Karizma XMR: ಯುವಕರ ಹುಚ್ಚೆಬ್ಬಿಸಿ ಮರೆಯಾದ ದೈತ್ಯ ಮರಳಿ ಮಾರುಕಟ್ಟೆಗೆ... ಟೀಸರ್ ಬಿಡುಗಡೆ
ಒಂದಾನೊಂದು ಕಾಲದಲ್ಲಿ ಯುವಕರ ಕನಸಿನ ಬೈಕ್ ಹೀರೋ ಕರೀಜ್ಮಾ ಕಾಲಾನಂತರದಲ್ಲಿ ಹೆಚ್ಚಾದ ಪೈಪೋಟಿ, ಹೊಸ ಬೈಕ್‌ಗಳ ಆಗಮನ ತನ್ನ ಅವನತಿಗೆ ಕಾರಣವಾಯಿತು. ಆದ್ರೆ ಈಗಲೂ ಈ ಹೆಸರು ಎಲ್ಲರಿಗೂ ಚಿರಪರಿಚಿತವಾದ ಕಾರಣ ಬೈಕ್ ಅನ್ನು ಈಗಿನ ಬೇಡಿಕೆಗಳಿಗೆ ತಕ್ಕಂತೆ ಬಿಡುಗಡೆ ಮಾಡಿದ್ರೆ ಯಶಸ್ವಿಯಾಗಿ ಮಾರಾಟವಾಗಲಿದೆ ಎಂಬುದು ಕಂಪನಿಯ ನಂಬಿಕೆಯಾಗಿದೆ.
ಈಗಾಗಲೇ Hero Motocorp ತನ್ನ ಬ್ರಾಂಡ್‌ಗೆ ಹೆಸರು ತಂದುಕೊಟ್ಟ Hero Karizma ವನ್ನು ಈಗ ಹೀರೋ ಕರೀಜ್ಮಾ XMR ಹೆಸರಿನಲ್ಲಿ ತರುವುದಾಗಿ ಘೋಷಿಸಿದೆ. ಇದೀಗ ಎರಡನೇ ಬಾರಿ ಮೋಟಾರ್‌ಸೈಕಲ್‌ನ ಹೊಸ ಟೀಸರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇತ್ತೀಚಿನ ಟೀಸರ್ ಮುಂಬರುವ ಹೀರೋ ಕರಿಜ್ಮಾ XMR ಮೋಟಾರ್‌ಸೈಕಲ್‌ನ ಹೆಡ್‌ಲೈಟ್ ಡಿಸೈನ್ ಅನ್ನು ಬಹಿರಂಗಪಡಿಸಿದೆ.

ಇತ್ತೀಚಿನ ಟೀಸರ್ಳ ಪ್ರಕಾರ, ಹೀರೋ ಕರಿಜ್ಮಾ XMR ಎಲ್ಇಡಿ ಟೆಕ್ನಾಲಜಿಯೊಂದಿಗೆ 4 ಪ್ರೊಜೆಕ್ಟರ್‌ಗಳನ್ನು ಒಳಗೊಂಡಿರುವಂತೆ ಕಾಣುತ್ತಿದೆ. ಈ ಸೆಟಪ್ ಮೂಲಕ ಅದ್ಭುತ ಬೆಳಕನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಮುಂಬರುವ ಹೀರೋ ಕರಿಜ್ಮಾ ಎಕ್ಸ್‌ಎಂಆರ್ ಮೋಟಾರ್‌ಸೈಕಲ್ ಅನ್ನು ಆಗಸ್ಟ್ 29 ರಂದು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಇದಲ್ಲದೆ, ಬಾಲಿವುಡ್ ನಟ ಹೃತಿಕ್ ರೋಷನ್ ಅವರು ಇದರ ಬ್ರಾಂಡ್ ಅಂಬಾಸಿಡರ್ ಆಗಿರುವಂತೆ ತೋರುತ್ತಿದೆ. ಮುಂಬರುವ ಹೀರೋ ಕರಿಜ್ಮಾ ಎಕ್ಸ್‌ಎಂಆರ್ ಕುರಿತು ಮಾತನಾಡುವುದಾದರೆ, ಮೋಟಾರ್‌ಸೈಕಲ್ ಸಂಪೂರ್ಣ-ಫೇರ್ಡ್ ಮಾಡೆಲ್ ಆಗಿರುತ್ತದೆ, ಅರ್ಧ ಫೇರಿಂಗ್‌ನೊಂದಿಗೆ ಬಂದ OG ಹೀರೋ ಹೋಂಡಾ ಕರಿಜ್ಮಾ ಮೋಟಾರ್‌ಸೈಕಲ್‌ಗಿಂತ ಭಿನ್ನವಾಗಿರಲಿದೆ ಎಂದು ಮೂಲಗಳು ತಿಳಿಸಿವೆ.

