Hero Karizma: ನಾಳೆ ಬಹುನೀರಿಕ್ಷಿತ ಹೀರೋ ಕರಿಜ್ಮಾ ಬಿಡುಗಡೆ.. ಏನಿದೆ ನಿರೀಕ್ಷೆ?, ಸುನಾಮಿ ಎಬ್ಬಿಸುವುದು ಪಕ್ಕಾ!

ಭಾರತದಲ್ಲಿ ಕೆಲವು ವರ್ಷಗಳ ಹಿಂದೆ, ನಿಮ್ಮ ಫೆವರೇಟ್ ಬೈಕ್ ಯಾವುದೆಂದು ಯುವಕರನ್ನು ಕೇಳಿದರೆ ತಕ್ಷಣ ಬರುತ್ತಿದ್ದ ಒಂದೇ ಉತ್ತರ ಹೀರೋ ಕರಿಜ್ಮಾ. ಅಷ್ಟರಮಟ್ಟಿಗೆ ಈ ಮೋಟಾರ್ ಸೈಕಲ್ ಜನಪ್ರಿಯತೆ ಗಳಿಸಿತ್ತು. ಇದೀಗ, ಸಾವಿರಾರು ಗ್ರಾಹಕರ ಒತ್ತಡಕ್ಕೆ ಮಣಿದಿರುವ ಹೀರೋ ಕಂಪನಿ ನಾಳೆಯೇ ಸಿಹಿಸುದ್ದಿ ನೀಡಲಿದೆ.

ದೇಶೀಯ ಮಾರುಕಟ್ಟೆಯಲ್ಲಿ ಹೀರೋ ಕರಿಜ್ಮಾ ಎಕ್ಸ್ಎಂಆರ್ (Hero Karizma XMR) ಬೈಕ್ ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ. ಈಗಾಗಲೇ, ಕರಿಜ್ಮಾ ಎಕ್ಸ್ಎಂಆರ್ ಮೋಟಾರ್ ಸೈಕಲ್ ಕುರಿತು ಕಂಪನಿ ಬಿಡುಗಡೆಗೊಳಿಸಿದ ಟೀಸರ್‌ಗಳು ಸಾಕಷ್ಟು ಹಲ್ ಚಲ್ ಸೃಷ್ಟಿಸಿದ್ದು, ಖರೀದಿದಾರರಲ್ಲಿ ದೊಡ್ಡಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿವೆ. ಹೊಸ ಕರಿಜ್ಮಾ ಎಕ್ಸ್ಎಂಆರ್ ಬೈಕ್ ಹೇಗಿರಲಿದೆ ಎಂಬುದರ ಬಗ್ಗೆ ತೀವ್ರ ಕುತೂಹಲ ಹೊಂದಿದ್ದಾರೆ.

Hero Karizma: ನಾಳೆ ಬಹುನೀರಿಕ್ಷಿತ ಹೀರೋ ಕರಿಜ್ಮಾ ಬಿಡುಗಡೆ.. ಏನಿದೆ ನಿರೀಕ್ಷೆ?, ಸುನಾಮಿ ಎಬ್ಬಿಸುವುದು ಪಕ್ಕಾ!

ನೂತನ ಹೀರೋ ಕರಿಜ್ಮಾ ಎಕ್ಸ್ಎಂಆರ್ ಬೈಕ್, ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ. ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದರ ಬಗ್ಗೆ ಮೂಲಗಳಿಂದ ನಮಗೆ ಒಂದಿಷ್ಟು ಮಾಹಿತಿ ಲಭ್ಯವಾಗಿದ್ದು, ಆ ಕುರಿತು ತಿಳಿಸಿಕೊಡುತ್ತೇವೆ. ಮೊದಲಿಗೆ ವಿನ್ಯಾಸ ಬಗ್ಗೆ ಮಾತನಾಡೋಣ. ಹೊಸ ಕರಿಜ್ಮಾ, ನೋಡುಗರನ್ನು ಸೆಳೆಯುವ ಡಿಸೈನ್ ಹೊಂದಿದ್ದು, ಎಲ್‌ಇಡಿ ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್, ಟರ್ನ್ ಇಂಡಿಕೇಟರ್‌ ಹಾಗೂ ಅಲಾಯ್ ವೀಲ್ಸ್ ಪಡೆದಿರುವ ಸಾಧ್ಯತೆಯಿದೆ.

