ಹಾರ್ಲೆ ಡೇವಿಡ್ಸನ್ ಆಧಾರಿತ ಬೈಕ್ ನಿರ್ಮಿಸಲು ರೆಡಿಯಾದ ಭಾರತೀಯರ ನೆಚ್ಚಿನ ಹೀರೋ: ಹಳೇ ಗತವೈಭವಕ್ಕೆ ಮರಳುತ್ತಾ?
ಇತ್ತೀಚೆಗಷ್ಟೇ ಭಾರತದಲ್ಲಿ ಅಮೆರಿಕಾದ ಪ್ರಖ್ಯಾತ ಮೊಟೋರ್‌ಸೈಕಲ್ ನಿರ್ಮಾಣ ಕಂಪನಿಯಾದ ಹಾರ್ಲೆ ಡೇವಿಡ್‌ಸನ್ ಬೈಕ್ ಒಂದನ್ನು ಅನಾವರಣ ಮಾಡಿತ್ತು. ಹಾರ್ಲೆ ಡೇವಿಡ್ಸನ್ X440 ಎಂಬ ಬೈಕನ್ನು ಕಂಪನಿಯು ಅನಾವರಣಗೊಳಿಸಿತ್ತು. ಇದೀಗ ಭಾರತೀಯ ಮೋಟಾರ್‌ಸೈಕಲ್ ನಿರ್ಮಾಣ ಕಂಪನಿ ಈ X440 ಆಧರಿಸಿದ ಬೈಕನ್ನು ನಿರ್ಮಾಣ ಮಾಡುತ್ತಿದೆ.
ಭಾರತೀಯ ಪ್ರಸಿದ್ದ ಮೊಟಾರ್ ಸೈಕಲ್ ನಿರ್ಮಾಣ ಕಂಪನಿ ಹೀರೋ ಮೋಟಾರ್ ಕಾರ್ಪ್ (Hero Motor Corp) ಸಂಸ್ಥೆಯು ಹಾರ್ಲೆ ಡೇವಿಡ್ಸನ್ X440 ಆಧರಿಸಿ ಇದೇ ಪ್ಲಾಟ್‌ಫಾರ್ಮ್ ನಲ್ಲಿ ಬೈಕನ್ನು ಬಿಡುಗಡೆಗೊಳಿಸಲು ತೀರ್ಮಾನಿಸಿದ್ದು, ಈ ಬೈಕ್ ಮುದಿನ ವರ್ಷ ಅಂದರೆ 2024 ರ ಮಾರ್ಚ್ ತಿಂಗಳಲ್ಲಿ ಗ್ರಾಹಕರ ಬಳಿ ಕಂಪನಿ ತಲುಪಿಸಲಿದೆ.

ಮೊನ್ನೆಯಷ್ಟೇ ಹೀರೋ ಮೋಟಾರ್ಕಾರ್ಪ್, ಪ್ರಸಿದ್ದ ಅಮೇರಿಕನ್ ಬೈಕ್ ಮೇಕರ್ ಆದ ಹಾರ್ಲೆ ಡೇವಿಡಸ್‌ಸನ್ ಜೊತೆಗೂಡಿ X440 ಎಂಬ 440 ಸಿಸಿ ಯ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣ ಮಾಡಿತ್ತು. ಈ ಸಹಯೋಜನೆಯ ಭಾಗವಾಗಿ ಹೀರೋ ಮೋಟೋರ್ ಕಾರ್ಪ್ ಸಂಸ್ಥೆಯು ತಮ್ಮ ಬೈಕನ್ನು ಬಿಡುಗಡೆಗೊಳಿಸಲಿದೆ.
