ಚರಿತ್ರೆ ಸೃಷ್ಟಿಸಲು ಬರುತ್ತಿವೆ ವಿಶ್ವಾಸಾರ್ಹ Hero ಕಂಪನಿ 3 ಬೈಕ್‌ಗಳು: ಅವೇ ಟ್ರೆಂಡ್ ಸೆಟರ್ಸ್..!

ಭಾರತದಲ್ಲಿ ಹೀರೋ (Hero) ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಅದರ ಸ್ಕೂಟರ್ ಹಾಗೂ ಬೈಕ್‌ಗಳು ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದ್ದು, ಜನಮಾನಸದಲ್ಲಿ ಬೀಡುಬಿಟ್ಟಿವೆ. ಇದೀಗ, ಕಂಪನಿಯು ಮುಂಬರುವ ದಿನಗಳಲ್ಲಿ ಟ್ರೆಂಡ್ ಸೆಟ್ ಮಾಡುವ ಮೂರು ಬೈಕ್‌ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದು, ಆ ಬಗ್ಗೆ ಇಲ್ಲಿದೆ ಮಾಹಿತಿ.

ಮೊದಲಿಗೆ ಹೀರೋದ ಜನಪ್ರಿಯ ಕರಿಜ್ಮಾ ಬಗ್ಗೆ ಮಾತನಾಡೋಣ. ವರ್ಷಗಳ ಹಿಂದೆ, ಯುವಕರ ಫೆವರೇಟ್ ಬೈಕ್‌ ಆಗಿ ಭಾರತದಲ್ಲಿ ರಸ್ತೆಗಳಲ್ಲಿ ಕರಿಜ್ಮಾ ರಾರಾಜಿಸಿತ್ತು. ಆದರೆ, ಕೆಲಕಾರಣಗಳಿಗೆ ಕಂಪನಿ ಇದರ ಮಾರಾಟವನ್ನು ಸ್ಥಗಿತಗೊಳಿಸಿತ್ತು. ಕಡೆಗೂ ಅದರ ಅಭಿಮಾನಿಗಳ ಮನೋವೇದನೆಯನ್ನು ಹೀರೋ ಅರ್ಥ ಮಾಡಿಕೊಂಡಂತೆ ಕಾಣುತ್ತಿದ್ದು, ತೀರಾ ಇತ್ತೀಚೆಗೆ ಹೊಸ ಕರಿಜ್ಮಾ XMR ಬೈಕ್‌ನ್ನು ಡೀಲರ್ ಈವೆಂಟ್ ನಲ್ಲಿ ಪ್ರದರ್ಶನ ಮಾಡಿತ್ತು.

ಚರಿತ್ರೆ ಸೃಷ್ಟಿಸಲು ಬರುತ್ತಿವೆ ವಿಶ್ವಾಸಾರ್ಹ Hero ಕಂಪನಿ 3 ಬೈಕ್‌ಗಳು: ಅವೇ ಟ್ರೆಂಡ್ ಸೆಟರ್ಸ್..!

ನೂತನ ಕರಿಜ್ಮಾ ಸಾಕಷ್ಟು ಅತ್ಯಾಧುನಿಕ ನವೀಕರಣಗಳೊಂದಿಗೆ ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ಎಂಟ್ರಿಕೊಡಲು ಸಿದ್ದವಾಗಿದ್ದು, ಟೂ ಪೀಸ್ ಸೀಟ್, ಡ್ಯುಯಲ್ ಟೋನ್ ಫ್ಯುಯೆಲ್ ಟ್ಯಾಂಕ್, ಫ್ರಂಟ್ ಟೆಲಿಸ್ಕೋಪಿಕ್ ಪೋರ್ಕ್ಸ್, ರೇರ್ ಅಡ್ಜಸ್ಟ್ಏಬಲ್ ಮೊನೊಶಾಕ್‌ ಸಸ್ಪೆನ್ಷನ್ ಸೆಟಪ್, ಡ್ಯುಯಲ್ ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ನಂತಹ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿರಲಿದೆ.

ಈ ಹೊಚ್ಚ ಹೊಸ ಕರಿಜ್ಮಾ 210 ಸಿಸಿ ಲಿಕ್ವಿಡ್ ಕೋಲ್ಡ್ ಎಂಜಿನ್ ಹೊಂದಿರಲಿದ್ದು, 25 bhp ಗರಿಷ್ಠ ಪವರ್ ಹಾಗೂ 30 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿರಲಿದೆ ಜೊತೆಗೆ 6 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು. ಆದರೆ, ಕಂಪನಿಯು ಈ ಬೈಕ್ ಎಷ್ಟು ಬೆಲೆಯನ್ನು ಹೊಂದಿರುತ್ತದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಅಂದಾಜಿನ ಪ್ರಕಾರ ರೂ.1.8 ಲಕ್ಷ ಬೆಲೆಯಲ್ಲಿ ದೊರೆಯಬಹುದು.

