ಬಿಡುಗಡೆಯಾಗಲಿವೆ ಪ್ರಮುಖ Hero ಬೈಕ್‌ಗಳು: ಅದರಲೊಂದು ಮಾರುಕಟ್ಟೆಯನ್ನೇ ಶೇಕ್ ಮಾಡುತ್ತೆ!
ಭಾರತದಲ್ಲಿ ಹೀರೋ ಮೋಟೊಕಾರ್ಪ್ (Hero MotoCorp) ತನ್ನ ಜನಪ್ರಿಯ ಸ್ಪ್ಲೆಂಡರ್ ಸರಣಿಯ ಬೈಕ್‌ಗಳಿಂದ ಭಾರೀ ಜನಪ್ರಿಯತೆ ಗಳಿಸಿದೆ. ಇದೀಗ, ದೇಶೀಯ ಗ್ರಾಹಕರನ್ನು ತನ್ನತ್ತ ಮತ್ತಷ್ಟು ಸೆಳೆಯಲು ವಿವಿಧ ದ್ವಿಚಕ್ರ ವಾಹನಗಳನ್ನು ಬಿಡುಗಡೆಗಳಿಸಲು ಸಿದ್ಧತೆ ನಡೆಸಿದ್ದು, ಪ್ರಮುಖವಾಗಿ ಎರಡು ಬೈಕ್‌ಗಳನ್ನು ಕೆಲವೇ ದಿನಗಳಲ್ಲಿ ಲಾಂಚ್ ಮಾಡಲಿದೆ.
ಇದಕ್ಕೆ ಸಾಕ್ಷಿ ಎಂಬಂತೆ ಹೀರೋದ ಪ್ಯಾಶನ್ ಪ್ರೊ ಹಾಗೂ Xtreme 200S 4V ಬೈಕ್‌ಗಳು ಡೀಲರ್‌ಶಿಪ್ ವೊಂದರಲ್ಲಿ ನಿಂತಿರುವ ಚಿತ್ರಗಳು ಇಂಟರ್ನೆಟ್ ನಲ್ಲಿ ಹರಿದಾಡುತ್ತಿವೆ. ಇದನ್ನು ಗಮನಿಸಿದಾಗ ಇವೆರೆಡು ಬೈಕ್‌ಗಳು ಬಿಡುಗಡೆಗೆ ಸನಿಹವಾಗಿವೆ ಎಂದು ಹೇಳಬಹುದು. ಇದಿಷ್ಟೇ ಅಲ್ಲದೆ, ಹೀರೋ ಕಂಪನಿ, ದೇಶೀಯ ಮಾರುಕಟ್ಟೆಯಲ್ಲಿ ಮುಂದಿನ ಕೆಲವೇ ತಿಂಗಳಲ್ಲಿ ಐದು 100ಸಿಸಿ ಬೈಕ್‌ಗಳನ್ನು ಲಾಂಚ್ ಮಾಡಲು ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ.

ಮೊದಲಿಗೆ ಪ್ಯಾಶನ್ ಪ್ರೊ ಬಗ್ಗೆ ಮಾತನಾಡೋಣ. ಇದು ಭಾರತದಲ್ಲಿ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಗಳಿಸಬಹುದು. ಜೊತೆಗೆ ಇತ್ತೀಚೆಗೆ ಬಿಡುಗಡೆಯಾಗಿರುವ ಹೋಂಡಾದ 'ಶೈನ್ 100'ಗೆ ಭಾರೀ ಪೈಪೋಟಿ ನೀಡುವ ಮೂಲಕ 100ಸಿಸಿ ಮೋಟಾರ್ ಸೈಕಲ್ ವಿಭಾಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಬಹುದು. ಈ ಪ್ಯಾಶನ್ ಪ್ರೊ, ಸ್ಪ್ಲೆಂಡರ್ ಹಾಗೂ HF ಬೈಕ್‌ಗಳ ಪ್ಲಾಟ್‌ಫಾರ್ಮ್ ಅನ್ನೇ ಆಧರಿಸಿದೆ ಎಂದು ವರದಿಯಾಗಿದೆ.
ಶೀಘ್ರದಲ್ಲೇ ಬಿಡುಗಡೆಯಾಗುವ ಪ್ಯಾಶನ್ ಪ್ರೊ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಕಾರ್ಯಕ್ಷಮತೆ ಹೇಗಿರಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೂ, ಕೆಲವೊಂದು ಮೂಲಗಳ ಪ್ರಕಾರ, ಈ ಬೈಕ್ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಿರುವ ಎಂಜಿನ್ ಹೊಂದಿರಲಿದ್ದು, ಬಹುತೇಕ ಸ್ಪ್ಲೆಂಡರ್ ಹಾಗೂ HF ಬೈಕ್‌ಗಳ ಬೆಲೆಯಲ್ಲಿ ಖರೀದಿಗೆ ಸಿಗಬಹುದು. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಇವರೆಡು ಬೈಕ್‌ಗಳು ರೂ.56,968 ದಿಂದ ರೂ.76,346 (ಎಕ್ಸ್ ಶೋರೂಂ, ದೆಹಲಿ) ಬೆಲೆಯಲ್ಲಿ ಸಿಗಲಿವೆ.

