ಬಹುನೀರಿಕ್ಷಿತ ಹೋಂಡಾ ಆಕ್ಟಿವಾ 6G ಸ್ಮಾರ್ಟ್ ಶೀಘ್ರ ಬಿಡುಗಡೆ: ಇಲ್ಲಿದೆ ಪ್ರಮುಖ ಮಾಹಿತಿ

ಜಪಾನಿನ ಪ್ರಮುಖ ವಾಹನ ತಯಾರಕ ಕಂಪನಿ ಹೋಂಡಾದ 'ಆಕ್ಟಿವಾ' ಸ್ಕೂಟರ್ ಭಾರತದಲ್ಲಿ ತನ್ನದೇ ಜನಪ್ರಿಯತೆಯನ್ನು ಪಡಿದಿದೆ. ಕಂಪನಿಯು ಈ ಸ್ಕೂಟರ್ ಮಾದರಿಯನ್ನು ನಿರಂತರವಾಗಿ ಅಪ್ಡೇಟ್ ಮಾಡುತ್ತಿರುತ್ತದೆ. ಆಕ್ಟಿವಾಗೆ ಮಾರುಕಟ್ಟೆಯಲ್ಲಿ ಸ್ಪರ್ಧೆಯು ಹೆಚ್ಚುತ್ತಿರುವುದರಿಂದ ನವೀಕರಿಸಿದ 'ಆಕ್ಟಿವಾ 6G ಸ್ಮಾರ್ಟ್' ಲಾಂಚ್ ಮಾಡಲು ಕಂಪನಿ ಸಿದ್ಧವಾಗಿದೆ.

ಹೋಂಡಾ ಕಂಪನಿಯು ಆಕ್ಟಿವಾ ಸ್ಮಾರ್ಟ್ ಆವೃತ್ತಿಯ ಕೆಲವು ಟೀಸರ್ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿದೆ. ಜನವರಿ 23 ರಂದು ಹೊಸ ಆಕ್ಟಿವಾ ಸ್ಮಾರ್ಟ್ ಅನ್ನು ಲಾಂಚ್ ಮಾಡಲು ಹೋಂಡಾ ರೆಡಿಯಾಗಿದೆ. ದೆಹಲಿ RTO ದಾಖಲೆಗಳ ವರದಿಯಲ್ಲಿ ಸೋರಿಕೆಯಾಗಿರುವ ಮಾಹಿತಿ ಪ್ರಕಾರ, ಭಾರತದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಆಕ್ಟಿವಾ ಸ್ಕೂಟರ್‌ನ ಈ ನೂತನ ರೂಪಾಂತರದಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಆಗಿವೆ.

ಬಹುನೀರಿಕ್ಷಿತ ಹೋಂಡಾ ಆಕ್ಟಿವಾ 6G ಸ್ಮಾರ್ಟ್ ಶೀಘ್ರ ಬಿಡುಗಡೆ: ಇಲ್ಲಿದೆ ಪ್ರಮುಖ ಮಾಹಿತಿ

ಸೋರಿಕೆಯಾದ ದಾಖಲೆಗಳ ಪ್ರಕಾರ, ಮುಂಬರುವ ಹೋಂಡಾ ಆಕ್ಟಿವಾ 6G ಸ್ಮಾರ್ಟ್ ತೂಕ ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಇತರೆ ರೂಪಾಂತರಗಳಿಗಿಂತ ಒಂದು ಕೆಜಿ ಕಡಿಮೆ ಇದೆ. ಪವರ್ ಔಟ್‌ಪುಟ್ ವಿಚಾರಕ್ಕೆ ಬರುವುದಾದರೆ, 7.74 bhpಗೆ ಹೆಚ್ಚಾಗಿದೆ. ಅಂದರೆ, ಆಕ್ಟಿವಾ 6Gಯ ಲಭ್ಯವಿರುವ ರೂಪಾಂತರಗಳಿಗಿಂತ ಸ್ವಲ್ಪ ಅಧಿಕವಾಗಿದೆ. ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೇಲೆ ಈ ಸ್ಕೂಟರ್ ಖರೀದಿಸಲು ಗ್ರಾಹಕರು ಮನಸ್ಸು ಮಾಡಬಹುದು ಎಂದು ಹೇಳಬಹುದು.

