಗೊತ್ತಿರಲಿ.. ಜೂನ್ 2017ರಲ್ಲಿ ಹೀರೋ ಇಂಪಲ್ಸ್ ಬೈಕ್ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಿತು. ಇದೊಂದು ಆಫ್-ರೋಡ್ ಬೈಕ್ ಆಗಿದ್ದು, ರೂ.71,400. ಬೆಲೆಯಲ್ಲಿ ಖರೀದಿಗೆ ಲಭ್ಯವಿತ್ತು. ಅಲ್ಲದೆ, 149.2 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದ ಈ ಬೈಕ್ ಗರಿಷ್ಠ 69.8Kmpl ಮೈಲೇಜ್ ನೀಡುತ್ತಿತ್ತು. ಆದರೂ, ಭಾರತದ ಯುವ ಗ್ರಾಹಕರನ್ನು ತನ್ನತ್ತ ಆಕರ್ಷಿಸುವಲ್ಲಿ ವಿಫಲವಾಯಿತು. ಇದಕ್ಕೆ ಕಾರಣ, ಆಗಿನ ಕಾಲಕ್ಕೆ ಆಫ್-ರೋಡ್ ರೈಡ್ ಟ್ರೆಂಡ್ ಆಗಿರಲಿಲ್ಲ.

ಭಾರತದ ಆಟೋಮೊಬೈಲ್ ಇತಿಹಾಸದಲ್ಲಿ ಫ್ಲಾಪ್ ಬೈಕ್‌ಗಳಿವು: ಹೀರೋದಿಂದ ಸುಜುಕಿವರೆಗೆ...

ಸುಜುಕಿ ಇನಾಜುಮಾ 250:
ಜಪಾನ್ ಪ್ರಮುಖ ವಾಹನ ತಯಾರಕ ಕಂಪನಿ ಸುಜುಕಿ, ಸ್ಪೋರ್ಟ್ಸ್ ಬೈಕ್‌ಗಳನ್ನು ತಯಾರಿಸುವ ಮೂಲಕ ಖ್ಯಾತಿಗಳಿಸಿದೆ. ಆದರೆ, ಕಂಪನಿಯ ಪ್ರಯಾಣಿಕ ಬೈಕ್‌ಗಳು ಕೂಡ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿರುತ್ತವೆ. ಸುಜುಕಿ, ಸರಿ ಸುಮಾರು ಒಂದು ದಶಕದ ಹಿಂದೆ ಭಾರತದ ಮಾರುಕಟ್ಟೆಯಲ್ಲಿ ಇನಾಜುಮಾ 250 ಎಂಬ ಹೆಸರಿನ ಬೈಕ್‌ನ್ನು ಲಾಂಚ್ ಮಾಡಿತ್ತು ಇದು ಲಿಕ್ವಿಡ್ ಕೂಲ್ಡ್ ಪ್ಯಾರಲಲ್ ಟ್ವಿನ್ ಎಂಜಿನ್‌, 26 bhp ಪವರ್ ಹಾಗೂ 24.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯದೊಂದಿಗೆ 6-ಸ್ವೀಡ್ ಟ್ರಾನ್ಸ್ಮಿಷನ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿತ್ತು.

ಸುಜುಕಿ ಬಹುನಿರೀಕ್ಷೆಯಿಂದ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ ಈ ಬೈಕ್, ಖರೀದಿದಾರರನ್ನು ಸೆಳೆಯುವಲ್ಲಿ ವಿಫಲವಾಯಿತು. ಇದೊಂದು ಮಿಡ್-ರೇಂಜ್ ಬೈಕ್ ಆಗಿದ್ದರಿಂದ ಇದರ ಬೆಲೆ ಆ ಕಾಲದಲ್ಲಿ ತುಂಬಾ ಹೆಚ್ಚಿತ್ತು. ಬರೋಬ್ಬರಿ ರೂ.2.17 ಲಕ್ಷ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು, ಇದು ಆಗಿನ ಗ್ರಾಹಕರಿಗೆ ಇಷ್ಟವಾಗಲಿಲ್ಲ. ಇವೆಲ್ಲ ಕಾರಣಕ್ಕೆ ಬೇಗನೇ ಭಾರತದಿಂದ ಕಣ್ಮರೆಯಾಯಿತು. ಆದರೆ, ಕಾರ್ಯಕ್ಷಮತೆ ವಿಚಾರದಲ್ಲಿ ಅವತ್ತೀನ ಕಾಲಘಟ್ಟಕ್ಕೆ ಈ ಬೈಕಿಗೆ ಬೇರೆ ಕಂಪನಿಯ ಯಾವ ಬೈಕ್‌ಗಳು ಸರಿಸಾಟಿ ಇಲ್ಲ ಎಂದು ಹೇಳಬಹುದು.

ಭಾರತದ ಆಟೋಮೊಬೈಲ್ ಇತಿಹಾಸದಲ್ಲಿ ಫ್ಲಾಪ್ ಬೈಕ್‌ಗಳಿವು: ಹೀರೋದಿಂದ ಸುಜುಕಿವರೆಗೆ...