ಪ್ಯಾಶನ್ ಪ್ರೊನೊಂದಿಗೆ ಕೆಲವೇ ದಿನಗಳಲ್ಲಿ ಬಿಡುಗಡೆಯಾಗುತ್ತಿರುವ Xtreme 200S ಬೈಕ್ ಕೂಡ ನವೀಕಸಿರಿದ ಎಂಜಿನ್ ಹೊಂದಿದ್ದು, 200ಸಿಸಿ ಲೈನ್-ಅಪ್ ನಲ್ಲಿ ಬರುತ್ತಿರುತ್ತಿರುವುದರಿಂದ ಹೆಚ್ಚಿನ ಗ್ರಾಹಕರಿಗೆ ಇಷ್ಟವಾಗಬಹುದು. ಜೊತೆಗೆ ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು. ಸದ್ಯ, ಡೀಲರ್‌ಶಿಪ್ ವೊಂದರಲ್ಲಿ ನಿಂತಿರುವ ಚಿತ್ರಗಳಲ್ಲಿ ಈ ಬೈಕ್ ಯೆಲ್ಲೋ ಬಣ್ಣದಲ್ಲಿ ಕಾಣಿಸಿಕೊಂಡಿದ್ದು, ಇದು ರಸ್ತೆಯಲ್ಲಿ ಎಲ್ಲರನ್ನು ಒಮ್ಮೆ ತಿರುಗಿ ನೋಡುವಂತೆ ಮಾಡುವುದು ಗ್ಯಾರಂಟಿ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುತ್ತಿರುವ ಹಳೆಯ ಮಾದರಿ ಹೀರೋ Xtreme 200S ರೂ.1.35 ಲಕ್ಷ ಆರಂಭಿಕ ಬೆಲೆಯಲ್ಲಿ ಸಿಗಲಿದೆ. ಇದು BS6 199.6ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 18 PS ಪವರ್ ಹಾಗೂ 45 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಜೊತೆಗೆ 54 kmpl ಮೈಲೇಜ್ ನೀಡಲಿದೆ.
ಈ ಬೈಕ್ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ನೋಡುವುದಾದರೆ, ಇದು LED ಹೆಡ್‌ಲೈಟ್ಸ್, LED ಟೈಲ್ ಲೈಟ್, ಗೇರ್ ಪೊಸಿಷನ್ ಇಂಡಿಕೇಟರ್, ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್, ಟರ್ನ್ ಬೈ-ಟರ್ನ್ ನ್ಯಾವಿಗೇಷನ್ ಅನ್ನು ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಹೇಳುವುದಾದರೆ, ಫ್ರಂಟ್ 276 ಎಂಎಂ, ರೇರ್ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಜೊತೆಗೆ ಜೊತೆಗೆ ಸಿಂಗಲ್ ಚಾನೆಲ್ ABS ಆಯ್ಕೆಯನ್ನು ಪಡೆದಿದೆ.
ಈ ಬೈಕ್‌ಗಳ ಬಿಡುಗಡೆ ಮೂಲಕ ಹೀರೋ ಕಂಪನಿ ಭಾರತದ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಲು ಪ್ರಯತ್ನಿಸುತ್ತಿದ್ದು, ಅದರಲ್ಲಿ ತುಂಬಾ ಕಡಿಮೆ ಬೆಲೆಗೆ ಲಾಂಚ್ ಆಗಲಿರುವ ಪ್ಯಾಶನ್ ಪ್ರೊ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಇನೇನೂ ಕೆಲವೇ ದಿನಗಳಲ್ಲಿ ಈ ಬೈಕ್ ಲಾಂಚ್ ಆಗುತ್ತಿದ್ದು, ಗ್ರಾಹಕರಿಂದ ಹೇಗೆ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
Source: AutomobileTamilan


Click it and Unblock the Notifications