ಇನ್ನು ಮಾಹಿತಿಗಳ ಪ್ರಕಾರ ಹೀರೋ ಮೊಟಾರ್ ಕಾರ್ಪ್ ಕಂಪನಿಯು ಲಾಂಚ್ ಮಾಡಲಿರುವ ಬೈಕ್ ನ ಡಿಸೈನ್ ವಿನ್ಯಾಸಗಳು ಬಹುತೇಕ ಈಗಾಗಲೇ ಹಾರ್ಲೆ ಡೇವಿಡ್‌ಸನ್ ಅನಾವರಣಗೊಳಿಸಿರುವ X440 ಬೈಕ್‌ನ ರೀತಿಯಲ್ಲೇ ಇರಲಿದ್ದು ಕೆಲವು ಬದಲಾವಣೆಗಳನ್ನು ಹೀರೋ ಕಂಪನಿ ಮಾಡಲಿದೆ ಎಂದು ತಿಳಿದು ಬಂದಿದೆ.

ಮೂಲಗಳ ಪ್ರಕಾರ 17 ಇಂಚ್ ವ್ಹೀಲ್ ಮತ್ತು ಬೈಕ್ ನ ಲುಕ್ ನಲ್ಲಿ ಹೀರೋ ಕಂಪನಿಯು ಕೆಲವೇ ಕೆಲವು ಮಾರ್ಪಾಡುಗಳನ್ನು ಮಾಡಲಿದ್ದು ಯುವ ಗ್ರಾಹಕರನ್ನು ಹೆಚ್ಚಗಿ ಈ ಪ್ರಾಡಕ್ಟ್ ಮೂಲಕ ಹೀರೋ ಟಾರ್ಗೆಟ್ ಮಾಡಲಿದೆ. ಇನ್ನು ಸಿಸಿ ಯಲ್ಲೂ ಬೇಕಾದರೆ ಹೀರೋ ಸ್ವಲ್ಪ ಬದಲಾವಣೆಗಳನ್ನು ಮಾಡಬಹುದು.
ಅಷ್ಟು ಮಾತ್ರವಲ್ಲದೇ ಹೀರೋ ಅವರ ಸಂಕಲ್ಪಕ್ಕೆನೇ ಈ ಬೈಕನ್ನು ಬದಲಾಯಿಸಬಹುದು ಎಂಬ ಗುಮಾನಿಯೂ ಇದೆ. ಏನೇ ಆದರೂ ಮುಂದಿನ ವರ್ಷದ ಮಾರ್ಚ್‌ನಲ್ಲಿ ಈ ಬೈಕ್ ಮಾರುಕಟ್ಟೆ ಪ್ರವೇಶಿಸಲಿದ್ದು ಭಾರತೀಯ ಬೈಕ್ ಪ್ರೇಮಿಗಳ ಪಾಲಿಗೆ ಹೀರೋ ಕಂಪನಿ ಈ ಬೈಕ್ ಅನ್ನು ಲಾಂಚ್ ಮಾಡುತ್ತಿರುವುದು ವರದಾನವಾಗಿರಲಿದೆ.
ಇನ್ನು ಭಾರತದಲ್ಲಿ ಅನಾವರಣವಾಗಿರುವ ಹಾರ್ಲೆ ಡೇವಿಡ್ಸನ್ X440 ಬೈಕ್‌ನ ನಿರ್ಮಾನ ಭಾರತದಲ್ಲಿರುವ ಹೀರೋ ಮೋಟಾರ್ ಕಾರ್ಪ್ ನ 'ನೀರ್ಮಾಣ’ ಪ್ಲಾಂಟ್‌ನಲ್ಲಿ ನಡೆಯಲಿದೆ. ಇನ್ನು ಈ ಬೈಕ್‌ನ ಬೆಲೆಯನ್ನು ನೊಡುವುದಾದರೆ ಈ ಹಾರ್ಲೆ ಡೇವಿಡ್ಸನ್ X440 ಭಾರತದಲ್ಲಿ ಸುಮಾರು 2.29 ಲಕ್ಷದಿಂದ 2.69 ಲಕ್ಷದವರೆಗೆ ಇದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








