ಇತ್ತೀಚೆಗೆ ಅನಾವರಣಗೊಂಡ ಗೊಗೊರೊ ಕ್ರಾಸ್‌ಓವರ್ GX250 ಸ್ಮಾರ್ಟ್‌ಸ್ಕೂಟರ್ ವಿಶೇಷತೆಗಳು!

ಬ್ಯಾಟರಿ - ಸ್ವಾಪಿಂಗ್ ಸಿಸ್ಟಮ್‌ಗಳಲ್ಲಿ ಜಾಗತಿಕ ಮಟ್ಟದ ತಂತ್ರಜ್ಞಾನದೊಂದಿಗೆ ಮುಂಚೂಣಿಯಲ್ಲಿರುವ ಕಂಪನಿಯು ಇತ್ತೀಚೆಗೆ ತನ್ನ ಸ್ಮಾರ್ಟ್‌ಸ್ಕೂಟರ್ ಆದ ಕ್ರಾಸ್‌ಓವರ್ GX250 ಅನ್ನು ಅನಾವರಣಗೊಳಿಸಿದೆ. ಈ ಸ್ಕೂಟರ್ ಎಲ್ಲಾ ರಸ್ತೆ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಈ ಹೊಸ ಸ್ಕೂಟರ್ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಮಹಾರಾಷ್ಟ್ರದಲ್ಲಿ ತಯಾರಾಗುವ ಕ್ರಾಸ್‌ಓವರ್ GX250, ಗೊಗೊರೊ ಅವರ ಮೊದಲ ಭಾರತ-ನಿರ್ಮಿತ ಸ್ಮಾರ್ಟ್‌ಸ್ಕೂಟರ್ ಆಗಿದೆ. ವಿವಿಧ ರಸ್ತೆ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಯವಂತೆ ಕ್ರಾಸ್‌ಓವರ್ GX250 ಎಲ್ಲಾ-ಭೂಪ್ರದೇಶಗಳನ್ನು ಸುಲಭವಾಗಿ ನಿಭಾಯಿಸಬಲ್ಲದು. ಸುಧಾರಿತ ಶಕ್ತಿ ಮತ್ತು ಸ್ಥಿರತೆಗಾಗಿ ಹೆಚ್ಚಿನ ಬಿಗಿತವನ್ನು ಒದಗಿಸುತ್ತದೆ. ಅಲ್ಲದೆ 176mm ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

gogoro-crossover-gx250-smartscooter-features

ಕ್ರಾಸ್‌ಓವರ್ GX250 2.5 kW ಡೈರೆಕ್ಟ್ ಡ್ರೈವ್ ಅನ್ನು ಬಳಸುತ್ತದೆ. ಇದು 60 ಕಿ.ಮೀ ಗಿಂತ ಹೆಚ್ಚಿನ ಗರಿಷ್ಠ ವೇಗ ಮತ್ತು 111km ಪ್ರಮಾಣೀಕೃತ ರೇಂಜ್ ಒದಗಿಸುತ್ತದೆ. ಕ್ರಾಸ್‌ಓವರ್ GX250 ನ ಹೊಸ ಫ್ರೇಮ್ ವಿನ್ಯಾಸವು ಸಸ್ಪೆನ್ಷನ್ ವ್ಯವಸ್ಥೆಯ ಬಾಳಿಕೆಯನ್ನು ಹೆಚ್ಚಿಸುತ್ತದೆ. ಸೌಕರ್ಯ ಮತ್ತು ಸ್ಥಿರತೆಗೆ ಒತ್ತು ನೀಡುವುದುರ ಜೊತೆಗೆ ದೊಡ್ಡ ಹೊರೆಗಳಿಗೂ ಸ್ಥಳಾವಕಾಶ ಕಲ್ಪಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಹೆಡ್‌ಲೈಟ್, ಕಾಲುಗಳು ಇಡುವ ಜಾಗ, ಆಸನ ಮತ್ತು ಹಿಂಭಾಗದ ಸರಕು ಸ್ಥಳವನ್ನು ಒಳಗೊಂಡಂತೆ ನಾಲ್ಕು ಸರಕು ಪ್ರದೇಶಗಳನ್ನು ಹತೋಟಿಯಲ್ಲಿಡುವ ಸಾಮರ್ಥ್ಯದೊಂದಿಗೆ, ಕ್ರಾಸ್‌ಓವರ್ GX250 ಹೆಚ್ಚಿನ ಸಂಗ್ರಹಣೆ ಅಗತ್ಯಗಳನ್ನು ಸುಲಭವಾಗಿ ಹೊಂದಿಸುತ್ತದೆ. ಹೆಚ್ಚಿನ ಸರಕನ್ನು ಸಾಗಿಸಲು ಅಗತ್ಯವಿರುವಂತೆ ಸರಕು ಸಂಗ್ರಹಣೆಯನ್ನು ಸೇರಿಸಲು ಹಿಂದಿನ ಸೀಟನ್ನು ಮಡಚಬಹುದು ಅಥವಾ ತೆಗೆದುಹಾಕಬಹುದು.