ಮಹೀಂದ್ರಾ ಮೊಜೊ:
ಪ್ರಮುಖ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಮಹೀಂದ್ರಾ ಕಂಪನಿಯು ಮೊಜೊ ಮತ್ತು ಮೊಜೊ ಯುಟಿ ಹೆಸರಿನ ಎರಡು ಬೈಕ್‌ಗಳನ್ನು ಭಾರತದ ಮಾರುಕಟ್ಟೆಯಲ್ಲಿ ಕೆಲವು ವರ್ಷಗಳ ಹಿಂದೆ ಬಿಡುಗಡೆ ಮಾಡಿತ್ತು. ಈ ಬೈಕ್‌ಗಳು 294.72 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದವು. ಜೊತೆಗೆ 32.5kmpl ಮೈಲೇಜ್ ನೀಡುತ್ತಿದ್ದವು. ಆದರೆ, ಬೆಲೆ ಮಾತ್ರ ರೂ.2,00,458 ಲಕ್ಷ ಇತ್ತು. ಅದು ಕೊಂಚ ದುಬಾರಿಯಾಗಿರಬಹುದು. ಅಲ್ಲದೆ, ಆ ಕಾಲಘಟ್ಟದಲ್ಲಿ ಸಣ್ಣ ಕಾರುಗಳು ಪ್ರವರ್ಧಮಾನಕ್ಕೆ ಬರುತ್ತಿದ್ದವು. ಇದರಿಂದ ಈ ಬೈಕ್‌ಗಳು ಫ್ಲಾಪ್ ಆದವು.

ಎಲ್ಎಂಎಲ್ ಅಡ್ರಿನೊ & ಎನರ್ಜಿ:
ಭಾರತದ ಮಾರುಕಟ್ಟೆಯಲ್ಲಿ 80 ಹಾಗೂ 90ರ ದಶಕದಲ್ಲಿ ಬಜಾಜ್ ಕಂಪನಿಯ ಸ್ಕೂಟರ್ ಗಳು ಬಿಟ್ಟರೆ, ಎಲ್ಎಂಎಲ್ ಕಂಪನಿಯ ಸ್ಕೂಟರ್ ಗಳೇ ಅಬ್ಬರಿಸುತ್ತಿದ್ದವು. ಬಹುತೇಕರಿಗೆ ಎಲ್ಎಂಎಲ್ ಸ್ಕೂಟರ್ ಗಳ ಮೇಲೆ ಪ್ರಯಾಣಿಸಿದ ನೆನಪಿರಬಹುದು. ಕೆಲವರಿಗೆ ಗೊತ್ತಿರದ ವಿಚಾರವೆಂದರೆ, ಎಲ್ಎಂಎಲ್, ಅಡ್ರಿನೊ ಹಾಗೂ ಎನರ್ಜಿ ಹೆಸರಿನ ಎರಡು ಬೈಕ್ ಗಳನ್ನು ದೇಶದಲ್ಲಿ 2001 ಬಿಡುಗಡೆ ಮಾಡಿತು. ಆದರೆ, ಮಾರುಕಟ್ಟೆಗೆ ಹೇಗೆ ಬಂದವೋ ಹಾಗೆಯೇ ಕಣ್ಮರೆಯೂ ಆದವು.

ಅಡ್ರಿನೊ ಬೈಕ್, 109.1 ಸಿಸಿ 3 - ವಾಲ್ವ್ ಎಂಜಿನ್ ಹೊಂದಿತ್ತು. ಅಲ್ಲದೆ, 60 kmpl ಮೈಲೇಜ್ ನೀಡುತ್ತಿತ್ತು. ಇವರೆಡು ಬೈಕ್ಸ್ ಭರಪೂರ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದವು. ಅವುಗಳಲ್ಲಿ ಮುಖ್ಯವಾಗಿ ಡಿಸ್ಕ್ ಬ್ರೇಕ್ಸ್, ಎಲೆಕ್ಟ್ರಿಕ್ ಸ್ಟಾರ್ಟ್ ಹಾಗೂ ಕ್ರೋಮ್ ಹೆಡ್‌ಲೈಟ್ಸ್ ಇದ್ದವು. ಆದರೆ, ಅಂದಿನ ಕೆಲವು ಬೈಕ್ ಗಳಿಗೆ ಪೈಪೋಟಿ ನೀಡಲು ಸಾಧ್ಯವಾಗಿಲ್ಲ. ಬೆಲೆ ಸೇರಿದಂತೆ ಇನ್ನಿತ್ತರೆ ಕಾರಣಕ್ಕೆ ಈ ಬೈಕ್ಸ್, ಸಂಪೂರ್ಣವಾಗಿ ವಿಫಲವಾದವು. ಸದ್ಯ, ಎಲ್ಎಂಎಲ್ ಸ್ಟಾರ್ ಎಲೆಕ್ಕ್ರಿಕ್ ಸ್ಕೂಟರ್ ನೊಂದಿಗೆ ಮಾರುಕಟ್ಟೆಗೆ ರೀ-ಎಂಟ್ರಿ ಕೊಡುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡರಿ.

Article Published On: Saturday, February 11, 2023, 13:32 [IST]
English summary
Flap bikes in indian automobile history details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+