ಅಗ್ಗದ ಬೆಲೆಗೆ ಹೊಸ ಸ್ವದೇಶಿ ಇವಿ ಸ್ಕೂಟರ್ ಬಿಡುಗಡೆ! ದೇಶದ ಮೊದಲ ಪಾರದರ್ಶಕ ಸ್ಕೂಟರ್?

ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳ ಆಗಮನ ಹೆಚ್ಚುತ್ತಿದ್ದು, ಅಗ್ಗದ ಬೆಲೆಗೆ ಹಲವು ಇವಿಗಳನ್ನು ಪರಿಚಯಿಸಲಾಗುತ್ತಿದೆ. ಇದರಲ್ಲಿ ನಮ್ಮ ದೇಶೀಯ ಸ್ಟಾರ್ಟ್‌ಅಪ್ ಬ್ರಾಂಡ್‌ಗಳು ಗ್ರಾಹಕರನ್ನು ಸೆಳೆಯಲು ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದೀಗ ಹೊಸ ಬ್ರಾಂಡ್ ಜೀತೇಂದ್ರ' ಇವಿ ಟೆಕ್ ಪ್ರೈಮೊ ಪಾರದರ್ಶಕ (transparent) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ.

ನಾಸಿಕ್ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಜಿತೇಂದ್ರ ಇವಿ ಟೆಕ್ (jitendra primo ev) ರೂ. 79,999 (ಎಕ್ಸ್ ಶೋರೂಂ) ಬೆಲೆಯ ಪ್ರೈಮೊ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಬಿಡುಗಡೆ ಸಮಯದಲ್ಲಿ ಹೊಸ ಜಿತೇಂದ್ರ EV ಪ್ರೈಮೊ ಸ್ಕೂಟರ್ ಅನ್ನು ಪಾರದರ್ಶಕ (transparent) ಗಾಜಿನ ಬಾಡಿವರ್ಕ್‌ನೊಂದಿಗೆ ಪ್ರದರ್ಶಿಸಿದ್ದಾರೆ. ಬಹುಶಃ ಇದು ಮಾರಾಟಕ್ಕೆ ಬಂದರೆ ಈ ರೀತಿಯ ಸ್ಕೂಟರ್ ಇದೇ ಮೊದಲನೆಯದಾಗಬಹುದು.

jitendra-ev-tech-launches-primo-ev-scooter-priced-at-79-999

ಆದರೆ ಇಂತಹ ಬಾಡಿವರ್ಕ್‌ನೊಂದಿಗೆ ಹೊಸ ಸ್ಕೂಟರ್‌ಗಳು ಉತ್ಪಾದನೆಗೆ ಬರುವುದರ ಬಗ್ಗೆ ಕಂಪನಿ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ನಮ್ಮ ಪ್ರಕಾರ ಇದು ಬಿಡುಗಡೆ ವೇಳೆ ಪ್ರಮುಖ ಆಕರ್ಷಣೆಯಾಗಲು ಹೀಗೆ ಪ್ರದರ್ಶಿಸಿರಬಹುದು. ಕಂಪನಿ ಹೇಳಿದಂತೆ ಬ್ಲಾಕ್, ಸಿಲ್ವರ್, ರೆಡ್ ಮತ್ತು ವೈಟ್ ಎಂಬ ನಾಲ್ಕು ಸಾಂಪ್ರದಾಯಿಕ ಬಣ್ಣಗಳಲ್ಲಿ ಲಭ್ಯವಿರುತ್ತದೆ.

ಈ ಹೊಸ ಸ್ಕೂಟರ್ ವೈಶಿಷ್ಟ್ಯಗಳನ್ನು ನೋಡುವುದಾದ್ರೆ, ಪ್ರಿಮೊ ಎಕೋನಮಿ, ಹೈ ಸ್ಪೀಡ್ ಮತ್ತು ಬೂಸ್ಟ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಇದು ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಎಲ್‌ಇಡಿ ಲ್ಯಾಂಪ್‌ಗಳು, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಸೈಡ್-ಸ್ಟ್ಯಾಂಡ್ ಇಂಡಿಕೇಟರ್, ಥರ್ಮಲ್ ಪ್ರೊಪಗೇಷನ್ ಅಲರ್ಟ್ ಮತ್ತು ರಿವರ್ಸ್ ಅಸಿಸ್ಟ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

jitendra-ev-tech-launches-primo-ev-scooter-priced-at-79-999

ಹಾಗೆಯೇ ಈ ಎಲೆಕ್ಟ್ರಿಕ್ ಸ್ಕೂಟರ್ 90/90 ಸೆಕ್ಷನ್‌ನ 10-ಇಂಚಿನ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ. ಬ್ರೇಕಿಂಗ್ ವಿಷಯಕ್ಕೆ ಬಂದರೆ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಸೆಟಪ್ ಹಾಗೂ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್‌ನೊಂದಿಗೆ ಬರುತ್ತದೆ. ಬ್ಯಾಟರಿ ಬಗ್ಗೆ ಹೇಳುವುದಾದ್ರೆ ಜಿತೇಂದ್ರ EV ಪ್ರೈಮೊ 60V, 26Ah ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದ್ದು, ಇದು ಒಂದೇ ಚಾರ್ಜ್‌ನಲ್ಲಿ 65 ಕಿ.ಮೀ ರೇಂಜ್ ನೀಡುತ್ತದೆ.

ಈ ಮಾದರಿಯು 7-ಡಿಗ್ರಿ ಗ್ರೇಡಿಯಂಟ್ ಸಾಮರ್ಥ್ಯದೊಂದಿಗೆ 52 kmph ವೇಗವನ್ನು ತಲುಪಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ಇ-ಸ್ಕೂಟರ್ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಸ್ಪ್ರಿಂಗ್ ಕಾಯಿಲ್‌ನೊಂದಿಗೆ ಹೈಡ್ರಾಲಿಕ್ ಫೋರ್ಕ್‌ಗಳನ್ನು ಹೊಂದಿದೆ. Primo ಸದ್ಯಕ್ಕೆ ಒಂದೇ ರೂಪಾಂತರದಲ್ಲಿ ಮಾತ್ರ ಲಭ್ಯವಿದ್ದು, ಮುಂಬರುವ ವರ್ಷಗಳಲ್ಲಿ Primo S ಅನ್ನು 90 km ಮತ್ತು Primo Plus ಅನ್ನು 130 km ವ್ಯಾಪ್ತಿಯೊಂದಿಗೆ ಪರಿಚಯಿಸುವುದಾಗಿ ಕಂಪನಿ ಹೇಳಿದೆ.

ಜಿತೇಂದ್ರ EV ಕಂಪನಿಯು Primo ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಮೂರು ವರ್ಷಗಳ ವಾಹನ ವಾರಂಟಿಯನ್ನು ನೀಡುತ್ತಿದೆ. ಆದರೆ ಬ್ಯಾಟರಿಯು ಹೆಚ್ಚುವರಿ ಒಂದು ವರ್ಷದ ವಿಸ್ತೃತ ವಾರಂಟಿಯೊಂದಿಗೆ ಎರಡು ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ. ಪ್ರೈಮೊ ಇ-ಸ್ಕೂಟರ್ ವಿಭಾಗದಲ್ಲಿ ಹೊಸದಾಗಿ ಬಿಡುಗಡೆಯಾದ ಕೈನೆಟಿಕ್ ಗ್ರೀನ್ ಜುಲು ಪ್ರತಿಸ್ಪರ್ಧಿಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, December 18, 2023, 13:38 [IST]
English summary
Jitendra ev tech launches primo ev scooter priced at 79 999
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+