Hero Karizma: ಬಹುನೀರಿಕ್ಷಿತ ಹೀರೋ ಕರಿಜ್ಮಾ ಟೀಸರ್ ಬಿಡುಗಡೆ, ಪ್ರತಿಸ್ಪರ್ಧಿಗಳಿಗೆ ನಡುಕ!
ಭಾರತದಲ್ಲಿ ಹೀರೋ ಮೋಟೊಕಾರ್ಪ್ (Hero MotoCorp) ನಂಬರ್ 1 ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿದೆ. ಅದರ ಬೈಕ್ ಹಾಗೂ ಸ್ಕೂಟರ್‌ಗಳು ಅತ್ಯುತ್ತಮವಾಗಿದ್ದು, ತನ್ನ ಮಾರಾಟ ಪ್ರಮಾಣವನ್ನು ಮತ್ತಷ್ಟು ದ್ವಿಗುಣಗೊಳಿಸಲು ಕಂಪನಿಯು ಶೀಘ್ರದಲ್ಲೇ ಎವರ್ ಗ್ರೀನ್ ಕರಿಜ್ಮಾ (Karizma) ಬೈಕ್ ಲಾಂಚ್ ಮಾಡಲು ಸಿದ್ಧತೆ ನಡೆಸುತ್ತಿದೆ.
ದೇಶೀಯ ಮಾರುಕಟ್ಟೆಯಲ್ಲಿ ಹೀರೋ ಕಂಪನಿಯು ಹೊಸ ತಲೆಮಾರಿನ ಕರಿಜ್ಮಾ ಎಕ್ಸ್ಎಂಆರ್ (Karizma XMR) ಮೋಟಾರ್‌ಸೈಕಲ್ ಅನ್ನು ಆಗಸ್ಟ್ 29ರಂದು ಪರಿಚಯಿಸಲಿದೆ. ಇದೀಗ, ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಬೈಕ್ ಟೀಸರ್ ಬಿಡುಗಡೆಗೊಳಿಸಿದೆ. ಈ ವಿಡಿಯೋದಲ್ಲಿ ಮಸ್ಕ್ಯುಲರ್ ಫ್ಯುಯಲ್ ಟ್ಯಾಂಕ್ ಮೇಲೆ ಕರಿಜ್ಮಾ ಎಂದು ಬರೆಯಲಾಗಿದೆ. ಇದನ್ನು ಗಮನಿಸಿದಾಗ ನೂತನ ಮೋಟಾರ್‌ಸೈಕಲ್ ಹಿಂದಿನ ಮಾದರಿಗಿಂತ ಪವರ್ ಫುಲ್ ಆಗಿರಲಿದೆ.

ಕಳೆದ ಮೇ ತಿಂಗಳು, ಹೀರೋ, ತನ್ನ ಕರಿಜ್ಮಾ ಎಕ್ಸ್ಎಂಆರ್ ಬೈಕ್‌ನ್ನು ಡೀಲರ್ ಈವೆಂಟ್ ನಲ್ಲಿ ಪ್ರದರ್ಶನ ಮಾಡಿತ್ತು. ಈ ಮೋಟಾರ್‌ಸೈಕಲ್‌ನ ಸ್ಪೈ ಶಾಟ್‌ಗಳು ಕೂಡ ಅಂತರ್ಜಲದಲ್ಲಿ ಸೋರಿಕೆಯಾಗಿದ್ದವು. ಜೊತೆಗೆ ಕಂಪನಿಯು, ವಿನ್ಯಾಸದ ದೃಷ್ಟಿಯಿಂದ ಕರಿಜ್ಮಾ ಎಕ್ಸ್ಎಂಆರ್ ಅತ್ಯಾಧುನಿಕ ಡಿಸೈನ್ ಹೊಂದಿದ್ದು, ಎಲ್‌ಇಡಿ ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್ ಹಾಗೂ ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿರುವ ನೀರಿಕ್ಷೆಯಿದೆ.
