Fujiyama: ಅತ್ಯಂತ ಅಗ್ಗದ ಬೆಲೆಗೆ 5 ಇ-ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ ಫ್ಯೂಜಿಯಾಮ

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಬ್ಬರ ಜೋರಾಗುತ್ತಿದೆ, ತಿಂಗಳಿಗೆ ನಾಲ್ಕರಿಂದ ಐದು ಇವಿ ದ್ವಿಚಕ್ರ ವಾಹನಗಳು ಬಿಡುಗಡೆಯಾಗುತ್ತಿವೆ. ಈ ನಡುವೆ ಎಲೆಕ್ಟ್ರಿಕ್ ವಾಹನ ಕಂಪನಿಗಳ ನಡುವೆ ಪೈಪೋಟಿ ಹೆಚ್ಚಾಗಿದ್ದು, ಕೈಗೆಟುಕುವ ಬೆಲೆಗೆ ಹಲವು ಬ್ರಾಂಡ್‌ಗಳು ಬಿಡುಗಡೆ ಮಾಡುತ್ತಿವೆ. Fujiyama ಬ್ರಾಂಡ್‌ ಕೂಡ ಈಗ 5 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅಗ್ಗದ ಬೆಲೆಗೆ ಬಿಡುಗಡೆ ಮಾಡಿದೆ.

ಫ್ಯೂಜಿಯಾಮಾವು ಸ್ಪೆಕ್ಟ್ರಾ ಪ್ರೊ, ಸ್ಪೆಕ್ಟ್ರಾ, ವೆಸ್ಪಾರ್, ಥಂಡರ್ ಸೇರಿದಂತೆ ಒಂದು ಹೆಚ್ಚಿನ ವೇಗದ ಮಾದರಿಯಾದ ಓಝೋನ್+ ಎಂಬ 5 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಿದೆ. ಕಂಪನಿಯ ಪ್ರಕಾರ, ಈ ಸ್ಕೂಟರ್‌ಗಳ ಕನಿಷ್ಠ ವಿದ್ಯುತ್ ಬಳಕೆಯು ಕೇವಲ 2 ರಿಂದ 3 ಯೂನಿಟ್‌ಗಳಿದ್ದು, ಸುಮಾರು 140+ ಕಿ.ಮೀ ರೇಂಜ್ ಒಳಗೊಂಡಿರುವುದಾಗಿ ತಿಳಿಸಿದೆ. ಇನ್ನು ಇವುಗಳ ಬೆಲೆಯು ರೂ. 49,499/- ದಿಂದ ಆರಂಭವಾಗಿ ರೂ. 99,999/- ವರೆಗೆ ಹೋಗುತ್ತದೆ.

Fujiyama: ಅತ್ಯಂತ ಅಗ್ಗದ ಬೆಲೆಗೆ 5 ಇ-ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ ಫ್ಯೂಜಿಯಾಮ

ಈಗಿನ ಭಾರತೀಯ ರಸ್ತೆ ಪರಿಸ್ಥಿಗಳಿಗೆ ಅನುಗುಣವಾಗಿ ಸ್ಕೂಟರ್‌ಗಳನ್ನು ನಿರ್ಮಿಸಲಾಗಿದೆ. ಪ್ರತಿಯೊಂದು ಸ್ಕೂಟರ್ ಕೂಡ ತನ್ನದೇ ಆದ ವಿನ್ಯಾಸ ಶೈಲಿಯನ್ನು ಹೊಂದಿವೆ. ಹಾಗೆಯೇ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಸುಧಾರಿತ ತಂತ್ರಜ್ಞಾನವನ್ನು ಬಳಕೆ ಮಾಡಲಿದೆ. ಫುಜಿಯಾಮಾದ BLDC ಮೋಟಾರ್ ಹೆಚ್ಚು ಪರಿಣಾಮಕಾರಿ ಮತ್ತು ಕಡಿಮೆ ನಿರ್ವಹಣೆ ಎಂದು ಕಂಪನಿ ಹೇಳಿಕೊಂಡಿದೆ. ಪ್ರತಿ ವಾಹನಕ್ಕೆ 249 ರೂ. ತಗುಲುವ ಫ್ಯೂಜಿಯಾಮಾದ ಮೊದಲ ಮೂರು ಸೇವೆಗಳನ್ನು ಉಚಿತವಾಗಿ ನೀಡುತ್ತಿದೆ.

ಇವಿ ಬೈಕ್ ಕುಡ ಬರಲಿದೆ:
ಹೊಸ ವಿನ್ಯಾಸದಲ್ಲಿ ಮುಂಬರುವ ಕೆಲವು ತಿಂಗಳುಗಳಲ್ಲಿ ಎರಡು ಇ-ಬೈಕ್‌ಗಳನ್ನು ಬಿಡುಗಡೆ ಮಾಡಲು ಕಂಪನಿ ಸಜ್ಜಾಗಿದೆ. ಹಾಗೆಯೇ ಇ-ಲೋಡರ್ ಮತ್ತು ವಾಣಿಜ್ಯ 3-ಚಕ್ರ ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಕಂಪನಿ ಹೇಳಿದೆ. ಇನ್ನು ಇ-ಬೈಕ್‌ಗಳ ಬಗ್ಗೆ ಹೇಳುವುದಾದರೆ ಇದರಲ್ಲಿ ಮೊದಲನೆಯದು ಕ್ಲಾಸಿಕ್ ಇ-ಸ್ಕೂಟರ್ ಆಗಿದ್ದು, ಇದರ ಬೆಲೆ 69,999 ರೂ. ಹಾಗೂ ರೇಂಜ್ 160 ಕಿ.ಮೀವರೆಗೆ ಇರುತ್ತದೆ. ಎರಡನೇಯದು ಮೋಟಾರ್‌ಸೈಕಲ್ ಆಗಿದ್ದು ಬೆಲೆ 99,999 ರೂ. ಇರಲಿದೆ.

