Hero Karizma XMR: ಹೊಸ ಅವತಾರದಲ್ಲಿ ಮರಳಿ ಬರುತ್ತಿದೆ ಯುವಕರ ಮೆಚ್ಚಿನ ಹೀರೋ ಕರಿಜ್ಮಾ ಬೈಕ್
ಒಂದು ಕಾಲದಲ್ಲಿ ಮಿಂಚಿ ಮರೆಯಾದ ಯುವಕರ ಮೆಚ್ಚಿನ ಕರಿಜ್ಮಾ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಲಗ್ಗೆ ಇಡುತ್ತಿದೆ. ಒಂದು ಕಾಲದ ಯುವಕರ ಕನಸ್ಸಿನ ಬೈಕ್ ಮತ್ತೆ ಸಂಚಲನ ಮೂಡಿಸಲು ಸಜ್ಜಾಗಿದೆ. ಇದೀಗ ಜನಪ್ರಿಯ ದ್ವಿಚಕ್ರ ವಾಹನ ತಯಾರಕರಾದ ಹೀರೋ ಮೋಟೋಕಾರ್ಪ್ ತನ್ನ 'Karizma XMR' ಎಂಬ ಹೆಸರನ್ನು ಟ್ರೇಡ್‌ಮಾರ್ಕ್ ಮಾಡಿದೆ.
ಇದು ಅಲ್ಪಾವಧಿಯ ವಿರಾಮದ ನಂತರ 'ಕರಿಜ್ಮಾ' ಹೆಸರಿನ ಬೈಕ್ ಅನ್ನು ಹಿಂತಿರುಗಿ ತರುತ್ತಿದೆ, ಮುಂದಿನ ದಿನಗಳಲ್ಲಿ ಈ ಹೊಸ ಮೋಟಾರ್‌ಸೈಕಲ್ ಅನ್ನು ಕಂಪನಿಯ ಪ್ರಮುಖ ಮಾದರಿಯಾಗಿ ಇರಿಸಲಾಗುವುದು ಎಂದು ನಾವು ನಿರೀಕ್ಷಿಸುತ್ತೇವೆ. ಸೋರಿಕೆಯಾದ ವಿವರಗಳ ಪ್ರಕಾರ, ಮುಂಬರುವ ಹೀರೋ ಕರಿಜ್ಮಾ ಎಕ್ಸ್‌ಎಂಆರ್ ಎಲ್ಲಾ-ಹೊಸ ಫ್ರೇಮ್‌ನಿಂದ ಆಧಾರವಾಗಿದೆ ಮತ್ತು ಸಂಪೂರ್ಣವಾಗಿ ಹೊಸ ಪವರ್‌ಟ್ರೇನ್ ಅನ್ನು ಸಹ ಹೊಂದಿದೆ.

ಇದದರ ಜೊತೆಗೆ, ಈ ಮುಂಬರುವ ಹೀರೋ ಮಾದರಿಯು ಸಂಪೂರ್ಣ-ಫೇರ್ಡ್ ಮೋಟಾರ್‌ಸೈಕಲ್ ಆಗಿರುತ್ತದೆ. ಮುಂಬರುವ ಹೀರೋ ಕರಿಜ್ಮಾ XMR ನಲ್ಲಿನ ಹೊಸ 210cc, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 25 bhp ಪವರ್ ಮತ್ತು 30Nm ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದಲ್ಲದೆ, ಈ ಎಂಜಿನ್ ಹೆದ್ದಾರಿ ಸ್ನೇಹಿ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುವ ನಿರೀಕ್ಷೆಯಿದೆ.
ಇತ್ತೀಚೆಗೆ, ಸಂಪೂರ್ಣ-ಫೇರ್ಡ್ ಹೀರೋ ಬೈಕಿನ ಸ್ಪೈ ಚಿತ್ರಗಳು ಅಂತರ್ಜಾಲದಲ್ಲಿ ಸೋರಿಕೆಯಾಗಿತ್ತು. ಈ ಚಿತ್ರಗಳಲ್ಲಿ ಫುಲ್ ಫೇರಿಂಗ್, ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು, ಹಿಂಬದಿ-ಸೆಟ್ ಫೂಟ್ ಪೆಗ್‌ಗಳು, ಹೊಸ ಹಗುರವಾದ ಅಲಾಯ್ ವ್ಹೀಲ್ ಗಳು, ಫೇರಿಂಗ್-ನಂತಹ ಆಸಕ್ತಿದಾಯಕ ವಿವರಗಳನ್ನು ಬಹಿರಂಗಪಡಿಸುತ್ತದೆ. ಈ ಬೈಕಿನಲ್ಲಿ ಮೌಂಟೆಡ್ ರಿಯರ್ ವ್ಯೂ ಮಿರರ್ ಅನ್ನು ಹೊಂದಿದೆ.