ಎಂಜಿನ್ ಕಾರ್ಯಕ್ರಮತೆ ಬಗ್ಗೆ ಮಾತನಾಡುವುದಾದರೆ, ಹೀರೋ ಕರಿಜ್ಮಾ ಎಕ್ಸ್ಎಂಆರ್ ಬೈಕ್, 210 ಸಿಸಿ ಸಿಂಗಲ್ - ಸಿಲಿಂಡರ್ ಲಿಕ್ವಿಡ್ - ಕೂಲ್ಡ್ ಎಂಜಿನ್ ಹೊಂದಿರಲಿದ್ದು, 25 bhp ಗರಿಷ್ಠ ಪವರ್ ಹಾಗೂ 30 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿರಬಹುದು. 6 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಹಳೆಯ ತಲೆಮಾರಿನ ಕರಿಜ್ಮಾ ಝಡ್ಎಂಆರ್ ಮೋಟಾರ್‌ಸೈಕಲ್, 223 ಸಿಸಿ ಸಿಂಗಲ್ ಸಿಲಿಂಡರ್ ಫ್ಯುಯೆಲ್ ಇಂಜೆಕ್ಟ್ದ್ ಎಂಜಿನ್ ಹೊಂದಿದ್ದು, 20 bhp ಪವರ್, 19.7 Nm ಪೀಕ್ ಟಾರ್ಕ್ ಹೊರ ಹಾಕುವ ಸಾಮರ್ಥ್ಯ ಹೊಂದಿತ್ತು. ಹೊಸ ಬೈಕ್, ಬಜಾಜ್ ಪಲ್ಸರ್ RS 200, ಯಮಹಾ R15 V4.0 ಹಾಗೂ ಸುಜುಕಿ ಜಿಕ್ಸರ್ SF 250 ಮೋಟಾರ್‌ಸೈಕಲ್ ಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದೆ.
ನೂತನ ಕರಿಜ್ಮಾ ಎಕ್ಸ್ಎಂಆರ್ ಬೈಕ್, ಈಗಿನ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ನಿರೀಕ್ಷೆಯಿದೆ. ಬ್ಲೂಟೂತ್ ಕನೆಕ್ಟಿವಿಟಿ, ಟರ್ನ್ - ಬೈ - ಟರ್ನ್ ನ್ಯಾವಿಗೇಷನ್‌ನೊಂದಿಗೆ ಆಕರ್ಷಕ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆದಿರುವ ಸಾಧ್ಯತೆಯಿದ್ದು, ಇದರೊಂದಿಗೆ ಬ್ಲ್ಯಾಕ್ ಅಲಾಯ್ ವೀಲ್ಸ್, ಸೈಡ್-ಮೌಂಟೆಡ್ ಎಕ್ಸಾಸ್ಟ್ ಸಿಸ್ಟಮ್ ಮತ್ತು ಸ್ಪ್ಲಿಟ್ ಸೀಟ್‌ನ್ನು ಒಳಗೊಂಡಿರಬಹುದು.
ಹೊಸ ಕರಿಜ್ಮಾ ಎಕ್ಸ್ಎಂಆರ್ ಬೈಕ್ ಬಹುತೇಕ, ಫ್ರಂಟ್ ಟೆಲಿಸ್ಕೋಪಿಕ್ ಪೋರ್ಕ್ಸ್, ರೇರ್ ಅಡ್ಜಸ್ಟ್ಏಬಲ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿರಬಹುದು. ಜೊತೆಯಲ್ಲಿ ಡ್ಯುಯಲ್ - ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಪಡೆದಿರುವ ನೀರಿಕ್ಷೆಯಿದೆ. ಇದರೊಂದಿಗೆ ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿರುವ ಸಾಧ್ಯತೆಯಿದ್ದು, ಎಲ್ಲದಕ್ಕೂ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.
ಬೆಲೆ ವಿಚಾರವಾಗಿ ಮಾತನಾಡುವುದಾದರೆ, ಹೀರೋ ಕಂಪನಿಯು ಈ ಬೈಕ್ ದರವನ್ನು ಈವರೆಗೆ ಬಹಿರಂಗಪಡಿಸಲ್ಲ. ಆದರೂ ಸರಿ ಸುಮಾರು ರೂ.1.8 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗುವ ನೀರಿಕ್ಷೆಯಿದೆ. ಇನ್ನು, ಕಂಪನಿಯು 'ಕರಿಜ್ಮಾ ZMR' ಬೈಕ್ ಅನ್ನು 2003ರಲ್ಲಿ ಬಿಡುಗಡೆ ಮಾಡಿತ್ತು. ಬೇಡಿಕೆ ಕಳೆದುಕೊಂಡ ಹಿನ್ನೆಲೆ, 2019ರಲ್ಲಿ ಇದರ ಮಾರಾಟವನ್ನು ಸ್ಥಗಿತಗೊಳಿಸಲಾಯಿತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