ಈಗಾಗಲೇ, ಹೀರೋ ನೂತನ 'ಎಕ್ಸ್‌ಪಲ್ಸ್ 400 ಅಡ್ವೆಂಚರ್' ಬೈಕ್ ಅನ್ನು ಪರೀಕ್ಷೆ ಮಾಡಿದ್ದು, ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು. ಇದು 421 ಸಿಸಿ ಸಾಮರ್ಥ್ಯದ ಪವರ್ ಫುಲ್ ಎಂಜಿನ್ ಹೊಂದಿರಲಿದ್ದು, 40 bhp ಗರಿಷ್ಠ ಪವರ್ ಹಾಗೂ 35 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.

ಈ ಬೈಕ್ ಹತ್ತು ಹಲವು ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಅಪ್ಸೆಡ್-ಡೌನ್ ಫ್ರಂಟ್ ಫೋರ್ಕ್‌, ರೇರ್ ಮೊನೊ ಶಾಕ್ ಸಸ್ಪೆಷನ್ ಸೆಪಟ್ ಪಡೆದಿರಲಿದೆ. ಜೊತೆಗೆ 21 ಇಂಚಿನ ಅಲಾಯ್ ವೀಲ್ಸ್, ಟ್ಯೂಬ್ ಲೆಸ್ ಟೈಯರ್ಸ್ ಹೊಂದಿರಲಿದೆ. ಸುಮಾರು ರೂ.1,70,000 - ರೂ.1,90,000 ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಬಹದು. ಈ ಹೀರೋ ಎಕ್ಸ್‌ಪಲ್ಸ್ 400 ಅಡ್ವೆಂಚರ್ ಬೈಕ್ ಗೆ ಕೆಟಿಎಂ 390 ಅಡ್ವೆಂಚರ್ ಹಾಗೂ ಹಿಮಾಲಯನ್ 450 ಪ್ರತಿಸ್ಪರ್ಧಿಯಾಗಿವೆ.

ಹೀರೋ ಕಂಪನಿ 400ಸಿಸಿ 'ಸ್ಪೋರ್ಟ್ ಟೂರರ್' ಬೈಕ್‌ನ್ನು ಕೂಡ ಭಾರತದ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲು ರೆಡಿ ಮಾಡಿದ್ದು, ಇದನ್ನು ಕೂಡ ಹಲವು ಬಾರಿ ಟೆಸ್ಟ್ ಗೆ ಒಳಪಡಿಸಿದೆ. ಈ ಬೈಕ್ ಕ್ಲಿಪ್-ಆನ್ ಹ್ಯಾಂಡಲ್‌ಬಾರ್ಸ್, ಫೇರಿಂಗ್ ಮೌಂಟೆಡ್ ಮಿರರ್ಸ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಡಿಸ್ಕ್ ಬ್ರೇಕ್ಸ್, ಡ್ಯುಯಲ್-ಚಾನೆಲ್ ABS ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಒಟ್ಟಾರೆ, ಹೀರೋ ದೇಶೀಯ ಮಾರುಕಟ್ಟೆಯಲ್ಲಿ ಕರಿಜ್ಮಾ XMR, ಎಕ್ಸ್‌ಪಲ್ಸ್ 400 ಅಡ್ವೆಂಚರ್ ಹಾಗೂ ಸ್ಪೋರ್ಟ್ ಟೂರರ್ ಬೈಕ್ ಬಿಡುಗಡೆ ಮಾಡುವ ಮೂಲಕ ಹೊಸ ಚರಿತ್ರೆ ಸೃಷ್ಟಿಸಲು ಹೊರಟಿದೆ. ಅದರಲ್ಲೂ ಕರಿಜ್ಮಾ ಈಗಾಗಲೇ ಯುವಕರ ಹಾಟ್ ಫೆವರೇಟ್ ಆಗಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸಬಹುದು. ಜೂನ್ 14ರಂದು ಅದರ ಟೀಸರ್ ಬಿಡುಗಡೆಯಾಗುವ ನೀರಿಕ್ಷೆ ಇದ್ದು, ಅಂದೇ ಎಲ್ಲದಕ್ಕೂ ತೆರೆ ಬೀಳಲಿದೆ.

Article Published On: Friday, June 9, 2023, 16:32 [IST]
English summary
Hero launch soon 3 bikes including karizma details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+