ಈ ಹೊಸ ಹೀರೋ ಬೈಕಿನ ಸಸ್ಪೆಕ್ಷನ್ ಸೆಟಬ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿ ಮೊನೊ ರಿಯರ್ ಶಾಕ್ ಅಬ್ಸಾರ್ಬರ್ ಅನ್ನು ಹೊಂದಿದೆ. ಬಿಡುಗಡೆಯಾಗಲಿರುವ ಹೀರೋ ಕರಿಜ್ಮಾ XMR ಯುವ ಸವಾರರನ್ನು ಆಕರ್ಷಿಸಲು ಕೈಗೆಟುವ ಬೆಲೆಯನ್ನು ಹೊಂದಿರಬಹುದು ಎಂದು ನಾವು ನಿರೀಕ್ಷಿಸುತ್ತೇವೆ. ಮುಂಬರುವ ಈ ಹೊಸ ಬೈಕ್ ಅನ್ನು ಅನ್ನು ಈ ವರ್ಷದ ಅಂತ್ಯದ ಮೊದಲು ಬಿಡುಗಡೆ ಮಾಡಲಾಗುತ್ತದೆ.
ಇನ್ನು ಈ ಹೀರೋ ಕರಿಜ್ಮಾ XMR ಬೈಕ್ 2024ರ ಆರಂಭದಲ್ಲಿ ಶೋರೂಮ್‌ಗಳನ್ನು ತಲುಪುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಹೀರೋ ಮೋಟೋಕಾರ್ಪ್ ಕಂಪನಿಯು ತನ್ನ ಮುಂಬರುವ ಹೀರೋ ಕರಿಜ್ಮಾ ಎಕ್ಸ್‌ಎಂಆರ್ ಬೈಕಿಗೆ ಸುಮಾರು ರೂ.1.70 ಲಕ್ಷ ಬೆಲೆಯನ್ನು ನಿಗದಿಪಡಿಸಬಹುದು. ಈ ಹೊಸ ಹೀರೋ ಬೈಕ್ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ 180 ರಿಂದ 200 ಸಿಸಿ ಮೋಟಾರ್‌ಸೈಕಲ್‌ಗಳ ವಿರುದ್ಧ ಸ್ಪರ್ಧಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

ಜನಪ್ರಿಯ ಕರಿಜ್ಮಾ ಬೈಕ್ ಬಗ್ಗೆ ಹೇಳುವುದಾದರೆ, 2003 ರಲ್ಲಿ ಹೀರೋ ಹೋಂಡಾದಿಂದ ಪ್ರೀಮಿಯಂ ಕೊಡುಗೆಯಾಗಿ ಬೈಕ್ ಅನ್ನು ಪರಿಚಯಿಸಲಾಯಿತು. ನಂತರ 2007 ರಲ್ಲಿ, ಹೀರೋ ಹೋಂಡಾ ಮೋಟಾರ್‌ಸೈಕಲ್ ಅನ್ನು ಕೆಲವು ಕಾಸ್ಮೆಟಿಕ್ ನವೀಕರಣಗಳೊಂದಿಗೆ ಮರು-ಬಿಡುಗಡೆ ಮಾಡಿತು ಮತ್ತು ಅದನ್ನು 'ಕರಿಜ್ಮಾ ಆರ್' ಎಂಬ ಹೆಸರನ್ನು ನೀಡಿದ್ದರು. ಎರಡು ವರ್ಷಗಳ ನಂತರ, ಹೀರೋ ಹೋಂಡಾ ಭಾರತದಲ್ಲಿ ಕರಿಜ್ಮಾ ZMR ಅನ್ನು ಬಿಡುಗಡೆ ಮಾಡಿತು.
ಈ ಕರಿಜ್ಮಾ ZMR ಮಾದರಿಯು ಸಂಪೂರ್ಣ ಫೇರಿಂಗ್ ಮತ್ತು ಫ್ಯೂಯಲ್ ಇಂಜೆಕ್ಷನ್ ಅನ್ನು ಒಳಗೊಂಡಿದೆ. ಈ ಬದಲಾವಣೆಗಳ ಹೊರತಾಗಿಯೂ, ಕರಿಜ್ಮಾ ZMR ಭಾರತೀಯ ಮಾರುಕಟ್ಟೆಯಲ್ಲಿ ಕರಿಜ್ಮಾ R ನಂತೆಯೇ ಯಶಸ್ಸನ್ನು ಅನುಭವಿಸಲು ಸಾಧ್ಯವಾಗಲಿಲ್ಲ. ಇದರಿಂದ ಹೀರೋ ಮೋಟೋಕಾರ್ಪ್ ಕಂಪನಿಯು ಈ ಬೈಕ್ ಅನ್ನು ಸ್ಥಗಿತಗೊಳಿಸಿದ್ದರು. ಇದೀಗ ಕರಿಜ್ಮಾ ಬೈಕ್ ಹೊಸ ಅವತಾರದಲ್ಲಿ ಬರುತ್ತಿದೆ.


Click it and Unblock the Notifications