ಭಾರತೀಯರ ನೆಚ್ಚಿನ ಹೀರೋ ಕಂಪನಿಯ ಈ ಬೈಕ್‌ ಇನ್ನಿಲ್ಲ: ಇದಕ್ಕೆ ಪರಿಹಾರನೂ ಇಲ್ಲಿದೆ ನೋಡಿ

ಭಾರತೀಯರ ನೆಚ್ಚಿನ ಬೈಕ್‌ ನಿರ್ಮಾಣ ಕಂಪನಿ ಯಾವುದೆಂದು ಕೇಳಿದರೆ ಎಲ್ಲರೂ ಒಂದಾಗಿ ಹೇಳುವಂತಹ ಹೆಸರು ಬೇರೆ ಯಾವುದೂ ಅಲ್ಲ, ಅದು ಹೀರೋ. ಹೌದು, ತಲೆ ತಲೆಮಾರುಗಳಿಂದ ಹೀರೋ ಬೈಕ್‌ ಕಂಪನಿಯು ಭಾರತೀಯರ ಅಭಿರುಚಿಗೆ ತಕ್ಕಂತೆ ಬೈಕ್‌ಗಳನ್ನು ನಿರ್ಮಿಸಿ ನಮ್ಮೆಲ್ಲರ ಜೀವನದಲ್ಲಿ ಹಾಸು ಹೊಕ್ಕಾಗಿದೆ.

ಇದೀಗ ಹೀರೋ ಕಂಪನಿಯು ಬಹಳಷ್ಟು ವರ್ಷಗಳಿಂದ ಭಾರತೀಯರ ನೆಚ್ಚಿನ ಬೈಕ್‌ ಒಂದರ ನಿರ್ಮಾಣವನ್ನು ನಿಲ್ಲಿಸುತ್ತಿದ್ದು, ಹೀರೋ ಬೈಕ್‌ ಪ್ರೇಮಿಗಳಲ್ಲಿ ನಿರಾಸೆಯನ್ನು ಉಂಟು ಮಾಡುತ್ತಿದೆ. ಹೌದು, ಹೀರೋ ಕಂಪನಿಯು ತನ್ನ ಪ್ಯಾಷನ್‌ ಪ್ರೊ (Hero Passion Pro) ಬೈಕ್‌ನ ನಿರ್ಮಾಣವನ್ನು ಸ್ಥಗಿತಗೊಳಿಸುತ್ತಿದ್ದು, ಇನ್ನು ಮುಂದೆ ಈ ಬೈಕ್‌ ಭಾರತೀಯ ರಸ್ತೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.

Hero Motorcorp Stops Production Of Hero Passion Pro

ಅರಗಿಸಿಕೊಳ್ಳಲು ಕೊಂಚ ಕಷ್ಟವಾದರೂ ಇದನ್ನು ನಾವು ನಂಬಲೇ ಬೇಕು. ಆದರೆ ಇಲ್ಲೊಂದು ಸಂತೋಷದ ವಿಷಯ ಏನೆಂದರೆ ಇದರ ಇನ್ನೆರಡು ಮಾಡೆಲ್‌ಗಳಾದ ಪ್ಯಾಷನ್ ಪ್ಲಸ್‌ ಮತ್ತು ಪ್ಯಾಷನ್‌ ಎಕ್ಸ್‌ಟೆಕ್‌ ಇನ್ನೂ ಲಭ್ಯವಿದೆ. ಇದರಲ್ಲಿದ್ದ ಪ್ಯಾಷನ್‌ ಪ್ರೋ ಬೈಕ್‌ನ ಉತ್ಪಾದನೆಯನ್ನು ಮಾತ್ರ ಕಂಪನಿಯು ನಿಲ್ಲಿಸಿದೆ.

ಇನ್ನು ಭಾರತೀಯರ ನೆಚ್ಚಿನ ಬೈಕ್‌ನಲ್ಲಿ ಒಂದಾಗಿದ್ದ ಪ್ಯಾಷನ್‌ ಪ್ರೋ, ಉತ್ಪಾದನೆ ನಿಲ್ಲುವುದಕ್ಕೂ ಮೊದಲು ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು ೮೫೦೦೦ ರೂಪಾಯಿ ಎಕ್ಸ್‌ ಶೋ ರೂಮ್‌ಗೆ ಮಾರಾಟವಾಗುತ್ತಿತ್ತು. ಈ ಬೈಕ್‌ ಸುಮಾರು ಎರಡು ವೇರಿಯಂಟ್‌ನಲ್ಲಿ ಲಭ್ಯವಾಗಿತ್ತು. ಅಂದರೆ ಡ್ರಮ್‌ ಮತ್ತು ಡಿಸ್ಕ್‌ ಬ್ರೇಕ್‌ಗಳ ಆಪ್ಷನ್‌ನಲ್ಲಿ ಈ ಎರಡೂ ಬೈಕ್‌ಗಳು ಭಾರತೀಯರ ಕೈ ಸೇರುತ್ತಿತ್ತು.

