Hero Karizma: ಬಿಡುಗಡೆಗೂ ಮುನ್ನವೇ ಹೀರೋ ಕರಿಜ್ಮಾ ಬೆಲೆ ಬಹಿರಂಗ? ಎದುರಾಳಿಗಳಿಗೆ ಶುರುವಾಯ್ತು ನಡುಕ!

ದೇಶದಲ್ಲಿ ಹಲವು ವರ್ಷಗಳಿಂದ ದ್ವಿಚಕ್ರ ವಾಹನ ಮಾರಾಟದಲ್ಲಿ ಹೀರೋ ಮೋಟೊಕಾರ್ಪ್ (Hero MotoCorp) ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಇದೀಗ, ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಲು ಕೆಲವೇ ದಿನಗಳಲ್ಲಿ ಯುವಕರ ಹಾಟ್ ಫೆವರೇಟ್ ಕರಿಜ್ಮಾ (Karizma) ಮೋಟಾರ್‌ಸೈಕಲ್ ರೀ-ಲಾಂಚ್ ಮಾಡಲು ಸಕಲ ಸಿದ್ಧತೆ ನಡೆಸುತ್ತಿದೆ.

ಹೀರೋ ಕಂಪನಿ, ಹೊಸ ತಲೆಮಾರಿನ ಕರಿಜ್ಮಾ ಎಕ್ಸ್ಎಂಆರ್ (Karizma XMR) ಬೈಕ್ ಅನ್ನು ಆಗಸ್ಟ್ 29 ರಂದು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈಗಾಗಲೇ, ಈ ಮೋಟಾರ್‌ಸೈಕಲ್ ಕುರಿತ ಹಲವು ಟೀಸರ್‌ಗಳನ್ನು ಹೀರೋ, ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದೆ. ಹೀಗಾಗಿ, ಯುವ ಗ್ರಾಹಕರಿಗೆ ಕರಿಜ್ಮಾ ಬೈಕ್ ಮೇಲೆ ಸಾಕಷ್ಟು ನೀರಿಕ್ಷೆಗಳು ಹೆಚ್ಚಾಗಿವೆ.

Hero Karizma: ಬಿಡುಗಡೆಗೂ ಮುನ್ನವೇ ಹೀರೋ ಕರಿಜ್ಮಾ ಬೆಲೆ ಬಹಿರಂಗ? ಎದುರಾಳಿಗಳಿಗೆ ಶುರುವಾಯ್ತು ನಡುಕ!

ಸದ್ಯ, ವಿಶ್ವಾಸಾರ್ಹ ಮೂಲಗಳಿಂದ ದೊರೆತ್ತಿರುವ ಮಾಹಿತಿ ಪ್ರಕಾರ, ಮುಂಬರಲಿರುವ ನೂತನ ಕರಿಜ್ಮಾ ಎಕ್ಸ್ಎಂಆರ್ ರೂ.1.90 ಲಕ್ಷದಿಂದ ರೂ.2.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗಬಹುದು. ಆದರೆ, ಈ ಬಗ್ಗೆ ಹೀರೋ ಕಂಪನಿಯಿಂದ ಈ ಬಗ್ಗೆ ಅಧಿಕೃತ ಮಾಹಿತಿಯಿಲ್ಲ. ಅದು, ಬಿಡುಗಡೆಗೊಂಡ ಮೇಲೆಯೇ ಎಲ್ಲದಕ್ಕೂ ಉತ್ತರ ಸಿಗಲಿದೆ.

ಈ ಮೊದಲೇ ವಿವಿಧ ಮಾಧ್ಯಮಗಳು ವರದಿ ಮಾಡಿದಂತೆ ಕರಿಜ್ಮಾ ಎಕ್ಸ್ಎಂಆರ್ ಬೈಕ್, 210 ಸಿಸಿ ಸಿಂಗಲ್ - ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿರಲಿದ್ದು, 25 bhp ಪವರ್, 30 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯ ಪಡೆದಿರುವ ನೀರಿಕ್ಷೆಯಿದೆ. 6 ಸ್ವೀಡ್ ಗೇರ್‌ಬಾಕ್ಸ್ ನೊಂದಿಗೆ ಗ್ರಾಹಕರಿಗೆ ಸಿಗಬಹುದು.