ವೈಶಿಷ್ಟ್ಯದ ವಿಚಾರಕ್ಕೆ ಬರುವುದಾದರೆ, ನೂತನ ಹೀರೋ ಕರಿಜ್ಮಾ ಎಕ್ಸ್ಎಂಆರ್ ಮೋಟಾರ್ ಸೈಕಲ್ ಅತ್ಯಾಧುನಿಕ ಫೀಚರ್ಸ್ ಪಡೆದಿದೆ. ಪ್ರಮುಖವಾಗಿ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ಬ್ಲೂಟೂತ್ ಕನೆಕ್ಟಿವಿಟಿ, ನ್ಯಾವಿಗೇಷನ್‌ ಅನ್ನು ಒಳಗೊಂಡಿರುವ ನೀರಿಕ್ಷೆಯಿದ್ದು, ಡಿಸ್ಕ್ ಬ್ರೇಕ್, ಫ್ರಂಟ್ ಟೆಲಿಸ್ಕೋಪಿಕ್ ಪೋರ್ಕ್ಸ್, ರೇರ್, ಮೊನೊಶಾಕ್‌ ಸಸ್ಪೆನ್ಷನ್ ಸೆಟಪ್ ಹೊಂದಿರಬಹುದು.

ಎಂಜಿನ್ ಬಗ್ಗೆ ಹೇಳುವುದಾದರೆ, ನಾಳೆ ಬಿಡುಗಡೆಯಾಗಲಿರುವ ಹೀರೋ ಕರಿಜ್ಮಾ, 210 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಪಡೆದಿರಲಿದ್ದು, 25 bhp ಪವರ್ ಹಾಗೂ 30 Nm ಪೀಕ್ ಟಾರ್ಕ್ ಉತ್ಪಾದಿಸಬಹುದು. 6 ಸ್ವೀಡ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಬಹುದು. 32.8 kmpl ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.

ಹೀರೋ ಕರಿಜ್ಮಾ ಎಕ್ಸ್ಎಂಆರ್ ಬೈಕಿಗೆ ಭಾರತದ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ ಹಾಗೂ ಸುಜುಕಿ ಜಿಕ್ಸರ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ. ನೂತನ ಕರಿಜ್ಮಾ ಮೋಟಾರ್ ಸೈಕಲ್ ಬೆಲೆ ಬಗ್ಗೆ ಕಂಪನಿ ಎಲ್ಲಿಯೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ, ವಿಶ್ವಾಸಾರ್ಹ ಮೂಲಗಳಿಂದ ದೊರೆತ್ತಿರುವ ಮಾಹಿತಿ ಪ್ರಕಾರ, ರೂ.1.90 ಲಕ್ಷದಿಂದ ರೂ.2.10 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗಬಹುದು ಎಂದು ಹೇಳಲಾಗಿದೆ.

ಇತ್ತೀಚೆಗೆ, ಹೀರೋ ಕಂಪನಿ ದೇಶದಲ್ಲಿ ನವೀಕರಿಸಿದ ಹೂಸ ಗ್ಲಾಮರ್ ಮೋಟಾರ್‌ಸೈಕಲ್ ಅನ್ನು ಲಾಂಚ್ ಮಾಡಿತ್ತು. ಈ ಬೈಕ್, ಡ್ರಮ್ ಹಾಗೂ ಡಿಸ್ಕ್ ರೂಪಾಂತರಗಳ ಆಯ್ಕೆಯಲ್ಲಿ ಸಿಗಲಿದ್ದು, ಕ್ರಮವಾಗಿ, ರೂ.82,348 ರಿಂದ ರೂ.86,348 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಜೊತೆಗೆ ವಿನ್ಯಾಸದ ದೃಷ್ಟಿಯಿಂದ ಸಹ ಅತ್ಯುತ್ತಮವಾಗಿದ್ದು, ಯುವ ಗ್ರಾಹಕರನ್ನು ತನ್ನತ್ತ ಸೆಳೆಯುವಂತಹ ಲುಕ್ ಪಡೆದಿದೆ.

ಹೀರೋ ಗ್ಲಾಮರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಈ ಬೈಕ್, BS6 ಹಂತ 2 ಮಾನದಂಡಗಳ ಅನ್ವಯ ಮೇಲ್ದರ್ಜೆರಿಸಿರುವ 125 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್‌ ಹೊಂದಿದ್ದು, 63 kmpl ಮೈಲೇಜ್ ನೀಡುತ್ತದೆ. ವೈಶಿಷ್ಟ್ಯದ ವಿಚಾರಕ್ಕೆ ಬರುವುದಾದರೆ, ಅಲಾಯ್ ವೀಲ್ಸ್, USB ಚಾರ್ಜಿಂಗ್ ಪೋರ್ಟ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, August 28, 2023, 17:08 [IST]
English summary
Hero karizma xmr launch tomorrow what to expect details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+