Hero Motorcorp Stops Production Of Hero Passion Pro

ಜನಪ್ರಿಯ ಬೈಕ್‌ ಪ್ಯಾಷನ್‌ ಪ್ರೋ ಬಗೆಗಿನ ಇತರ ಗುಣ ವೈಶಿಷ್ಟ್ಯಗಳನ್ನು ನೋಡುವುದಾದರೆ ಈ ಬೈಕ್‌ 113.2 cc ಸಿಂಗಲ್‌ ಸಿಲಿಂಡರ್‌ ಎಂಜಿನ್‌ ಅನ್ನು ಹೊಂದಿತ್ತು. ಈ ಎಂಜಿನ್‌ ಸಹಯಾದಿಂದ ಈ ಬೈಕ್‌ ಸುಮಾರು 9.02 bhp ಪವರ್‌ ಮತ್ತು 9.89 Nm ಟಾರ್ಕ್‌ ಇದು ಉತ್ಪಾದಿಸುತ್ತಿತ್ತು. ಇನ್ನೊಂದು ಬದಿ ಇದೇ ಬೈಕ್‌ನ ಮತ್ತೊಂದು ವೇರಿಯಂಂಟ್‌ ಪ್ಯಾಷನ್‌ ಎಕ್ಸ್‌ಟೆಕ್‌ ಇದೇ ಹಾರ್ಡ್‌ ವೇರ್‌ ಹೊಂದಿದ್ದರೂ ಈ ಬೈಕ್‌ನಲ್ಲಿ ಇತರ ಫೀಚರ್‌ಗಳು ಲಭ್ಯವಿದೆ.

‌ಪ್ಯಾಷನ್‌ ಎಕ್ಸ್‌ಟೆಕ್ ಬೈಕ್‌ನಲ್ಲಿ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಸಂಪೂರ್ಣ ಡಿಜಿಟಲ್‌ ಮೀಟರ್‌ ಕನ್ಸೋಲ್‌ ಅನ್ನು ನೀವು ನೋಡಬಹುದಾಗಿದೆ. ಇದರಲ್ಲಿ ನಿಮಗೆ ಬ್ಲೂಟೂತ್‌ ಕನೆಕ್ಟಿವಿಟಿ ಸೌಲಭ್ಯ ಲಭ್ಯವಿದ್ದು ಇದರ ಸಹಾಯದಿಂದ ನೀವು ಪೋನ್‌ ಕಾಲ್‌ ಮತ್ತು ಎಸ್‌ಎಂಎಸ್ ಅಲರ್ಟ್‌ ಅನ್ನು ಪಡೆಯಬಹುದು. ಇಂತಹ ಟೆಕ್ನಾಲಜಿ ಸಹ ಪ್ಯಾಷನ್‌ ಎಕ್ಸ್‌ಟೆಕ್‌ ಬೈಕ್‌ನಲ್ಲಿ ಗ್ರಾಹಕರಿಗೆ ಲಭ್ಯವಿದೆ.

ಇನ್ನು ನಿಮ್ಮ ಫೋನ್ ಚಾರ್ಜ್‌ ಮಾಡುವ ಸಲುವಾಗಿ ಈ ಬೈಕ್‌ನಲ್ಲಿ ಯುಎಸ್‌ಬಿ ಪೋರ್ಟ್‌ನ ವ್ಯವಸ್ಥೆಯು ಲಭ್ಯವಿದ್ದು, ನಿಮಗೆ ಬೇಕಾದಲ್ಲಿ ಯುಎಸ್‌ಬಿ ಕೇಬಲ್‌ ಸಹಾಯದಿಂದ ಬೈಕ್‌ ಚಲಿಸುತ್ತಿರುವಾಗಲೇ ನಿಮ್ಮ ಫೋನ್‌ ಚಾರ್ಜ್‌ ಮಾಡಿಕೊಳ್ಳಬಹುದು. ಈ ಬೈಕ್‌ನ ಬೆಲೆ ಸುಮಾರು ೮೦೦೦೦ ಎಕ್ಸ್‌ ಶೋ ರೂಮ್‌. ಇನ್ನು ಈ ಬೈಕ್‌ನಲ್ಲಿ ಇನ್ನೂ ವೇರಿಯೆಂಟ್‌ಗಳು ಲಭ್ಯವಿದ್ದು ಅದಕ್ಕೆ ಅನುಗುಣವಾಗಿ ಬೆಲೆ ಹೆಚ್ಚಾಗುತ್ತಾ ಹೀಗುತ್ತದೆ.

ಇನ್ನು ನಿಮಗೆ ಪ್ಯಾಷನ್‌ ಪ್ರೋ ರೀತಿಯ ಬೈಕೇ ಬೆಕು ಎಂದರೆ ನೀವು ಪ್ಯಷನ್‌ ಪ್ಲಸ್‌ ಬೈಕನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ನಿಮಗೆ ಪ್ಯಾಷನ್‌ ಪ್ರೋ ಬೈಕ್‌ನಲ್ಲಿದ್ದ ಅದೇ ಎಂಜಿನ್‌ ಮತ್ತು ಪವರ್ ಸಿಗುತ್ತದೆ. ಅಂದರೆ ಈ ಬೈಕ್‌ 113.2 cc ಸಿಂಗಲ್‌ ಸಿಲಿಂಡರ್‌ ಎಂಜಿನ್ ಹಾಗೂ 9.02 bhp ಪವರ್‌ ಮತ್ತು 9.89 Nm ಟಾರ್ಕನ್ನು ಉತ್ಪತ್ತಿ ಮಾಡುತ್ತವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, July 28, 2023, 16:32 [IST]
English summary
Hero motorcorp stops production of hero passion pro
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+