gogoro-crossover-gx250-smartscooter-features

ಗೊಗೊರೊ ಕ್ರಾಸ್‌ಓವರ್ ಸರಣಿಯನ್ನು ಆಲ್-ಟೆರೈನ್ ಫ್ರೇಮ್‌ನಲ್ಲಿ ನಿರ್ಮಿಸಲಾಗಿದೆ. ಇದು ವಿವಿಧ ಸಂಗ್ರಹಣೆ, ಸವಾರಿ ಮತ್ತು ಗ್ರಾಹಕೀಕರಣ ಸಾಮರ್ಥ್ಯಗಳನ್ನು ಹೊಂದಿದೆ. ಭಾರತದಲ್ಲಿ ಕ್ರಾಸ್‌ಓವರ್ GX250, ಕ್ರಾಸ್‌ಓವರ್ 50 ಮತ್ತು ಕ್ರಾಸ್‌ಓವರ್ S ಎಂಬ ಮೂರು ಮಾದರಿಗಳಲ್ಲಿ ನೀಡಲಾಗುತ್ತಿದೆ. ಕ್ರಾಸ್‌ಓವರ್ GX250 ತಕ್ಷಣವೇ ಲಭ್ಯವಿರಲಿದ್ದು, ಕ್ರಾಸ್‌ಓವರ್ 50 ಮತ್ತು ಕ್ರಾಸ್‌ಓವರ್ S ಶಿಪ್ಪಿಂಗ್‌ನೊಂದಿಗೆ 2024ರ ನಂತರ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.

ಬ್ಯಾಟರಿ ಸ್ವಾಪಿಂಗ್: ಕೆಲವೇ ಸೆಕೆಂಡ್‌ಗಳಲ್ಲಿ ಬ್ಯಾಟರಿಗಳನ್ನು ಬದಲಿಸಿಕೊಳ್ಳುವ ಮೂಲಕ ರೇಂಜ್ ಆತಂಕವಿಲ್ಲದೆ ಓಡಿಸಬಹುದು. ಗೊಗೊರೊ ಬ್ಯಾಟರಿ ವಿನಿಮಯವು ಹೊಸ ತಲೆಮಾರಿನ ಸ್ವಾಪ್ ಮಾಡಬಹುದಾದ ಬ್ಯಾಟರಿ ವ್ಯವಸ್ಥೆಯಾಗಿದೆ. ಇದು ಸ್ಮಾರ್ಟ್, ಸುರಕ್ಷಿತ ಮತ್ತು ರೈಡರ್‌ಗಳು, ವ್ಯವಹಾರಗಳು ಮತ್ತು ಸಮುದಾಯಗಳಿಗೆ ಕ್ರಿಯಾತ್ಮಕ ಮತ್ತು ಬಹುಮುಖವಾಗಿಸುತ್ತದೆ.

gogoro-crossover-gx250-smartscooter-features

ಜುಲೈನಲ್ಲಿ, ಭಾರತದ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ (ICAT) ಭಾರತಕ್ಕಾಗಿ ಗೊಗೊರೊ ಅವರ ಸ್ಮಾರ್ಟ್ ಬ್ಯಾಟರಿಯನ್ನು ಪ್ರಮಾಣೀಕರಿಸಿದೆ. ತೈವಾನ್‌ನಲ್ಲಿ, ಗೊಗೊರೊ ನೆಟ್‌ವರ್ಕ್ ಸುಮಾರು 6,00,000 ರೈಡರ್‌ಗಳಿಗೆ ಬೆಂಬಲಿಸಿದೆ. ಜೊತೆಗೆ 2,500 ಕ್ಕೂ ಹೆಚ್ಚು ಸ್ಥಳಗಳಲ್ಲಿ 12,000 ಬ್ಯಾಟರಿ ವಿನಿಮಯ ಕೇಂದ್ರಗಳ ಜಾಲದ ಮೂಲಕ 1.3 ಮಿಲಿಯನ್‌ಗಿಂತಲೂ ಹೆಚ್ಚು ಸ್ಮಾರ್ಟ್ ಬ್ಯಾಟರಿಗಳು ಚಲಾವಣೆಯಲ್ಲಿವೆ.

ಇಲ್ಲಿಯವರೆಗೆ ಗೊಗೊರೊ ಬ್ಯಾಟರಿ ಸ್ವಾಪಿಂಗ್ ಸಿಸ್ಟಮ್ ಮೂಲಕ 4,00,000 ಕ್ಕಿಂತ ಹೆಚ್ಚು ದೈನಂದಿನ ಬ್ಯಾಟರಿ ವಿನಿಮಯಗಳು ಮತ್ತು 510 ಮಿಲಿಯನ್‌ಗಿಂತಲೂ ಹೆಚ್ಚು ಬ್ಯಾಟರಿ ಸ್ವಾಪ್‌ಗಳೊಂದಿಗೆ, ಗೊಗೊರೊ ಬ್ಯಾಟರಿ ವಿನಿಮಯವು 2015 ರಲ್ಲಿ ಪ್ರಾರಂಭವಾದಾಗಿನಿಂದ 7,85,000 ಟನ್‌ಗಳಿಗಿಂತ ಹೆಚ್ಚು CO2 ಅನ್ನು ಉಳಿಸಿದೆ ಎಂದು ಗೊಗೊರೊ ಕಂಪನಿ ಹೇಳಿಕೊಂಡಿದೆ.

gogoro-crossover-gx250-smartscooter-features

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, December 13, 2023, 18:37 [IST]
English summary
Gogoro crossover gx250 smartscooter features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+