Hero Glamour: ಲಕ್ಷ್ಮಿ ಹಬ್ಬಕ್ಕೆ ಗಿಫ್ಟ್.. ತೀರಾ ಅಗ್ಗದ ಬೆಲೆಗೆ ಹೀರೋ ಗ್ಲಾಮರ್ ಬಿಡುಗಡೆ, ಮೈಲೇಜ್‌ನಲ್ಲಿ ಬೆಂಕಿ!

ಭಾರತದಲ್ಲಿ ಹೀರೋ ಮೋಟೊಕಾರ್ಪ್ (Hero MotoCorp) ನಂಬರ್ 1 ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಕೈಗೆಟುಕುವ ಬೆಲೆಗೆ ನವೀಕರಿಸಿರುವ ಗ್ಲಾಮರ್ (Glamour) ಬೈಕ್ ಬಿಡುಗಡೆಗೊಳಿಸಿ, ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

ದೇಶೀಯ ಮಾರುಕಟ್ಟೆಯಲ್ಲಿ ನವೀಕರಿಸಿದ ಹೀರೋ ಗ್ಲಾಮರ್ (Hero Glamour) ಬೈಕ್ ಲಾಂಚ್ ಆಗಿದ್ದು, ಡ್ರಮ್ (Drum) ಹಾಗೂ ಡಿಸ್ಕ್ (Disc) ರೂಪಾಂತರ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಕ್ರಮವಾಗಿ ರೂ.82,348 ಹಾಗೂ ರೂ.86,348 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ. ಕ್ಯಾಂಡಿ ಬ್ಲೇಜಿಂಗ್ ರೆಡ್, ಟೆಕ್ನೋ ಬ್ಲೂ-ಬ್ಲಾಕ್ ಮತ್ತು ಸ್ಪೋರ್ಟ್ಸ್ ರೆಡ್-ಬ್ಲಾಕ್ ಎಂಬ ಮೂರು ಹೊಸ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿವೆ.

Hero Glamour: ಲಕ್ಷ್ಮಿ ಹಬ್ಬಕ್ಕೆ ಗಿಫ್ಟ್.. ತೀರಾ ಅಗ್ಗದ ಬೆಲೆಗೆ ಹೀರೋ ಗ್ಲಾಮರ್ ಬಿಡುಗಡೆ, ಮೈಲೇಜ್‌ನಲ್ಲಿ ಬೆಂಕಿ!

ಈ ಹೀರೋ ಗ್ಲಾಮರ್ ಬೈಕ್ ಪವರ್ ಟ್ರೈನ್ ಬಗ್ಗೆ ಹೇಳುವುದಾದರೆ, ಇದು, 125 ಸಿಸಿ, ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಹೊಂದಿದೆ. 7,500 rpmನಲ್ಲಿ 10.68 bhp ಗರಿಷ್ಠ ಪವರ್ ಹಾಗೂ 6,000 rpmನಲ್ಲಿ 10.6 Nm ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ i3S ಐಡಲ್ ಸ್ಟಾಪ್/ ಸ್ಟಾರ್ಟ್ ಬಟನ್ ಹೊಂದಿದೆ.

ಇದಿಷ್ಟೇ ಅಲ್ಲದೆ, ಈ ಗ್ಲಾಮರ್ ಬೈಕ್ OBD2 ಮಾನದಂಡಗಳಿಗೆ ಅನ್ವಯ ಮೇಲ್ದರ್ಜೆರಿಸಿರುವ ಹಾಗೂ E20 (ಶೇಕಡ 80% ಪೆಟ್ರೋಲ್ ಹಾಗೂ 20%) ಬೆಂಬಲಿಸುವ ಎಂಜಿನ್ ಅನ್ನು ಪಡೆದಿದ್ದು, 63 kmpl ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಹೀಗಾಗಿ, ಟಿವಿಎಸ್ ರೈಡರ್ 125, ಬಜಾಜ್ ಪಲ್ಸರ್ 125 ಮತ್ತು ಹೋಂಡಾ ಶೈನ್ ಮೋಟಾರ್‌ಸೈಕಲ್ ಗಳಿಗೆ ಭರ್ಜರಿಯಾಗಿ ಪೈಪೋಟಿ ನೀಡಲಿದೆ.