ಇದನ್ನು, ಕೆಲವೇ ದಿನಗಳ ಹಿಂದೆ, ಬಿಡುಗಡೆಗೊಳಿಸಿದ್ದ, '210' ಬ್ಯಾಡ್ಜಿಂಗ್‌ ಹೊಂದಿದ್ದ ಟೀಸರ್‌ನಲ್ಲಿಯೂ ತೋರಿಸಲಾಗಿತ್ತು. ಮತ್ತೊಂದು, ಟೀಸರ್‌ ವಿಡಿಯೋದಲ್ಲಿ ಮಸ್ಕ್ಯುಲರ್ ಫ್ಯುಯಲ್ ಟ್ಯಾಂಕ್ ಮೇಲೆ 'ಕರಿಜ್ಮಾ' ಎಂದು ಬರೆಯಲಾಗಿತ್ತು. ಬಹುತೇಕರಿಗೆ ಈ ಬೈಕ್, ಎಷ್ಟು ಮೈಲೇಜ್ ನೀಡಬಹುದೆಂದು ಕುತೂಹಲವಿರಬಹುದು. ಅದಕ್ಕೂ ಮೂಲಗಳಿಂದ ಉತ್ತರ ದೊರೆತ್ತಿದ್ದು, ನೂತನ ಕರಿಜ್ಮಾ 32.8 kmpl, ಮೈಲೇಜ್ ಕೊಡಬಹುದು.

ಹೊಸ ಹೀರೋ ಕರಿಜ್ಮಾ, ವಿನ್ಯಾಸದ ದೃಷ್ಟಿಯಿಂದ ಅತ್ಯಾಧುನಿಕವಾಗಿದ್ದು, ಆಕರ್ಷಕ ಎಲ್‌ಇಡಿ ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್ ಮತ್ತು ಟರ್ನ್ ಇಂಡಿಕೇಟರ್‌, ಅಲಾಯ್ ವೀಲ್ಸ್ ಹೊಂದಿರುವ ನೀರಿಕ್ಷೆಯಿದೆ. ಜೊತೆಗೆ ನವೀನ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ನೀರಿಕ್ಷೆಯಿದೆ. ಮುಖ್ಯವಾಗಿ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ಬ್ಲೂಟೂತ್ ಕನೆಕ್ಟಿವಿಟಿ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್‌ ಅನ್ನು ಪಡೆದಿರುವ ಸಾಧ್ಯತೆಯಿದೆ.

ಮುಂಬರಲಿರುವ ಹೀರೋ ಕರಿಜ್ಮಾದ ಬ್ರೇಕಿಂಗ್ ಸಿಸ್ಟಮ್, ಸಸ್ಪೆನ್ಷನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಇದು ಎರಡು ತುದಿಗಳಲ್ಲಿ ಡಿಸ್ಕ್ ಬ್ರೇಕ್ ಹೊಂದಿರುವ ನೀರಿಕ್ಷೆಯಿದೆ. ಜೊತೆಗೆ ಡ್ಯುಯಲ್ ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಪಡೆದಿರುವ ಸಾಧ್ಯತೆಯಿದೆ. ಸಸ್ಪೆನ್ಷನ್ ಸೆಟಪ್ ವಿಚಾರಕ್ಕೆ ಬರುವುದಾದರೆ, ಮುಂಭಾಗ ಟೆಲಿಸ್ಕೋಪಿಕ್ ಪೋರ್ಕ್ಸ್, ಹಿಂಭಾಗ ಮೊನೊಶಾಕ್‌ ಸಸ್ಪೆನ್ಷನ್ ಸೆಟಪ್ ಒಳಗೊಂಡಿರಬಹುದು.

ಹೀರೋ ಕಂಪನಿ, 2003ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಕರಿಜ್ಮಾ ಬೈಕ್ ಅನ್ನು ಬಿಡುಗಡೆ ಮಾಡಿತ್ತು. ಡಿಮ್ಯಾಂಡ್ ತೀವ್ರವಾಗಿ ಕುಸಿತವಾದ ಕಾರಣ, 2019ರಲ್ಲಿ ಇದರ ಸೇಲ್ಸ್ ಸ್ಥಗಿತಗೊಳಿಸಲಾಗಿತ್ತು. ಈ ಕರಿಜ್ಮಾ, 223 ಸಿಸಿ ಸಿಂಗಲ್ ಸಿಲಿಂಡರ್ ಫ್ಯುಯೆಲ್ ಇಂಜೆಕ್ಟ್ದ್ ಎಂಜಿನ್ ಹೊಂದಿತ್ತು. ಇನ್ನು, ಮುಂಬರಲಿರುವ ಕರಿಜ್ಮಾ ಬೈಕ್, ಬಜಾಜ್ ಪಲ್ಸರ್ ಹಾಗೂ ಸುಜುಕಿ ಜಿಕ್ಸರ್ ಬೈಕ್ ಗಳಿಗೆ ಪೈಪೋಟಿ ನೀಡಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, August 24, 2023, 15:39 [IST]
English summary
Hero karizma xmr price reveal for sources details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+