Hero Electric Scooters: ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರಿಗೆ ಸಡನ್ ಬ್ಯಾಡ್ ನ್ಯೂಸ್

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೀರೋ (Hero) ಜನಪ್ರಿಯತೆ ಗಳಿಸಿದೆ. ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯ Fame -II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ ಕಾರಣ, ತನ್ನ ಬಹುಬೇಡಿಕೆಯ 'ವಿಡಾ ವಿ1 ಪ್ರೊ' ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯನ್ನು ಹೆಚ್ಚಳ ಮಾಡಿದೆ.

ಈ ಬಗ್ಗೆ ಸ್ವತಃ ಹೀರೋ ಮೋಟೊಕಾರ್ಪ್ ಕಂಪನಿಯೇ ಘೋಷಣೆ ಮಾಡಿದ್ದು, ಒಟ್ಟು ರೂ.6,000 ಹೆಚ್ಚಳ ಮಾಡಿದೆ. ನೂತನ ದರಗಳು ಜೂನ್ 1 ರಿಂದ ಅನ್ವಯವಾಗುತ್ತದೆ. ಇನ್ಮುಂದೆ 'ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್' ಪರಿಷ್ಕೃತ FAME-II ಸಬ್ಸಿಡಿ ಹಾಗೂ ಪೋರ್ಟಬಲ್ ಚಾರ್ಜರ್ ಒಳಗೊಂಡಂತೆ ರೂ.1,25,900 ಎಕ್ಸ್ ಶೋರೂಂ (ದೆಹಲಿ) ಬೆಲೆಯಲ್ಲಿ ಖರೀದಿಗೆ ಸಿಗಲಿದೆ.

Hero Electric Scooters: ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರಿಗೆ ಸಡನ್ ಬ್ಯಾಡ್ ನ್ಯೂಸ್

ನೂತನ ಹೀರೋ ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್ 3.94 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹಾಗೂ 7.8 hp ಗರಿಷ್ಠ ಪವರ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದ್ದು, ಸಂಪೂರ್ಣ ಚಾರ್ಜಿನಲ್ಲಿ 165 KM (IDC) ರೇಂಜ್ ನೀಡಲಿದೆ. ಕೇವಲ 3.2 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆಯಲಿದ್ದು, 80 kmph ಟಾಪ್ ಸ್ವೀಡ್ ಹೊಂದಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್ ಐದು ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. ಅವುಗಳೆಂದರೆ, ರೆಡ್, ವೈಟ್, ಆರೆಂಜ್, ಬ್ಲ್ಯಾಕ್ ಹಾಗೂ ಬ್ಲೂ. ಜೊತೆಗೆ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ TFT ಟಚ್‌ಸ್ಕ್ರೀನ್, ಕ್ರೂಸ್ ಕಂಟ್ರೋಲ್, ಕೀಲೆಸ್ ಕಂಟ್ರೋಲ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಜಿಯೋ ಫೆನ್ಸಿಂಗ್, ರಿವರ್ಸ್ ಮೋಡ್, ಸಿಂಗಲ್ ಡಿಸ್ಕ್ ಬ್ರೇಕ್ ಸೆಟಪ್ ಸೇರಿದಂತೆ ಹಲವು ಫೀಚರ್ಸ್ ಪಡೆದಿದೆ.

ತೀರಾ ಇತ್ತೀಚೆಗೆ 'ವಿಡಾ ಎಲೆಕ್ಟ್ರಿಕ್ ಸ್ಕೂಟರ್' ಮೂಲಕ ಹೀರೋ ಕಂಪನಿ ವಿಶ್ವ ಗಿನ್ನೆಸ್ ದಾಖಲೆ ಮಾಡಿತ್ತು. ಕೇವಲ 24 ಗಂಟೆಯಲ್ಲಿ ರಾಜಸ್ಥಾನದ ಜೈಪುರದಲ್ಲಿರುವ ತನ್ನದೇ ಸೆಂಟರ್ ಫಾರ್ ಇನ್ನೋವೇಶನ್ ಅಂಡ್ ಟೆಕ್ನಾಲಜಿ (ಸಿಐಟಿ)ಯಲ್ಲಿರುವ ಟ್ರ್ಯಾಕ್‍ನಲ್ಲಿ 6 ರೈಡರ್‌ಗಳ ಸಹಾಯದಿಂದ ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್, ಬರೋಬ್ಬರಿ 1,780 ಕಿಲೋಮೀಟರ್ ದೂರವನ್ನು ಕ್ರಮಿಸಿ, ಈ ರೆಕಾರ್ಡ್ ಮಾಡಿತ್ತು.

ಹೀರೋ ಮಾತ್ರವಲ್ಲದೇ ಬಹುತೇಕ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ತಮ್ಮ ಎಲೆಕ್ಟ್ರಿಕ್ ಸ್ಕೂಟರ್ ದರವನ್ನು ಏರಿಸಿವೆ. ಸದ್ಯ, ಜನಪ್ರಿಯ ಕಂಪನಿ ಓಲಾ ಎಸ್1 ಸರಣಿ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯನ್ನು ರೂ.15,000 ಹೆಚ್ಚಿಸಿದೆ. ಇದರಿಂದ ಎಸ್1 ಪ್ರೊ ರೂ.1,39,999, ಎಸ್1 (3KWh) ರೂ.1,29,999 ಹಾಗೂ ಎಸ್1 ಏರ್ ರೂ.1,09,999 ದರವನ್ನು ಹೊಂದಿದೆ.

ಟಿವಿಎಸ್ ಕಂಪನಿ ತನ್ನ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯನ್ನು ರೂ.17,000 ದಿಂದ ರೂ.22,000 ಹೆಚ್ಚಳ ಮಾಡಿದೆ. ಬೆಂಗಳೂರು ಮೂಲದ ಎಥರ್ ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ದರವನ್ನು ರೂ.8,000 ಏರಿಸಿದೆ. ಈ ಮೂಲಕ 450X ಪ್ರೊ ಬೆಲೆ 1,65,435 (ಎಕ್ಸ್ ಶೋರೂಂ) ಆಗಿದೆ. ಬಜಾಬ್ ತನ್ನ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯನ್ನು ಸರಿ ಸುಮಾರು ರೂ.22,000 ಹೆಚ್ಚಿಸಿದೆ.

ಒಟ್ಟಾರೆ, ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯ Fame -II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ ಹಿನ್ನೆಲೆ, ಬಹುತೇಕ ಎಲ್ಲ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಬೆಲೆ ಏರಿಕೆ ಮಾಡಿವೆ. ಆದರೆ, ಹೀರೋ ಮಾತ್ರ ಕೊಂಚವೇ ದರ ಏರಿಸುರುವುದು ಗ್ರಾಹಕರಿಗೆ ನೆಮ್ಮದಿ ತಂದಿದ್ದು, ಮುಂಬರುವ ದಿನಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಹೀರೋ ವಿಡಾ ಎಲೆಕ್ಟ್ರಿಕ್ ಸ್ಕೂಟರ್ ಹೇಗೆ ಕಮಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Article Published On: Monday, June 5, 2023, 16:35 [IST]
English summary
Hero vida v1 pro electric scooter price hike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+