Hero Passion Plus: ಕಡಿಮೆ ಬೆಲೆಯಲ್ಲಿ ಜನಪ್ರಿಯ ಹೀರೋ ಪ್ಯಾಶನ್ ಪ್ಲಸ್ ಬಿಡುಗಡೆ

ಹೀರೋ ಮೋಟೊಕಾರ್ಪ್ ತಯಾರಿಸುವ ದ್ವಿಚಕ್ರ ವಾಹನಗಳು ದೊಡ್ಡಮಟ್ಟದಲ್ಲಿ ಖ್ಯಾತಿಗಳಿಸಿವೆ. ನಮ್ಮ ದೇಶದಲ್ಲಿ ಮಧ್ಯಮ ವರ್ಗದ ಜನರೇ ಹೆಚ್ಚಿದ್ದು, ಕಂಪನಿಯ ಬೈಕ್‌ಗಳು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ದೊರೆಯುವುದರಿಂದ ತಮ್ಮ ಆಯ್ಕೆಯಾಗಿ ಇವುಗಳನ್ನು ಖರೀದಿಸುತ್ತಾರೆ. ಸದ್ಯ, ಹೀರೋ ಪ್ಯಾಶನ್ ಪ್ಲಸ್ (Hero Passion Plus) ಬಿಡುಗಡೆಯಾಗಿದೆ.

ಇದೇನು ಹೀರೋ ಕಂಪನಿಯ ಹೊಸ ಬೈಕ್ ಅಲ್ಲ. ಈ ಹಿಂದೆಯೇ ಭಾರತದ ಮಾರುಕಟ್ಟೆಯಲ್ಲಿ ಸಿಗುತ್ತಿತ್ತು. ಆಗಲೇ ಗ್ರಾಹಕರು, ಈ ಪ್ಯಾಶನ್ ಪ್ಲಸ್ ಬೈಕ್‌ನ್ನು ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದರು. ಆದರೆ, ದೇಶಾದ್ಯಂತ 2020ರ ಏಪ್ರಿಲ್ ತಿಂಗಳಿಂದ ಜಾರಿಗೆ ಬಂದ BS6 ಎಮಿಷನ್ ಮಾನದಂಡ ಹಾಗೂ ವಿವಿಧ ಕಾರಣಗಳಿಗೆ ಕಂಪನಿಯು ಇದನ್ನು ಮಾರಾಟದಿಂದ ಸ್ಥಗಿತಗೊಳಿಸಿತ್ತು. ಇದು ಅದರ ಅಭಿಮಾನಿಗಳಿಗೆ ಬೇಸರ ತರಿಸಿತ್ತು.

Hero Passion Plus: ಕಡಿಮೆ ಬೆಲೆಯಲ್ಲಿ ಜನಪ್ರಿಯ ಹೀರೋ ಪ್ಯಾಶನ್ ಪ್ಲಸ್ ಬಿಡುಗಡೆ

ಇದೀಗ, ಹೀರೋ ಮೋಟೊಕಾರ್ಪ್ ಮತ್ತೆ 'ಪ್ಯಾಶನ್ ಪ್ಲಸ್' ಬೈಕ್‌ನ್ನು ಮತ್ತಷ್ಟು ನವೀಕರಣಗಳೊಂದಿಗೆ ರೂ.76,065 (ಎಕ್ಸ್ ಶೋರೂಂ) ಬೆಲೆಯಲ್ಲಿ ಲಾಂಚ್ ಮಾಡಿದ್ದು, ಬಹುತೇಕರಿಗೆ ಖುಷಿತಂದಿದೆ. ಇತ್ತೀಚೆಗೆ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ರೂ.64,900 ದರದ ಹೋಂಡಾ ಶೈನ್ ಹಾಗೂ ರೂ.67,808 ಆರಂಭಿಕ ಬೆಲೆಯ ಬಜಾಜ್ ಪ್ಲಾಟಿನಾ ಬೈಕ್‌ಗೆ ಹೊಸ ಪ್ಯಾಶನ್ ಪ್ಲಸ್ ಪ್ರತಿಸ್ಪರ್ಧಿಯಾಗಲಿದೆ.

ನೂತನ ಹೀರೋ ಪ್ಯಾಶನ್ ಪ್ಲಸ್ ಯಾವೆಲ್ಲ ನವೀಕರಣಗಳನ್ನು ಪಡೆದುಕೊಂಡಿದೆ ಎಂದು ನೋಡುವುದಾದರೆ, ಇದು, OBD-2 ಮಾನದಂಡಗಳನ್ನು ಪೂರೈಸಿರುವ ಹಾಗೂ E20 (80% ಪೆಟ್ರೋಲ್ & 20% ಎಥನಾಲ್) ಫ್ಯುಯೆಲ್ ಗೆ ಬೆಂಬಲಿಸುವ ಎಂಜಿನ್ ಹೊಂದಿದೆ. ಜೊತೆಗೆ i3s ಸ್ಟಾರ್ಟ್/ಸ್ಟಾಪ್ ಬಟನ್ ಅನ್ನು ಪಡೆದಿದ್ದು, ಕೈಗೆಟುಕವ ಬೆಲೆಯ ಬೈಕ್‌ನಲ್ಲಿ ದೊರೆಯುವ ಆಧುನಿಕ ವೈಶಿಷ್ಟ್ಯ ಇದಾಗಿದೆ.

