ಕರ್ನಾಟಕದ ಕೀರ್ತಿ: ಬೆಳಗಾವಿಯ ರಿವೋಟ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ, ದೇಶದಲ್ಲೇ ಮೊದಲು.. 300 ಕಿಮೀ ಕ್ರಮಿಸುತ್ತೆ
ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಕರ್ನಾಟಕದಿಂದಲೇ ಹೊಸ ಪರ್ವ ಆರಂಭವಾಗಿದೆ. ಇ-ಸ್ಕೂಟರ್ ಮಾರುಕಟ್ಟೆಗೆ ಬೆಳಗಾವಿ ಮೂಲದ ರಿವೋಟ್ ಮೋಟಾರ್ಸ್ (RIVOT Motors) ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಆಯುಧಪೂಜೆ ದಿನ ಬಿಡುಗಡೆಗೊಳಿಸಿದೆ.
ನೂತನ ರಿವೋಟ್ ಎನ್ಎಕ್ಸ್100 (RIVOT NX100) ಎಲೆಕ್ಟ್ರಿಕ್ ಸ್ಕೂಟರ್ ಐದು ರೂಪಾಂತರಗಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ, ಕ್ಲಾಸಿಕ್ (Classic), ಪ್ರೀಮಿಯಂ (Premium), ಎಲೈಟ್ (Elite), ಸ್ಪೋರ್ಟ್ಸ್ (Sports) ಹಾಗೂ ಆಫ್‌ಲ್ಯಾಂಡರ್ (Offlander). ರೂ.89,000 ಆರಂಭಿಕ ದರವನ್ನು ಹೊಂದಿದ್ದು, ರೂಪಾಂತರಗಳಿಗೆ ಅನುಗುಣವಾಗಿ ಬೇರೆ - ಬೇರೆ ಬೆಲೆಯನ್ನು ಪಡೆದಿವೆ.

ಹೊಸ ರಿವೋಟ್ ಎನ್ಎಕ್ಸ್100 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕರ್ನಾಟಕದ ಬೆಳಗಾವಿಯಲ್ಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗುತ್ತದೆ. ಬೆಳಗಾವಿಯಿಂದ ಬೆಂಗಳೂರಿಗೆ ಸಂಪೂರ್ಣ ಚಾರ್ಜ್‌ನಲ್ಲಿ ಸುಮಾರು 545 ಕಿಲೋಮೀಟರ್ ಕ್ರಮಿಸುವ ಸಾಮರ್ಥ್ಯ ಹೊಂದಿರುವ ಏಕೈಕ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದ್ದು, ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಗೇಮ್ ಚೇಂಜರ್ ಆಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಪಿಸ್ತಾ, ಪಿಂಕ್, ಪರ್ಪಲ್ ಸೇರಿದಂತೆ ಏಳು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.
ರಿವೋಟ್ ಎನ್ಎಕ್ಸ್100 ಕ್ಲಾಸಿಕ್ ವೇರಿಯೆಂಟ್, 1920Wh ಬ್ಯಾಟರಿ ಪ್ಯಾಕ್ ಹೊಂದಿದ್ದು, ಫುಲ್ ಚಾರ್ಜ್‌ನಲ್ಲಿ 100 Km ರೇಂಜ್ ನೀಡಲಿದೆ. 100 Kmph ಟಾಪ್ ಸ್ವೀಡ್ ಪಡೆದಿದೆ. 7.84 ಇಂಚಿನ ಸೆಗ್ಮೆಂಟ್ ಡಿಸ್ಪ್ಲೇ, ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲೈಟ್, 750W ಪೋರ್ಟಬಲ್ ಚಾರ್ಜರ್ ಫ್ರಂಟ್ & ರೇರ್ 90/90 12 ಅಳತೆಯ ಟ್ಯೂಬ್ ಲೆಸ್ ಟೈಯರ್ಸ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ರೂ.89,000 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಪ್ರೀಮಿಯಂ ರೂಪಾಂತರ ರೂ.1,29,000 ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ಸಿಗುತ್ತದೆ. ಇದು 3840Wh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು, 200 Km ರೇಂಜ್ ನೀಡುತ್ತದೆ. 100 Kmph ಟಾಪ್ ಸ್ವೀಡ್ ಒಳಗೊಂಡಿದೆ. 7.84 ಇಂಚಿನ ಟಚ್‌ಸ್ಕ್ರೀನ್, 4G ಇಂಟರ್ನೆಟ್, ಮಲ್ಟಿಮೀಡಿಯಾ, ನ್ಯಾವಿಗೇಶನ್, ಅಲಾಯ್ ವೀಲ್ಸ್, 1000W ಆನ್-ಬೋರ್ಡ್ ಚಾರ್ಜರ್, ಸೆಂಟರ್ ಸ್ಟ್ಯಾಂಡ್, ಫೋನ್ ಲಾಕ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ರಿವೋಟ್ ಎನ್ಎಕ್ಸ್100 ಎಲೈಟ್ ವೇರಿಯೆಂಟ್ ರೂ.1,59,000 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ಇದು 5760Wh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 200 Km ರೇಂಜ್ ಕೊಡುತ್ತದೆ. 100 Kmph ಟಾಪ್ ಸ್ವೀಡ್ ಹೊಂದಿದೆ. ಲೇಡಿ ಫೂಟ್ ರೆಸ್ಟ್, ಕಂಫರ್ಟ್‌ಬೂಟ್, ರೋಲ್‌ಪ್ರೊಟೆಕ್ಟ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ರಿವೋಟ್ ಎನ್ಎಕ್ಸ್100 ಎಲೆಕ್ಟ್ರಿಕ್ ಸ್ಕೂಟರ್ ಸ್ಪೋರ್ಟ್ಸ್ ರೂಪಾಂತರ ರೂ.1,39,000 ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಇದು 3840Wh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದ್ದು, ಫುಲ್ ಚಾರ್ಜ್ ನಲ್ಲಿ 200 Km ರೇಂಜ್ ನೀಡುತ್ತದೆ. 100 Kmph ಟಾಪ್ ಸ್ವೀಡ್ ಹೊಂದಿದೆ. ರೇಸ್ ಟ್ರ್ಯಾಕ್ ಥೀಮ್, ರೋಲ್‌ಪ್ರೊಟೆಕ್ಟ್, ಕಂಫರ್ಟ್‌ಬೂಟ್, ಕಂಫರ್ಟ್‌ಕೀ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಆಫ್‌ಲ್ಯಾಂಡರ್ ರೂಪಾಂತರವನ್ನು ಆಫ್ - ರೋಡ್ (ಬೆಟ್ಟ - ಗುಡ್ಡ) ಚಾಲನೆಗೆ ಅನುಗುಣವಾಗಿ ವಿನ್ಯಾಸ ಮಾಡಲಾಗಿದೆ. ಇದು 5760Wh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಒಳಗೊಂಡಿದೆ. ಗರಿಷ್ಠ 300 Km ವರೆಗೆ ರೇಂಜ್ ನೀಡುತ್ತದೆ. (ರೇಂಜ್ ಅನ್ನು 500 KM ವರೆಗೆ ಅಪ್-ಗ್ರೇಡ್ ಮಾಡಬಹುದು). 100 Kmph ಟಾಪ್ ಸ್ವೀಡ್ ಹೊಂದಿದೆ. ಯುವ ಗ್ರಾಹಕರನ್ನು ಸೆಳೆಯುವ ಅತ್ಯಾಧುನಿಕ ಫೀಚರ್ಸ್ ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








