ಹೀರೋ ಸ್ಪ್ಲೆಂಡರ್ ಪ್ರತಿಸ್ಪರ್ಧಿಯಾಗಿ ಭಾರತದಲ್ಲಿ ಕಡಿಮೆ ಬೆಲೆಯ 'ಹೋಂಡಾ Shine 100' ಬಿಡುಗಡೆ

ಜಪಾನ್ ಮೂಲದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ 'ಹೋಂಡಾ' ಗುರುತಿಸಿಕೊಂಡಿದೆ. ಹೀರೋದ ಸ್ಪ್ಲೆಂಡರ್ ಪ್ಲಸ್ ಹಾಗೂ ಬಜಾಜ್ ಪ್ಲಾಟಿನಾ ಬೈಕ್‌ಗಳಿಗೆ ಪೈಪೋಟಿ ನೀಡಲು ಅಂತಿಮವಾಗಿ ಹೋಂಡಾ ಶೈನ್ 100 (Honda Shine 100) ಅನ್ನು ಬಿಡುಗಡೆ ಮಾಡಿದೆ. ಆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಹೋಂಡಾ ಕಂಪನಿ ನೂತನ ಶೈನ್ 100 ಬೈಕ್‌ನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಿದೆ ಎಂದು ಹೇಳಬಹುದು. ರೂ.64,900 (ಎಕ್ಸ್ ಶೋರೂಂ ಮುಂಬೈ) ದರದಲ್ಲಿ ಖರೀದಿಗೆ ಲಭ್ಯವಿದೆ. ಅಧಿಕೃತ ಡೀಲರ್ ಶಿಪ್ ಗಳಲ್ಲಿ ಇಂದಿನಿಂದಲೇ ಬುಕಿಂಗ್ ಕೂಡ ಆರಂಭವಾಗಿದ್ದು, ಆಸಕ್ತ ಗ್ರಾಹಕರು ಬುಕ್ ಮಾಡಬಹುದು. ಮುಂದಿನ ತಿಂಗಳಿನಿಂದಲೇ ಉತ್ಪಾದನೆ ಆರಂಭವಾಗಲಿದ್ದು, ಬಹುತೇಕ ಮೇ ತಿಂಗಳಲ್ಲಿ ವಿತರಣೆ ಶುರುವಾಗಲಿದೆ.

ಹೀರೋದ ಸ್ಪ್ಲೆಂಡರ್ ಪ್ರತಿಸ್ಪರ್ಧಿಯಾಗಿ ಭಾರತದಲ್ಲಿ ಕಡಿಮೆ ಬೆಲೆಯ ಹೋಂಡಾ Shine 100 ಬಿಡುಗಡೆ

ಈ ಬೈಕ್, ಐದು ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. ಅವುಗಳೆಂದರೆ, ಬ್ಲ್ಯಾಕ್ ವಿತ್ ರೆಡ್ ಸ್ಟ್ರೀಪ್ಡ್, ಬ್ಲ್ಯಾಕ್ ವಿತ್ ಬ್ಲೂ ಸ್ಟ್ರೀಪ್ಡ್, ಬ್ಲ್ಯಾಕ್ ವಿತ್ ಗ್ರೀನ್ ಸ್ಟ್ರೀಪ್ಡ್, ಬ್ಲ್ಯಾಕ್ ವಿತ್ ಗೋಲ್ಡ್ ಸ್ಟ್ರೀಪ್ಡ್ ಹಾಗೂ ಬ್ಲ್ಯಾಕ್ ವಿತ್ ಗ್ರೇ ಸ್ಟ್ರೀಪ್ಡ್. ಅಲ್ಲದೆ, ಶೈನ್ 100 ಖರೀದಿ ಮೇಲೆ ಗ್ರಾಹಕರಿಗೆ ವಿಶೇಷವಾಗಿ ಆರು ವರ್ಷ ವಾರಂಟಿ ಪ್ಯಾಕೇಜ್ ದೊರೆಯುತ್ತಿದೆ. ಇದರಲ್ಲಿ 3 ವರ್ಷ ಪ್ರಮಾಣೀಕೃತ, 3 ವರ್ಷ ಹೆಚ್ಚಿವರಿ ವಿಸ್ತರಿಸಬಹುದಾದ ವಾರಂಟಿ ಇರಲಿದೆ.

ನೂತನ ಶೈನ್ 100 ಬೈಕ್‌ನ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದನ್ನು ಕಡಿಮೆ ಹೊರಸೂಸುವಿಕೆ ಹಾಗೂ ಅತ್ಯುತ್ತಮ ಇಂಧನ ದಕ್ಷತೆ ಹಿಂದಿರುಗಿಸುವಂತೆ ವಿನ್ಯಾಸ ಮಾಡಲಾಗಿದೆ. 99.7 ಸಿಸಿ ಎಂಜಿನ್ ಹೊಂದಿದ್ದು, 7.6 bhp ಗರಿಷ್ಠ ಪವರ್ ಹಾಗೂ 8.05 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ಜೊತೆಗೆ 4-ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ.