ಅಲ್ಲದೆ, ಮೊದಲ ತಲೆಮಾರಿನ ಹೀರೋ ಹೋಂಡಾ ಕರಿಜ್ಮಾದಂತಲ್ಲದೆ, ಹೀರೋ ಕರಿಜ್ಮಾ ಎಕ್ಸ್‌ಎಂಆರ್ ವಿಭಜಿತ ಆಸನವನ್ನು (ಸ್ಪ್ಲಿಟ್ ಸೀಟ್) ಹೊಂದಿರುತ್ತದೆ. ಈ ಹಿಂದೆ ಸೋರಿಕೆಯಾಗಿದ್ದ ಚಿತ್ರಗಳಿಂದ ಗುರುತಿಸಲ್ಪಟ್ಟ ಇತರ ಗಮನಾರ್ಹ ಬದಲಾವಣೆಗಳೆಂದರೆ ಹಿಂಭಾಗದಲ್ಲಿ ಬಹು ಎತ್ತರ, ಸ್ಪೋರ್ಟಿ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು, ಸ್ವಲ್ಪ ಹಿಂಬದಿ-ಸೆಟ್ ಫೂಟ್ ಪೆಗ್‌ಗಳು, ಹೊಸ ಹಗುರವಾದ ಅಲಾಯ್ ವೀಲ್‌ಗಳು, ಫೇರಿಂಗ್-ಮೌಂಟೆಡ್ ರಿಯರ್ ವ್ಯೂ ಮಿರರ್, ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್ ಮತ್ತು ಮೊನೊ ರಿಯರ್ ಶಾಕ್ ಅಬ್ಸಾರ್ಬರ್ ಒಳಗೊಂಡಿರಲಿದೆ.
ಪವರ್‌ಟ್ರೇನ್‌ಗೆ ಬರುವುದಾದರೆ, ಮುಂಬರುವ ಹೊಸ ಹೀರೋ ಕರಿಜ್ಮಾ XMR ಮೋಟಾರ್‌ಸೈಕಲ್ 210cc, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಈ ಎಂಜಿನ್ ಸುಮಾರು 25bhp ಮತ್ತು 27Nm ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಧ್ಯತೆಯಿದೆ. ಭಾರತದಲ್ಲಿ ಮಾರಾಟವಾಗುವ ಹೆಚ್ಚಿನ ಫೇರ್ಡ್ ಮೋಟಾರ್‌ಸೈಕಲ್‌ಗಳಿಗಿಂತ ಭಿನ್ನವಾಗಿ ಇದು ಬರಲಿದೆ.

ಈ ಇಂಜಿನ್ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ ಎಂದು ನಿರೀಕ್ಷಿಸಲಾಗಿದೆ. ಮುಂಬರುವ ಹೀರೋ ಕರಿಜ್ಮಾ ಎಕ್ಸ್‌ಎಂಆರ್ ಮೋಟಾರ್‌ಸೈಕಲ್ ಹೊಸ ಚಾಸಿಸ್ ಅನ್ನು ಹೊಂದಿರಬಹುದು. ಹೆಚ್ಚುವರಿಯಾಗಿ, ಮುಂಬರುವ ಕರಿಜ್ಮಾ ಎಕ್ಸ್‌ಎಂಆರ್ ಮೋಟಾರ್‌ಸೈಕಲ್ ಎಲ್‌ಇಡಿ ಹೆಡ್‌ಲೈಟ್‌ಗಳು, ಎಲ್‌ಇಡಿ ಟೈಲ್‌ಲ್ಯಾಂಪ್‌ಗಳು, ಬ್ಲೂಟೂತ್ ಕನೆಕ್ಟಿವಿಟಿ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.
ಗೇರ್‌ಶಿಫ್ಟ್ ಇಂಡಿಕೇಟರ್, DTE ಮತ್ತು ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. ಹೇಳುವುದಾದರೆ, ಮುಂಬರುವ ಹೀರೋ ಕರಿಜ್ಮಾ ಎಕ್ಸ್‌ಎಂಆರ್ ಮೋಟಾರ್‌ಸೈಕಲ್‌ನ ಶೈಲಿಯು ತೀಕ್ಷ್ಣವಾದ ಲೈನ್‌ಗಳೊಂದಿಗೆ ಮಸ್ಕುಲರ್ ಲುಕ್ ಅತ್ಯಂತ ಸ್ಪೋರ್ಟಿಯಾಗಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ, ಮೋಟಾರ್‌ಸೈಕಲ್‌ನ ಇತ್ತೀಚಿನ ಟೀಸರ್ ಅನ್ನು ನೋಡುವಾಗ, ಕರಿಜ್ಮಾ XMR ಶಕ್ತಿಯುತ ಹೆಡ್‌ಲೈಟ್ ಸೆಟಪ್ ಅನ್ನು ಹೊಂದಿರುವುದು ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