Hero Passion Plus: ಕಡಿಮೆ ಬೆಲೆಯಲ್ಲಿ ಜನಪ್ರಿಯ ಹೀರೋ ಪ್ಯಾಶನ್ ಪ್ಲಸ್ ಬಿಡುಗಡೆ

ಹೊಸ ಪ್ಯಾಶನ್ ಪ್ಲಸ್ ಬೈಕ್ ಕೂಡ ಹೀರೋ HF ಹಾಗೂ ಸ್ಪ್ಲೆಂಡರ್ ಬೈಕ್‌ಗಳು ಹೊಂದಿರುವಂತೆ 97.2 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8 hp ಗರಿಷ್ಠ ಪವರ್ ಹಾಗೂ 8.05 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಅತ್ಯುತ್ತಮ ಮೈಲೇಜ್ ನೀಡುತ್ತದೆ ಎಂದು ಅಂದಾಜಿಸಲಾಗಿದೆ.

ಈ ಹೀರೋ ಪ್ಯಾಶನ್ ಪ್ಲಸ್ ಬೈಕ್‌ನ ಸಸ್ಪೆನ್ಷನ್ ಸೆಟಪ್ ಬಗ್ಗೆ ಮಾತನಾಡುವುದಾದರೆ, ಇದು ಡಬಲ್ ಕ್ರೇಡಲ್ ಫ್ರೇಮ್ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಟ್ವಿನ್ ಶಾಕ್ ಅಬ್ಸಾರ್ಬರ್‌ ಅನ್ನು ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಹೇಳುವುದಾದರೆ, ಫ್ರಂಟ್ ಹಾಗೂ ರೇರ್ 130 ಎಂಎಂ ಡ್ರಮ್ ಬೈಕ್ ಅನ್ನು ಪಡೆದಿದೆ. 115 kg ತೂಕವಿದ್ದು, 80/100-18 ಅಳತೆಯ ಟೈಯರ್ಸ್ ಒಳಗೊಂಡಿದೆ.

ಬೆಲೆಗೆ ತಕ್ಕಂತೆ ಹೊಸ ಹೀರೋ ಪ್ಯಾಶನ್ ಪ್ಲಸ್ ಒಂದಷ್ಟು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಇದು ಗ್ರಾಹಕರಿಗೆ ಇಷ್ಟವಾಗಬಹುದು. ಮುಖ್ಯವಾಗಿ ಡಿಜಿಟಲ್ ಅನಲಾಗ್ ಡಿಸ್ಪ್ಲೇ, USB ಚಾರ್ಜರ್ ಹಾಗೂ ಸೈಡ್ ಸ್ಟ್ಯಾಂಡ್ ಇಂಡಿಕೇಟರ್‌ನಂತಹ ಫೀಚರ್ಸ್ ಹೊಂದಿದೆ. ಜೊತೆಗೆ ಮೂರು ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. ಅವುಗಳಲ್ಲಿ ಸ್ಪೋರ್ಟ್ಸ್ ರೆಡ್ ಹಾಗೂ ಬ್ಲ್ಯಾಕ್ ನೆಕ್ಸಸ್ ಬ್ಲೂ ಕಲರ್ ಪ್ರಮುಖವಾಗಿವೆ.

ಇನ್ನು, ಬರೋಬ್ಬರಿ ಮೂರು ವರ್ಷಗಳ ಬಳಿಕ ಮತ್ತೆ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ ಹೀರೋ ಪ್ಯಾಶನ್ ಪ್ಲಸ್ ಬೈಕ್‌ನ್ನು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇಷ್ಟಪಟ್ಟು ಖರೀದಿಸಬಹುದು. ಆದರೆ, 100 ಸಿಸಿ ವಿಭಾಗದ ಇತರೆ ಬೈಕ್ ಗಳಿಗೆ ಹೋಲಿಸಿದರೆ, ಇದರ ಬೆಲೆ ಕೊಂಚ ದುಬಾರಿಯಾಗಿದೆ. ಹೀರೋ ಬೈಕ್ ಗಳಿಗಿರುವ ಕ್ರೇಜ್ ನೋಡಿದರೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ.

Article Published On: Thursday, June 8, 2023, 17:16 [IST]
English summary
Hero passion plus motorcycle launched india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+