Fujiyama: ಅತ್ಯಂತ ಅಗ್ಗದ ಬೆಲೆಗೆ 5 ಇ-ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ ಫ್ಯೂಜಿಯಾಮ

ಕಂಪನಿಯು ತನ್ನ ಮೋಟಾರ್‌ ಸೈಕಲ್‌ಗಳನ್ನು ಈ ಹಿಂದೆ ಆಟೋ ಎಕ್ಸ್‌ಪೋ 2023 ರಲ್ಲಿ ಪ್ರದರ್ಶಿಸಿತ್ತು. ಆಗ ಕೂಡ ವಾಹನಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದ ಕಾರಣ ಶೀಘ್ರವಾಗಿ ಮಾರುಕಟ್ಟೆಗೆ ತಂದಿರುವುದಾಗಿ ಕಂಪನಿ ತಿಳಿಸಿದೆ. ತಮ್ಮ ಕನಸಿನ ಓಟವನ್ನು ಮುಂದುವರೆಸುತ್ತಾ ಮತ್ತು PAN ಇಂಡಿಯಾ ನೆಟ್‌ವರ್ಕ್ ಅನ್ನು ಸ್ಥಾಪಿಸುವ ದೀರ್ಘಾವಧಿಯ ಯೋಜನೆಗಳನ್ನು ಕಾರ್ಯತಂತ್ರವಾಗಿ ಬಲಪಡಿಸಲು ಕಂಪನಿ ಸಜ್ಜಾಗಿದೆ. Fujiyama ಇತ್ತೀಚೆಗೆ ಜೈಪುರ, ರಾಜಸ್ಥಾನದಲ್ಲಿ ತಮ್ಮ ಹೊಸ ಶೋರೂಂಗಳನ್ನು ಪ್ರಾರಂಭಿಸಿದೆ.

ದೇಶದ ಅಗ್ರ ಎಲೆಕ್ಟ್ರಿಕ್ ವಾಹನ ಮಾರಾಟಗಾರರಲ್ಲಿ ಒಬ್ಬರಾಗುವ ಉದ್ದೇಶದೊಂದಿಗೆ, ಕಂಪನಿಯು ಹಿಮಾಚಲ ಪ್ರದೇಶದ ಯುಎನ್‌ಎ ಜಿಲ್ಲೆಯಲ್ಲಿ ತಮ್ಮ ಸೌಲಭ್ಯದಲ್ಲಿ ಅತ್ಯಾಧುನಿಕ ಸ್ಥಾವರವನ್ನು ನಿರ್ಮಿಸಲು ಮೂರು ಹಂತಗಳಲ್ಲಿ 150 ಕೋಟಿ ರೂ. ಹೂಡಿಕೆ ಮಾಡಲಿದೆ. ಈ ಮೂಲಕ ವಾರ್ಷಿಕವಾಗಿ 20,00,000 ಯೂನಿಟ್‌ಗಳನ್ನು ಉತ್ಪಾದಿಸುವ ಗುರಿ ಹೊಂದಿದೆ. ಹಾಗೆಯೇ ಇವರದ್ದೇ ಮೋಟಾರ್‌ಗಳು, ನಿಯಂತ್ರಕಗಳು, ಬ್ಯಾಟರಿಗಳು ಮತ್ತು ವಾಹನಗಳ ಎಲ್ಲಾ ರಚನಾತ್ಮಕ ಘಟಕಗಳ ಆಂತರಿಕ ಉತ್ಪಾದನೆಯಾಗಲಿದೆ" ಎಂದು ಕಂಪನಿ ತಿಳಿಸಿದೆ.

Fujiyama: ಅತ್ಯಂತ ಅಗ್ಗದ ಬೆಲೆಗೆ 5 ಇ-ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ ಫ್ಯೂಜಿಯಾಮ

ಸದ್ಯ ಮಾರುಕಟ್ಟೆಯಲ್ಲಿ ಓಲಾ, ಎಥರ್ ಸೇರಿದಂತೆ ಬಜಾಜ್, ಹೀರೋ, ಟಿವಿಎಸ್ ಬ್ರಾಂಡ್‌ಗಳ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಾರಾಟದಲ್ಲಿವೆ. ಇದರಲ್ಲಿ ಓಲಾ, ಎಥರ್ ಉತ್ತಮ ಮಾರಾಟ ಗಳಿಸುತ್ತಿವೆ. ಬೆಲೆಯ ಪರವಾಗಿ ನೋಡಿಕೊಂಡರೆ ಫ್ಯೂಜಿಯಾಮ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಗಳಿಸುವ ಸಾಧ್ಯತೆಯಿದೆ. ಆದರೆ ಯಾವುದೇ ಅವಘಡಗಳಿಗೆ ಕಾರಣವಾಗದಿದ್ದರೇ ಈ ಸ್ಕೂಟರ್‌ಗಳಿಗೆ ತಾನಾಗಿಯೇ ಬೇಡಿಕೆ ಹುಟ್ಟಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಜನರನ್ನು ಆಕರ್ಷಿಸಲು ಕಂಪನಿ ಏನೆಲ್ಲಾ ಮಾಡಲಿದೆ ನೋಡಬೇಕಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Wednesday, March 29, 2023, 9:52 [IST]
English summary
Fujiyama e scooters launched affordable prices
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+