Hero Glamour: ಲಕ್ಷ್ಮಿ ಹಬ್ಬಕ್ಕೆ ಗಿಫ್ಟ್.. ತೀರಾ ಅಗ್ಗದ ಬೆಲೆಗೆ ಹೀರೋ ಗ್ಲಾಮರ್ ಬಿಡುಗಡೆ, ಮೈಲೇಜ್‌ನಲ್ಲಿ ಬೆಂಕಿ!

ಹೊಸ ಹೀರೋ ಗ್ಲಾಮರ್ ಮೋಟಾರ್‌ಸೈಕಲ್, ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ, ನೂತನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ. ಇದು, ರಿಯಲ್ ಟೈಮ್ ಮೈಲೇಜ್ ಇಂಡಿಕೇಟರ್, ಲೊ ಫ್ಯುಯೆಲ್ ಇಂಡಿಕೇಟರ್ ಸೇರಿದಂತೆ ವಿವಿಧ ಮಾಹಿತಿಯನ್ನು ತೋರಿಸುತ್ತದೆ. ಜೊತೆಗೆ USB ಚಾರ್ಜರ್ ಆಯ್ಕೆಯನ್ನು ಹೊಂದಿದೆ.

ಗ್ಲಾಮರ್, ನೋಡಲು ಹೆಚ್ಚು ಆಕರ್ಷಕವಾಗಿರುವಂತಹ ವಿನ್ಯಾಸವನ್ನು ಪಡೆದಿದೆ. ಜೊತೆಗೆ ಹೀರೋ ಕಂಪನಿಯು ಈ ಬೈಕಿನ ರೈಡರ್ ಮತ್ತು ಪಿಲಿಯನ್ ಸೀಟ್ ಎತ್ತರವನ್ನು ಕ್ರಮವಾಗಿ 8 ಎಂಎಂ & 17 ಎಂಎಂ ಕಡಿಮೆ ಮಾಡಿದೆ. ಗ್ಲಾಮರ್ ಬಿಡುಗಡೆ ಕುರಿತು ಮಾತನಾಡಿರುವ ಹೀರೋ ಮೋಟೋಕಾರ್ಪ್‌ನ ರಂಜೀವ್‌ಜಿತ್ ಸಿಂಗ್, 'ಗ್ಲಾಮರ್ ಬಿಡುಗಡೆಯೊಂದಿಗೆ ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯ 125 ಸಿಸಿ ಲೈನ್ಅಪ್ ಮತ್ತಷ್ಟು ಬಲಗೊಳ್ಳಲಿದೆ. ಮಾರಾಟ ಪ್ರಮಾಣವು ಸುಧಾರಿಸಲಿದೆ' ಎಂದಿದ್ದಾರೆ.

ಇನ್ನು, ಹೀರೋ ಕಂಪನಿ ಹೊಸ ತಲೆಮಾರಿನ ಕರಿಜ್ಮಾ ಎಕ್ಸ್ಎಂಆರ್ (Karizma XMR) ಬೈಕ್ ಅನ್ನು ಆಗಸ್ಟ್ 29 ರಂದು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಅದಕ್ಕಾಗಿ ಎಲ್ಲ ರೀತಿಯ ತಯಾರಿ ನಡೆಸಿದ್ದು, ಈಗಾಗಲೇ ಹಲವು ಟೀಸರ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಒಂದಷ್ಟು ಮಾಹಿತಿಯನ್ನು ರಿವೀಲ್ ಮಾಡಿದೆ. ಈ ಬೈಕ್, ರೂ.1.90 ಲಕ್ಷದಿಂದ ರೂ.2.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗಬಹುದು ಎಂದು ಅಂದಾಜಿಸಲಾಗಿದೆ.

ನೂತನ ಕರಿಜ್ಮಾ ಎಕ್ಸ್ಎಂಆರ್ ಬೈಕ್, 210 ಸಿಸಿ ಸಿಂಗಲ್ - ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹಾಗೂ 6 ಸ್ವೀಡ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಸಿಗುವ ಸಾಧ್ಯತೆಯಿದೆ. 32.8 kmpl, ಮೈಲೇಜ್ ಕೊಡಬಹುದು ಎಂದು ಹೇಳಲಾಗಿದ್ದು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ಬ್ಲೂಟೂತ್ ಕನೆಕ್ಟಿವಿಟಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, August 24, 2023, 20:31 [IST]
English summary
Hero glamour launched rs 82348 full details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+