ಹೀರೋದ ಸ್ಪ್ಲೆಂಡರ್ ಪ್ರತಿಸ್ಪರ್ಧಿಯಾಗಿ ಭಾರತದಲ್ಲಿ ಕಡಿಮೆ ಬೆಲೆಯ ಹೋಂಡಾ Shine 100 ಬಿಡುಗಡೆ

ಈ ಹೋಂಡಾ ಶೈನ್ 100 ಬೈಕ್‌ 60 kmpl ಮೈಲೇಜ್ ನೀಡಲಿದೆ ಎಂದು ಹೇಳಲಾಗಿದೆ. ಇದು 1,245 ಎಂಎಂ ವೀಲ್‌ಬೇಸ್, 168 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 786 ಎಂಎಂ ಸೀಟ್ ಹೈಟ್ ಪಡೆದಿದೆ. ಕಳಪೆ ರಸ್ತೆಗಳಲ್ಲಿಯು ಈ ಬೈಕ್ ಸಂಚಾರಿಸುವಂತೆ ವಿನ್ಯಾಸ ಮಾಡಲಾಗಿದೆ. ಜೊತೆಗೆ ಅಲ್ಯೂಮಿನಿಯಂ ಗ್ರ್ಯಾಬ್ ರೈಲ್, ಡ್ಯುಯಲ್ ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕಾಂಬಿ ಬ್ರೇಕಿಂಗ್ ಸಿಸ್ಟಮ್ ಹಾಗೂ ಅಲಾಯ್ ವೀಲ್ಸ್ ನಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಈ ಬೈಕ್ ಬಿಡುಗಡೆ ಬಗ್ಗೆ ಮಾತನಾಡಿರುವ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಸಿಇಒ ಅತ್ಸುಶಿ ಒಗಾಟಾ ಅವರು, 'ಶೈನ್ ಅತ್ಯಂತ ಪ್ರಸಿದ್ಧ ಹಾಗೂ ವಿಶ್ವಾಸಾರ್ಹ ಮೋಟಾರ್ ಸೈಕಲ್ ಬ್ರ್ಯಾಂಡ್ ಆಗಿದೆ. ಹೋಂಡಾ 100 ಬೈಕ್‌ ಬಿಡುಗಡೆಗೊಳಿಸಲು ಸಂತೋಷ ತಂದಿದೆ. ಇದು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಉತ್ತಮ ಇಂಧನ ದಕ್ಷತೆಯನ್ನು ಹೊಂದಿದೆ. ಗ್ರಾಹಕರ ಅಗತ್ಯತೆಯನ್ನು ಪೂರೈಸುತ್ತವೆ ಎಂಬ ನಂಬಿಕೆ ಹೊಂದಿದ್ದೇವೆ' ಎಂದು ಹೇಳಿದ್ದಾರೆ.

ಹೀರೋದ ಸ್ಪ್ಲೆಂಡರ್ ಪ್ರತಿಸ್ಪರ್ಧಿಯಾಗಿ ಭಾರತದಲ್ಲಿ ಕಡಿಮೆ ಬೆಲೆಯ ಹೋಂಡಾ Shine 100 ಬಿಡುಗಡೆ

ಹೋಂಡಾ ಶೈನ್ 100 ದೇಶೀಯ ಮಾರುಕಟ್ಟೆಯಲ್ಲಿ ಬಹುತೇಕ ಹೀರೋ ಬೈಕ್‌ಗಳಿಂದ ಭಾರೀ ಪೈಪೋಟಿಯನ್ನು ಎದುರಿಸಬೇಕು. ಈಗಾಗಲೇ ಹೀರೋ ಎಚ್ಎಫ್ 100, ಎಚ್ಎಫ್ ಡೀಲಕ್ಸ್, ಸ್ಪ್ಲೆಂಡರ್ ಪ್ಲಸ್, ಮತ್ತು ಸ್ಪ್ಲೆಂಡರ್+ XTEC ಬೈಕ್, ರೂ.54,962 ದಿಂದ ರೂ.75,840 ದರದಲ್ಲಿ ಖರೀದಿಗೆ ಲಭ್ಯವಿದೆ. ಜೊತೆಗೆ ಬಜಾಜ್ ಕೂಡ ಪ್ರತಿಸ್ಪರ್ಧಿಯಾಗಿದ್ದು, ಅದರ ಪ್ಲಾಟಿನಾ 100 ರೂ.67,475 ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದೆ ವಿತರಣೆ ಆರಂಭವಾದ ಮೇಲೆ ಸ್ಪಷ್ಟ ಮಾಹಿತಿ ದೊರೆಯಲಿದೆ.

ಅಂತೂ ಹೋಂಡಾ ಕಂಪನಿ ನೂತನ ಶೈನ್ 100 ಬೈಕ್‌ನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ನವೀನ ವೈಶಿಷ್ಟ್ಯಗಳೊಂದಿಗೆ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು ಉತ್ತಮ ಮೈಲೇಜ್ ನೀಡಲಿದೆ ಎಂದು ಹೇಳಲಾಗಿದ್ದು, ಹೆಚ್ಚಿನ ಖರೀದಿದಾರರನ್ನು ಆಕರ್ಷಿಸಬಹುದು. ಜೊತೆಗೆ ಮುಂಬರುವ ದಿನಗಳಲ್ಲಿ ಅತ್ಯುತ್ತಮ ದಿನನಿತ್ಯದ ಬೈಕ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಬಹುದು ಎಂದು ಆಟೋಮೊಬೈಲ್ ತಜ್ಞರು ಅಂದಾಜಿಸಿದ್ದಾರೆ.

Article Published On: Wednesday, March 15, 2023, 14:13 [IST]
English summary
Honda shine 100 launch india market details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+