ಆಕ್ಟಿವಾ 6G 'ಸ್ಮಾರ್ಟ್' ಅರ್ಥವೇನು:
ಇದು ಹೊಸ ಆಂಟಿ-ಥೆಫ್ಟ್ ಸಿಸ್ಟಮ್ ಆಗಿದ್ದು, ಹೋಂಡಾ ಆಕ್ಟಿವಾ ಸ್ಮಾರ್ಟ್‌ನಲ್ಲಿ ಪರಿಚಯಿಸುವ ನಿರೀಕ್ಷೆಯಿದೆ. ಈ ವೈಶಿಷ್ಟ್ಯವನ್ನು ಹೋಂಡಾದ ದೊಡ್ಡ ಬೈಕ್‌ಗಳಲ್ಲಿ ನೋಡಬಹುದು. ಈ ಹೊಸ ಆಂಟಿ-ಥೆಫ್ಟ್ ಸಿಸ್ಟಮ್ ಅನ್ನು ಶೈನ್‌ನಂತಹ ಇತರೇ ಹೋಂಡಾ ಬೈಕುಗಳಿಗೂ ಪರಿಚಯಿಸುವ ಸಾಧ್ಯತೆ ಇದೆ. ದೇಶೀಯ ಮಾರುಕಟ್ಟೆಯಲ್ಲಿ ಲಭ್ಯವಾಗುವ ಹೋಂಡಾ ಆಕ್ಟಿವಾ 6G ಬೆಲೆ ರೂ.73,359 (ಎಕ್ಸ್ ಶೋರೂಂ)ದಿಂದ ಆರಂಭವಾಗಲಿದೆ. ಮುಂಬರುವ ಹೋಂಡಾ ಆಕ್ಟಿವಾ 6G ಸ್ಮಾರ್ಟ್ ಬೆಲೆ ಎಲ್ಲಾ ರೂಪಾಂತರಗಳಿಗಿಂತ ಹೆಚ್ಚಿನ ಬೆಲೆಯನ್ನು ಹೊಂದಿರಲಿದೆ.

2001ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಮೊದಲು ಬಾರಿಗೆ ಆಕ್ಟಿವಾವನ್ನು ಪರಿಚಯಿಸಲಾಯಿತು. ಇದೀಗ ಈ ಸ್ಕೂಟರ್‌ನ ಆರನೇ ಜನರೇಷನ್ ಆವೃತ್ತಿಯು ಖರೀದಿಗೆ ಲಭ್ಯವಿದೆ. ಬರೋಬ್ಬರಿ 20 ವರ್ಷಗಳ ನಂತರವು, ಆಕ್ಟಿವಾ, ಹೆಚ್ಚು ಮಾರಾಟವಾಗುವ ದ್ವಿಚಕ್ರ ವಾಹನಗಳ ಪಟ್ಟಿಯಲ್ಲಿ ಯಾವಾಗಲೂ ಮುಂದಿರುತ್ತದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಆರನೇ ಜನರೇಷನ್ ನ ಆಕ್ಟಿವಾ ಸ್ಮಾರ್ಟ್ ಸೂಕ್ಷ್ಮ ವಿನ್ಯಾಸ ಮತ್ತು ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಹೊಸ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬರಲಿದೆ. ಇದರ ಮೇಲೆ ಗ್ರಾಹಕರಿಗೆ ನಿರೀಕ್ಷೆಗಳು ಹೆಚ್ಚಿಗಿವೆ.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಹೋಂಡಾ ಆಕ್ಟಿವಾ 6G ಸ್ಕೂಟರ್, 3 ರೂಪಾಂತರಗಳು ಮತ್ತು 9 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಟಾಪ್ ಎಂಡ್ ಮಾದರಿ ಬೆಲೆ ರೂ.78,292 ಇದ್ದು, ಈ ಹೊಸ ಆಕ್ಟಿವಾ 6G, 109.51cc BS6 ಎಂಜಿನ್‌ ಹೊಂದಿದ್ದು, ಇದು 7.68 bhp ಮತ್ತು 8.84 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಫ್ರಂಟ್ ಮತ್ತು ರೇರ್ ಎರಡೂ ಡ್ರಮ್ ಬ್ರೇಕ್ ಗಳನ್ನು ಪಡೆದಿದ್ದು, 106 ಕೆಜಿ ತೂಕ ಮತ್ತು 5.3 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದೆ.

ಆಕ್ಟಿವಾ 6G ಎಕ್ಸ್ಟರ್ನಲ್ ಫ್ಯುಯೆಲ್ ಫಿಲ್ಲರ್ ಕ್ಯಾಪ್, ಎಂಜಿನ್ ಸ್ಟಾರ್ಟ್-ಸ್ಟಾಪ್ ಸ್ವಿಚ್, ಸೈಲೆಂಟ್ ಸ್ಟಾರ್ಟರ್ ಮತ್ತು ಸೀಟ್, ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಹೊಂದಿದೆ. ಈ ಸ್ಕೂಟರ್ 12 ಇಂಚಿನ ಫ್ರಂಟ್ ಮತ್ತು 10 ಇಂಚಿನ ರೇರ್ ವೀಲ್ಸ್ ಮೂಲಕ ಚಲಿಸುತ್ತದೆ. ಸುತ್ತಳತೆಯ ವಿಚಾರಕ್ಕೆ ಬಂದರೆ, ಆಕ್ಟಿವಾ 6G, 1833 ಎಂಎಂ ಉದ್ದ, 697 ಎಂಎಂ ಅಗಲ ಮತ್ತು 1156 ಎಂಎಂ ಎತ್ತರವಿದ್ದು, ಇದು 1260 ಎಂಎಂ ವ್ಹೀಲ್ ಬೇಸ್ ಮತ್ತು 171 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
Read more on ಹೋಂಡಾ honda
English summary
Honda activa 6g smart launch soon details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X